ಪ್ರಚಲಿತ

ವಿದ್ಯಾರ್ಥಿಗಳೇ ನೀವು ಚರ್ಚ್‌ಗೆ ಹೋಗಬೇಕಂತೆ, ಮಸೀದಿಗೆ ಹೋಗಬೇಕಂತೆ..! ಇದು ರಾಜ್ಯ ಸರಕಾರದ ಆದೇಶ..!

ಕೇವಲ ಅಲ್ಪಸಂಖ್ಯಾತರನ್ನೇ ಓಲೈಕೆ ಮಾಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಹಿಂದೂಗಳನ್ನು ಕಡೆಗಣಿಸಿಕೊಂಡು ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಲೇ ಬಂದಿದೆ. ಎಲ್ಲಾ ಸರಕಾರಿ ಸವಲತ್ತುಗಳನ್ನು ಕೇವಲ ಮುಸ್ಲಿಂ ಮತ್ತು ಕ್ರಿಸ್ಚಿಯನ್ ಸಮುದಾಯಕ್ಕೆ ಮೀಸಲಿಡುವ ಕಾಂಗ್ರೆಸ್ ತನ್ನ ರಾಜಕೀಯ ಲಾಭವನ್ನಷ್ಟೇ ಗಮನದಲ್ಲಿಟ್ಟುಕೊಂಡು ಬಂದಿದೆ. ಸರಕಾರದ ಯೋಜನೆಗಳಲ್ಲೂ ತಾರತಮ್ಯ ಭಾವನೆಯಿಂದ ನೋಡುವ ಕಾಂಗ್ರೆಸ್ ಹಿಂದೂಗಳಿಗಾಗಿ ನೀಡಿದ ಕೊಡುಗೆ ಶೂನ್ಯ. ಆದ್ದರಿಂದಲೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಸೋಲನುಭವಿಸಿ ಇದೀಗ ಮೂರನೇ ಸ್ಥಾನಕ್ಕೆ ಕುಸಿದ ಜೆಡಿಎಸ್‌ ಜೊತೆ ಸೇರಿ ಸರಕಾರ ರಚನೆ ಮಾಡಿದ್ದಾರೆ. ಆದರೆ ತನ್ನದೇ ಆಡಳಿತದಲ್ಲಿ ಮಾಡಿದ ಅನಾಚಾರಗಳು ಇದೀಗ ಮತ್ತೆ ರಾಜ್ಯದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.!

ಪ್ರತಿಯೊಂದು ವಿಚಾರದಲ್ಲೂ ತಾರತಮ್ಯ ನಡೆಸುತ್ತಾ ಬಂದಿರುವ ಕಾಂಗ್ರೆಸ್ ಶಾಲಾ ಮಕ್ಕಳ ಶಿಕ್ಷಣದಲ್ಲೂ ತಾರತಮ್ಯ ನಡೆಸಿದೆ ಎಂದರೆ, ಎಷ್ಟರ ಮಟ್ಟಿಗೆ ಹಿಂದೂಗಳನ್ನು ಮತ್ತು ಹಿಂದೂ ಧರ್ಮದ ಇತಿಹಾಸವನ್ನು ಮರೆಮಾಚಿದ್ದಾರೆ. ದೇಶದಲ್ಲಿ ಹಿಂದೂ ಧರ್ಮದ ಇತಿಹಾಸ ಗಮನಿಸಿದರೆ ದೇಶಕ್ಕೆ ಹಿಂದೂ ಧರ್ಮದ ಕೊಡುಗೆ ಏನೆಂಬುದು ಅರಿವಾಗುತ್ತದೆ , ಆದರೆ ಅಂತಹ ಇತಿಹಾಸವನ್ನೇ ಅಳಿಸಿ ಕೇವಲ ತಮ್ಮ ರಾಜಕೀಯ ಉದ್ದೇಶದಿಂದ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿತ್ತು..!

ಪಠ್ಯ ಪುಸ್ತಕದಲ್ಲೂ ವಿಷಬೀಜ ಬಿತ್ತಿದ ಸರಕಾರ..!

ಶಾಲಾ ಮಕ್ಕಳು ತಮಗೆ ಏನು ಕಲಿಸುತ್ತಾರೋ ಅದನ್ನೇ ನಿಜವೆಂದು ತಿಳಿದು ,ತಮ್ಮ ಮುಂದಿನ ಜೀವನದಲ್ಲೂ ಅಳವಡಿಸಿಕೊಳ್ಳುತ್ತಾರೆ. ಆದರೆ ಕಾಂಗ್ರೆಸ್ ಸರಕಾರ ಇಂತಹ ಮಕ್ಕಳ ಪಠ್ಯ ಪುಸ್ತಕದಲ್ಲೂ ತನ್ನ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸಿದೆ. ಹೌದು, ಒಂಬತ್ತನೆ ತರಗತಿಯ ಶಾಲಾ ಮಕ್ಕಳ ಪಾಠ ಪುಸ್ತಕದಲ್ಲಿ ಮೊದಲ ಪಾಠವೇ “ಕ್ರಿಸ್ಚಿಯಾನಿಟಿ ಮತ್ತು ಇಸ್ಲಾಂ”. ಇತಿಹಾಸದಲ್ಲಿ ಅದೆಷ್ಟೋ ಹಿಂದೂ ರಾಜರುಗಳ ಚರಿತ್ರೆಯಿದೆ, ಹಿಂದೂ ದೇವರುಗಳ ಪುರಾಣವಿದೆ , ಆದರೆ ಅವೆಲ್ಲವನ್ನೂ ಬಿಟ್ಟು ಕ್ರಿಸ್ಚಿಯನ್ ಮತ್ತು ಇಸ್ಲಾಂ ಧರ್ಮದ ವಿಚಾರವಾಗಿಯೇ ಆರಂಭಿಸಿದ್ದು ಈ ಹಿಂದೆಯೇ ರಾಜ್ಯದಲ್ಲಿ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರ ಹಿಂದೂ ಸಂಘಟನೆಗಳು ತಕ್ಷಣ ಈ ಪಠ್ಯ ಪುಸ್ತಕವನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಸಮಾಜ ಪಠ್ಯ ಪುಸ್ತಕದಲ್ಲಿ ಹಿಂದೂ ಧರ್ಮದ ಯಾವುದೇ ವಿಚಾರವನ್ನು ಪ್ರಸ್ತಾಪಿಸಲಾಗಿಲ್ಲ ಎಂದು ಆರೋಪಿಸಿದ ಹಿಂದೂಗಳು , ಶಾಲಾ ಮಕ್ಕಳಿಗೂ ಜಾತಿ ಧರ್ಮದ ಹೆಸರಿನಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿಯೇ ಈ ಪುಸ್ತಕ ರಚನೆಯಾಗಿದ್ದು ಅಂದೇ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೆ ಈ ವಿಚಾರವಾಗಿಯೇ ಕೆಂಡಾಮಂಡಲವಾದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಪುಸ್ತಕದ ಪ್ರತಿಗಳ ಫೋಟೋಗಳನ್ನು ಫೇಸ್‌ಬುಕ್‌ ,ವಾಟ್ಸಾಪ್‌ಗಳಲ್ಲಿ ಹಾಕಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..!

ಚರ್ಚ್ – ಮಸೀದಿಗೆ ಬೇಟಿ ನೀಡಬೇಕಂತೆ ಮಕ್ಕಳು..!

ಈಗಾಗಲೇ ಈ ಪಾಠದಲ್ಲಿ ಇರುವಂತೆ ದೇಶಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಕೊಡುಗೆ ಅಪಾರ. ಪ್ರತಿಯೊಂದು ವಿಚಾರವಾಗಿಯೂ ಹಿಂದೂಗಳನ್ನು ಕಡೆಗಣಿಸಿರುವ ಸರಕಾರ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಕೇವಲ ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ವಿಚಾರವನ್ನು ಮಾತ್ರ ಪ್ರಸ್ತಾಪಿಸಿದೆ. ಅಷ್ಟೇ ಅಲ್ಲದೆ ಪಾಠದ ಬಗ್ಗೆ ಏನೇ ಸಂಶಯವಿದ್ದರೂ ಪಕ್ಕದ ಮಸೀದಿ ಅಥವಾ ಚರ್ಚ್ ಗಳಿಗೆ ಬೇಟಿ ನೀಡಿ ಎಂದು ಮಕ್ಕಳಿಗೆ ಹೇಳಿಕೊಡಲಾಗುತ್ತಿದೆ. ಇಂತಹ ಶಿಕ್ಷಣ ವ್ಯವಸ್ಥೆ ಯಾವುದೇ ರಾಜ್ಯದಲ್ಲೂ ಈವರೆಗೆ ಕಂಡುಬಂದಿಲ್ಲ, ಆದರೆ ಕರ್ನಾಟಕದಲ್ಲಿ ಇಂತಹ ವ್ಯವಸ್ಥೆ ನಿರ್ಮಿಸಿದ ಕಾಂಗ್ರೆಸ್, ಅಲ್ಪಸಂಖ್ಯಾತರ ಓಲೈಕೆಗೆ ಯಾವ ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಶಾಲೆಗಳಲ್ಲಿ ಕೇವಲ ಮುಸ್ಲಿಂ ಅಥವಾ ಕ್ರೈಸ್ತರು ಮಾತ್ರ ವ್ಯಾಸಾಂಗ ಮಾಡಲು ಬರುವುದಿಲ್ಲ ಎಂಬುದು ಗೊತ್ತಿದ್ದರೂ ಕೂಡ ಕೇವಲ ಈ ಎರಡು ಧರ್ಮಗಳಿಗೆ ಸಂಬಂಧ ಪಟ್ಟ ವಿಚಾರವನ್ನು ಮಾತ್ರ ಪಠ್ಯ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಸರಕಾರದ ನಡೆಯ ಬಗ್ಗೆ ಇದೀಗ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ರಾಜ್ಯಕ್ಕಾಗಿ ಮತ್ತು ಕನ್ನಡಕ್ಕಾಗಿ ಹೋರಾಡಿದ ಅದೆಷ್ಟೋ ಹಿಂದೂ ರಾಜರುಗಳ ಇತಿಹಾಸವಿದ್ದರೂ ಕೂಡ ಕೇವಲ ಒಂದು ವರ್ಗದ ಜನರ ಓಲೈಕೆಗಾಗಿ ಕಾಂಗ್ರೆಸ್ ಸರಕಾರ ಈ ರೀತಿ ನಡೆದುಕೊಂಡಿದ್ದು ವಿಪಾರ್ಯಾಸವೇ ಸರಿ..!

–ಅರ್ಜುನ್

Tags

Related Articles

Close