ಪ್ರಚಲಿತ

ಶಾಂತವಾಗಿದ್ದ ಮಂಗಳೂರಿನ ಸಾಮರಸ್ಯಕ್ಕೆ ಹುಳಿ ಹಿಂಡಿದವರು ಯಾರು?! ಮಾಜಿ ಮುಖ್ಯಮಂತ್ರಿಗಳಿಗೇಕೆ ಮಂಗಳೂರಿನ ವಿಷಯದಲ್ಲಿ ಇಂತಹ ಆಸಕ್ತಿ?!

ಲವಾರು ದಿನಗಳಿಂದ ಸುಶಿಕ್ಷಿತರ ಜಿಲ್ಲೆ ಮಂಗಳೂರು ತಪ್ಪು ಕಾರಣಗಳಿಂದಾಗಿ ಸುದ್ದಿಯಲ್ಲಿದೆ.ಕೋಮು ಸೂಕ್ಷ ಪ್ರದೇಶವೆಂದೇ ಕರೆಯಲ್ಪಡುವ ಮಂಗಳೂರಿನಲ್ಲಿ ಹಲವಾರು ಬಾರಿ ಕೋಮುಗಲಭೆ ನಡೆದದ್ದೂ ಹೌದು..ಕೆಲವು ದಿನಗಳ ಹಿಂದೆ CAA ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ, ಗಲಭೆಯು ಪ್ರಾರಂಭವಾಗಿ ಪರಿಸ್ಥಿತಿಯು ಕೈಮೀರಿ ಹೋಗುವ ಹಂತ ತಲುಪುತ್ತದೆ ಎನ್ನುವಾಗ ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕಾಗಿ ಪೊಲೀಸರು ಗುಂಡುಹಾರಿಸಬೇಕಾಗಿ ಬಂತು..ಈ ಪ್ರಕ್ರಿಯೆಯಲ್ಲಿ ಇಬ್ಬರು ಗುಂಡು ತಗುಲಿ ಅಸುನೀಗಿದರು..ದೇಶದಾದ್ಯಂತ ಈ ವಿಷಯ ಸುದ್ದಿಯಾಯಿತು.. ದಕ್ಷಿಣ ಕನ್ನಡದಲ್ಲಿ ಅಸ್ಥಿತ್ವವೇ ಇಲ್ಲದಿರುವ ತ್ರಿಣಮೂಲ ಕಾಂಗ್ರೆಸ್ ಮರಣವನ್ನಪ್ಪಿದವರ ಕುಟುಂಬಕ್ಕೆ ಧನಸಹಾಯ ಮಾಡಿದ್ದೂ ಆಯಿತು. ಕರ್ನಾಟಕದ ಮಾಜೀ ಮುಖ್ಯ ಮಂತ್ರಿಗಳಂತೂ ಪೋಲೀಸರ ವಿರುದ್ಧವೇ ಸುಳ್ಳು ವಿಡಿಯೋಗಳನ್ನೂ ಬಿಡುಗಡೆ ಮಾಡಿ ಪೊಲೀಸರ ರಾಜೀನಾಮೆ ಮತ್ತು ಅಮಾನತ್ತಿನ ಹಠ ಹಿಡಿದಿದ್ದರು..

ಅದರ ಬಳಿಕ ಬೆಂಗಳೂರಿನಲ್ಲಿ CAA ಯ ಪರ ನಡೆದ ಸಭೆಯಲ್ಲಿ ತೇಜಸ್ವಿ ಮತ್ತು ಸೂಲಿಬೆಲೆಯನ್ನು ಹತ್ಯೆಮಾಡುವ ಸಂಚು ನಡೆಸಲಾಗಿತ್ತು.ಪೊಲೀಸರ ಉತ್ತಮ ಭದ್ರತಾ ವ್ಯವಸ್ಥೆಯಿಂದ ಸಂಚು ವಿಫಲವಾಯಿತು ಮಾತ್ರವಲ್ಲೂ ಸಂಚು ರೂಪಿಸಿದವರು ಸಿಕ್ಕಿ ಬಿದ್ದು ಬಹಳಷ್ಟು ಆಘಾತಕಾರೀ ವಿಷಯಗಳು ಕೂಡಾ ಹೊರಬಂದಿತ್ತು. ತದನಂತರ ಮೊನ್ನೆ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಹಚ್ಚಲಾಗಿತ್ತು.ಬಾಂಬ್ ನಿಷ್ಕ್ರಿಯೆಗೊಳಿಸುವ ತಂಡದವರು ಅದನ್ನು ನಿರ್ಜನ ಪ್ರದೇಶದಲ್ಲಿ ಸ್ಪೋಟಿಸಿ ಹಲವರ ಪ್ರಾಣವನ್ನುಳಿಸಿ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದರು.ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಮಾಜಿ ಮುಖ್ಯಮಂತ್ರಿಗಳು ಈ ಬಾಂಬ್ ಅಣಕು ಪ್ರದರ್ಶನವೆಂದು ಹೇಳಿಕೆ ನೀಡಿದರು. ಅಷ್ಟೇ ಅಲ್ಲದೆ ಪೊಲೀಸರ ಮೇಲೆ ತನಗೆ ನಂಬಿಕೆ ಇಲ್ಲವೆಂದೂ ತನಿಖೆ ನಡೆಸದೆಯೇ ಪೊಲೀಸರು ೧೫ ದಿನಗಳ ಬಳಿಕ ಅಮಾಯಕರನ್ನು ಬಂಧಿಸುತ್ತಾರೆಂದೂ ಹೇಳಿದರು..

ವಿಪರ್ಯಾಸ ನೋಡಿ ಅವರ ಹೇಳಿಕೆಯನ್ನು ಬಹಳಷ್ಟು ಜನರು ಬೆಂಬಲಿಸಿದರು..ಕುಮಾರಸ್ವಾಮಿ ಮಂಗಳೂರಿಗೆ ಬಂದು ಪೊಲೀಸರ ಸುಳ್ಳನ್ನು ಬಯಲು ಮಾಡುವವರಿದ್ದರು,ಅದಕ್ಕಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪೊಲೀಸರೇ ಈ ಘಟನೆ ನಡೆಸಿದರೆಂದೂ ಹೇಳಿದರು.ಮಾತ್ರವಲ್ಲದೆ ಪೋಲೀಸರು ಇನ್ನು ಅಲ್ಪಸಂಖ್ಯಾತರನ್ನು ಹಿಡಿದು ಜೈಲಿಗೆ ತಳ್ಳುತ್ತಾರೆ,ಅವರು ನ್ಯಾಯಾಲಯದಲ್ಲಿ ನಿರಪರಾಧಿಗಳಾಗಿ ಹೊರಬರುವಷ್ಟರಲ್ಲಿ ಅವರ ಜೀವನದ ಅಮೂಲ್ಯವಾದ ಬಹಳಷ್ಟು ವರ್ಷಗಳು ಕಳೆದು ಹೋಗುತ್ತದೆ.ದೇಶದೆಲ್ಲೆಡೆ ಇಂತಹಾ ಅನೇಕ ಘಟನೆಗಳು ನಡೆದಿವೆ..ಇತ್ಯಾದಿ ವಿಚಾರಗಳನ್ನು ಅನೇಕ ಮುಖಂಡರು ಮಾಧ್ಯಮಗಳಲ್ಲೂ,ಮುಸಲ್ಮಾನರ ಸಮುದಾಯದಲ್ಲೂ ಹರಿಯಬಿಡಲಾಗಿತ್ತು.ಬಹಳಷ್ಟು ಜನರಿಗೆ ಬಾಂಬ್ ಇರಿಸಿದ್ದು ಮುಸಲ್ಮಾನ ಭಯೋತ್ಪಾದಕ ಸಂಘಟನೆ ಇರಬಹುದು ಎಂದು ಅನ್ನಿಸಿದ್ದೂ ಸುಳ್ಳಲ್ಲ..ಯಾಕೆಂದರೆ ಅಮೆರಿಕಾ,ಬ್ರಿಟನ್,ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳು ಅಷ್ಟೇಕೆ ಶ್ರೀಲಂಕಾ ಕೂಡಾ ತನ್ನಲ್ಲಿ ಬಾಂಬ್ ಸ್ಪೋಟಗೊಂಡಾಗ ಮೊದಲು ಸಂಶಯ ವ್ಯಕ್ತಪಡಿಸಿದ್ದು ಮುಸಲ್ಮಾನರ ಮೇಲೆಯೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.ಶ್ರೀಲಂಕಾವಂತೂ ಎಲ್ಲಾ ಮಸೀದಿಗಳನ್ನೂ ಮುಚ್ಚಿ ಹಾಕಿತ್ತು.

ಇದರ ಮಧ್ಯದಲ್ಲಿ ಮಂಗಳೂರಿನ ಬಾಂಬ್ ನ ಹಿಂದಿರುವ ವ್ಯಕ್ತಿಯನ್ನು ಬಂಧಿಸಿ ಶಿಕ್ಷಿಸಬೇಕೆಂದು ಎಲ್ಲರೂ ಆಗ್ರಹಿಸಲಾರಂಭಿಸಿದರು.ಗಲ್ಲಿಗೇರಿಸಿ ಇಲ್ಲವೇ ಜೀವಾವಧಿ ವಿಧಿಸಿ ಎಂದೂ ಹೇಳಲಾರಂಭಿಸಿದರು.ಅಷ್ಟರಲ್ಲೇ ಸಿಸಿ ಕ್ಯಾಮರಾದಲ್ಲಿ ದಾಖಲಿಸಲ್ಪಟ್ಟ ವ್ಯಕ್ತಿ ಆದಿತ್ಯ ರಾವ್ ಎಂಬ ಮಣಿಪಾಲ ಮೂಲದ ವ್ಯಕ್ತಿ ಎಂದು ಪೊಲೀಸರು ಸಂದೇಹಿಸಿದರು. ಮಣಿಪಾಲದ ಅವರ ಮೆನೆಗೆ ಹೋಗಿ ಪರಿಶೀಲನೆ ನಡೆಸುವಷ್ಟರಲ್ಲಿ ಆದಿತ್ಯ ರಾವ್ ಬೆಂಗಳೂರಿನಲ್ಲಿ ಡಿ ಜಿ ಪಿ ನೀಲಮಣಿ ರಾಜು ಅವರ ಮುಂದೆ ಶರಣಾಗಲು ಹೋದಾಗ ಪೊಲೀಸರು ಅವರನ್ನು ಬಂಧಿಸಿದ್ದರು.ಈ ಘಟನೆ ನಡೆದದ್ದು ಇಂದು ಮುಂಜಾನೆ ೮.೩೦ ಹೊತ್ತಿಗೆ.ಇಷ್ಟೆಲ್ಲಾ ಆದರೂ ಅಪರಾಧಿಯನ್ನು ಶಿಕ್ಷಿಸಬೇಕೆಂದು ಆಗ್ರಹಿಸುತ್ತಿದ್ದ ಹಿಂದೂಗಳ ಅಭಿಪ್ರಾಯದಲ್ಲಿ ಯಾವುದೇ ವ್ಯತ್ಯಾಸವಾಗಲಿಲ್ಲ.ಯಾಕೆಂದರೆ ತಪ್ಪು ಮಾಡಿದವರು ಯಾರೇ ಆಗಿದ್ದರೂ ಶಿಕ್ಷೆಯನ್ನು ಅನುಭವಿಸಬೇಕೆಂಬುದು ಎಲ್ಲರ ಆಗ್ರಹ.. ಮೊನ್ನೆಯಿಂದ ಬಾಂಬ್ ಇರಲಿಲ್ಲ,ಪೌಡರ್ ಮಾತ್ರ ಇತ್ತು,ಮೊನ್ನೆ ನಡೆದದ್ದು ಅಣುಕು ಪ್ರದರ್ಶನ ಎಂಬುದಾಗಿ ಹೇಳುತ್ತಿದ್ದವರೆಲ್ಲಾ ಇಂದು ಬಾಂಬ್ ಇರಿಸಿದ್ದವನ ಹೆಸರು ಆದಿತ್ಯ ಎಂದು ತಿಳಿದ ತಕ್ಷಣ ಅಪರಾಧಿಯನ್ನು ಶಿಕ್ಷಿಸಬೇಕು ಎನ್ನುತ್ತಾ ತಮ್ಮ ಮೌನವೃತ ಮುರಿದು ಹೊರಬಂದಿದ್ದಾರೆ.ದೇಶದಲ್ಲಿ ಪ್ರತೀಬಾರಿ ಬಾಂಬ್ ಸ್ಪೋಟಗೊಂಡಾಗಲೂ ಇವರು ಇದೇ ರೀತಿ ಭಯೋತ್ಪಾದಕರನ್ನೂ, ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಒಕ್ಕೋರಲಲ್ಲಿ ಹೇಳಿದ್ದಾರೆ,ಭಾರತದಲ್ಲಿ ಭಯೋತ್ಪಾದನೆಯ ಬೇರು ಬಹುಷಃ ಇಷ್ಟು ಆಳಕ್ಕೆ ಇಳಿಯುತ್ತಿರಲಿಲ್ಲವೇನೋ..

ಭಗವಾನ್ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಅರ್ಜುನನಿಗೆ ತನ್ನ ಸಂಬಂಧಿಕರನ್ನೇ ಕೊಲ್ಲಲು ಪ್ರೇರೇಪಿಸಿದ್ದಾ, ಆದ್ದರಿಂದ ತಪ್ಪು ಮಾಡಿದವರನ್ನು ಶಿಕ್ಷಿಸಬಹುದು,ಕೊಲ್ಲಬಹುದು ಎಂದು ಯಾವುದೇ ಹಿಂದುವೂ,ಭಗದ್ಗೀತೆಯನ್ನು ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳಲಿಲ್ಲ..ಬದಲಾಗಿ ಸಂಪೂರ್ಣವಾದ ಮಹಾಭಾರತವನ್ನೇ ಅರ್ಥೈಸಿಕೊಂಡು ತಪ್ಪು ಮಾಡಿದವನು ಶಿಕ್ಷೆಯನ್ನು ಅನುಭವಿಸುತ್ತಾನೆ ಎಂಬ ನಂಬಿಕೆಯನ್ನೂ, ಶಾಂತಿಯನ್ನೂ ಅಳವಡಿಸಿಕೊಂಡರು.ಈಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆದಿತ್ಯ ರಾವ್, ಮೊದಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಹಾಕಿ ಜೈಲುವಾಸಿಯಾಗಿದ್ದ.ಅವನು ಮಾನಸಿಕ ಅಸ್ವಸ್ಥ ಎಂದೂ ಹೇಳಲಾಗುತ್ತಿದೆ..ಏನೇ ಆದರೂ,ಆತ ಮಾಡಿದ್ದು ತಪ್ಪೇ,ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗಳು ಜಾಗರೂಕರಾಗದೆ ಇದ್ದಿದ್ದಲ್ಲಿ ಬಾಂಬ್ ಸ್ಪೋಟಗೊಂಡು ಹಲವಾರು ಅಮಾಯಕರು ಅಪಾಯಕ್ಕೀಡಾಗುತ್ತಿದ್ದರು..ತಪ್ಪು ಮಾಡಿದವನು ಯಾವ ಧರ್ಮಕ್ಕೆ ಸೇರಿದವನಾದರೂ ಶಿಕ್ಷೆಯಾಗಲೇ ಬೇಕು..ಕೊನೆಯದಾಗಿ ಒಂದು ಮಾತು ಬಹುಷಃ ಮಾಜೀ ಮುಖ್ಯಮಂತ್ರಿಗಳಿಗೆ ಈಗ ಪೊಲೀಸರ ಮೇಲೆ ನಂಬಿಕೆ ಬಂದಿರಬಹುದು ಎಂಬ ಅನಿಸಿಕೆ ಇದೆ..ನಿಮಗೇನನ್ನಿಸುತ್ತದೆ?

-Deepashree M

Tags

Related Articles

FOR DAILY ALERTS
Close