ಪ್ರಚಲಿತ

ಹಿಂದೂ ನೀ ಎಚ್ಚೆತ್ತುಕೊಳ್ಳೋದು ಎಂದು ?

ಅಂದ ಹಾಗೆ ಹಿಂದೂ‌ಗಳ ಹೆಸರಿಗೆ ಮಸಿ ಬಳಿಯಬೇಕು. ಹಿಂದೂ ಧರ್ಮದ‌ಲ್ಲೂ ಉಗ್ರರಿದ್ದಾರೆ ಎಂಬುದನ್ನು ನಿರೂಪಿಸಲು ಹೊರಟ ಶಾರಿಖ್ ಎಂಬ ಶಾಂತಿ ದೂತ, ತಾನು ಮಾಡಿದ ಪಾಪಕ್ಕೆ ತಾನೇ ಶಿಕ್ಷೆ ಅನುಭವಿಸುವ ಮೂಲಕ ‘ಮಾಡಿದ್ದುಣ್ಣೋ ಮಹರಾಯ’ ಎಂಬ ಸ್ಥಿತಿಗೆ ಬಂದು ತಲುಪಿದ್ದಾನೆ. ಯಾವ ಧರ್ಮದ ದೇವರು ತಾನೆ ಇನ್ನೊಂದು ಧರ್ಮ‌ಕ್ಕೆ ನೋವು ಮಾಡಬೇಕು, ಹಿಂಸಿಸಬೇಕು, ಪರ ಧರ್ಮ‌ವನ್ನು ದ್ವೇಷಿಸಬೇಕು ಎಂದು ಹೇಳಿದ್ದಾನೆ ಹೇಳಿ. ಇಂತಹ ನಿಲುವುಗಳನ್ನು ಹೊಂದಿದ ಶಾರಿಖ್‌ನಂತಹ ಉಗ್ರರಿಗೆ ಅವರ ಧರ್ಮ‌ದ ದೇವರೇ ಅನುಭವಿಸು ಎಂದು ಶಿಕ್ಷೆ ನೀಡಿದಂತಿದೆ.

ತುಳುನಾಡಿನಲ್ಲಿ ಮತ – ಧರ್ಮ‌ಗಳ ನಡುವೆ ಕಲಹ ತಂದಿಡುವುದು, ಹಿಂದೂಗಳ ವಿರುದ್ಧ ಪಿತೂರಿ ನಡೆಸುವುದು, ಹಿಂದೂ ದ್ವೇಷ ಹೀಗೆ ಸಾಲು ಸಾಲು ತಪ್ಪುಗಳ ಮೂಲಕ ಕೆಲವು ಶಾಂತಿ ದೂತರು ಅಶಾಂತಿ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಹಿಂದೂಗಳ ಹೆಸರಿರಿಸಿಕೊಂಡು, ಹಿಂದೂವಿನ ಹೆಸರಿನಲ್ಲಿ ಗುರುತಿನ ಚೀಟಿ ಪಡೆದು, ಹಿಂದೂಗಳ ಜೊತೆಗೆ ಇಡೀ ಸಮಾಜವನ್ನೇ ಯಾಮಾರಿಸುವುದಕ್ಕೆ ಹೊರಟ ಇಂತಹ ಕಿಡಿಗೇಡಿ ನಾಮರ್ಧರ ಚಿಂತನಾ ಮಟ್ಟ ಎಷ್ಟು ಕೀಳು ಮಟ್ಟದ್ದು ಎಂಬುದನ್ನು ನಾವು ಆಲೋಚಿಸಬೇಕು.

ಈಗ ನಿಜಕ್ಕೂ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾದ ಸಮಯ. ನಮ್ಮ ಮನೆಯ ಗೋವುಗಳನ್ನು ಕದ್ದು ತೆಗೆದುಕೊಂಡು ಹೋದಾಗ ನಾವು ಸೊಲ್ಲೆತ್ತಲಿಲ್ಲ ,ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಹೆಸರಿನಲ್ಲಿ ಹೊತ್ತುಕೊಂಡು ಹೋದಾಗಲೂ ನಮ್ಮದು ಸದ್ದಿಲ್ಲ. ಲ್ಯಾಂಡ್ ಜಿಹಾದ್‌ಗೆ ತುತ್ತಾದರೂ ನಮ್ಮವರ ಸುದ್ದಿ ಇಲ್ಲ. ನಮ್ಮ ಹೆಣ್ಣು ಮಕ್ಕಳನ್ನು ಕೊಚ್ಚಿ ಕೊಂದರೂ ನಾವು ತುಟಿ ಪಿಟಿಕ್ ಎನ್ನಲಿಲ್ಲ. ಉಗ್ರರು ನಮ್ಮನ್ನೇ ಗುರಿಯಾಗಿಸಿ ಪಾಕ್ ಪರ ಘೋಷಣೆ ಕೂಗುವುದು, ಹರಾಮಿ ಹಣದಲ್ಲಿ ನಮ್ಮ ದೇಶದ ವಿರುದ್ಧ, ನಮ್ಮ ವಿರುದ್ಧ‌ವೇ ಅಕ್ರಮ ಮಾಡುತ್ತಿರುವುದು ಜಗಜ್ಜಾಹೀರು ಆದಾಗಲೂ ನಾವು ಎಚ್ಚರಾಗಿಲ್ಲ, ಎದುರಿಸಲು ಸಜ್ಜಾಗಿಲ್ಲ ಎಂದಾದಲ್ಲಿ, ನಾಳೆ ನಾವೇ ಇಂತಹ ಕುತಂತ್ರಕ್ಕೆ ಬಲಿಯಾದರೂ ಆಗಬೇಕಾದೀತು ಎಚ್ಚರ.

ಹಿಂದೂ ಒಂದು ಎಂದು ಬೊಬ್ಬಿಟ್ಟರೆ ಸಾಲದು. ನಮ್ಮ ಮನೆಯ ಸಮೀಪದ, ನಮ್ಮೂರಿನ, ನಮ್ಮ ತಾಲೂಕಿನ, ನಮ್ಮ ಜಿಲ್ಲೆಯ, ನಮ್ಮ ದೇಶದ ವಿಚಾರಕ್ಕೆ ಇಂತಹ ಉಗ್ರರು ಬಂದಾಗಲೂ ನಾವು ಒಂದು ಎಂಬ ಭಾವನೆ ನಮ್ಮಲ್ಲಿರರಬೇಕು. ಯಾವುದೋ ಹಿಂದೂ ಇಂತಹ ಸಮಸ್ಯೆ‌ಯ ಸುಳಿಯಲ್ಲಿ ಸಿಲುಕಿದಾಗ, ಅದು ಅವನಿಗೆ, ನಮಗಲ್ಲ ಎಂಬ ಭಾವನೆ ಬಂತೋ, ನಾವು ಗಾಡ ನಿದ್ರೆ ಮಾಡಿದೆವೋ ,ನಾಳೆ ಅವನಿಗೆ ಬಂದ ಸ್ಥಿತಿಯೇ ನಮಗೂ ಬರುವುದು ಎಂಬುದರ ಅರಿವು ಇದ್ದಾಗ ಮಾತ್ರ ನಾವು ಹಿಂದೂಗಳು ನಮ್ಮ ಧರ್ಮ, ದೇಶವನ್ನು ಉಳಿಸಬಹುದು.

ನಾವು ಒಗ್ಗಟ್ಟಾಗಿದ್ದಲ್ಲಿ, ನಮ್ಮನ್ನು ಎದುರಿಸಲು ಯಾರಿಗೂ ಸಾಧ್ಯವಿಲ್ಲ. ನಮ್ಮ ನಮ್ಮ ನಡುವೆಯೇ ಕಚ್ಚಾಟ, ಕಿತ್ತಾಟ ನಡೆಯುತ್ತಿದ್ದರೆ ಬೇರೆಯವರಿಗೆ ಬೇಳೆ ಬೇಯಿಸಿಕೊಳ್ಳುವುದು ಸುಲಭ. ನಾವು ಉಳಿದಲ್ಲಿ ದೇಶ ‘ಹಿಂದೂಸ್ಥಾನ’ ಉಳಿದೀತು. ನಮ್ಮ ಉಳಿವು, ಅಳಿವು ನಮ್ಮ ಕೈಯಲ್ಲೇ..

Tags

Related Articles

Close