ಪ್ರಚಲಿತ

ಇಸ್ಲಾಂ ಧಾರ್ಮಿಕ ಪ್ರವಚನದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಕಡ್ಡಾಯಗೊಳಿಸಿದ ಆಡಳಿತ ಮಂಡಳಿ: ಕೆರಳಿದ ಹಿಂದೂಗಳಿಂದ ಪ್ರಾಂಶುಪಾಲನಿಗೆ ಗೇಟ್ ಪಾಸ್!

ಶೈಕ್ಷಣಿಕ‌ ಕಾರ್ಯಾಗಾರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇರಬೇಕೇ ಹೊರತು, ಅಲ್ಲಿ ಯಾವುದೇ ಮತ – ಧರ್ಮಗಳ ಪ್ರಚಾರ ಕಾರ್ಯ ನಡೆಯಬಾರದು. ಒಂದು ವೇಳೆ ಅಂತಹ ಯಾವುದೋ ಒಂದು ಮತ ಅಥವಾ ಧರ್ಮದ ಧಾರ್ಮಿಕ ವಿಚಾರಗಳನ್ನು ಹೇಳುವುದಾದರೆ ಅದನ್ನು ಧಾರ್ಮಿಕ ಕಾರ್ಯಕ್ರಮ ಎನ್ನಲಾಗುವುದೇ ಹೊರತು, ಅದು ಶೈಕ್ಷಣಿಕ ಕಾರ್ಯಕ್ರಮ ಎಂದೆನಿಸುವುದಕ್ಕೆ ಸಾಧ್ಯವಿಲ್ಲ.

ಅಂದ ಹಾಗೆ ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಶೈಕ್ಷಣಿಕ ಕಾರ್ಯಕ್ರಮದ ಹೆಸರಿನಲ್ಲಿ ಧಾರ್ಮಿಕ ಮತ ಪ್ರಚಾರ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಮಕ್ಕಳೂ ಭಾಗವಹಿಸುವಂತೆ ಶಾಲಾ ಪ್ರಾಂಶುಪಾಲ ಕಡ್ಡಾಯಗೊಳಿಸಿದ್ದು, ವಿಷಯ ತಿಳಿದ ಹಿಂದೂ ಸಂಘಟನೆಗಳು ಕಾರ್ಯಕ್ರಮ ನಡೆಯುವಲ್ಲಿಗೆ ಹೋಗಿ ಆ ಕಾರ್ಯಕ್ರಮವನ್ನು ಮೊಟಕುಗೊಳಿಸಿದ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆಯೇ ಇದೀಗ ಮುಖ್ಯ ಬೆಳವಣಿಗೆಯೊಂದು ನಡೆದಿದ್ದು, ಈ ಕಾರ್ಯಕ್ರಮಕ್ಕೆ ಹಿಂದೂ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ನಿರ್ಬಂಧಿಸಿ ಕಳುಹಿಸಿದ ಅಡ್ಯನಡ್ಕ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್ ಅವರನ್ನು ಸೇವೆಯಿಂದ ತಾತ್ಕಾಲಿಕ ಅಮಾನತುಗೊಳಿಸಿ ಅಡ್ಯನಡ್ಕದ ಎಜುಕೇಶನ್ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಈ ಕಾರ್ಯಕ್ರಮ ಫೆ. ೧೮ ರಂದು ನಡೆದಿದ್ದು, ಇದಕ್ಕೆ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೂ ತಾರದೆ ಟಿ.ಆರ್. ನಾಯ್ಕ್ ಅವರು ಕಳುಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಸ್ಲಾಂ ಮತದ ಬಗ್ಗೆ ಮತ ಪ್ರವಚನ ನಡೆಯುತ್ತಿರುವ ಬಗ್ಗೆ ಭಾಗವಹಿಸಿದ ವಿದ್ಯಾರ್ಥಿಗಳು ಮಾಹಿತಿ ನೀಡಿದ ತಕ್ಷಣವೇ ಹಿಂದೂ ಸಂಘಟನೆಗಳು ಕಾರ್ಯಕ್ರಮಕ್ಕೆ ತೆರಳಿ ಹಿಂದೂ ವಿದ್ಯಾರ್ಥಿಗಳನ್ನು ಹೊರಕ್ಕೆ ಕಳುಹಿಸಿದ್ದರು. ಹಾಗೆಯೇ ವಿದ್ಯಾರ್ಥಿ‌ಗಳನ್ನು ಈ ಕಾರ್ಯಕ್ರಮಕ್ಕೆ ಕಳುಹಿಸಿದ ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದರು. ಮಕ್ಕಳ ಹಾದಿ ತಪ್ಪಿಸುವ ಶಿಕ್ಷಕರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಆಗ್ರಹಿಸಿತ್ತು.

ಇದೀಗ ಮಾಡಿದ ತಪ್ಪಿಗೆ ಶಿಕ್ಷೆ ಎಂಬಂತೆ ಮಕ್ಕಳನ್ನು ಮುಸ್ಲಿಂ ಮತ ಪ್ರಭಾಷಣಕ್ಕೆ ಕಳುಹಿಸಿದ ಮುಖ್ಯ ಶಿಕ್ಷಕನನ್ನು ತಾತ್ಕಾಲಿಕವಾಗಿಯಾದರೂ ಮನೆಗೆ ಕಳುಹಿಸಲಾಗಿದೆ. ಕೋಮು ಸಂಗರ್ಘ ಹೆಚ್ಚಾಗಿ ನಡೆಯುತ್ತಿರುವ ದಕ್ಷಿಣ ಕನ್ನಡದ ಪರಿಸ್ಥಿತಿ ತಿಳಿದೂ ಸಹ, ಹಿಂದೂ ಮಕ್ಕಳನ್ನು ಮುಸ್ಲಿಂ ಮತ ಪ್ರಚಾರ ಭಾಷಣ ಕೇಳಲು ಕಳುಹಿಸಿದ ಮುಖ್ಯ ಶಿಕ್ಷಕರು ಮತ್ತೊಂದು ಕೋಮು ಸಂಘರ್ಷ ನಡೆಯುವುದಕ್ಕೆ ಪ್ರಯತ್ನ ನಡೆಸಿದ್ದು ನಿಜಕ್ಕೂ ಖೇದಕರ.

ತಿದ್ದಿ ಬುದ್ದಿ ಹೇಳಬೇಕಾದವರೇ ತಪ್ಪು ದಾರಿ ತೋರಿದರೆ, ಕಾಲ ಮತ್ತು ಸಮಾಜವೇ ಪಾಠ ಕಲಿಸುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ.

Tags

Related Articles

Close