ಪ್ರಚಲಿತ

ಸ್ವರ್ಣ ಮಂದಿರದ ಲಂಗರ್ ಸೇವೆಯನ್ನು ಜಿ.ಎಸ್.ಟಿಯಿಂದ ವಿನಾಯಿತಿಗೊಳಿಸಿದ ಮೋದಿ ಸರಕಾರ!! ಇದುವರೆಗೂ ಸಂಗ್ರಹಿಸಿದ 300 ಕೋಟಿ ರೂಪಾಯಿಗಳನ್ನು ಮರುಪಾವತಿಸಲು ಕೇಂದ್ರದ ನಿರ್ಧಾರ!!

ಸನಾತನ ಧರ್ಮ ರಕ್ಷಕರ ಕೈಯಲ್ಲಿ ಆಡಳಿತ ನೀಡಬೇಕೆಂದು ಅದಕ್ಕೆ ಹೇಳುವುದು. ಜಾತ್ಯಾತೀತ ಸರಕಾರಗಳು ಸನಾತನ ಧರ್ಮದ, ಮಠ-ಮಂದಿರ-ಗುರುದ್ವಾರಾ-ಪಗೋಡಾಗಳಿಂದ ಕೋಟಿ ಕೋಟಿ ಕೊಳ್ಳೆ ಹೊಡೆದು ಅಲ್ಪರಿಗೆ ಭಾಗ್ಯ ಕರುಣಿಸಿ ಅವರ ಉದ್ದಾರ ಮಾಡುತ್ತವೆ ಮತ್ತು ಅದೆ ದುಡ್ಡಿನಿಂದ ಬಹುಜನರ ಕಗ್ಗೊಲೆ ನಡೆಸುತ್ತದೆ. ಆದರೆ ಒಬ್ಬ ಅಪ್ಪಟ ದೇಶಭಕ್ತ ಹಿಂದೂ ರಾಷ್ಟ್ರವಾದಿಯ ಕೈಯಲ್ಲಿ ಅಧಿಕಾರಕೊಟ್ಟರೆ ಆತ ಕಡೆ ಉಸಿರಿರುವವರೆಗೂ ಧರ್ಮ ರಕ್ಷಣೆ ಮಾಡುತ್ತಾನೆ ಎನ್ನುವುದಕ್ಕೆ ಮೋದಿ ಅವರೆ ಸಾಕ್ಷಿ.

ಸಿಖರು ತಮ್ಮ ಪರಾಕ್ರಮ ಮತ್ತು ಬಲಿದಾನಗಳಿಗೆ ಹೇಗೆ ಹೆಸರುವಾಸಿ ಆಗಿದ್ದಾರೋ ಅದೆ ರೀತಿ ಸಮಾಜ ಸೇವೆಗೂ ಪ್ರಖ್ಯಾತರಾಗಿದ್ದಾರೆ. ಸಿಖರ ಗುರುದ್ವಾರಾಗಳಲ್ಲಿ ಅನುದಿನವೂ “ಲಂಗರ್ ಸೇವೆ” ನಡೆಯುತ್ತದೆ. ನಮ್ಮ ಮಂದಿರಗಳಲ್ಲಿ ನಿತ್ಯವೂ ಅನ್ನ ದಾಸೋಹ ನಡೆಯುವಂತೆಯೆ ಸಿಖರ ಗುರುದ್ವಾರಾಗಳಲ್ಲಿ ಬಡವ ಬಲ್ಲಿದ ಬೇಧವಿಲ್ಲದೆ ಎಲ್ಲರಿಗೂ ಉಣ ಬಡಿಸುತ್ತಾರೆ. ಇದನ್ನೆ ಲಂಗರ್ ಸೇವೆ ಎನ್ನುತ್ತಾರೆ. ಕೇವಲ ಗುರುದ್ವಾರಾಗಳಲ್ಲಿ ಮಾತ್ರವಲ್ಲದೆ, ಪ್ರಾಕೃತಿಕ ವಿಕೋಪ ಮತ್ತು ಇನ್ನಿತರ ತುರ್ತು ಸಂಧರ್ಭಗಳಲ್ಲಿಯೂ ಸಿಖರು ಲಂಗರ್ ಸೇವೆ ನಡೆಸಿ ಸಮಾಜ ಸೇವಾ ಕೈಂಕರ್ಯ ನಡೆಸುತ್ತಾರೆ.

ಪಂಜಾಬಿನ ಅಮೃತಸರದಲ್ಲಿರುವ ಸ್ವರ್ಣ ಮಂದಿರ ವಿಶ್ವವಿಖ್ಯಾತವಾಗಿದೆ. ಇಲ್ಲಿನ ಲಂಗರ್ ಸೇವೆಯೂ ಅಷ್ಟೇ ಪ್ರಖ್ಯಾತ. ಪ್ರಪಂಚಲ್ಲೆ ಅತಿ ದೊಡ್ಡ ಅಡುಗೆಮನೆ ಹೊಂದಿರುವ ಕೀರ್ತಿಗೆ ಭಾಜನವಾದ ಸ್ವರ್ಣ ಮಂದಿರ, ನಿತ್ಯವೂ 50000-100000 ಭಕ್ತರಿಗೆ ಲಂಗರ್ ಸೇವೆ ನೀಡುತ್ತದೆ. ದೇಶದಲ್ಲಿ ಜಿ.ಎಸ್.ಟಿ ಬಂದ ನಂತರ ಈ ಲಂಗರ್ ಸೇವೆಗೂ ತೆರಿಗೆ ಹಾಕಲಾಗಿತ್ತು. ಕೇಂದ್ರದ ಮೋದಿ ಸರಕಾರವು ಮಂದಿರದ ಲಂಗರ್ ಗೆ ಉಪಯೋಗಿಸುವ ವಸ್ತುಗಳನ್ನು ಜಿ.ಎಸ್.ಟಿ ಯಿಂದ ಕೈ ಬಿಡಲು ನಿರ್ಧರಿಸಿದೆ ಮತ್ತು ಇದುವರೆಗು ಸಂಗ್ರಹಣೆಯಾದ ಮುನ್ನೂರು ಕೋಟಿ ರುಪಾಯಿಯನ್ನು ಮರುಪಾವತಿಸಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ರಾಷ್ಟ್ರಪತಿ ರಮಾನಾಥ್ ಕೋವಿಂದ್ 31 ಮೇ ಅಂದು ಸೇವಾ ಭೋಜ್ ಯೋಜನೆಗೆ ವಿಶೇಷ ಹಣಕಾಸು ಸಹಾಯವನ್ನು ಮಂಜೂರು ಮಾಡಿದ ಬಳಿಕ ಈ ಕ್ರಮವು ಜಾರಿಗೆ ಬಂದಿದೆ. ಯೋಜನೆಯ ಭಾಗವಾಗಿ, ಉಚಿತ ಆಹಾರವನ್ನು ವಿತರಿಸುವ ದತ್ತಿ ಸಂಸ್ಥೆಗಳಲ್ಲಿ ಬಳಸಲಾಗುವ ವಸ್ತುಗಳ ಮೇಲೆ ಹೇರಲಾಗುವ ಕೇಂದ್ರ ಜಿ.ಎಸ್.ಟಿ ಮತ್ತು ಇಂಟಿಗ್ರೇಟೆಡ್ ಜಿ.ಎಸ್.ಟಿ ಅನ್ನು ಕೈಬಿಡಲಾಗುತ್ತದೆ ಮತ್ತು ಇಂತಹ ದತ್ತಿ ಸಂಸ್ಥೆಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರವು ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಇದುವರೆಗು ಸಂಗ್ರಹಣೆಯಾದ ಹಣವನ್ನು ಮರುಪಾವತಿಸಲಿದೆ!!

ಭಕ್ತರು ಮತ್ತು ಹಸಿದಿರುವವರಿಗೆ ಉಚಿತ ಅನ್ನ ಸೇವೆಯನ್ನು ನೀಡುವ ಎಲ್ಲಾ ದತ್ತಿ ಸಂಸ್ಥೆಗಳಿಗೆ ಈ ಯೋಜನೆಯು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ. ಮಠ-ಮಂದಿರ- ಮಸೀದಿ-ಚರ್ಚು-ಧಾರ್ಮಿಕ ಆಶ್ರಮ-ದರ್ಗಾಹ ಮುಂತಾದ ದತ್ತಿ ಸಂಸ್ಥೆಗಳಲ್ಲಿ ತಿಂಗಳಿಗೆ ಕನಿಷ್ಟವೆಂದರೂ 5000 ಜನರಿಗೆ ನಿತ್ಯ ಭೋಜನವನ್ನು ನೀಡುತ್ತಿದ್ದಲ್ಲಿ ಅಂತಹ ಸಂಸ್ಥೆಗಳು ಈ ಯೋಜನೆಯ ಲಾಭ ಪಡೆಯಲು ಅರ್ಹ ವಾಗಿರುತ್ತವೆ. ಭೋಜನಕ್ಕೆ ಉಪಯೋಗಿಸಲಾಗುವ ಕಚ್ಚಾ ಸಾಮಾಗ್ರಿಗಳ ಮೇಲೆ ತೆರಿಗೆ ವಿನಾಯಿತಿ ನೀಡಿ ಸಂಸ್ಥೆಗಳ ಮೇಲಾಗುವ ಹೆಚ್ಚುವರಿ ಹೊರೆಯನ್ನು ಮೋದಿ ಸರಕಾರ ಇಳಿಸಲಿದೆ. ಒಟ್ಟು 325 ಕೋಟಿ ರುಪಾಯಿಯ ಪರಿವ್ಯಯದ ಈ ಯೋಜನೆಯನ್ನು ಕೇಂದ್ರದ ಸಂಸ್ಕೃತಿ ಮಂತ್ರಾಲಯ ನೋಡಿಕೊಳ್ಳಲಿದೆ. ಹಿಂದೂ ಮಂದಿರಗಳಲ್ಲಿ ನಿತ್ಯವೂ ಸಾವಿರಾರು ಜನರಿಗೆ ಅನ್ನ ದಾಸೋಹ ನಡೆಯುತ್ತದೆ. ಮೋದಿ ಅವರ ಈ ನಿರ್ಣಯದಿಂದಾಗಿ ಮಂದಿರಗಳ ಮೇಲಿರುವ ಆರ್ಥಿಕ ಹೊರೆ ಕಡಿಮೆ ಆಗಲಿದೆ.

ಬಹು ಜನ ಹಿತಾಯ ಬಹುಜನ ಸುಖಾಯ ಎನ್ನುವುದು ಮೋದಿ ಧ್ಯೇಯ ಮಂತ್ರ. ಒಬ್ಬ ಅಪ್ಪಟ ಸನಾತನಿ ಮಾತ್ರ ಸನಾತನ ಧರ್ಮದ ಆಚರಣೆಗಳನ್ನು ಪಾಲಿಸಬಲ್ಲ. ಬಡ ಜನರೂ ಭೇದ ಭಾವವಿಲ್ಲದೆ ಹೊಟ್ಟೆ ತುಂಬಾ ಉಣ್ಣುವಂತಾಗಲಿ ಎಂದು ಇಂತಹ ಅದ್ಭುತ ಯೋಜನೆ ಜಾರಿಗೆ ತಂದ ಮೋದಿ ಸರಕಾರಕ್ಕೆ ನಮೋ ನಮಃ. ಸದಾ ದೇಶದ ಬಗ್ಗೆ, ದೇಶದ ಬಡ ಜನತೆಯ ಬಗ್ಗೆ ಯೋಚಿಸುವ ಇಂತಹ ಪ್ರಧಾನ ಸೇವಕ ದೊರಕಿರುವುದು ಭಾರತ ಮಾತೆಯ ಪುಣ್ಯ. ಬಡವರ ಹೊಟ್ಟೆ ತಣ್ಣಗಿರಲಿ ಎಂದು ಸದಾ ಯೋಚಿಸುವ ಮೋದಿಯೆ ನಮ್ಮ ನಾಯಕರಾಗಿ ಮತ್ತೊಮ್ಮೆ ಬರಲಿ. ಮೋದಿಯಂತಹ ಅನರ್ಘ್ಯ ರತ್ನ ಪ್ರಪಂಚದಲ್ಲಿ ಹುಡುಕಿದರೂ ಸಿಗಲಾರದು. 2019 ರಲ್ಲಿ ಮೋದಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸೋಣ.

– ಶಾರ್ವರಿ

Related Articles

Close