ಪ್ರಚಲಿತ

ಅಮರನಾಥ ಯಾತ್ರಿಕರ ಮೇಲೆ ದಾಳಿಗೆ 450 ಪಾಕ್ ಉಗ್ರರು ಸಜ್ಜು!! ಮಾಹಿತಿ ನೀಡಿದ ಗುಪ್ತಚರ ಇಲಾಖೆ!!

ಅದೆಷ್ಟೋ ಬಾರಿ ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದರೂ ತನ್ನ ನರಿ ಬುದ್ಧಿಯನ್ನು ಮಾತ್ರ ಪಾಕ್ ಬಿಡಲ್ಲ ಅಂತ ಶಪಥ ಮಾಡಿದಂತಿದೆ!! ಇಡೀ ರಾಷ್ಟ್ರಗಳೇ ಪಾಕ್ ಹೆಸರು ಕೇಳುತ್ತಲೇ ದೂರ ಸರಿದರೂ ಪಾಕ್ ಮಾತ್ರ ತನ್ನ ಹಳೇ ಛಾಳಿಯಲ್ಲ ಬಿಡೋಲ್ಲ ಅನಿಸುತ್ತಿದೆ!! ಮೋದೀಜೀ ಅಧಿಕಾರವಹಿಸಿದಾಗಿನಿಂದ ಉಗ್ರರಿಗೆ ಭಾರತ ಹೊಳಹೊಕ್ಕಲು ಅದೆಷ್ಟೋ ಸಾಹಸವನ್ನೇ ಮಾಡುತ್ತಿದ್ದಾರೆ!! ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಮಾತ್ರ ತಮಗಿಷ್ಟ ಬಂದಂತೆ ಉಗ್ರರು ಸಲಿಸಾಗಿಯೇ ಭಾರತದ ಒಳನುಸುಳಿಕೊಂಡು ಬರುತ್ತಿದ್ದರು.. ಆದರೆ ಮೋದಿ ಸರಕಾರ ಅಧಿಕಾರ ಸ್ವೀಕರಿಸಿದಾಗಿನಿಂದ ಉಗ್ರರಿಗೆ ಒಳನುಸುಳಲು ಬಲು ಕಷ್ಟಕರವಾಗಿದೆ!! ಅಷ್ಟು ಕಟ್ಟೆಚ್ಚರವನ್ನು ಮಾಡಿದರು ಸಹಾ ಇದೀಗ ಹಿಂದೂಗಳ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಪಾಕ್ ಉಗ್ರರು ಹಿಂದುಗಳ ಪವಿತ್ರ ಸ್ಥಳಗಳಿಗೆ ಕಣ್ಣ ಹಾಕಿದ್ದಾರೆ!!

Image result for indian army

ಪ್ರಸಿದ್ಧ ಧಾರ್ವಿಕ ಕ್ಷೇತ್ರಕ್ಕೆ ಉಗ್ರರ ಕಣ್ಣು!! ಗಡಿಯಲ್ಲಿ ಅಲರ್ಟ್ ಆಗಿರುವ ಭಾರತೀಯ ಸೇನೆ!!

ಇದೀಗ ಪಾಕಿಸ್ತಾನ ಮತ್ತೆ ತನ್ನ ಹಳೇ ಛಾಳಿಯನ್ನು ಮುಂದುವರಿಸಿದ್ದು ಪಾಕಿಸ್ತಾನದ ಉಗ್ರರಿಂದ ಹಿಂದುಗಳ ಪ್ರಸಿದ್ಧ ಧಾರ್ವಿಕ ಕ್ಷೇತ್ರವಾಗಿರುವಂತಹ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದೊಂದಿಗೆ ಸುಮಾರು 450 ಪಾಕ್ ಉಗ್ರರು ಎಲ್‍ಓಸಿ ದಾಟಿ ಕಾಶ್ಮೀರದೊಳಗೆ ನುಸುಳಿ ಬರಲು ಸಿದ್ಧರಾಗಿ ನಿಂತಿರುವುದಾಗಿ ಗುಪ್ತಚರ ದಳ ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಭಾರತೀಯ ಪಡೆಗಳು ಕಟ್ಟೆಚ್ಚರ ವಹಿಸಿವೆ. ಅದಲ್ಲದೆ ಗುಪ್ತಚರ ದಳ ತನ್ನ ಉಗ್ರರು ಭಾರತದ ಒಳನುಸುಳಲು ಉಪಾಯ ಮಾಡುತ್ತಿರುವ ಬಗ್ಗೆ ಕೇಂದ್ರ ಸರಕಾರಕ್ಕೂ ಮಾಹಿತಿಯನ್ನು ಕಳುಹಿಸಿದೆ. ಇದೇ ಜೂನ್ 28ರಿಂದ ಆರಂಭಗೊಳ್ಳುವ ಅಮರನಾಥ ಯಾತ್ರೆಯನ್ನು ಗುರಿ ಇರಿಸಿಕೊಂಡು ದಾಳಿ ನಡೆಸಲು ಪಾಕ್ ಬೆಂಬಲಿತ ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್ ಎ ತೊಯ್ಬ ಉಗ್ರ ಸಂಘಟನೆಯ ಸುಮಾರು 450 ಉಗ್ರರು ಎಲ್‍ಓಸಿಯ ಆಚೆ ಸಿದ್ಧರಾಗಿ ನಿಂತಿರುವ ಬಗ್ಗೆ ಗುಪ್ತಚರ ದಳ ಮಾಹಿತಿ ಕಲೆ ಹಾಕಿದೆ.

Image result for pak terrorist

ರಮ್ಜಾನ್ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರು ಸರಕಾರದ ಆಣತಿಯಂತೆ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿರುವುದರಿಂದ ಉಗ್ರರಿಗೆ ಮತ್ತೆ ಒಂದಾಗಲು, ಹೊಸ ಉಗ್ರರನ್ನು ನೇಮಿಸಿಕೊಳ್ಳಲು, ಮತ್ತು ದಾಳಿ ತಂತ್ರಗಳನ್ನು ರೂಪಿಸಲು ಸಾಕಷ್ಟು ಸಮಯಾವಕಾಶ ದೊರಕಿದಂತಾಗಿದೆ ಎಂದು ಗುಪ್ತಚರ ದಳ ಸೇನೆ ಮತ್ತು ಸರಕಾರವನ್ನು ಎಚ್ಚರಿಸಿದೆ. ಎಲ್‍ಓಸಿ ಉದ್ದಕ್ಕೂ ಇರುವ ಪಾಕ್ ಬೆಂಬಲಿತ ಉಗ್ರರ ಲಾಂಚ್ ಪ್ಯಾಡ್‍ಗಳಲ್ಲಿ, ಸರ್ಜಿಕಲ್ ಸ್ಟ್ರೈಕ್ ಬಳಿಕ, ಉಗ್ರರ ಇಷ್ಟೊಂದು ಚಟುವಟಿಕೆ ಕಂಡುಬರುತ್ತಿರುವುದು ಇದೇ ಮೊದಲಾಗಿದೆ. ಪಾಕ್ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸಲು ನೆರವಾಗುವ ಪಾಕಿಸ್ಥಾನದ ವಿಶೇಷ ಭದ್ರತಾ ಸಮೂಹದ (ಎಸ್‍ಎಸ್‍ಜಿ) ಇರುವಿಕೆ ಎಲ್‍ಓಸಿಯಲ್ಲಿ ಕಂಡುಬಂದಿರುವುದು ದೃಢಪಟ್ಟಿದೆ ಎಂಬುದಾಗಿ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕಾಶಿಯ ವಿಶ್ವನಾಥ ಮಂದಿರ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಬೆದರಿಕೆ ಹಾಕಿದೆ!! ಇದೀಗ ಉತ್ತರ ಪ್ರದೇಶ ಪೆÇಲೀಸರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ಮಥುರಾದ ಶ್ರೀಕೃಷ್ಣ ಜನ್ಮಸ್ಥಳ, ಹಾಪುರ್ ಮತ್ತು ಸಹಾರನ್‍ಪುರ ರೈಲು ನಿಲ್ದಾಣಗಳಲ್ಲಿ ಸ್ಫೋಟ ನಡೆಸುವುದಾಗಿ ಉಗ್ರರು ಬೆದರಿಕೆ ಒಡ್ಡಿದ್ದಾರೆ. ಜೂನ್ 6, 8, 10ರಂದು ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತೇವೆ ಎಂದು ಜಮ್ಮು- ಕಾಶ್ಮೀರದ ಎಲ್‍ಇಟಿ ಮುಖ್ಯಸ್ಥ ಮೌಲಾನಾ ಅಂಬು ಶೇಖ್ ಹೇಳಿದ್ದಾನೆ. ಬೆದರಿಕೆ ಪತ್ರಕ್ಕೆ ಸಹಿ ಕೂಡ ಮಾಡಿದ್ದಾನೆ.

ಗುಪ್ತಚರ ಇಲಾಖೆಯಿಂದ ಕಟ್ಟೆಚ್ಚರ!!

ಉಗ್ರರು ಭಾರತದೊಳಗೆ ಬರುತ್ತಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆಯೇ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ದಳ (ಐಬಿ) ಉತ್ತರ ಪ್ರದೇಶ ಪೆÇಲೀಸರಿಗೆ ಸೂಚಿಸಿದ್ದು, ಇದೀಗ ಪ್ರವಾಸಿ ತಾಣ, ಧಾರ್ವಿಕ ಕ್ಷೇತ್ರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಆನಂದ್ ಕುಮಾರ್ ತಿಳಿಸಿದ್ದಾರೆ. ಪ್ರಸಿದ್ಧ ದಶಾಶ್ವಮೇಧ ಘಾಟ್ ಬಳಿಯಿರುವ ಶೀತ್ಲಾ ಘಾಟ್‍ನಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರರು 2010ರ ಡಿಸೆಂಬರ್‍ನಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಮೃತರಾಗಿದ್ದರು. ಹಾಗಾಗಿ ಈ ಬಾರಿ ದೇಶದೆಲ್ಲೆಡೆ ಕಟ್ಟೆಚರ ವಹಿಸಲಾಗಿದೆ!!

Image result for indian army

ಪಾಪಿ ಪಾಕಿಸ್ತಾನಕ್ಕೆ ಎಲ್ಲಾ ರಾಷ್ಟ್ರಗಳು ದೂರವಿಟ್ಟರೂ ಬುದ್ಧಿ ಬರುವ ಹಾಗೆ ಕಾಣುತ್ತಿಲ್ಲ!! ಮೊನ್ನೆ ತಾನೇ ಗಡಿಯಲ್ಲಿ ಗುಂಡಿನ ದಾಳಿಯಾದ ಸಂದರ್ಭದಲ್ಲಿ ಭಾರತೀಯರು ಇಬ್ಬರು ಯೋಧರು ಹುತಾತ್ಮರಾದ ಕಾರಣ ಅದಕ್ಕೆ ಪ್ರತ್ಯುತ್ತರ ತೀರಿಸದೆ ಬಿಡಲ್ಲ ಎಂದು ಭಾರತೀಯ ಸೈನಿಕರು ಪಾಕಿಸ್ತಾನದ 10 ಬಂಕರ್ಗಳನ್ನು ಛಿದ್ರ ಛಿದ್ರ ಮಾಡಿದ್ದರು!! ಅದಲ್ಲದೆ ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಭಯಂಕರ ಕದನ ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಿದ ಭಾರತೀಯ ಅಧಿಕಾರಿಗಳಿಂದ ಬೆವೆತು ಹೋದ ಪಾಕಿಸ್ತಾನಿಗಳು ಗಢ ಗಢ ನಡುಗಿ ಶಾಂತಿ ಮತುಕತೆಗೆ ಮುಂದಾಗಿದ್ದರು!! ಆದರೆ ಇದೀಗ ಗಡಿಯಲ್ಲಿ ದಾಳಿ ನಡೆಸುವುದಲ್ಲದೆ ಗಡಿ ದಾಟಿ ಭಾಋತ ಪ್ರವೇಶಿಸಿ ಹಿಂದೂ ದೇವಾಲದ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ!!

ಭಾರತೀಯ ಸೈನಿಕರು ತಾನಾಗಿಯೇ ಯಾರನ್ನೂ ಕೆಣಕಲು ಹೋಗಲ್ಲ!! ಯಾರಿಗೂ ತೊಂದರೇನೂ ಮಾಡಲ್ಲ.. ಒಂದು ವೇಳೆ ಕೆಣಕಿದರೆ ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶ ರಕ್ಷಣೆಗೆ ಮುನ್ನುಗ್ಗುವ ವೀರರು ನಮ್ಮ ವೀರ ಯೋಧರು!! ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು, ನಮ್ಮ ಸೈನಿಕರ ವಿಚಾರದಲ್ಲಿ ಯಾವುದೇ ದೇಶ ಆಟವಾಡಿದ್ದೇ ಆದಲ್ಲಿ ಅಂತವರನ್ನು ಹೊಡೆದು ಹಾಕಲು ನಮ್ಮ ಸೈನಿಕರು ತಯಾರಾಗಿದ್ದಾರೆ ಎಂದು ಎಚ್ಚರಿಕೆ ಕೂಡಾ ಇತ್ತೀಚಿಗೆ ನೀಡಿದ್ದರು!! ಒಂದು ವೇಳೆ ಗಡಿ ದಾಟಿ ಪಾಕಿಗಳು ಭಾರತವನ್ನು ಪ್ರವೇಶಿಸಿ ದೇವಾಲಯದಲ್ಲಿ ವಿದ್ವಂಸಕ ಕೃತ್ಯ ನಡೆಸಿದಲ್ಲಿ ಅವರಿಗೆ ತಕ್ಕಮದ್ದನ್ನು ಅರೆದು ಅವರನ್ನು ಯಮಲೋಕಕ್ಕೆ ಅಟ್ಟಲು ನಮ್ಮ ಸೈನಿಕರು ರೆಡಿಯಾಗಿ ನಿಂತಿದ್ದಾರೆ!!

 

source: udayavani vijayavani

  • ಪವಿತ್ರ
Tags

Related Articles

Close