ಪ್ರಚಲಿತ

ಭಾರತ – ಕೆನಡಾ ದೇಶಗಳ ನಡುವೆ ಬಿರುಕು: ಕಾರಣ ಏನು ಗೊತ್ತಾ?

ಭಾರತವನ್ನು ವಿಶ್ವವೇ ಗೆಳೆಯ, ನಿರ್ದೇಶಕ, ಪರೋಪಕಾರಿ ಎಂದೆಲ್ಲಾ ಒಪ್ಪಿಕೊಂಡಿದೆ. ಇಡೀ ವಿಶ್ವವೇ ಇಂದು ಭಾರತದ ಗೆಳೆತನ ಬಯಸಿ ಬರುತ್ತಿದೆ. ಇಂತಹ ಶ್ರೇಷ್ಟ ಮಟ್ಟದಲ್ಲಿರುವ ಭಾರತವನ್ನು ಕೆಣಕುವ ಮೂಲಕ ಕೆನಡಾ ಹೊಸ ಅವಾಂತರ ಮಾಡಿಕೊಂಡಿದೆ.

ಖಲೀಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಗೂ ಭಾರತಕ್ಕೂ ಸಂಬಂಧ ಇರಬಹುದು ಎನ್ನುವ ಆಘಾತಕಾರಿ ಆರೋಪವನ್ನು ಭಾರತದ ಮೇಲೆ ಹೊರಿಸುವ ಕೆಲಸವನ್ನು ಕೆನಡಾ ನೀಡುವ ಮೂಲಕ, ಭಾರತದ ಆಕ್ರೋಶಕ್ಕೆ ತುತ್ತತಾಗಿದೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕು ನೀಡುವಂತ ಸನ್ನಿವೇಶವನ್ನು ಕೆನಡಾದ ಈ ಹೇಳಿಕೆ ನಿರ್ಮಾಣ ಮಾಡಿದೆ.

ಕೆನಡಾದ ಪ್ರಧಾನಿ ಜಸ್ಟೀನ್ ಟ್ರುಡೋ ಇಂತಹ ಹೇಳಿಕೆ ನೀಡಿದ್ದು, ಖಲೀಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ತೈವಾಡವಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಕೆನಡಾದ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ ಎನ್ನುವ ಮೂಲಕ ಉಭಯ ದೇಶಗಳ ನಡುವೆ ಸಂಬಂಧ ಕೊಡುವಂತೆ ಮಾಡಿದ್ದಾರೆ. ಈ ಸಂಬಂಧ ಭಾರತದ ಪ್ರಧಾನಿ ಮೋದಿ ಅವರೊಂದಿಗೂ ಮಾತನಾಡಿದ್ದು, ತನಿಖೆಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.

ಆದರೆ ಈ ಹೇಳಿಕೆಯನ್ನು ತಿರಸ್ಕರಿಸಿ ಇರುವ ಭಾರತ, ಇದನ್ನು ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಭಾರತ ಹೇಳಿಕೆ ನೀಡಿದ್ದು, ನಮ್ಮದು ಪ್ರಜಾಸತ್ತಾತ್ಮಕ ರಾಷ್ಟ್ರ. ಕಾನೂನಿನ ಮೇಲೆಯೂ ಬಲವಾದ ನಂಬಿಕೆಯನ್ನು ಹೊಂದಿದವರು ನಾವು. ಭಾರತ ಯಾವುದೇ ಹಿಂಸಾತ್ಮಕ ಕೃತ್ಯ ನಡೆಸಿಲ್ಲ. ಕೆನಡಾದ ಹೇಳಿಕೆ ಅಸಂಬದ್ಧ ಎಂದು ಹೇಳಿದೆ. ಭಾರತದ ಸಾರ್ವೊಬೌಮತೆ, ಸಮಗ್ರತೆಗೆ ಅಪಾಯ ಉಂಟು ಮಾಡುವ ಖಲೀಸ್ತಾನಿ ಭಯೋತ್ಪಾದಕರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದೂ ಭಾರತ‌ ಹೇಳಿದೆ. ಕೆನಡಾದಲ್ಲಿ ಮಾನವ ಕಳ್ಳ ಸಾಗಾಟ, ಕೊಲೆ, ಸುಲಿಗೆ, ಅಪರಾಧ ಕೃತ್ಯಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಸಂಬಂಧ ಕೆನಡಾದ ಸರ್ಕಾರ ಕ್ರಮ ಕೈಗೊಳ್ಳುವ ಬದಲು ಭಾರತದ ಮೇಲೆ ಆರೋಪ ಹೊರಿಸುತ್ತಿರುವುದು ತಪ್ಪು. ಇದನ್ನು ಭಾರತ ತಿರಸ್ಕರಿಸುತ್ತದೆ ಎಂದೂ ಹೇಳಿದೆ.

ಜೊತೆಗೆ ಭಾರತದಲ್ಲಿನ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಸಹ ಉಚ್ಛಾಟನೆ ಮಾಡಲಾಗಿದೆ. ಮುಂದಿನ ಐದು ದಿನಗಳ ಒಳಗಾಗಿ ಭಾರತದಿಂದ ಹೊರಕ್ಕೆ ತೆರಳುವಂತೆಯೂ ಸೂಚನೆ ನೀಡಲಾಗಿದೆ.

ಒಟ್ಟಿನಲ್ಲಿ ಶಾಂತಿ ಪ್ರಿಯ ರಾಷ್ಟ್ರ ಭಾರತವನ್ನು ಕೆಣಕುವ ಮೂಲಕ ಕೆನಡಾ ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಹಾಳುಗೆಡವಿದೆ. ಭಾರತದ ವಿರುದ್ಧದ ಖಲೀಸ್ತಾನಿ ಉಗ್ರನ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಭಾರತವನ್ನೇ ಜೀವಿಸುವ ಮೂಲಕ ಕೆನಡಾ ತನ್ನ ನೀಚ ಬುದ್ಧಿ ಪ್ರದರ್ಶನ ಮಾಡಿದೆ ಎನ್ನುವುದರಲ್ಲಿ ಸಂದೇಹವಿಲ್ಲ.

Tags

Related Articles

Close