ಪ್ರಚಲಿತ

ಗಣರಾಜ್ಯೋತ್ಸವ ಪೆರೇಡ್‍ ವೀಕ್ಷಿಸಲು VVIP ಗಳಿಗಿಂತ ಮುಂದಿನ ಸಾಲಿನಲ್ಲಿರಲಿದ್ದಾರೆ ಸಾಮಾನ್ಯ ಜನರು: ಮೋದಿಜೀ ಸರಕಾರದಿಂದ ಐತಿಹಾಸಿಕ ನಿರ್ಧಾರ!

ನವದೆಹಲಿಯಲ್ಲಿ ನಡೆಯುವ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಸಾಲಿನಲ್ಲಿನ ಆಸನಗಳನ್ನು ಜನಸಾಮಾನ್ಯರಿಗೆ ಮೀಸಲಿರಿಸಲಾಗುತ್ತಿದ್ದು, ಆ ಮೂಲಕ ಪ್ರಜೆಗಳೇ ಪ್ರಭುಗಳು ಎಂಬ ಉಕ್ತಿಗೆ ನ್ಯಾಯ ದೊರಕಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ.

ಗಣರಾಜ್ಯೋತ್ಸವದಂದು ನವ ದೆಹಲಿಯ ಕರ್ತವ್ಯ ಪಥದಲ್ಲಿನ ಪಥ ಸಂಚಲನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವೀಕ್ಷಣೆಗೆ ಸಾಮಾನ್ಯ ಜನರಿಗೆ ಮೊದಲ ಸಾಲುಗಳಲ್ಲಿ ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವುದಾಗಿ ಮೂಲಗಳು ತಿಳಿಸಿವೆ. ತರಕಾರಿ ಮಾರಾಟಗಾರರು, ರಿಕ್ಷಾ ಚಾಲಕರು, ಸೆಂಟ್ರಲ್ ವಿಸ್ತಾ ಕಾಮಗಾರಿಯಲ್ಲಿ ಕಾರ್ಯ ನಿರ್ವಹಿಸಿದವರು ಮತ್ತು ಅವರ ಕುಟುಂಬ ವರ್ಗದವರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೊದಲ ಸ್ಥಾನದ ಆಸನಗಳನ್ನು ಮೀಸಲಿರಿಸಿರುವುದಾಗಿಯೂ ಮೂಲಗಳು ಮಾಹಿತಿ ನೀಡಿವೆ.

ಈ ಬಾರಿ ಕಾರ್ಯಕ್ರಮವನ್ನು ‘ಕಾರ್ಯಕ್ರಮದಲ್ಲಿ ಜನ ಸಾಮಾನ್ಯರು ಭಾಗಿ’ ಎಂಬ ಶಿರ್ಷಿಕೆಯಡಿಯಲ್ಲಿ ಆಯೋಜಿಸಲಾಗುತ್ತದೆ. ಪರೇಡ್ ವೀಕ್ಷಿಸಲು ೪೫ ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ೩೨ ಸಾವಿರ ಟಿಕೇಟ್‌ಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಚಿಂತನೆ ಮಾಡಿದೆ.

ಈ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್ – ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ.

ಇನ್ನು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಸಾರ್ವಜನಿಕರಿಗೆ ಕಾರ್ಯಕ್ರಮಗಳ ವೀಕ್ಷಣೆಗೆ ಮೊದಲ ಸ್ಥಾನದಲ್ಲಿ ಅವಕಾಶಗಳನ್ನು ನೀಡಲಾಗುತ್ತಿದ್ದು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Tags

Related Articles

Close