ಪ್ರಚಲಿತ

ಸಿಹಿ ಸುದ್ದಿ! ಮೋದಿ ಸರಕಾರದ ದಿಟ್ಟ ಕ್ರಮಕ್ಕೆ ತಲೆಬಾಗಿದ ಸ್ವಿಸ್ ಬ್ಯಾಂಕ್.! ಭಾರತದ ಕೈಸೇರಲಿದೆ ಭ್ರಷ್ಟರ ಜಾತಕ..!

ನರೇಂದ್ರ ಮೋದಿ ಹೆಸರು ಕೇಳುತ್ತಿದ್ದಂತೆ ಭ್ರಷ್ಟರು ಒಂದು ಹೆಜ್ಜೆ ಹಿಂದೆ ಇಡುತ್ತಾರೆ. ಯಾಕೆಂದರೆ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೂ ಮೊದಲೇ ದೇಶದ ಜನತೆಗೆ ಕಪ್ಪುಹಣದ ಬಗ್ಗೆ ಕುತೂಹಲ‌ ಮೂಡಿಸಿದ್ದರು.‌ ದೇಶದ ಭ್ರಷ್ಟರು ದೇಶದ ಸಂಪತ್ತನ್ನು ಲೂಟಿ ಮಾಡಿ ವಿದೇಶದ ಬ್ಯಾಂಕ್ ಗಳಲ್ಲಿ ಕೂಡಿಟ್ಟಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರ. ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತರುವ ನಿಟ್ಟಿನಲ್ಲಿ ಸಮರ ಸಾರಿರುವ ಮೋದಿ ಇದೀಗ ಎಲ್ಲಾ ತಯಾರಿ ನಡೆಸಿ ಕೊನೆಯ ಹಂತಕ್ಕೆ ಬಂದು ತಲುಪಿದ್ದಾರೆ..!

ಯಾಕೆಂದರೆ ವಿದೇಶದಲ್ಲಿ ಇರುವ ಕಪ್ಪು ಹಣ ನಮ್ಮ ದೇಶಕ್ಕೆ ಮತ್ತೆ ವಾಪಾಸಾದರೆ ದೇಶದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುವದರಲ್ಲಿ ಸಂಶಯವಿಲ್ಲ. ಅದಕ್ಕಾಗಿಯೇ ಇದೀಗ ಯೋಜನೆ ರೂಪಿಸಿರುವ ಮೋದಿ ಸ್ವಿಜ್ ಬ್ಯಾಂಕ್ ನಲ್ಲಿ ಇರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರಲು ಎಲ್ಲಾ ಸಿದ್ಧತೆ ನಡೆಸಿದ್ಧಾರೆ.

ಮೋದಿ ವಿರೋಧಿಗಳ ಬಾಯಿಗೆ ಬೀಗ..!

ಪ್ರಧಾನಿ ಮೋದಿಯವರನ್ನು ಹೇಗಾದರೂ ಮಣಿಸಬೇಕೆಂಬ ನಿಟ್ಟಿನಲ್ಲಿ ಒಟ್ಟಾದ ವಿರೋಧಿ ಪಡೆಗಳು ಕಪ್ಪು ಹಣದ ವಿಚಾರವಾಗಿ ಭಾರೀ ಪ್ರಶ್ನಿಸುತ್ತಿದ್ದರು. ಮೋದಿ ಕಪ್ಪು ಹಣವನ್ನು ವಾಪಸು ತರಲು ಏನೂ ಮಾಡುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದವರಿಗೆಲ್ಲಾ ಇದೀಗ ಉತ್ತರ ಕೊಡಲು ಕೇಂದ್ರ ಸರಕಾರ ಸಜ್ಜಾಗಿದೆ.‌ ಹೌದು ಸದ್ಯದಲ್ಲೇ ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ಮರಳಲಿದೆ. ಈ ಮೂಲಕ ಮೋದಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮಾಡಿರುವ ಶಪಥವನ್ನು ಈಡೇರಿಸಲಿದ್ದಾರೆ. ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಮೋದಿಗೆ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಆದರೂ ಕೈಗೆತ್ತಿಕೊಂಡ ಕಾರ್ಯವನ್ನು ಪೂರ್ಣಗೊಳಿಸದೆ ವಿರಮಿಸದ ಮೋದಿ ತೆರೆಮರೆಯಲ್ಲಿ ಇದರ ವಿರುದ್ಧ ಸದ್ದಿಲ್ಲದೆ ತಂತ್ರ ರೂಪಿಸಿದ್ದಾರೆ.‌

Image result for MODI ANGRY

ನೋಟ್ ಬ್ಯಾನ್ ಮಾಡಿ ದೇಶದಲ್ಲಿರುವ ಕಪ್ಪು ಹಣವನ್ನು ಮಟ್ಟ ಹಾಕಿದ ಪ್ರಧಾನಿ ಮೋದಿ , ಇದೀಗ ವಿದೇಶದಲ್ಲಿರುವ ಕಪ್ಪು ಹಣವನ್ನೂ ಮಟ್ಟ ಹಾಕಲು ಸಜ್ಜಾಗಿದ್ದಾರೆ. ಸ್ವಿಜ್ ಬ್ಯಾಂಕ್ ನಲ್ಲಿ ಜಮಾ ಮಾಡಿರುವ ಭಾರತೀಯರು ತಮ್ಮ ಹೆಸರು ಘೋಷಿಸಿ ಎಂದು ಮೋದಿ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.‌ ಕೆಲವರು ತಮ್ಮ ಹೆಸರು ಹೇಳಿಕೊಂಡರು, ಆದರೆ ಹೆಚ್ಚಿನವರು ಗೌಪ್ಯವಾಗಿಯೇ ಇಟ್ಟುಕೊಂಡಿದ್ದರು. ಆದರೆ ಅದನ್ನೇ ಚಾಲೆಂಜ್ ಆಗಿ ಪಡೆದುಕೊಂಡ ಮೋದಿ ಇದೀಗ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಕೇಂದ್ರ ಸಚಿವರಿಂದ ಗುಡ್ ನ್ಯೂಸ್..!

ಕಳೆದ ಹಲವು ವರ್ಷಗಳಿಂದ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಕಪ್ಪುಹಣ ಹೊಂದಿದ್ದಾರೆ, ಇದನ್ನು ಮರಳಿ ತರಬೇಕೆಂಬ ಶತಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಆದರೆ ಕೆಲವು ಕಾನೂನುಗಳ ಅಡಚನೆಯ ಕಾರಣದಿಂದ ಇದನ್ನು ಪೂರೈಸಲಾಗಿರಲಿಲ್ಲ. ಇದೀಗ ಈ ಕುರಿತು ಮಾತನಾಡಿದ ಕೇಂದ್ರ ಹಣಕಾಸು ಸಚಿವ ಪಿಯೂಶ್ ಗೋಯಲ್, ಮುಂದಿನ ವರ್ಷ ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿದ ಭಾರತೀಯರ ಎಲ್ಲಾ ವಿವರಗಳೂ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

Image result for PIYUSH GOYAL

ಮುಂದಿನ ವರ್ಷದೊಳಗೆ ಭಾರತೀಯರ ಸ್ವಿಸ್‌ ಬ್ಯಾಂಕ್‌ ಖಾತೆಗಳ ವಿವರಗಳೆಲ್ಲವೂ ಸರಕಾರಕ್ಕೆ ಸಿಗಲಿದೆ ಎಂದ ಅವರು ಕಾನೂನು ಬಾಹಿರವಾಗಿ ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿ ಭಾರತೀಯರ ಹಣ ಇರುವುದು ಪತ್ತೆಯಾದಲ್ಲಿ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು. ಭಾರತ ಮತ್ತು ಸ್ವಿಟ್ಸರ್ಲಂಡ್‌ ನಡುವಿನ ಒಪ್ಪಂದದ ಪ್ರಕಾರ 2018ರ ಜನವರಿ 1ರಿಂದ ಡಿಸೆಂಬರ್‌ 31ರ ವರೆಗಿನ ಅವಧಿಯ ಭಾರತೀಯರ ಸ್ವಿಸ್‌ ಬ್ಯಾಂಕ್‌ ಖಾತೆಯ ವಿವರಗಳು ಸರಕಾರಕ್ಕೆ ಮುಂದಿನ ವರ್ಷ ಸಿಗಲಿದೆ ಎಂದು ಹೇಳಿದರು.

ಮೋದಿ ತಂತ್ರಕ್ಕೆ ಮಣಿದ ಸ್ವಿಸ್ ಬ್ಯಾಂಕ್..!

ಇಡೀ ಜಗತ್ತೇ ಸ್ವಿಸ್ ಬ್ಯಾಂಕ್ ವಿರುದ್ಧ ಸಮರ ಸಾರಿ , ಕಪ್ಪು ಹಣ ಹೊಂದಿರುವ ಭ್ರಷ್ಟರ ಹೆಸರಿನ ಪಟ್ಟಿ ನೀಡುವಂತೆ ಆಗ್ರಹಿಸಿತ್ತು. ಆದರೆ ಯಾರ ಮಾತಿಗೂ ಬಗ್ಗದ ಸ್ವಿಸ್ ಬ್ಯಾಂಕ್ ಯಾರ ಹೆಸರನ್ನೂ ಬಹಿರಂಗಗೊಳಿಸಿರಲಿಲ್ಲ. ಆದರೆ ವಿಶ್ವ ದೊರೆ ಮೋದಿ ಮಾತ್ರ ಈ ವಿಚಾರದಲ್ಲಿ ರಾಜಿ ತೋರಲಿಲ್ಲ. ಕಪ್ಪು ಹುಳಗಳ ವಿರುದ್ಧ ಸಾರಿದ ಸಮರವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಇದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರಿಯನ್ನು ತೆರೆಮರೆಯಲ್ಲಿ ಇದೀಗ ಪೂರ್ಣಗೊಳಿಸಿದ್ದಾರೆ. ಅದಕ್ಕಾಗಿಯೇ ಮೋದಿ ತಂತ್ರಕ್ಕೆ ಮಂಡಿಯೂರಿರುವ ಸ್ವಿಸ್ ಬ್ಯಾಂಕ್ ಭಾರತೀಯರ ಹೆಸರನ್ನು ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.‌ ಈ ವಿಚಾರವಾಗಿ ಸ್ವಿಜರ್ಲೆಂಡ್ ನ‌ ಮೇಲ್ಮನವಿ ಉನ್ನತ ಸಂಸತ್ ಸಮಿತಿಯೊಂದು ಒಪ್ಪಂದಕ್ಕೆ ಒಪ್ಪಿಗೆ ನೀಡಿದೆ. ಈ ಒಪ್ಪಂದದ ಪ್ರಕಾರ ಸ್ವಿಜರ್ಲ್ಯಾಂಡ್ ಸರಕಾರ ಭಾರತ ಸರಕಾರಕ್ಕೆ ಕಪ್ಪು ಹಣ ಇಟ್ಟವರ ಹೆಸರು, ವಿಳಾಸ , ಖಾತೆ ಸಂಖ್ಯೆ, ಒಟ್ಟು ಮೊತ್ತ, ಜನ್ಮ ದಿನಾಂಕ ಇತ್ಯಾದಿಗಳನ್ನು ಹಸ್ತಾಂತರಿಸಬೇಕಾಗುತ್ತದೆ.

Image result for SWISS BANK

ಮೋದಿ ಯಾವುದೇ ಯೋಜನೆ ಜಾರಿಗೊಳಿಸಿದರೂ ಅದನ್ನು ವಿರೋಧಿಸುವ ಎಡಬಿಡಂಗಿಗಳು ಪ್ರತಿಯೊಂದಕ್ಕೂ ಅಡ್ಡಗಾಲು ಹಾಕುತ್ತಲೇ ಇದ್ದರು. ಆದರೆ ಯಾವ ವಿರೋಧವನ್ನೂ ಲೆಕ್ಕಿಸದ ಮೋದಿ ತಾನು ದೇಶದ ಜನರಿಗೆ ಕೊಟ್ಟ ಆಶ್ವಾಸನೆಯನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದಾರೆ. ‌ಆದ್ದರಿಂದ ಕಪ್ಪು ಹಣ ಇಟ್ಟವರ ಜನ್ಮ‌ಜಾಲಾಡಲು ಡೇಟ್ ಫಿಕ್ಸ್ ಮಾಡಿರುವ ಮೋದಿ ಸದ್ಯದಲ್ಲೇ ಭ್ರಷ್ಟರ ಸಮಾಧಿ ಕಟ್ಟಲಿದ್ದಾರೆ..!

–ಸಾರ್ಥಕ್

Tags

Related Articles

Close