ದೇಶರಾಜ್ಯ

ಅಯ್ಯಪ್ಪ ಮಾಲಾಧಾರಿಗೆ ಮಾರಣಾಂತಿಕ ಹಲ್ಲೆ! ಮತಾಂಧ ವಿದ್ಯಾರ್ಥಿಗಳಿಂದ ಹಿಂದೂಗಳೇ ಟಾರ್ಗೆಟ್!

ಅಯ್ಯಪ್ಪ ವ್ರತದಾರಿ, ಮಾಲೆ ಹಾಕಿದ್ದ ವಿದ್ಯಾರ್ಥಿ‌ಗೆ ಆತ ಓದುತ್ತಿದ್ದ ಶಾಲೆಯಲ್ಲಿ‌ಯೇ ಕಲಿಯುವ ಕೆಲವು ಮುಸ್ಲಿಂ ಹುಡುಗರು ಹಲ್ಲೆ ನಡೆಸಿದ್ದಾರೆ. ಮಂಗಳೂರಿನ ಕಪಿತಾನಿಯೋ ಶಾಲೆಯಲ್ಲಿ (ಕ್ರಿಶ್ಚಿಯನ್ ಸ್ಕೂಲ್) ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಇಂತಹ ದುರ್ವರ್ತನೆ ತೋರಿಸಿದ್ದು, ಕೋಮು ದ್ವೇಷ ಪ್ರದರ್ಶನ ಮಾಡಿದ್ದಾರೆ.

ಹಿಂದೂ ಬಾಲಕ ಅಯ್ಯಪ್ಪ‌ ಮಾಲಾಧಾರಿಯಾಗಿದ್ದಾನೆ ಎನ್ನುವ ಕಾರಣಕ್ಕೆ ಈ ಪುಂಡ ಬಾಲಕರು, ಮಾಲಾಧಾರಿ ಹುಡುಗನಿಗೆ ಹೊಡೆದು, ಅವರ ಕತ್ತಿನಲ್ಲಿದ್ದ ಅಯ್ಯಪ್ಪ ಮಾಲೆಯನ್ನು ಕಿತ್ತು ಹಾಕಿದ್ದಾರೆ. ಪ್ರಸ್ತುತ ಗಾಯಾಳು ಬಾಲಕ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮುಸ್ಲಿಂ ಪುಂಡರ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಸ್ಲಿಂ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ. ಇದು ಅವರಿಗೆ ಮದರಸಾಗಳಲ್ಲಿ ಸಿಗುತ್ತಿರುವ ಮತಾಂಧ ಶಿಕ್ಷಣದ ಪರಿಣಾಮವಾಗಿ‌ದೆ ಎಂದು ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆಯನ್ನು ನೋಡುವಾಗ, ಎಳೆಯ ಮನಸ್ಸಿನಲ್ಲಿಯೂ ಧರ್ಮಾಂಧತೆಯ ಬೀಜವನ್ನು ಬಿತ್ತುವ ಮೂಲಕ ಅವರನ್ನು ಹಾದಿ ತಪ್ಪುವಂತೆ ಮಾಡಲಾಗುತ್ತಿದೆ. ಮುಸಲ್ಮಾನ ಹುಡುಗರಿಗೆ ಎಳವೆಯಲ್ಲಿಯೇ ಅನ್ಯ ಧರ್ಮ‌ವನ್ನು ದ್ವೇಷಿಸುವ, ಅವರಿಗೆ ಹಾನಿಯನ್ನು ಎಸಗುವ ಹಾಗೆ ಅವರ ತಲೆ ಕೆಡಿಸಲಾಗುತ್ತಿದೆ. ಅವರನ್ನು ಮತಾಂಧ ಜಿಹಾದಿಗಳಾಗಿ ಬೆಳೆಸಲಾಗುತ್ತದೆ. ಕೋಮು ದ್ವೇಷ‌ದ ಭಾವನೆಯನ್ನು ಅವರ ಮನಸ್ಸಿನಲ್ಲಿ ತುಂಬಿ, ಇತರ ಧರ್ಮದ ಮೇಲೆ ಕ್ರೌರ್ಯ ಎಸಗುವಂತೆ ಮಾಡಲಾಗುತ್ತಿದೆ ಎನ್ನುವುದು ಇಂತಹ ಘಟನೆಗಳನ್ನು ನೋಡಿದಾಗ ಅರಿವಾಗುತ್ತದೆ.

ಇಂತಹ ಕ್ರೌರ್ಯ ಭರಿತ, ಹಿಂಸಾತ್ಮಕ ಶಿಕ್ಷಣ ಮಕ್ಕಳಿಗೆ ಎಲ್ಲಿಂದ ದೊರೆಯುತ್ತಿದೆ? ಎಂದು ಆಲೋಚಿಸುತ್ತಾ ಹೋದರೆ, ಮದರಸಾಗಳಲ್ಲಿ ಅವರಿಗೆ ದೊರೆಯುತ್ತಿರುವ ಶಿಕ್ಷಣ‌ದ ಬಗ್ಗೆ ಸಂದೇಹ ಮೂಡುತ್ತದೆ. ಮಾಲಾಧಾರಿ ವಿದ್ಯಾರ್ಥಿಗೆ ಹೊಡೆದ ಪುಂಡರೆಲ್ಲರಿಗೂ ಮದರಸಾಗಳಲ್ಲಿ ಅನ ಯ ಧರ್ಮ ದ್ವೇಷದ ಶಿಕ್ಷಣ ದೊರೆತಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮದರಸಾಗಳಲ್ಲಿ ಹಿಂಸಾತ್ಮಕ ಮನೋಭಾವ‌ವನ್ನು ವಿದ್ಯಾರ್ಥಿಗಳಲ್ಲಿ ತುಂಬಿ, ಅವರನ್ನು ಸಮಾಜಕ್ಕೆ ಮಾರಕ ವ್ಯಕ್ತಿಗಳನ್ನಾಗಿ ಬೆಳೆಸಲಾಗುತ್ತಿದೆ ಎನ್ನುವುದಕ್ಕೆ ಕಪಿತಾನಿಯೋ ಶಾಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ ನುಡಿಯುತ್ತಿದೆ. ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳೇ ಧರ್ಮ‌ದ ವಿಚಾರವನ್ನಿರಿಸಿಕೊಂಡು ಹೊಡೆದಾಡುವ ಸ್ಥಿತಿ ನಿರ್ಮಾಣವಾಗಬಹುದು. ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕ್ರಮ ತೆಗೆದುಕೊಳ್ಳುವ ಅನಿವಾರ್ಯ‌ತೆ ಇದೆ. ಹೀಗೆಯೇ ಬಿಟ್ಟಲ್ಲಿ ಈ ಪುಂಡರು ಮುಂದೆ ಸಮಾಜವನ್ನೇ ನಾಶ ಮಾಡುವ ಉಗ್ರಗಾಮಿ ಕ್ರಿಮಿಗಳಾಗಿ ಬದಲಾಗುವ ಸಾಧ್ಯತೆ ಇದೆ. ಒಂದೋ ಮದರಸಾಗಳನ್ನು ಬ್ಯಾನ್ ಮಾಡುವತ್ತ ಸರ್ಕಾರ ಚಿಂತನೆ ಮಾಡಬೇಕು. ಇಲ್ಲವೇ ಸರ್ಕಾರ‌ ಮದರಸಾಗಳ ಮೇಲೆ ಹಿಡಿತ ಸಾಧಿಸಿ, ಅಲ್ಲಿ ಏನೇನು ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆಯಬೇಕು. ಜೊತೆಗೆ ಅಲ್ಲೇನಾದರೂ ಮತಾಂಧ, ಅಕ್ರಮ ಚಟುವಟಿಕೆ‌ಗಳು ಕಂಡು ಬಂದಲ್ಲಿ ಶಿಕ್ಷೆ‌ಗೆ ಗುರಿಪಡಿಸುವ ಕೆಲಸವನ್ನು ಸಹ ಸರ್ಕಾರ ತೆಗೆದುಕೊಳ್ಳಬೇಕು.

ಒಟ್ಟಿನಲ್ಲಿ ಮಕ್ಕಳ ಮನಸ್ಸಿನಲ್ಲಿ ಅನ್ಯ ಧರ್ಮದ ದ್ವೇಷ ತುಂಬುವ ಶಿಕ್ಷಣ ಸಂಸ್ಥೆ‌ಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಮಾತ್ರ, ಇಂತಹ ಘಟನೆಗಳಿಂದ ಮುಕ್ತಿ ದೊರೆಯಲು ಸಾಧ್ಯ.

Tags

Related Articles

Close