ಅಂಕಣ

ವಿದೇಶಿ ತತ್ವಜ್ಞಾನಿಗಳಿಗೆ ಭಾರತದ ಇತಿಹಾಸ ಹೇಗೆ ಅರ್ಥವಾಗಿತ್ತು? ಭಾರತದ ಬಗ್ಗೆ ಭವಿಷ್ಯ ನುಡಿದ ತತ್ವಜ್ಞಾನಿಗಳೆಷ್ಟು ಗೊತ್ತಾ..?

ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದದಾಗಿದ್ದು, ವಿಶ್ವದ ಮೂರನೇ ಅತೀ ದೊಡ್ಡ ಧರ್ಮ ಇದು ಎಂದು ಪರಿಗಣಿಸಲ್ಪಡುತ್ತಿರುವ ವಿಚಾರ ಗೊತ್ತೇ ಇದೆ!! ಹಿಂದೂ ಧರ್ಮವನ್ನು ‘ಸನಾತನ ಧರ್ಮ’ ಎಂದೂ ಕರೆಯುತ್ತಾರೆ. ‘ಸನಾತನ’ ಎಂದರೆ ಎಂದೂ ಅಳಿಯದ, ಚಿರಂತನ, ನಿರಂತರವಾದದ್ದು ಎಂದರ್ಥ. ಹಿಂದೂ ಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲ ಎನ್ನುವುದು ವೈಶಿಷ್ಟ್ಯದ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮಕ್ಕೆ ಅದೆಷ್ಟೋ ವಿದೇಶಿಗರು ಮಾರು ಹೋಗಿದ್ದಲ್ಲದೇ ಹಿಂದೂ ಧರ್ಮವೇ ಶ್ರೇಷ್ಠ ಧರ್ಮವೆಂದು ಅಪ್ಪಿಕೊಳ್ಳುತ್ತಿದ್ದಾರೆ!!

ಅಷ್ಟೇ ಅಲ್ಲದೇ ಹಿಂದೂ ಧರ್ಮವೇ ಶ್ರೇಷ್ಠ ಧರ್ಮವೆಂದು ವಿದೇಶಿ ತತ್ವಜ್ಞಾನಿಗಳೇ ಸಾರಿ ಸಾರಿ ಹೇಳುತ್ತಿದ್ದಾರೆ!! ಹಿಂದೂ ಧರ್ಮದ ಜನ ಮುಂದೆ ಜಗತ್ತಿನಲ್ಲಿ ದೊಡ್ಡ ಚಿಂತಕರಾಗಿ ಹೊರಹೊಮ್ಮುತ್ತಾರೆ. ಇಡೀ ಪ್ರಪಂಚವು ಒಂದು ದಿನ ಹಿಂದೂ ಧರ್ಮವನ್ನು ಸ್ವೀಕರಿಸುತ್ತದೆ ಎಂದೂ ಹೇಳಿದ್ದಾರೆ ಎಂದರೆ ನಿಜಕ್ಕೂ ಹೆಮ್ಮೆ ಎಂದೆನಿಸುತ್ತದೆ!!

ಹೌದು… ಹಿಂದೂ ಧರ್ಮದ ಜ್ಞಾನಪರಂಪರೆಯಲ್ಲಿ ವೇದ (ಅಂದರೆ ಜ್ಞಾನ)ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎಂಬ ನಾಲ್ಕು ವೇದಗಳು ಹಿಂದೂ ಧರ್ಮದ ಐತಿಹ್ಯವನ್ನು ಅರಿಯುವಲ್ಲಿ ಪ್ರಮುಖವಾಗುತ್ತವೆ. ಹಿಂದೂ ಧರ್ಮವು ಧಾರ್ಮಿಕ, ದಾರ್ಶನಿಕ ಮತ್ತು ತಾತ್ವಿಕ ಸಿದ್ಧಾಂತಗಳಿಂದ ರೂಪುಗೊಂಡಿದ್ದು, ಇದರ ಮೂಲ ಸಿದ್ಧಾಂತ ಕರ್ಮ ಸಿದ್ಧಾಂತವಾಗಿದೆ. ಇದಲ್ಲದೆ, ಕರ್ತೃ-ಕಾರಣ ಸಂಬಂಧ, ಮರುಜನ್ಮದ ಕುರಿತು ನಂಬಿಕೆ ಮತ್ತು ಹುಟ್ಟು ಸಾವುಗಳೆಂಬ ಆದಿ ಅಂತ್ಯಗಳನ್ನು ಒಳಗೊಂಡಿರುವ ಜೀವನಚಕ್ರ ಮುಂತಾದವು ಕೂಡ ಇದರಲ್ಲಿ ಸೇರಿದೆ.

ಅಷ್ಟಕ್ಕೂ ಹಿಂದೂ ಧರ್ಮದ ಬಗೆಗೆ ವಿದೇಶಿ ತತ್ವಜ್ಞಾನಿಗಳು ಹೇಳಿದ್ದಾದರೂ ಏನು ಗೊತ್ತೇ??

* ಬರ್ಟ್ರಾಂಡ್ ರಸ್ಸೆಲ್ (1872 – 1970) ಇವರ ಪ್ರಕಾರ, “ನಾನು ಹಿಂದೂ ಧರ್ಮವನ್ನು ಓದಿದ್ದೇನೆ ಮತ್ತು ಇದು ಪ್ರಪಂಚದ ಎಲ್ಲಾ ಧರ್ಮ ಮತ್ತು ಎಲ್ಲಾ ಮಾನವಕುಲಕ್ಕೆ ಶ್ರೇಷ್ಟ ಎಂದು ಅರಿತುಕೊಂಡಿದ್ದೇನೆ. ಹಿಂದೂ ಧರ್ಮವು ಯುರೋಪೇತರ ಹಾಗು ಯುರೋಪಿನಲ್ಲೂ ಹರಡಿತ್ತು, ಹಿಂದೂ ಧರ್ಮದ ಜನ ಮುಂದೆ ಜಗತ್ತಿನಲ್ಲಿ ದೊಡ್ಡ ಚಿಂತಕರಾಗಿ ಹೊರಹೊಮ್ಮುತ್ತಾರೆ” ಎಂದು ಹೇಳಿದ್ದಾರೆ!!

* 1856 – 1950ರಲ್ಲಿ ಬರ್ನಾರ್ಡ್ ಷಾ ಅವರು, “ಇಡೀ ಪ್ರಪಂಚವು ಒಂದು ದಿನ ಹಿಂದೂ ಧರ್ಮವನ್ನು ಸ್ವೀಕರಿಸುತ್ತದೆ” ಎಂದು ಹೇಳುವ ಮುಖಾಂತರ ಹಿಂದೂ ಧರ್ಮದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ್ದಾರೆ.

* “ಹಿಂದೂಗಳು ಮತ್ತು ಹಿಂದುತ್ವ ಒಂದು ದಿನ ಪ್ರಪಂಚವನ್ನು ಆಳುತ್ತದೆ, ಏಕೆಂದರೆ ಈ ಧರ್ಮವು ಜ್ಞಾನವನ್ನ ಪಸರಿಸುವ ನೆಲೆಗಟ್ಟನ್ನು ಹೊಂದಿದೆ” ಎಂದು ಲಿಯೋ ಟಾಲ್ಸ್ ಟಾಯ್ 1828 – 1910ರಲ್ಲಿ ಹೇಳಿದ್ದಾರೆ.

* ಹರ್ಬರ್ಟ್ ವೆಲ್ಸ್ (1846 – 1946) ಅವರ ಪ್ರಕಾರ “ಹಿಂದೂ ಧರ್ಮದ ಪರಿಣಾಮಕಾರಿ ತತ್ವವನ್ನು ಪುನಃ ಸ್ಥಾಪಿಸುವವರೆಗೆ ಈ ಜಗತ್ತಿನಲ್ಲಿ ದುಷ್ಕೃತ್ಯಗಳು ನಡೆಯುತ್ತಲೇ ಇರುತ್ತವೆ, ಜನರು ಜೀವವ£ನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ, ನಂತರ ಒಂದು ದಿನ ಇಡೀ ಪ್ರಪಂಚವು ಜರ್ಜರಿತಗೊಂಡು ಹಿಂದೂ ಧರ್ಮವೇ ಶ್ರೇಷ್ಠ ಎಂದು ಹಿಂದೂ ಧರ್ಮದತ್ತ ಆಕರ್ಷಿತಗೊಳ್ಳುತ್ತದೆ, ಮತ್ತು ಆ ದಿನದಂದು ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ” ಎಂದಿದ್ದಾರೆ.

* “ನಮ್ಮ ಮೇಲೆ ಇರುವ ನಂಬಿಕೆಗಿಂತ ಜಗತ್ತಿನಲ್ಲಿ ಹಿಂದೂ ಧರ್ಮಕ್ಕೆ, ಹಿಂದುಗಳೆಂದರೆ ನಂಬಿಕೆ ಹೆಚ್ಚು. ಅದುವೇ ಹಿಂದುತ್ವ ಆಗಿದೆ, ನಾವು ಅದನ್ನು ನಮ್ಮ ಹೃದಯಾಂತರಾಳದಿಂದ ಮತ್ತು ಒಳ ಮನಸ್ಸಿನಿಂದ ನೋಡಿದರೆ ಅದು ನಮಗೇ ಒಳ್ಳೆಯದು” ಎಂದು ಹಸ್ಟನ್ ಸ್ಮಿತ್ 1919 ರಲ್ಲಿ ಹೇಳಿದ್ದಾರೆ.

* ಮೈಕಲ್ ನಾಸ್ಟ್ರಾಡಾಮಸ್ (1503 – 1566) ಅವರ ಪ್ರಕಾರ, “ಹಿಂದೂತ್ವ ಯುರೋಪ್ ನಲ್ಲಿ ರಾಜ ಧರ್ಮವಾಗಿ ಪರಿಣಮಿಸುತ್ತದೆ, ಆದರೆ ಯುರೋಪ್ ನ ಪ್ರಸಿದ್ಧ ನಗರವು ಹಿಂದೂ ರಾಜಧಾನಿಯಾಗಿ ಬದಲಾಗುತ್ತದೆ” ಎಂದಿದ್ದಾರೆ.

* ಗೋಸ್ತ ಲೋಬನ್ 1841 – 1931ರಲ್ಲಿ, “ಹಿಂದೂಗಳು ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಮಾತನಾಡುತ್ತಾರೆ ನಾನು ಸುಧಾರಣೆಯ ನಂಬಿಕೆಗೋಸ್ಕರ ಹಿಂದೂ ಧರ್ಮವನ್ನು ಅರಿತುಕೊಳ್ಳಲು ಕ್ರೈಸ್ತರನ್ನು ಆಹ್ವಾನಿಸುತ್ತೇನೆ” ಎಂದಿದ್ದಾರೆ.

* ಇನ್ನು, ಆಲ್ಬರ್ಟ್ ಐನ್ಸ್ ಸ್ಟೀನ್ “ನಾನು ಭಗವದ್ಗೀತೆ ಓದಿದಾಗ ಹೇಗೆ ಜಗತ್ತನ್ನು ದೇವರು ಸೃಷ್ಟಿಸಿದ ಮತ್ತು ಪ್ರತಿಯೊಂದೂ ಉತ್ಪ್ರೇಕ್ಷಕಾರಿಯಾದದ್ದು ಎನಿಸಿತು” ಎಂದು ಹೇಳಿಕೊಂಡಿದ್ದಾರೆ.

* ಆಲ್ಡ್‍ಸ್ ಹಕ್ಸ್‍ಲೆ ಅವರು “ಭಗವದ್ಗೀತೆ ಆಧ್ಯಾತ್ಮಿಕ ಬೆಳವಣಿಗೆ ಹೊಂದಲು ಸಮತೋಲನ ಸ್ಥಿತಿ ಉಂಟು ಮಾಡಿ ವೌಲ್ಯಗಳನ್ನು ಹೆಚ್ಚಿಸುತ್ತದೆ. ಇದು ಭಾರತಕ್ಕೆ ಸೀಮಿತವಾಗಿರದೆ ಎಲ್ಲ ಮಾನವರಿಗೂ ಅನ್ವಯಿಸುತ್ತದೆ” ಎಂದು ಹೇಳಿದ್ದಾರೆ.

* ಹೆನ್ರಿಡೆವಿಡ್‍ತೋರು ಇವರ ಪ್ರಕಾರ, “ನಾನು ಪ್ರತಿ ದಿನ ಬೆಳಗ್ಗೆ ಭಗವದ್ಗೀತೆಯಿಂದ ಸ್ನಾನ ಮಾಡುತ್ತೇನೆ” ಎಂದು ಹೇಳಿದ್ದಾರೆ!!

* ಹರ್ಮನ್ ಹೆಸ್ಸೆ “ಜೀವನದಲ್ಲಿ ಬುದ್ಧಿಯನ್ನು ಹೆಚ್ಚು ಮಾಡಿಕೊಂಡು ತತ್ವಜ್ಞಾನ ಪಡೆದುಕೊಂಡು ಅರಳಲು ಸಹಕಾರಿ ಭಗವದ್ಗೀತೆ” ಎಂದಿದ್ದಾರೆ.

* ರಾಲ್ಫ್ ವಾಲ್ಡೊ ಎಮರ್‍ಸನ್ ರ ಪ್ರಕಾರ, “ಇದೊಂದು ಅದ್ವಿತೀಯ ಪುಸ್ತಕ. ಒಬ್ಬ ಚಕ್ರವರ್ತಿ ನಮ್ಮೊಂದಿಗೆ ಮಾತನ್ನು ಹಂಚಿಕೊಂಡಂತೆ, ಸರಿಯಾದ ದಿಕ್ಕು ತೋರಿದಂತೆ ಭಾಸವಾಗುತ್ತದೆ. ಹಿಂದಿನ ಮತ್ತು ಇಂದಿನ ನಮ್ಮ ಪ್ರಶ್ನೆಗಳಿಗೆ ಭಗವದ್ಗೀತೆಯಲ್ಲಿ ಉತ್ತರವಿದೆ” ಎಂದು ಹೇಳಿದ್ದಾರೆ!!

* “ಸೃಷ್ಟಿಯ ಅರ್ಥವನ್ನು ಮಾಡಿಸುವುದಲ್ಲದೆ. ನಮ್ಮ ಆತ್ಮವನ್ನು ಬೆಸೆಯುವಂತೆ ಮಾಡುತ್ತದೆ” ಎಂದು ರುಡಾಲ್ಫ್ ಸ್ಟೇನರ್ ಹಿಂದೂ ಧರ್ಮದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ!!

ಆದರೆ, ಭಾರತದಲ್ಲಿರುವ ಕೆಲವರಿಗೆ ಹಿಂದೂ ಧರ್ಮವೆಂದರೆ, ಸಂಪ್ರದಾಯವೆಂದರೆ, ಸಂಸ್ಕೃತಿಯೆಂದರೆ ಅಸಡ್ಡೆ ಆದರೆ ಅದೇ ಸಂಸ್ಕೃತಿ, ಆಚರಣೆ, ಧರ್ಮದ ಬಗ್ಗೆ ವಿದೇಶಿಗರ ಅಭಿಪ್ರಾಯವೇ ಬೇರೆ!! ಇತ್ತೀಚಿನ ದಿನಗಳಲ್ಲಿ ವಿದೇಶಿಗರು ಹಿಂದೂ ಧರ್ಮಕ್ಕೆ ಮಾರುಹೋಗಿ ಹಿಂದೂ ಧರ್ಮದ ಆಚಾರ ವಿಚಾರದಂತೆಯೇ ವಿವಾಹಗಳನ್ನು ಮಾಡಿಕೊಳ್ಳುತ್ತಿದ್ದಾರೆ!! ಪೂಜಾ ಕೈಕಂರ್ಯಗಳಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಲ್ಲದೇ, ಹಿಂದೂ ಧರ್ಮವೇ ಅವರ ಪಾಲಿಗೂ ಶ್ರೇಷ್ಠ ಧರ್ಮವಾಗಿರುವುದೇ ಹೆಮ್ಮೆಯ ವಿಚಾರ!! ಒಟ್ಟಿನಲ್ಲಿ ಪಾಶ್ಚಾತ್ಯರಿಗೆ ಅರ್ಥವಾದ ಹಿಂದೂ ಧರ್ಮ ಇಲ್ಲಿನ ಅಧರ್ಮಿಗಳಿಗೆ ಅದ್ಯಾವಾಗ ತಿಳಿಯುತ್ತದೆಯೋ ನಾ ಕಾಣೆ!!

– ಅಲೋಖಾ

Tags

Related Articles

FOR DAILY ALERTS
Close