ಪ್ರಚಲಿತ

ಕ್ರೈಸ್ತ ಧರ್ಮದಿಂದ ಮರಳಿ ಮಾತೃ ಧರ್ಮಕ್ಕೆ

ಭಾರತ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡ ಕಥೆ ಎಲ್ಲರಿಗೂ ಗೊತ್ತು‌. ಆದರೆ ಅದಕ್ಕೂ ಮೊದಲು ಭಾರತೀಯರನ್ನು ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ಬ್ರಿಟಿಷರು ಕಂಡುಕೊಂಡದ್ದು ಒಡೆದು ಆಳುವ ನೀತಿ. ಸಮಾಜದಲ್ಲಿ ಮೇಲ್ವರ್ಗ, ಕೆಳ ವರ್ಗ ಎಂದು ಜಾತಿ ಆಧಾರದಲ್ಲಿ, ನೀನು ಆ ಧರ್ಮ, ಈ ಧರ್ಮ ಎಂದು ಹಿಂದೂ – ಮುಸಲ್ಮಾನರನ್ನು ಬೇರ್ಪಡಿಸಿ ಅಖಂಡ ಭಾರತವನ್ನು ಖಂಡತುಂಡವಾಗಿಸಿದ್ದು ನಮ್ಮ ದೇಶದ ಇತಿಹಾಸದ ಮಾಸದ ನೋವಿನ ನೆನಪು.

ಬ್ರಿಟಿಷರು ಕೇವಲ ಒಡೆದಾಳಿದ್ದು ಮಾತ್ರವಲ್ಲ, ಮತಾಂತರ ಕ್ಕೂ ಕುಮ್ಮಕ್ಕು ನೀಡಿದ್ದರು. ಬ್ರಿಟಿಷರಿಂದ ಮೊದಲು ಭಾರತದ ಮೇಲೆ ದಾಳಿ ಮಾಡಿದ ಮುಸ್ಲಿಂ ದಾಳಿ ಕೋಪ ರು ಸಹ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸುತ್ತಿದ್ದರು ಎನ್ನುವುದು ನಾವೆಲ್ಲರೂ ತಿಳಿದಿದ್ದೇವೆ. ಆಗಿನಿಂದಲೇ ಹಿಂದೂ ಧರ್ಮದ ಮೇಲೆ ಮತಾಂತರದ ಕರಿ ನೆರಳು ಬಿದ್ದ ಬಿದ್ದಿದ್ದು, ಈಗಲೂ ಇಂತಹ ಸವಾಲುಗಳನ್ನು ಹಿಂದೂ ಧರ್ಮ ಎದುರಿಸುತ್ತಲೇ ಬರುತ್ತಿದೆ ಎನ್ನುವುದು ದುರಂತ.

ಹೀಗಿದ್ದರೂ ಅಸ್ಸಾಂ‌ನಲ್ಲಿ ಸಂತಸಕಾರಿ ಘಟನೆಯೊಂದು ನಡೆದಿದೆ. ಸುಮಾರು ವರ್ಷಗಳ ಹಿಂದೆ ನೂರಕ್ಕೂ ಅಧಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಹಿಂದೂ ಕುಟುಂಬಗಳು ಈಗ ಮತ್ತೆ ಮಾತೃ ಧರ್ಮಕ್ಕೆ ಮರಳಿವೆ. ಸುಮಾರು ವರ್ಷಗಳ ಹಿಂದೆ ಈ ಎಲ್ಲಾ ಕುಟುಂಬಗಳೂ ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೆ ಮತಾಂತರವಾಗಿದ್ದರು. ಆದರೆ ಇದೀಗ ಅಸ್ಸಾಂನ ಬಿಜೆಪಿ ಸರ್ಕಾರದ ನೀತಿಗಳ ಕಾರಣಕ್ಕೆ ಈ ಎಲ್ಲಾ ಕುಟುಂಬಗಳು ಮರಳಿ ಮಾತೃ ಧರ್ಮವನ್ನು ಅಪ್ಪಿಕೊಂಡಿವೆ ಎಂದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಹಿಂದೂ ಧರ್ಮದ ಮೇಲೆ ಕ್ರೈಸ್ತ ಮಿಷನರಿಗಳು ಮತ್ತು ಇಸ್ಲಾಂ ಜಿಹಾದಿ ಶಕ್ತಿಗಳು ನಡೆಸುತ್ತಿರುವ ಮತಾಂತರ ಎಂಬ ಷಡ್ಯಂತ್ರದ ನಡುವೆಯೂ, ಅಸ್ಸಾಂ ನಲ್ಲಿ ನೂರಕ್ಕೂ ಅಧಿಕ ಹಿಂದೂ ಕುಟುಂಬಗಳು ಮರಳಿ ಮಾತೃ ಧರ್ಮವನ್ನು ಸೇರಿರುವುದು ಸಂತಸದ ಸಂಗತಿ. ಈಗಾಗಲೇ ಮತಾಂತರವಾಗಿ ಬೇರೆ ಧರ್ಮಕ್ಕೆ ಹೋಗಿರುವವರಿಗೆ ಅಸ್ಸಾಂನ ಈ ಘಟನೆ ಕಣ್ಣು ತೆರೆಸುವಂತಾಗಲಿ. ಹಿಂದೂ ಧರ್ಮದ ಶ್ರೇಷ್ಠತೆ ತಿಳಿಯುವಂತಾಗಲಿ ಎನ್ನುವುದೇ ನಮ್ಮ ಆಶಯ.

Tags

Related Articles

Close