ಪ್ರಚಲಿತ

ಗರೀಬಿ ಹಠಾವೋ ಎಂದು ಘೋಷಿಸಿದ್ದು ಕಾಂಗ್ರೆಸ್, ಆದರೆ..

ಭಾರತದ ಭವಿಷ್ಯವನ್ನು ಭದ್ರಗೊಳಿಸುವ ದೃಷ್ಟಿಯಿಂದ ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಕಳೆದ ಹತ್ತು ವರ್ಷಗಳ ಎನ್.ಡಿ.ಎ. ಸರ್ಕಾರದ ಆಡಳಿತದಲ್ಲಿ ಭಾರತ ವಿಕಸಿತವಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭಾರತದ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ಸರ್ಕಾರ ಹಲವಾರು ಯೋಜನೆಗಳಿಗೆ ಜೀವ ತುಂಬಿರುವುದಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಏಳು ದಶಕಗಳ ಆಡಳಿತದಲ್ಲಿ ಭಾರತದ ಅಭಿವೃದ್ಧಿಗೆ ಅಡ್ಡಗಾಲು ಹಾಕಿ, ಕೇವಲ ತನ್ನ ಕುಟುಂಬದ ಪೋಷಣೆ, ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು, ಭ್ರಷ್ಟಾಚಾರ ಮೊದಲಾದ ಕರ್ಮಕಾಂಡಗಳನ್ನೇ ನಡೆಸಿತ್ತು. ಅಂತಹ ಭ್ರಷ್ಟರ ವಿರುದ್ಧ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ತೊಡೆ ತಟ್ಟಿ, ಸಮಾಜದ ಸ್ಥಿತಿ ಸುಧಾರಣೆ ಮಾಡಲು ಮುಂದಾಗಿತ್ತು‌.

ಕಾಂಗ್ರೆಸ್ ಪಕ್ಷ ಕುಟುಂಬ ರಾಜಕಾರಣಕ್ಕೆ ಹೆಸರುವಾಸಿಯಾದ ಪಕ್ಷ. ಗಾಂಧಿ ಎನ್ನುವ ನಾಮಧೇಯವಿಟ್ಟುಕೊಂಡು, ಗಾಂಧಿ ವಂಶದ ನಕಲಿಗಳಾಗಿ ಈ ದೇಶಕ್ಕೆ, ದೇಶದ ಜನರಿಗೆ ಮೋಸ ಮಾಡುತ್ತಾ ಬಂದವರು ಕೈ ಪಕ್ಷದ ರಾಷ್ಟ್ರೀಯ ನಾಯಕರು ಎನ್ನುವುದು ದುರಂತ. ಅವರು ದೇಶದ ಅಭಿವೃದ್ಧಿ ಮಾಡಲಾರರು. ಜೊತೆಗೆ, ಈ ದೇಶವನ್ನು ಅಭಿವೃದ್ಧಿ ಮಾಡುವವರಿಗೆ ಅಡ್ಡಗಾಲು ಹಾಕುವ ಪಕ್ಷ ಕಾಂಗ್ರೆಸ್.

ಇಂತಹ ನಾಲಾಯಕ್ಕು ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರು ಎನಿಸಿಕೊಂಡ ನಕಲಿ ಗಾಂಧಿಗಳ ವಿರುದ್ಧ ಹರಿಹಾಯ್ದಿರುವ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಗರೀಬಿ ಹಠಾವೋ ಎಂಬ ಘೋಷಣೆಗಳನ್ನು ಜಾರಿಗೆ ತಂದರು. ಆದರೆ, ನಿಜಾರ್ಥದಲ್ಲಿ ಕಾಂಗ್ರೆಸ್ ಪಕ್ಷ ಭಾರತದ ಬಡ ಜನರ ಪರವಾಗಿ ಯಾವುದೇ ಕಾಳಜಿ ಹೊಂದಲಿಲ್ಲ. ಹಾಗೆಯೇ, ಭಾರತೀಯ ಬಡವರ ಅಭಿವೃದ್ಧಿಯ ಆಶಯದಿಂದ ಯಾವ ಕೆಲಸವನ್ನೂ ಮಾಡಲಿಲ್ಲ ಎಂದು ಹೇಳಿದ್ದಾರೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಬಡ ಜನರ ಮೇಲೆ ನಿಜವಾದ ಕಾಳಜಿ ಹೊಂದಿದ್ದು, ದೇಶದ ಎಂಬತ್ತು ಕೋಟಿ ಬಡ ಜನರಿಗೆ ಉಚಿತ ಪಡಿತರ ಒದಗಿಸಿದ್ದಾರೆ. ಆ ಮೂಲಕ ಗರೀಬಿ ಹಠಾವೋ ಎನ್ನುವ ಕನಸನ್ನು ನನಸು ಮಾಡಿದ್ದಾರೆ ಒಂದು ಶಾ ತಿಳಿಸಿದ್ದಾರೆ.

ಕಾಂಗ್ರೆಸ್ ‌ಪಕ್ಷದ ಜನರು ಬಡವರ ಕುರಿತು ಮಾತನಾಡುತ್ತಾರೆ. ರಾಹುಲ್ ಗಾಂಧಿ ಅವರೇ, ನಿಮ್ಮ
ಅಜ್ಜಿ ಈ ದೇಶಕ್ಕೆ ಬಡತನ ನಿರ್ಮೂಲನೆ ಎಂಬ ಘೋಷಣೆಯನ್ನು ಮಾತ್ರ ನೀಡಿದ್ದರು. ಆದರೆ ನೀವು ದೇಶದ ಬಡ ಜನರಿಗಾಗಿ ಏನನ್ನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ದೇಶವಾಸಿಗಳಿಗಾಗಿ ಏನನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಆದರೆ ಕಳೆದ ಹತ್ತು ವರ್ಷಗಳ ಆಡಳಿತದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ದೇಶದ ಬಡ ಜನರ ಅಭಿವೃದ್ಧಿಯ ದೃಷ್ಟಿಯಿಂದ ಎಂಬತ್ತು ಕೋಟಿ ಬಡವರಿಗೆ ನೆರವಾಗಿದ್ದಾರೆ. ಹನ್ನೆರಡು ಕೋಟಿ ಬಡವರ ಮನೆಗಳಿಗೆ ಶೌಚಾಲಯ ನಿರ್ಮಾಣ ಮಾಡಿ ಕೊಡಲಾಗಿದೆ. ನಾಲ್ಕು ಕೋಟಿ ಮನೆಗಳ ನಿರ್ಮಾಣ ಮಾಡಲಾಗಿದೆ. ಹತ್ತು ಕೋಟಿ ತಾಯಂದಿರಿಗೆ ಉಜ್ವಲಾ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸೌಲಭ್ಯ ಒದಗಿಸಿ ಕೊಡಲಾಗಿದೆ. ದೇಶದ ಮೂಲೆ ಮೂಲೆಯ ಮನೆಗಳಿಗೂ ನಳ್ಳಿ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ ಎಂದು ಅಮಿತ್ ಶಾ ತಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇರಿಸಿದ್ದಾರೆ.

ಆ ಮೂಲಕ ದೇಶದ ಜನರ ಸಂಪತ್ತನ್ನು ಕೊಳ್ಳೆ ಹೊಡೆದು, ತೆರಿಗೆ ಹಣವನ್ನು ದೋಚಿ ದೇಶವನ್ನು ಬಡತನದ ಅಂಚಿಗೆ ನೂಕಿದ ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾ ಮಂಗಳಾರತಿ ಮಾಡಿದ್ದಾರೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ದೇಶ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಮುಂದೆ ಬಂದಿದ್ದು, ಕಾಂಗ್ರೆಸ್ ಆಳ್ವಿಕೆಯಲ್ಲಿ ತಳ ಹಿಡಿದಿದ್ದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಿದ ಕೀರ್ತಿ ಸಹ ಎನ್.ಡಿ.ಎ. ಸರ್ಕಾರಕ್ಕೆ ಸಲ್ಲಬೇಕು ಎಂದರೆ ಅತಿಶಯವಾಗಲಾರದು.

Tags

Related Articles

Close