ಪ್ರಚಲಿತ

ಮೋದಿ ಕನಸಿಗೆ ಒಂದು ವರ್ಷ.. ಸೆಂಟ್ರಲ್ ಹಾಲ್‍ನಲ್ಲಿ ಸಂಭ್ರಮವೋ ಸಂಭ್ರಮ!! ಈ ಖುಷಿ ಯಾರಿಗುಂಟು ಯಾರಿಗಿಲ್ಲ? ಒಂದು ವರ್ಷದಲ್ಲಿ ದೇಶ ಬದಲಾಯಿತೆಷ್ಟು?!

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಕ್ಷಣದಲ್ಲಿಯೇ ಇಡೀ ದೇಶ ಬದಲಾಗಿದೆ!! ದೇಶವನ್ನು ಲೂಟಿ ಹೊಡೆದು ಸಂಪಾದಿಸಿ ಹಣ ಕೂಡಿಟ್ಟವರಿಗೆ ನರೇಂದ್ರ ಮೋದಿಜೀಯ ಒಂದೊಂದೇ ನಡೆ ವಿರೋಧಿಗಳನ್ನು ತತ್ತರಿಸುವಂತೆ ಮಾಡಿತ್ತು!! ಮೋದೀಜೀ ಅಧಿಕಾರವಹಿಸಿದ ಬಳಿಕ ತಂದ ನೋಟ್‍ಬ್ಯಾನ್, ಜಿಎಸ್‍ಟಿಯಿಂದಾಗಿ ಮೋದಿಜೀ ಇಡೀ ರಾಷ್ಟ್ರದಲ್ಲಿ ರಾರಾಜಿಸಿದ್ದಲ್ಲದೆ ಇಡೀ ವಿಶ್ವವೇ ಭಾರತದತ್ತ ಮುಖ ಮಾಡುವಂತಾಗಿದೆ!! ಇದೀಗ ಮೋದಿ ಸರಕಾರ ಜಾರಿಗೆ ತಂದ ಜಿಎಸ್‍ಟಿಗೆ ಇಂದು ಒಂದು ವರ್ಷದ ಸಂಭ್ರಮಾಚರಣೆಯಲ್ಲದೆ!!

ಭಾರತದ ಒಕ್ಕೂಟ ವ್ಯವಸ್ಥೆಗೆ ಹೊಸ ಅರ್ಥ ಬರೆದ ಜಿಎಸ್‍ಟಿ ಜಾರಿಯಾಗಿ ಇಂದಿಗೆ ಒಂದು ವರ್ಷ. ಜೂನ್ 30ರ ಮಧ್ಯರಾತ್ರಿ ರಾಷ್ಟ್ರಪತಿ ಹಾಗೂ ಪ್ರಧಾನಿ ಸಂಸತ್ ಭವನದಲ್ಲಿ ಜಿಎಸ್‍ಟಿಗೆ ಚಾಲನೆ ನೀಡಿದಾಗ ಹೊಸ ಅಧ್ಯಾಯ ಶುರುವಾಯಿತು. ಒಂದು ವರ್ಷದ ಬಳಿಕ ಜಿಎಸ್‍ಟಿ ಜಾರಿ ಮಾಡಿದ ಯಶಸ್ವಿ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರಿಕೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ!!

Image result for modi with gst

ಸರಕು ಸೇವಾ ತೆರಿಗೆ(ಜಿಎಸ್‍ಟಿ) ವ್ಯವಸ್ಥೆ ಜಾರಿಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಜುಲಾಯಿ 1ರಂದು ಜಿಎಸ್‍ಟಿ ದಿನ ಎಂದು ಆಚರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೋಯಲ್‍ರ ಅಧ್ಯಕ್ಷತೆಯಲ್ಲಿ ದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್‍ನಲ್ಲಿ ಇಂದು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ರಾಜ್ಯಗಳ ಜಿಎಸ್‍ಟಿ ಪ್ರತಿನಿಧಿಗಳು, ಆರ್ಥಿಕ ತಜ್ಞರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ವಿಶೇಷವೆಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಜೂನ್ 30ರ ಮಧ್ಯರಾತ್ರಿ 12 ಗಂಟೆಗೆ ಜಿಎಸ್‍ಟಿ ಅನುಷ್ಠಾನವನ್ನು ಇದೇ ಸೆಂಟ್ರಲ್ ಹಾಲ್‍ನಲ್ಲಿ ಘೋಷಿಸಲಾಗಿತ್ತು. ಅಂದು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮೋದೀಜೀ ಜರಿಗೆ ತಂದ ಜಿಎಸ್‍ಟಿಯಿಂದ ಭರತಕ್ಕೇನು ಲಾಭ ಎಂದು ಕೆಲವರು ಬೊಬ್ಬಿಡುವವರಿಗೆ ಇದರಿಂದ ಯಾವ ರೀತಿ ಲಾಭವಾಗಿದೆ ಎಂದು ತಿಳಿದರೆ ಒಳಿತು!!

ಸರಕು ಮತ್ತು ಸೇವಾ ತೆರಿಗೆ ಯೋಜನೆಯಿಂದ ಭಾರತದ ಜಿಡಿಪಿ ಚೀನಾ ಜಿಡಿಪಿಯನ್ನೇ ಹಿಂದಿಕ್ಕುವ ಮಟ್ಟಕ್ಕೆ ಬೆಳೆದಿದೆ. ಕಳೆದ ವರ್ಷ ಶೇಕಡ 6.7ರಷ್ಟಿದ್ದ ಜಿಡಿಪಿ ಈಗ ಶೇಕಡ 7.7ಕ್ಕೆ ತಲುಪಿದೆ. ಆ ಮೂಲಕ ಜಿಎಸ್ಟಿ ದೇಶದ ಅಭಿವೃದ್ಧಿಗೆ ಕಾರಣವಾಗಿದೆ!!.

ಜಿಎಸ್ಟಿ ಜಾರಿಯಿಂದ ದೇಶದಲ್ಲಿ ಆದಾಯ ರಿಟನ್ರ್ಸ್ ಸಲ್ಲಿಸುವವರ ಸಂಖ್ಯೆ ಜಾಸ್ತಿಯಾಗಿದೆ. 2017-18ನೇ ಸಾಲಿನಲ್ಲಿ ಸುಮಾರು 6.86 ಕೋಟಿ ರಿಟನ್ರ್ಸ್ ಸಲ್ಲಿಕೆಯಾಗಿದೆ. ಇದರಲ್ಲಿ 1.06 ಕೋಟಿ ನೂತನ ರಿಟನ್ರ್ಸ್ ಎಂಬುದು ಗಮನಾರ್ಹ ಅಂಶವಾಗಿದೆ.

 

ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ಭಾರತದ ತೆರಿಗೆ ಸಂಗ್ರಹಣೆ ಜಾಸ್ತಿಯಾಗಿದೆ. 2017-18ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು ಹತ್ತು ಲಕ್ಷ ಕೋಟಿ ರೂಪಾಯಿಗಿಂತಲೂ ಅಧಿಕ ಹಣ ತೆರಿಗೆ ರೂಪದಲ್ಲಿ ಸಂಗ್ರಹವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ಕಳೆದ ವರ್ಷಕ್ಕಿಂತ ಶೇಕಡ 57ರಷ್ಟು ತೆರಿಗೆ ಸಂಗ್ರಹ ಪ್ರಮಾಣ ಜಾಸ್ತಿಯಾಗಿದೆ.

ಜಿಎಸ್ಟಿ ಜಾರಿಗೂ ಮೊದಲು ದೇಶದಲ್ಲಿ 17 ತೆರಿಗೆ ಪದ್ಧತಿಗಳಿದ್ದವು. ದಲ್ಲಾಳಿಗಳು ತೆರಿಗೆ ಹಣ ಲಪಟಾಯಿಸುತ್ತಿದ್ದರು. ಒಂದೊಂದು ರಾಜ್ಯದಲ್ಲಿ ಒಂದೊಂದು ತೆರಿಗೆಯಿತ್ತು. ಆದರೆ ಜಿಎಸ್ಟಿ ಜಾರಿಯಿಂದ ದೇಶಾದ್ಯಂತ ಒಂದೇ ತೆರಿಗೆ ಪದ್ಧತಿಯಿದೆ. ಅಲ್ಲದೆ ದಲ್ಲಾಳಿಗಳ ಹಣ ಹೊಡೆಯುವುದು ಸಹ ನಿಂತಂತಾಗಿದೆ.

ಯೋಜನೆ ಜಾರಿಗೂ ಮುನ್ನ ಜಿಎಸ್ಟಿ ಉದ್ಯಮದ ಮೇಲೆ, ಅದರಲ್ಲೂ ಮಧ್ಯಮ ಉದ್ಯಮಗಳ ಮೇಲೆ ಹೊಡೆತ ಬೀಳುತ್ತದೆ ಎಂದು ಬೊಬ್ಬೆ ಹಾಕಲಾಗಿತ್ತು. ಆದರೆ ಜಿಎಸ್ಟಿ ಜಾರಿಯಾದ ಬಳಿಕ 1.3 ಕೋಟಿ ಉದ್ಯಮ ನೋಂದಣಿಯಾಗಿದ್ದು, ಅವುಗಳಲ್ಲಿ 50 ಲಕ್ಷ ಉದ್ಯಮ ನೂತನ ಎಂಬುದು ವಿಶೇಷವಾಗಿದೆ.

Image result for modi with gst

200 ಕಂಪನಿಗಳಿಗೆ ನೋಟಿಸ್

ಜಿಎಸ್‍ಟಿ ವ್ಯವಸ್ಥೆಯ ಕಣ್ತಪ್ಪಿಸಿ ವ್ಯವಹಾರ ಮಾಡುತ್ತಿರುವ ಸುಮಾರು 200 ಕಂಪನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿದ್ದರೂ ತೆರಿಗೆ ವ್ಯಾಪ್ತಿಗೆ ಬರದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ರಿಟನ್ರ್ಸ್ ಜಿಎಸ್‍ಟಿಆರ್-1, 2 ಹಾಗೂ 3 ಅರ್ಜಿಯ ವ್ಯವಸ್ಥೆ ಪರಿಪೂರ್ಣಗೊಂಡ ಬಳಿಕ ನೇರವಾಗಿ ಅಧಿಕಾರಿಗಳು ತೆರಿಗೆ ಕಳ್ಳರನ್ನು ಹಿಡಿಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನ ವರ್ಷಾಂತ್ಯದೊಳಗೆ ಅಭಿವೃದ್ಧಿಯಾಗಲಿದೆ. ಅಷ್ಟರೊಳಗೆ ರಿಟನ್ರ್ಸ್ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ.

ಹೀಗಾಗಿ ಮೋದಿಜೀ ದೇಶಕ್ಕಾಗಿ ಏನೇ ಮಾಡಿದರೂ ಅದು ಪರಿಪೂರ್ಣವಾಗಿರುತ್ತದೆ!! ಜಿಎಸ್‍ಟಿ ಜಾರಿಗೆ ತಂದಾಗ ಅದೆಷ್ಟೋ ಮೋದಿಜೀ ವಿರೋಧಿಗಳು ಹಲ್ಲುಕಿರಿದಿದ್ದರು!! ಆದರೆ ಅದು ಯಾವುದಕ್ಕೂ ಮೋದಿಜೀ ಕ್ಯಾರೇ ಅನ್ನಲಿಲ್ಲ!! ಯಾಕೆಂದರೆ ಮೊದಿಜೀಗೆ ಬೇಕಾಗಿದ್ದು ವಿರೋಧಿಗಳ ಮಾತಲ್ಲ ಬದಲಾಗಿ ಮೋದೀಜೀಗೆ ಬೇಕಾಗಿದ್ದು ದೇಶದ ಅಭಿವೃದ್ಧಿ ಅಷ್ಟೇ!!..

source: vijayavani

ಪವಿತ್ರ

Tags

Related Articles

Close