ಪ್ರಚಲಿತ

ಅಧ್ಯಾಯ 3: ನೆಲ್ಕಟ್ಟುಂಸೇವಲ್ ಎಂಬ ವಿಶಿಷ್ಟ ಹೆಸರಿನ ಊರು, ಅದರ ಪಾಳೇಯಗಾರ ಪುಲಿ ತೇವರ್ ಎಂಬ ಪರಾಕ್ರಮಿ! ಬ್ರಿಟಿಷರ ದಬ್ಬಾಳಿಕೆಗೆ ಬಗ್ಗದೆ ಅವರನ್ನು ಎದುರಿಸಿದ ಧೀರ!

ಸ್ವಾತಂತ್ರ್ಯ ಹೋರಾಟದ ಮಹಾಗಾಥೆ!

೧೭೩೬ರಲ್ಲಿ ಹಿಂದೂಗಳ ಆಡಳಿತದಲ್ಲಿದ್ದ ಮದುರೈಯನ್ನು ಆರ್ಕೋಟಿನ ನವಾಬರು ವಶಪಡಿಸಿಕೊಂಡ ನಂತರ, ಅಲ್ಲಿನ ಪಾಳೇಯಗಾರರಿಗೆ, ಹೊರಗಿನವರ ಆಡಳಿತದ ಬಗ್ಗೆ ಒಪ್ಪಿಗೆ ಇರಲಿಲ್ಲ. ನವಾಬರ ರೀತಿಗಳನ್ನು ಒಪ್ಪಿಕೊಂಡು ಅವರು ವಿಧಿಸಿದ ಕಟ್ಟಳೆಗಳನ್ನು ಪಾಲಿಸುವುದು ಸುಲಭದ ಮಾತಾಗಿರಲಿಲ್ಲ. ಇಪ್ಪತ್ತು ವರ್ಷಗಳ ಕಾಲ ಮದುರೈನ ಸುತ್ತಮುತ್ತಲಿನ ಪಾಳೇಯಗಾರರೆಲ್ಲಾ ಒಂದಾಗಿ ಒಗ್ಗಟ್ಟಿನಿಂದ ನವಾಬನನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಲೇ ಬಂದರು.

ಹಿಂದೂ ಪಾಳೇಯಗಾರರ ವಿರುದ್ಧ ಸೆಣಸಾಡಿ ಸೋತಿದ್ದ ನವಾಬನು ಅವರನ್ನು ಮಣಿಸಲು ಬ್ರಿಟಿಷರ ಸಹಾಯ ಕೋರಿದಾಗ, ಮದುರೈನಂತಹ ರಾಜ್ಯವನ್ನು ಕೊಳ್ಳೆಹೊಡೆಯಲು ಹೊಂಚು ಹಾಕುತ್ತಿದ್ದ ಬ್ರಿಟಿಷರು ಕ್ಷಣಮಾತ್ರದಲ್ಲಿ ನವಾಬನ ಕೋರಿಕೆಯನ್ನು ಒಪ್ಪಿಕೊಂಡು ತಮ್ಮ ಸೇನಾಬಲವನ್ನು ಪಾಳೇಯಗಾರರ ವಿರುದ್ಧ ಹೋರಾಡಲು ವಿನಿಯೋಗಿಸುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ.

ಕರ್ನಲ್ ಹೆರೋನ್ ನ ನೇತೃತ್ವದಲ್ಲಿ ಬ್ರಿಟಿಷರ ಸೈನ್ಯ ಪಾಳೇಗಾರರ ವಿರುದ್ಧ ದಂಡೆತ್ತಿ ಬರುತ್ತದೆ. ಪ್ರತಿಯೊಂದು ಗ್ರಾಮವನ್ನು ಡಕಾಯಿತ ಮಾದರಿಯಲ್ಲಿ ಲೂಟಿ ಮಾಡಿ, ಮನೆಮನೆಗಳಿಗೆ ಬೆಂಕಿ ಹಚ್ಚಿ, ಮೋಸ ಹಾಗೂ ಸಂಚಿನಿಂದ ಪಾಳೇಗಾರರನ್ನು ಬಂಧಿಗಳನ್ನಾಗಿಸುತ್ತಾ, ಮುಂದೆ ಸಾಗುತ್ತಿದ್ದ ಬ್ರಿಟಿಷರ ಅಟ್ಟಹಾಸವನ್ನು ದಮನ ಮಾಡಿದ ಮಹಾನ್ ವೀರನೇ ಪುಲಿ ತೇವರ್!

೧೭೫೫ರಲ್ಲಿ ಮೊದಲ ಬಾರಿಗೆ ನೆಲ್ಕಟ್ಟುಂಸೆವಲ್ ಮೇಲಿನ ಬ್ರಿಟಿಷರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪುಲಿ ತೇವರ್, ಅವರ ಸೈನ್ಯವನ್ನು ಕಾದಾಡಿ ಹೆಮ್ಮೆಟ್ಟಿಸುತ್ತಾನೆ.

ನನ್ನ ಅಡಿಯಲ್ಲಿರುವ ಭೂಮಿ ನಿಮಗೆ ಬೆಲೆಬಾಳದಂತಹ ಆಸ್ತಿಯೇ ಇರಬಹುದು ಆದರೆ ನನಗೆ ಅದರ ಮೌಲ್ಯ ತಿಳಿದಿದೆ, ಹಾಗಾಗಿ ಒಂದೇ ಒಂದು ಪುಡಿಗಾಸನ್ನೂ ಕಪ್ಪವಾಗಿ ನಿಮಗೆ ನೀಡಲಾರೆ ಎಂದು ಅಬ್ಬರಿಸಿದನು. ಮತ್ತೊಮ್ಮೆ ಕಾಲಕಾಡಿನ ಮೇಲೆ ದಾಳಿಯಾದಾಗ, ತಿರುವನಂತಪುರದ ಮಹಾರಾಜಾಧಿರಾಜ ಮಾರ್ತಾಂಡವರ್ಮರಿಂದ ನೆರವನ್ನು ಬೇಡಿ, ಪುಲಿ ತೇವರ್ ಸಂದೇಹವನ್ನು ಕಳಿಸುತ್ತಾನೆ. ಅದಕ್ಕೆ ಒಪ್ಪುವ ಮಹಾರಾಜರು ತಮ್ಮ ೪೦೦೦ ಸೈನಿಕರ ಪಡೆಯನ್ನು ಪುಲಿಯ ಪರವಾಗಿ ಹೋರಾಡಲು ನೆರವಾಗಿ ನೀಡುತ್ತಾರೆ.

ಇನ್ನೇನು ಯುದ್ಧದಲ್ಲಿ ಗೆಲುವಾಯಿತು ಎನ್ನುವ ಹೊತ್ತಲ್ಲಿ, ಮಹಾರಾಜರು, ತಮ್ಮಲ್ಲಿ ತಲೆದೋರಿದ ಮೊಪ್ಲಾ ದಂಗೆಯನ್ನು ಹತ್ತಿಕ್ಕಲು ಸೇನೆಯನ್ನು ಹಿಂದೆಕರೆಸಿಕೊಳ್ಳುತ್ತಾರೆ. ಆ ಹೊತ್ತಿನಲ್ಲಿ ಸೋಲು ಖಚಿತ ಎಂದು ತಿಳಿದ ಪುಲಿ ತೇವರ್ ಯುದ್ಧಭೂಮಿಯಿಂದ ಪರಾರಿಯಾಗಿ ತಲೆಮರೆಸಿಕೊಳ್ಳುತ್ತಾನೆ. ಈ ಹೊತ್ತಿಗಾಗಲೇ ಆತ ಬ್ರಿಟಿಷರ ವಿರುದ್ಧ ಹೋರಾಡಿದ ರೀತಿ ಇತರ ಪಾಳೇಗಾರರಲ್ಲಿ ಧೈರ್ಯ ಮೂಡಿಸಿದ್ದು ಮಾತ್ರವಲ್ಲ ಅವರೆಲ್ಲರೂ ಆತನ ಜೊತೆಗೂಡಿ ತಮ್ಮ ತಮ್ಮ ಸೈನ್ಯಗಳ ಹೋರಾಡಲು ಸಜ್ಜಾಗುತ್ತಾರೆ. ಆಂಗ್ಲರ ಕುಟಿಲ ರಾಜಕೀಯ ನೀತಿಯನ್ನು ಅರಿತಿದ್ದ ಪುಲಿ ತೇವರ್, ನೇರವಾಗಿ ಯುದ್ಧ ಭೂಮಿಗೆ ಇಳಿಯದೆ, ತನ್ನ ಬೆಂಬಲಕ್ಕೆ ಬಂದ ಸೈನ್ಯವನ್ನು ಸರಿಯಾಗಿ ಬಳಸಿಕೊಳ್ಳುವ ಮಾರ್ಗವನ್ನು ಯೋಚಿಸುತ್ತಾ, ಆಂಗ್ಲರನ್ನು ಸೋಲಿಸುವ ರಣತಂತ್ರವನ್ನು ಹೆಣೆಯುತ್ತಾನೆ.

ಮುಸ್ಲಿಮರು ಮತ್ತು ಆಂಗ್ಲತು ಒಟ್ಟಾಗಿ ನೆಲ್ಕಟ್ಟುಂಸೇವಲ್ ಮೇಲೆ ದಾಳಿ ಮಾಡುವ ಹೊತ್ತಿಗೆ ತನ್ನ ಸೈನ್ಯವನ್ನು ಸಜ್ಜುಗೊಳಿಸಿಕೊಂಡಿದ್ದ ಪುಲಿ ತೇವರ್ ಅವರ ಮೇಲೆ ದಾಳಿ ಮಾಡಿ, ಯುದ್ಧದಲ್ಲಿ ಅವರನ್ನು ಮಣಿಸಿ, ಹಿಮ್ಮೆಟ್ಟಿಸುತ್ತಾನೆ. ಈತನನ್ನು ನೇರ ಯುದ್ಧದಲ್ಲಿ ಮಣಿಸುವುದು ಅಸಾಧ್ಯ ಎಂದು ಅರಿವಾದಾಗ, ಬ್ರಿಟಿಷರು ಎಂದಿನಂತೆ ಕುತಂತ್ರದಿಂದ ಶಂಕರನ್ ಕೋವಿಲ್(ದೇವಸ್ಥಾನ)ಗೆ ಹೋಗುವ ಮಾರ್ಗದಲ್ಲಿ ಅವನನ್ನು ಮೋಸದಿಂದ ಸೆರೆಹಿಡಿಯುತ್ತಾರೆ. ಮುಸ್ಲಿಂ ಸೈನಿಕರು ಆತನನ್ನು ಅಪಮಾನಿಸುವ ಸಲುವಾಗಿ ಸರಪಳಿಗಳಿಂದ ಬಿಗಿದು, ಅವನ ಜನರೆದುರು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಅತನನ್ನು ಮಹಾದೇವನ ದೇವಸ್ಥಾನಕ್ಕೆ ಕೊಂಡೊಯ್ದು ನೀನು ನಂಬಿದ ದೇವರು ನಿನ್ನನ್ನು ಉಳಿಸಲಿಲ್ಲ ಎಂದು ಹೀಯಾಳಿಸುತ್ತಾ ಆತನನ್ನು ಗರ್ಭಗುಡಿಯೊಳಗೆ ದೂಡಿ, ದೇವಸ್ಥಾನದ ಹೊರಗೆ ಕಾವಲು ನಿಲ್ಲುತ್ತಾರೆ.

ಮುಂದೆ ನಡೆದದ್ದು ಆ ಮಹಾದೇವನ ಪವಾಡವೇ ಸರಿ!
ಇದ್ದಕ್ಕಿದ್ದ ಹಾಗೇ ಹೊರಗೆ ಕಾವಲು ಕಾಯುತ್ತಿದ್ದ ಸೈನಿಕರಿಗೆ ಕೈಬೇಡಿಗಳು ತುಂಡಾದ ಸದ್ದು ಕೇಳಿಸುತ್ತದೆ. ಗರ್ಭಗುಡಿಯೊಳಗೆ ಬಂದು ನೋಡುವಾಗ, ಪುಲಿ ತೇವರ್ ಅಲ್ಲೆಲ್ಲಿಯೂ ಕಾಣುವುದೇ ಇಲ್ಲ. ಸೈನಿಕರು ಅವನು ತಪ್ಪಿಸಿಕೊಂಡನೆಂದು ಹುಡುಕುತ್ತಿದ್ದರೆ, ಅವನ ಪ್ರಜೆಗಳೆಲ್ಲರು ಅವನಿಗೆ ಅಪಮಾನವಾಗುವುದನ್ನು ಸಹಿಸದೆ ಮಹಾದೇವನೇ ಅವನನ್ನು ತನ್ನೊಟ್ಟಿಗೆ ಕೈಲಾಸಕ್ಕೆ ಕರೆದೊಯ್ದನು ಎಂದು ಮಾತಾಡಲಾರಂಭಿಸುತ್ತಾರೆ.

ನೆಲ್ ಕಟ್ಟನ್ ಸೇವಲ್ ಎಂದರೆ ಅಕ್ಕಿಯನ್ನು ಕರವಾಗಿ ಕಟ್ಟದ ಊರು, ಪುಲಿ ತೇವರ್ ಕಣ್ಮರೆಯಾದ ನಂತರ ಆ ಜಾಗವನ್ನು ನೆಲ್ ಕಟ್ಟುಂ ಸೇವಲ್ ಅಂದರೆ ಅಕ್ಕಿಯ ಕರ ನೀಡುವ ಊರು ಎಂದು ಬದಲಾಯಿಸಲಾಗುತ್ತದೆ.

Chapter 1 :

ಅಧ್ಯಾಯ 1: ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿಳಿಯಿತು ಯೂರೋಪಿನ ಕಂಪೆನಿ! ಹಣ ಬಲ, ಕುತಂತ್ರ ಹಾಗೂ ಆಕ್ರಮಣಕಾರಿ ಪ್ರವೃತ್ತಿಯಿಂದ ಭಾರತವನ್ನು ದೋಚಿದ ದುರಂತ ಕಥೆ!

Chapter 2:
ಅಧ್ಯಾಯ 2 – ಮಾವೀರನ್ ಅಳಗುಮುತ್ತು ಕೋಣೆ ಎಂಬ ಮಹಾವೀರನ ಕಥೆ! ಸ್ವಾರ್ಥಕ್ಕಾಗಿ ಎಲ್ಲರೂ ಆಂಗ್ಲರ ಜೊತೆ ಕೈಜೋಡಿಸುತ್ತಿದ್ದ ಕಾಲದಲ್ಲಿ ತನ್ನ ತಾಯ್ನಾಡಿನ ರಕ್ಷಣೆಗೆ ಪಣ ತೊಟ್ಟ ಧೀರ!

Tags

Related Articles

FOR DAILY ALERTS
Close