ಅಂಕಣಪ್ರಚಲಿತ

ಸಿಯಾಚಿನ್ ನಲ್ಲಿ ಭಾರತೀಯ ಸೈನಿಕರು ಕಳೆಯುವುದು ಸಮಯ ಮಾತ್ರವಲ್ಲ, ಅವರ ವಯಸ್ಸನ್ನು ಕೂಡಾ.!ಸುಂದರ ಪರ್ವತದ ದುರ್ಗಮ ಹಾದಿ!

ತ್ತರಂ ಯತ್ಸಮುದ್ರಸ್ಯ ಹಿಮಾದ್ರಿಶ್ಚೈವ ದಕ್ಷಿಣಂ ವರ್ಷಮ್ ತದ್ಭಾರತಂ ನಾಮಹ ಭಾರತೀಯತ್ರ ಸಂತತಿಹಿ..ಉತ್ತರದಲ್ಲಿ ಹಿಮಾಲಯದಿಂದ ಆವೃತವಾದ ಬೃಹತ್ ದೇಶ ಭಾರತ.ದೇಶದ ಮೂರು ಭಾಗ ಸಮುದ್ರದಿಂದಲೂ ಒಂದು ಭಾಗ ಹಿಮಾಲಯದಿಂದಲೂ ಸುತ್ತುವರೆದಿರುವ ಏಕೈಕ ದೇಶವೆಂದರೆ ಅದು ಭಾರತ…ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂಬ ಖ್ಯಾತಿಯನ್ನು ಹಾಗು ಗೌರವವನ್ನು ಹೊಂದಿರುವ ಭಾರತವು ಪಾಕಿಸ್ತಾನ,ಬಾಂಗ್ಲಾ,ನೇಪಾಳ ಮತ್ತು ಭೂತಾನ್ ರಾಷ್ಟ್ರಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. ನೇಪಾಳ ಮತ್ತು ಭೂತಾನ್ ಗಳೆರಡೂ ಅತ್ಯುತ್ತಮ ನೆರೆಹೊರೆಯ ರಾಷ್ಟ್ರಗಳಾದರೆ ಪಾಕಿಸ್ತಾನ ಮತ್ತು ಚೀನಾ ನೆರೆಗಿಂತ ಹೆಚ್ಚಾಗಿ ಹೊರೆಯ ರಾಷ್ಟ್ರಗಳಾಗಿವೆ.ಏಕೆಂದರೆ ಇವೆರಡೂ ರಾಷ್ಟ್ರಗಳು ಪ್ರತೀ ಬಾರಿ ಗಡಿ ವಿಚಾರದಲ್ಲಿ ಏನಾದರೊಂದು ತಗಾದೆ ಎಬ್ಬಿಸಿ ಕಾಲು ಕೆರೆದು ಜಗಳಕ್ಕೆ ಬರುತ್ತವೆ.ಜಮ್ಮು ಕಾಶ್ಮೀರ ಲಡಾಖ್ ಮತ್ತು ಅರುಣಾಚಲ ಪ್ರದೇಶದ ಮೇಲೆ ಈ ಎರಡು ರಾಷ್ಟ್ರಗಳು ಕಣ್ಣಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.ಹೀಗೆ ಪ್ರತೀ ಬಾರಿ ವಿವಾದವನ್ನು ಹುಟ್ಟಿಸಿ ಜಗಳವಾಡುವ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವುದು ಒಂದು ದೌರ್ಭಗ್ಯವೇ ಸರಿ. ಹೀಗೆ ಹಂಚಿಕೊಂಡಿರುವ ಗಡಿಯಲ್ಲಿ ಪಹರೆಕಾಯುವ ಯೋಧರ ಕಷ್ಟ ನಮ್ಮ ಅರಿವಿಗೂ ಆಲೋಚನೆಗೂ ನಿಲುಕದಂತಹುದೇ ಆಗಿದೆ.ಯಾವುದೇ ಕಷ್ಟವನ್ನಾದರೂ ನಾವು ಅನುಭವಿಸಿದರೆ ಮಾತ್ರವೇ ಅರಿಯಬಹುದೇ ಹೊರತು,ಪುಸ್ತಕಗಳಲ್ಲಿ ಓದಿ ಮೊಬೈಲ್ ಟಿವಿ ಗಳಲ್ಲಿ ವಿಡಿಯೋ ನೋಡಿ ಅರಿಯಲು ಸಾಧ್ಯವಿಲ್ಲ.
See the source image
ಕಾಶ್ಮೀರದ ಚಳಿಯಲ್ಲಿ ಕಾವಲು ಕಾಯುವುದು ಎಷ್ಟು ಕಷ್ಟದ ವಿಷಯವೆಂದು ಕಾಶ್ಮೀರದ ಹಳ್ಳಗಳಲ್ಲಿ ಒಂದೆರಡು ತಿಂಗಳು ವಾಸಿಸಿ ಬಂದವರ ಬಳಿ ಕೇಳಿ..ನಮಗೆ ಊಹಿಸಲೂ ಸಾಧ್ಯವಾಗದ ಚಳಿ ಇರುತ್ತದೆ ಅಲ್ಲಿ.. ರಾಜಸ್ಥಾನದಲ್ಲಿ ಗಡಿ ಕಾಯುವವರ ಕಷ್ಟ ಅಲ್ಲಿಯ ಮರುಭೂಮಿಯ ಬಿಸಿ ಮತ್ತು ಬಿಸಿಗಾಳಿಗೆ ಬೀಸಿ ಬರುವ ಮರಳಿನ ಬಿರುಗಾಳಿಯನ್ನು ತಡೆದುಕೊಳ್ಳುವ ಶಕ್ತಿ ನಮಗಿರಲು ಸಾಧ್ಯವೇ ಇಲ್ಲ..ಸಮುದ್ರದಲ್ಲಿ ಪಹರೆ ಮಾಡುವ ನೌಕಾ ದಳದವರ ಏಕಾಂತತೆ ಹೇಳಿ ಮುಗಿಯುವಂತದ್ದಲ್ಲ..ಇವೆಲ್ಲವನ್ನೂ ಬೇಕಾದರೆ ನಾವು ಅನುಭವಿಸಿ ಅರಿಯಬಹುದಾಗಿತ್ತು..ಆದರೆ ಸಿಯಾಚಿನ್ ಎಂಬುದಿದೆಯಲ್ಲ ..ಅದು ಇವೆಲ್ಲದಕ್ಕಿಂತಲೂ ನಾಲ್ಕು ಪಾಲು ಹೆಚ್ಚಿನ ತೊಂದರೆಯದ್ದು..ಅಲ್ಲಿಯ ಚಳಿಗಾಲವೆಂದರೆ ಅದು ಸಾಮಾನ್ಯ ಚಳಿಗಾಲವಲ್ಲ..ಭಯಂಕರವಾದ ೩೫ ಅಡಿಗಿಂತಲೂ ಹೆಚ್ಚಿನ ಹಿಮಪಾತದೊಂದಿಗೆ ವಾತಾವರಣವು -೫೦ ಡಿಗ್ರಿ ಗಿಂತಲೂ ಕಡಿಮೆ ಉಷ್ಣಾಂಶ ಹೊಂದಿರುತ್ತದೆ.ಭಾರತ ಮತ್ತು ಪಾಕಿಸ್ತಾನದ ಗಡಿ ಭಾಗವಾದ ಸಿಯಾಚಿನ್ ಪ್ರಪಂಚದ ಎತ್ತರದ ಯುದ್ಧಭೂಮಿ ಎಂಬ ಹಿರಿಮೆಯನ್ನು ಮುಡಿಗೇರಿಸಿಕೊಂಡಿದೆ.
೧೯೭೦ ಮತ್ತು ೮೦ ರ ದಶಕಗಳ ನಡುವೆ ಇದನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆಯಾಗಿ ಗುರುತಿಸಲ್ಪಟ್ಟ ಹೊರತಾಗಿಯೂ ಪಾಕಿಸ್ತಾನ ಸಿಯಾಚಿನ್ ನದಿ ಮತ್ತು ಅದರ ಉಪನದಿಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಿ ಅತಿಕ್ರಮಿಸಿತ್ತು..೧೯೮೪ ರಲ್ಲಿ ಭಾರತವು ಆಪರೇಷನ್ ಮೇಘದೂತ್ ಎಂಬ ಮಿಲಿಟರಿ ಕಾರ್ಯಾಚರಣೆಯ ಮೂಲಕ ಸಿಯಾಚಿನ್ ನದಿ ಮತ್ತು ಅದರ ಉಪನದಿಗಳ ಮೇಲೆ ತನ್ನ ಸಾರ್ವಭಾಉಮಾತೆಯನ್ನು ಸಾಧಿಸಿತು.ಕೇವಲ ಒಂದು ದಿನದಲ್ಲಿ ಸಿಯಾಚಿನ್ ನದಿಯ ಪಶ್ಚಿಮಕ್ಕೆ ಸಲ್ತೆರೋ ರಿಜ್ ನಲ್ಲಿರುವ ಹೆಚ್ಚಿನ ಪ್ರದೇಶ ಭಾರತದ ವಶವಾಯಿತು.೨೦೦೩ ರಿಂದ ೨೦೧೦ ರ ನಡುವಿನ ಸಮಯದಲ್ಲಿ ಸಿಯಾಚಿನ್ ನಲ್ಲಿ ಕಾರ್ಯನಿವಹಿಸುತ್ತಿದ್ದ ೩೫೩ ಸೈನಿಕರನ್ನು ಪಾಕಿಸ್ತಾನ ಕಳೆದುಕೊಂಡರೆ ೨೦೧೨ ಗಾಯರಿ ಸೆಕ್ಟರ್ ಹಿಮಪಾತದಲ್ಲಿ೧೪೦ ಜನ ಪಾಕಿ ಸೈನಿಕರು ಪ್ರಾಣಕಳೆದುಕೊಂಡರು.ಭಾರತೀಯ ಸೈನ್ಯವು ೧೯೮೪ ರಿಂದ ಇಲ್ಲಿಯವರೆಗೆ ೮೬೯ ಸೈನಿಕರನ್ನು ಸಿಯಾಚಿನ್ ನಲ್ಲಿ ಕಳೆದುಕೊಂಡಿದೆ.ಇದರಲ್ಲಿ ೨೨೦ ಸೈನಿಕರು ಪಾಕಿಸ್ತಾನಿ ಸೈನ್ಯದ ಗುಂಡುಗಳಿಗೆ ಬಲಿಯಾದರೆ ಉಳಿದ ಸೈನಿಕರು ಹವಾಮಾನದ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ.ಸಿಯಾಚಿನ್ ಹಿಮನದಿಯು ೭೬ ಕಿಲೋಮೀಟರ್ ನಷ್ಟು ಉದ್ದ ಹರಿಯುತ್ತಿದ್ದು ಇದರ ಸುತ್ತಲಿನ 3೦೦೦ ಚದರ ಕಿಲೋಮೀಟರ್ ಭೂಪ್ರದೇಶವು ಭಾರತದ ವಶದಲ್ಲಿದೆ.
ಇಂತಹಾ ಸಿಯಾಚಿನ್ ಅನ್ನು ಈಗ ಪ್ರವಾಸಿಗರಿಗೂ ಮುಕ್ತವಾಗಿಸುವಕ್ತ್ತ ಭಾರತ ಸರ್ಕಾರ ಒಂದು ದೊಡ್ಡ ಹೆಜ್ಜೆಯನ್ನಿರಿಸಿದೆ.ಸಿಯಾಚಿನ್ ಬೇಸ್ ಕ್ಯಾಂಪ್ ನಿಂದ ಕುಮಾರ್ ಪೋಸ್ಟ್ ವರೆಗಿನ ಹಿಮನದಿಯ ಸಂಪೂರ್ಣ ಪ್ರದೇಶವು ಪ್ರವಾಸಿಗರಿಗೆ ಮುಕ್ತವಾಗಿದೆ ಎಂದು ಶ್ರೀ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದ ಬಳಿಕ ಹಲವಾರು ವರ್ಷಗಳಿಂದ ಅಭಿವೃದ್ಧಿಯನ್ನು ಕಾಣದ ಲಢಾಕ್ ಗೆ ಆಮ್ಲಜನಕನ್ನು ಬಿಜೆಪಿ ಸರ್ಕಾರ ನೀಡುತ್ತಿದೆ.ಲಡಾಖ್ ಪ್ರವಾಸೋದ್ಯಮದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ..ಈಗ ಸಿಯಾಚಿನ್ ಕೂಡ ಪ್ರವಾಸಿಗರಿಗೆ ಮುಕ್ತವಾಗಿರುವುದರಿಂದ ಲಡಾಖ್ ಮುಂದಿನ ದಿನಗಳಲ್ಲಿ ಬಹು ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವುದು ನಿಸ್ಸಂದೇಹವಾಗಿಯೂ ಸತ್ಯ.ಸ್ವಭಾವತಃ ಸ್ನೇಹಪ್ರಿಯರಾದಂತಹಾ ಲಡಾಖಿಗಳು ನೀಡುವ ಅತ್ಯುತ್ತಮ ಆಥಿತ್ಯವನ್ನು ಪಡೆಯಲೆಂದು ಹೋಗುವ ಜನರಿಂದ ಲಡಾಖ್ ಎಂಬ ಕೇಂದ್ರಾಡಳಿತ ಪ್ರದೇಶವು ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರನ್ನುಸ್ವಾಗತಿಸಿದೆ ಮತ್ತು ಪ್ರವಾಸೋದ್ಯಮದಿಂದ ಅಭಿವೃದ್ಧಿಯನ್ನೂ ಪಡೆಯಲಿದೆ.
ಮನೆಯಲ್ಲಿ ಟಿವಿ ಯಾ ಮುಂದೆ ಕುಳಿತು ಸೈನಿಕರ ಬಗ್ಗೆ ಬಾಯಿಗೆ ಬಂದಂತೆ ಅರಚಾಡುವ ಮಂದಿ ಇನ್ನು ಸಿಯಾಚಿನ್ ನ ಛಳಿಯ,ಹಿಮಪಾತದ ಅಪೂರ್ವ ಅನುಭವವನ್ನು ಧಾರಾಳವಾಗಿ ಪಡೆಯಬಹುದು..ನಿಜಾವಾಗಿಯೂ ಸೈನಿಕರ ಕಷ್ಟವನ್ನು ಸ್ವಲ್ಪವಾದರೂ ಅರಿಯಬೇಕೆಂಬ ಹುಮ್ಮಸ್ಸುಳ್ಳವರು ಖಂಡಿತವಾಗಿಯೂ ಸಿಯಾಚಿನ್ ಅನ್ನು ನೋಡಿ ಕಣ್ಣು ತುಂಬಿಸಿಕೊಳ್ಳಬಹುದು..ಲೇಹ್ ಲಡಾಖ್ ನ ಜನರ ಹಲವಾರು ವರುಷಗಳ ತಪಸ್ಸು ಕೊನೆಗೂ ಫಲವನ್ನು ನೀಡುತ್ತಿದೆ..ಲಡಾಖ್ ಅನ್ನು ಅಭಿವೃದ್ಧಿಯ ಪಥದಲ್ಲಿ ನಡೆಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗುಲಾಮರಿಗೆ ತೋರಿಸಿಕೊಡುತ್ತಿದೆ.ಲೇಹ್ ಲಡಾಖ್ ಗೆ ಬೈಕ್ ನಲ್ಲಿ ಹೋಗುವ ಕನಸನ್ನು ಹೊತ್ತಿರುವ ಯುವಜನತೆಯ ಕನಸಿನ ಮಾಲೆಗೆ ಇನ್ನು ಸಿಯಾಚಿನ್ ಪಾದಕವಾಗಲಿದೆ..ಸಾಧ್ಯವಾದರೆ ನಾವೂ ಹೋಗಿ ಕಣ್ತುಂಬಿಸಿಕೊಳ್ಳೋಣ ಅಲ್ಲವೇ?.
-Deepashree  M
Tags

Related Articles

FOR DAILY ALERTS
Close