ಪ್ರಚಲಿತ

ಗುಡ್ ನ್ಯೂಸ್! ಬ್ರೀಟಿಷರು ಕಟ್ಟಿಸಿದ ಸೇತುವೆಗೆ ಹೊಸ ಜೀವ ನೀಡಲು ಮುಂದಾದ ಮೋದಿ ಸರಕಾರ.! ನಂ ೧ ಸಂಸದರಿಂದ ಮತ್ತೊಂದು ಅಭಿವೃದ್ಧಿಯ ಮೈಲಿಗಲ್ಲು.!

ಬ್ರಿಟೀಷರು ಇತಿಹಾಸದಲ್ಲಿ ಭಾರತದ ಸಂಪತ್ತನ್ನು ಲೂಟಿ ಮಾಡಿರುವ ಬಗ್ಗೆ ನಾನಿಲ್ಲಿ ಹೆಚ್ಚು ವಿವರವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ ಬ್ರಿಟೀಷರು ಯಾವ ಕಡೆಗಳಲ್ಲಿ ತಮ್ಮ ಖಜಾನೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತೋ ಅವೆಲ್ಲವನ್ನೂ ಖಾಲಿ ಮಾಡಿಬಿಟ್ಟಿದ್ದರು. ಕರ್ನಾಟಕದ ಕರಾವಳಿ ಪ್ರದೇಶವೂ ಇದಕ್ಕೆ ಹೊರತಾಗಿಲ್ಲ. ಕರಾವಳಿಯಲ್ಲಿ ಬ್ರಿಟೀಷರ ದಬ್ಬಾಳಿಕೆ ಕೊಂಚ ಜೋರಾಗಿಯೇ ಇತ್ತು, ಯಾಕೆಂದರೆ ಕೃಷಿ ಕುಟುಂಬಗಳ ಮೇಲೆ ತೆರಿಗೆಯ ರೂಪದಲ್ಲಿ ಕಪ್ಪ ಪಡೆಯುತ್ತಿದ್ದ ಬ್ರಿಟೀಷ್ ಅಧಿಕಾರಿಗಳು ಜೈನ ಕಾಶಿ ಮೂಡಬಿದಿರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗವಾದ ಮಂಗಳೂರು ನಗರದ ಸಂಪರ್ಕಕ್ಕಾಗಿ ಗುರುಪುರ ಎಂಬಲ್ಲಿ ಬೃಹತ್ ಸೇತುವೆ ನಿರ್ಮಿಸಿದ್ದರು.

ಈ ಸೇತುವೆ ನಿರ್ಮಾಣಕ್ಕೆ ಒಂದು ಕಾರಣ ಎರಡು ಮುಖ್ಯ ಪಟ್ಟಣಗಳ ಸಂಪರ್ಕ ಸಾಧಿಸಲು ಒಂದೆಡೆಯಾದರೆ ಮುಖ್ಯವಾದ ಕಾರಣ ಬ್ರಿಟೀಷರಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ಕಪ್ಪ ಕಾಣಿಕೆ ಪಡೆಯುವ ಉದ್ದೇಶವಾಗಿತ್ತು. ಬೃಹತ್ ಗಾತ್ರದ ಈ ಸೇತುವೆ ಬ್ರಿಟೀಷರ ಕಾಲದಿಂದ ಅಂದರೆ ಸುಮಾರು ೧೯೨೩ ರಲ್ಲಿ ನಿರ್ಮಾಣವಾದ ಈ ಸೇತುವೆ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿದೆ. ಆದರೆ ಕಳೆದ ೫-೬ ವರ್ಷಗಳಿಂದ ಈ ಸೇತುವೆ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಅಪಾಯದ ಮುನ್ಸೂಚನೆ ನೀಡಿತ್ತು. ದಿನದ ಇಪ್ಪತ್ತ ನಾಲ್ಕು ಗಂಟೆ ಕೂಡ ಈ ಸೇತುವೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುವುದರಿಂದ ಸೇತುವೆಯು ತನ್ನ ಬಲ ಕಳೆದುಕೊಂಡು ಶಿಥಿಲಾವಸ್ಥೆಗೆ ತಲುಪಿತ್ತು.!

ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳ ವಿರುದ್ಧ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಶಾಲಾ – ಕಾಲೇಜು ವಾಹನಗಳು ಸೇರಿದಂತೆ ಆಂಬುಲೆನ್ಸ್‌ಗಳು ಕೂಡ ಇದೇ ಮಾರ್ಗವಾಗಿ ಸಂಚರಿಸುವುದರಿಂದ ಎಲ್ಲಾ ರೀತಿಯಲ್ಲೂ ಈ ಗುರುಪುರ ಸೇತುವೆ ಪ್ರಮುಖವಾಗಿತ್ತು. ಕಳೆದ ೭೦ ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಸೇತುವೆಯ ಬಗ್ಗೆ ರಾಜ್ಯ ಸರಕಾರ ಮಾತ್ರವಲ್ಲದೆ ಕೇಂದ್ರ ಸರಕಾರದ ಗಮನಕ್ಕೂ ತರಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರ ಈ ಸೇತುವೆಯ ಪುನರ್ನಿರ್ಮಾಣಕ್ಕೆ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಸದ, ರಾಜ್ಯದ ನಂ೧ ಸಂಸದರಾಗಿರುವ ಶ್ರೀ ನಳೀನ್ ಕುಮಾರ್ ಕಟೀಲ್ ಅವರು ಇದೀಗ ಈ ಸೇಥುವೆ ನಿರ್ಮಾಣಕ್ಕೆ ಕೇಂದ್ರದ ನೇತೃತ್ವದಲ್ಲಿ ಮುಂದಾಗಿದ್ದಾರೆ.!

ಸೇತುವೆ ಪರಿಶೀಲನೆಗೆ ಬಂತು ಆಧುನಿಕ ಉಪಕರಣ..!

ಬ್ರಿಟೀಷರು ತಮ್ಮ ಲಾಭಕ್ಕಾಗಿ ಈ ಸೇತುವೆ ಕಟ್ಟಿಸಿದ್ದರೂ ಕೂಡ ಇಷ್ಟು ವರ್ಷ ಬಾಳ್ವಿಕೆ ಬಂದಿರುವುದು ವಿಶೇಷ. ಆದರೆ ಕಳೆದ ಕೆಲ ವರ್ಷಗಳಿಂದ ಅಪಾಯದ ಅಂಚಿನಲ್ಲಿರುವ ಈ ಸೇತುವೆಯ ಪುನರ್ನಿರ್ಮಾಣಕ್ಕೆ ಈ ಹಿಂದಿನ ಕಾಂಗ್ರೆಸ್ ಸರಕಾರಕ್ಕೆ ಮನವಿ ಮಾಡುತ್ತಲೇ ಇದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ನರೇಂದ್ರ ಮೋದಿ ನೇತ್ರತ್ವದಲ್ಲಿ ಜಿಲ್ಲೆಯ ಹೆಮ್ಮೆಯ ಸಂಸದರು ಈ ಸೇತುವೆಯ ಕಾಮಗಾರಿಗೆ ಆದೇಶಿಸಿದ್ದಾರೆ. ಮಳೆಗಾಲದಲ್ಲಿ ತುಂಬಿ ತುಳುಕುವ ಫಲ್ಗುಣಿ ನದಿಗೆ ಅಡ್ಡಲಾಗಿರುವ ಗುರುಪುರ ಸೇತುವೆ ಪರಿಶೀಲನೆಗೆ ಇಂದು ಮುಂಜಾನೆಯೇ ಬೆಂಗಳೂರಿನಿಂದ ಭಾರೀ ಗಾತ್ರದ ಉಪಕರಣವೊಂದು ಬಂದಿದ್ದು, ಮೂಡಬಿದಿರೆಯಿಂದ ಮಂಗಳೂರು ಕಡೆ ಪ್ರಯಾಣಿಸುವ ಎಲ್ಲಾ ವಾಹನಗಳಿಗೂ ಬಜಪೆ ವಿಮಾನ ನಿಲ್ದಾಣ ರಸ್ತೆಯಾಗಿ ಸಂಚರಿಸಲು ಸೂಚಿಸಲಾಗಿತ್ತು. ಸೇತುವೆ ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸೇತುವೆಗೆ ಹಾಕಲಾಗಿರುವ ಕಬ್ಬಿಣದ ರಾಡ್‌ಗಳೆಲ್ಲಾ ತುಕ್ಕು ಹಿಡಿದು ನೀರು ಪಾಲಾಗಿದೆ. ಆದ್ದರಿಂದ ಶೀಘ್ರ ಸೇತುವೆ ನಿರ್ಮಾಣ ಮಾಡಲು ಸಂಸದ ನಳೀನ್ ಕುಮಾರ್ ಕಟೀಲ್ ಆದೇಶಿಸಿದ್ದಾರೆ.!

ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ಬರುವ ಈ ಸೇತುವೆಗೆ ಇನ್ನು ಮುಂದೆ ಹೊಸ ರೂಪ ಬರಲಿದೆ ಎಂಬುದು ಸತ್ಯ. ಮಂಗಳೂರಿನಿಂದ ಮೂಡಬಿದಿರೆಯ ಮುಖ್ಯ ರಸ್ತೆಯ ಕಾಮಗಾರಿಯೂ ಶೀಘ್ರ ಚಾಲನೆಯಾಗಲಿದೆ ಎಂದು ಹೇಳಿಕೊಂಡಿರುವ ಸಂಸದರು, ಎಲ್ಲಾ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಹಿಂದಿನ ರಾಜ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕರಾವಳಿಯ ಶಾಸಕರ ಹಸ್ತಕ್ಷೇಪದಿಂದಾಗಿ ರಸ್ತೆ ನಿರ್ಮಾಣಕ್ಕೆ ಅಡ್ಡಿ ಉಂಟಾಗಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಆದರೆ ಇನ್ನು ಯಾವುದೇ ಅಡ್ಡಿಯನ್ನೂ ಲೆಕ್ಕಿಸದೆ ರಸ್ತೆಯೂ ನಿರ್ಮಾಣವಾಗಲಿದೆ ಮತ್ತು ಅದಕ್ಕೂ ಮೊದಲು ಗುರುಪುರ ಸೇತುವೆ ನಿರ್ಮಿಸಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.!

ಸಂಸದರಿಗೆ ಸಾಥ್ ನೀಡಿದ ಶಾಸಕ ರಾಜೇಶ್ ನಾಯ್ಕ್..!

ಇತ್ತೀಚಿಗೆ ಬಂಟ್ವಾಳ ತಾಲೂಕಿನ ಮುಲಾರಪಟ್ಣ ಎಂಬಲ್ಲಿ ಸೇತುವೆಯೊಂದು ಕುಸಿದುಬಿದ್ದು ಭಾರೀ ಅನಾಹುತ ತಪ್ಪಿತ್ತು. ಈ ಸಂದರ್ಭದಲ್ಲಿ ಕೂಡಲೇ ಸ್ಥಳಕ್ಕಾಗಮಿಸಿದ ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಸ್ಪಂದನೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೇತುವೆ ಪುನರ್ನಿರ್ಮಾಣಕ್ಕೆ ಕೂಡಲೇ ಆದೇಶಿಸಿದ ಸಂಸದರ ಮಾತಿಗೆ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಾಂತ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಗುರುಪುರ ಸೇತುವೆ ಪರಿಶೀಲನೆಯ ವೇಳೆಯೂ ಸಂಸದ ನಳಿನ್ ಕುಮಾರ್ ಅವರ ಜೊತೆಗೆ ಶಾಸಕ ರಾಜೇಶ್ ನಾಯ್ಕ್ ಅವರು ಜೊತೆಗಿದ್ದು ಸಹಕರಿಸಿದರು. ರಾಜೇಶ್ ನಾಯ್ಕ್ ಸೇರಿದಂತೆ ಜಿಲ್ಲೆಯ ಒಟ್ಟು ೭ ಬಿಜೆಪಿ ಶಾಸಕರೂ ಕೂಡ ಹೊಸದಾಗಿ ಅಧಿಕಾರಕ್ಕೆ ಬಂದವರು. ಆದರೆ ಎಲ್ಲಾ ಶಾಸಕರೂ ಕೂಡ ಒಂದಲ್ಲಾ ಒಂದು ವಿಚಾರದಲ್ಲಿ ಜನರ ಗಮನ ಸೆಳೆಯುತ್ತಿದ್ದಾರೆ. ತಮ್ಮ ಕ್ಷೇತ್ರ ಮಾತ್ರವಲ್ಲದೆ ಸಾರ್ವಜನಿಕವಾಗಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಶಾಸಕರಿಗೆ ಜಿಲ್ಲೆಯಾದ್ಯಾಂತ ಮೆಚ್ಚುಗೆಚ ವ್ಯಕ್ತವಾಗುತ್ತಿದೆ.!

ಒಟ್ಟಾರೆಯಾಗಿ ಕುಸಿಯುವ ಹಂತದಲ್ಲಿರುವ ಬ್ರಿಟೀಷರ ಕಾಲದ ಸೇತುವೆಗೆ ಹೊಸ ಜೀವ ಬರಬೇಕಾದರೆ ಮೋದಿ ಸರಕಾರ ಆಡಳಿತಕ್ಕೆ ಬರಬೇಕಾಯಿತು ಎಂಬ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಅದೇ ರೀತಿ ಜಿಲ್ಲೆಯಲ್ಲಿ ಅಭಿವೃದ್ದಿಯೇ ಮಂತ್ರ ಎಂದು ಕಾರ್ಯ ನಿರ್ವಹಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ನಂ ೧ ಸಂಸದ ಸ್ಥಾನ ಸಿಕ್ಕಿರುವುದೇ ವಿನಃ ಮತ್ಯಾವುದೇ ಕಾರಣಕ್ಕಲ್ಲ..!

Tags

Related Articles

Close