ಪ್ರಚಲಿತ

ಸಾಮಾನ್ಯ ನಾಗರಿಕರೂ ಆಕಾಶದಲ್ಲಿ ಹಾರಾಡುವ ಕನಸನ್ನು ನನಸಾಗಿಸುವ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ “ಉಡಾನ್”ನ ಫಲವಾಗಿ ಅರುಣಾಚಲದಲ್ಲಿ ಮೊತ್ತ ಮೊದಲ ಬಾರಿಗೆ ಇಳಿಯಿತು ವಿಮಾನ!!

ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಸಂದರೂ ಈಶಾನ್ಯ ರಾಜ್ಯಗಳಲ್ಲಿ ಯಾವುದೆ ತೆರನಾದ ಅಭಿವೃದ್ಧಿ ನಡೆಯಲೇ ಇಲ್ಲ. ಭಾರತದ ಅವಿಭಾಜ್ಯ ಅಂಗವಾದರೂ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹೆಚ್ಚೇನೂ ಉಪಯೋಗ ಈಶಾನ್ಯ ರಾಜ್ಯಗಳಿಂದ ಇಲ್ಲವಾದ್ದರಿಂದ “ದಿಲ್ಲಿ ದರ್ಬಾರಿ”ಗಳು ಈ ಏಳು ಸಹೋದರಿಯರನ್ನು ಕಡೆಗಣಿಸಿದ್ದೇ ಹೆಚ್ಚು. ಖುದ್ದು ಯೂಪಿಎ ಸರಕಾರದ ಪ್ರಧಾನಮಂತ್ರಿ ಮನಮೋಹನ್ ಸಿಂಗರ ಲೋಕಸಭಾ ಕ್ಷೇತ್ರ ಅಸ್ಸಾಂ ಆಗಿದ್ದರೂ, ದೇಶದ ಪ್ರಧಾನಮಂತ್ರಿಯಾಗಿ ಹತ್ತು ವರ್ಷ ಆಡಳಿತ ನಡೆಸಿದ್ದರೂ ಈಶಾನ್ಯ ರಾಜ್ಯಗಳಿಗೆ ಅವರು ಕೊಟ್ಟ ಕೊಡುಗೆ ದೊಡ್ಡ ಸೊನ್ನೆ!! ದೇಶದ ಮಲತಾಯಿ ಧೋರಣೆಯಿಂದ ಬೇಸತ್ತಿದ್ದ ಈಶಾನ್ಯ ರಾಜ್ಯಗಳು ನೆಮ್ಮದಿಯ ಬದುಕು ಕಾಣಲಾಗುತ್ತಿರುವುದು ಮೋದಿ ಸರಕಾರ ಬಂದ ಮೇಲೆಯೆ. ಅಧಿಕಾರಕ್ಕೆ ಬಂದ ದಿನದಿಂದಲೇ ಸಂಪೂರ್ಣ ಧ್ಯಾನವನ್ನು ಈಶಾನ್ಯ ರಾಜ್ಯಗಳತ್ತ ಕೇಂದ್ರೀಕರಿಸಿ ಭಾರತದ ಮುಖ್ಯಧಾರೆಯಲ್ಲಿ ಅವುಗಳನ್ನು ಸೇರಿಸಲು ಆಕಾಶ ಭೂಮಿ ಒಂದು ಮಾಡುತ್ತಿದ್ದಾರೆ ಪ್ರಧಾನ ಸೇವಕ.

ದೇಶದ ಹವಾಯಿ ಚಪ್ಪಲ್ ಧರಿಸುವ ಸಾಮಾನ್ಯ ನಾಗರಿಕರೂ ವಿಮಾನದಲ್ಲಿ ಪ್ರಯಾಣಿಸುವಂತಾಗ ಬೇಕು ಎನ್ನುವುದು ಮೋದಿಯವರ ಆಸೆ. ಈ ಆಸೆಯನ್ನು ಪೂರೈಸಲು ಹಿಂದಿನ ವರ್ಷ “ಉಡಾನ್” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ತಂದರು ಪ್ರಧಾನ ಮಂತ್ರಿ ಮೋದಿ. Ude Desh ka Aam Anagrik (UDAN) ಎನ್ನುವ ಈ ಯೋಜನೆ ದೇಶದ ಎಲ್ಲಾ ರಾಜ್ಯಗಳನ್ನು ಬೆಸೆದು ಪ್ರವಾಸೋದ್ಯಮಕ್ಕೆ ಒತ್ತು ಕೊಡುವುದರಲ್ಲಿ ಸಹಾಯ ಮಾಡಲಿದೆ. ಈ ಯೋಜನೆಯಿಂದಾಗಿ ನಾಗರಿಕರು ಟಾಕ್ಸಿ ದರದಲ್ಲೆ ವಿಮಾನಯಾನ ಮಾಡಬಹುದು!! ಜೀವನದಲ್ಲಿ ಒಮ್ಮೆಯಾದರೂ ವಿಮಾನಯಾನ ಮಾಡಬೇಕು ಎಂದು ಕನಸು ಕಾಣುವ ಹಲವಾರು ಮಂದಿ ಭಾರತದಲ್ಲಿದ್ದಾರೆ. ಅವರೆಲ್ಲರ ಕನಸಿಗೆ ಮೋದಿ ಜೀವ ತುಂಬಿದ್ದಾರೆ.

ಬಹುಜನರ ಕನಸನ್ನು ನನಸಾಗಿಸುವ ಮೋದಿಯವರ ಈ ಪ್ರಯತ್ನ ಸಾರ್ಥಕ್ಯ ಕಾಣುತ್ತಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಬೆಟ್ಟ ಗುಡ್ಡಗಳ ನಾಡು ಅರುಣಾಚಲದಲ್ಲಿ ಲೋಹದ ಹಕ್ಕಿ ಗರಿ ಬಿಚ್ಚಿ ಹಾರಾಡಿದೆ!! ದಶಕಗಳಿಂದ ಈ ಪ್ರದೇಶದ ಜನ ಕಂಡ ಕನಸು ನನಸಾಗಿದೆ. ಗಡಿ ರಕ್ಷಣೆಯ ವಿಷಯದಲ್ಲೂ ಇದು ಮಹತ್ವಪೂರ್ಣ ಬೆಳವಣಿಗೆಯೆಂದೆ ಪರಿಗಣಿಸಬುದು. ಏರ್ ಇಂಡಿಯಾದ ಅಂಗಸಂಸ್ಥೆ ‘ಅಲೈಯನ್ಸ್ ಏರ್’ ಅರುಣಾಚಲದ ಆಗಸದಲ್ಲಿ ಮೊದಲ ಬಾರಿಗೆ ಗರಿ ಬಿಚ್ಚಿ ಹಾರಾಡಿದೆ. ಕೇಂದ್ರದ Regional Connectivity Scheme (RSC) ಯೋಜನೆಯಡಿಯಲ್ಲಿ ಹಾರಿದ ಈ ವಿಮಾನದಲ್ಲಿ ಅರುಣಾಚಲದ ಮುಖ್ಯಮಂತ್ರಿ ಪಿಮಾ ಖಾಂಡು ಮೊತ್ತ ಮೊದಲ ಪ್ರಯಾಣಿಕರಾಗಿ ಪ್ರಯಾಣಿಸಿದ್ದಾರೆ. ಈ ವಿಮಾನವು ಪೂರ್ವ ಅರುಣಾಚಲ ಪ್ರದೇಶದ ಪಾಶಿಘಾಟ್ ಅನ್ನು ಗುವಾಹಾಟಿಯ ಗೋಪಿನಾಥ್ ಬೋರ್ಡೊಯ್ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಅಲ್ಲಿಂದ ದೇಶದ ಇತರ ಭಾಗಗಳಿಗೆ ಪ್ರಯಾಣಿಕರು ಪ್ರಯಾಣಿಸಬಹುದು.

ರಾಜ್ಯದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್ ಇಳಿಸಲಾಗುವಂತಹ ಎಂಟು ಸ್ಥಳಗಳನ್ನು ಗುರುತಿಸಲಾಗಿದೆ. ಒಂದೆಡೆ ಈ ಯೋಜನೆ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುತ್ತದೆ ಹಾಗೆಯೆ ಮತ್ತೊಂದೆಡೆ ಇದು ದೇಶದ ಗಡಿಯನ್ನು ಸುರಕ್ಷಿತವಾಗಿಡುವಲ್ಲಿಯೂ ನೆರವಾಗುತ್ತದೆ. ಚೀನಾಕ್ಕೆ ಅಂಟಿಕೊಂಡಿರುವ ಅರುಣಾಚಲ ಪ್ರದೇಶದಲ್ಲಿ ನಿತ್ಯ ಕ್ಯಾತೆ ತೆಗೆಯುತ್ತಿರುವ ಡ್ರಾಗನ್ ಗೆ ಇದು ಎಚ್ಚರಿಕೆಯ ಸಂದೇಶವನ್ನೂ ರವಾನಿಸಲಿದೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ಕಲೆ ಮೋದಿಯಿಂದ ಕಲಿಯಬೇಕು ಎಲ್ಲರು!! ಅಲೈಯನ್ಸ್ ಏರ್ ನ 48 ಆಸನಗಳ ಎಟಿಆರ್ 72 ವಿಮಾನ ವಾರದಲ್ಲಿ ಮೂರು ಬಾರಿ ಹಾರಲಿದೆ. ಟರ್ಬೊ ಜೆಟ್ ಮತ್ತು ಝೂಮ್ ಏರ್ ಸೇರಿದಂತೆ ಇತರ ಕಡಿಮೆ ವೆಚ್ಚದ ವಿಮಾನ ನಿರ್ವಾಹಕರು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ. ಪಾಸಿಘಾಟ್ನಿಂದ ಗುವಾಹಾಟಿಯವರೆಗೆ ರಸ್ತೆಯ ಮೂಲಕ ತಗಲುವ 13 ಗಂಟೆಗಳನ್ನು ಕೇವಲ 2 ಗಂಟೆ 22 ನಿಮಿಷಗಳಿಗೆ ಇಳಿಸಲಿದೆ ಈ ಯೋಜನೆ.

ಅಂದ ಹಾಗೆ ಮೋದಿ ಏನು ಮಾಡುತ್ತಿದ್ದಾರೆ? ಮೋದಿ ಕೇವಲ “ಕಾಂಗ್ರೆಸ್ ಮುಕ್ತ ಭಾರತದ” ಬಗ್ಗೆ ಭಾಷಣ ಬಿಗಿಯುತ್ತಾರೆ, ಜುಮ್ಲಾ ನೀಡಿ ಪಲಾಯನ ಮಾಡುತ್ತಾರೆ, ವಿದೇಶ ಸುತ್ತುತ್ತಾರೆ, ಲಕ್ಷ ರುಪಾಯಿ ಬೆಲೆ ಬಾಳುವ ಸೂಟು-ಬೂಟು ಧರಿಸುತ್ತಾರೆ ಅದು ಬಿಟ್ಟರೆ ಅವರೇನು ಮಾಡುತ್ತಾರೆ? ಮತ್ತೆ ಬುಲೆಟ್ ವೇಗದಲ್ಲಿ ದೇಶದಲ್ಲಿ ಅಭಿವೃದ್ದಿ ನಡೆಯುತ್ತಿದೆಯಲ್ಲ ಅದನ್ನು ಯಾರು ಮಾಡುತ್ತಿರುವುದು? ಹೇ ಬಿಡ್ರಿ…. ಅದೆಲ್ಲಾ ಯಾವನಿಗ್ ಬೇಕು? ಪೆಟ್ರೋಲ್ ಗೆ ಎಷ್ಟು ರುಪಾಯಿ ಏರಿದೆ ಗೊತ್ತಾ? ಮೋದಿ ರಾಜಿನಾಮೆ ಕೊಡಬೇಕು ಅಷ್ಟೆ….

-ಶಾರ್ವರಿ

Tags

Related Articles

Close