ಪ್ರಚಲಿತ

ವಿಶ್ವಕ್ಕೆ ಕೊರೊನಾ ಹರಡಿದ ಚೀನಾದ ಸಂಚಿನ ವಿರುದ್ಧ ಏಕಾಂಗಿಯಾಗಿ ಧ್ವನಿ ಎತ್ತಿದ ಭಾರತ…!

ಕೊರೊನಾ ವೈರಸ್‍ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಈಗಾಗಲೇ ಜಗತ್ತಿನ 7 ಸಾವಿರ ಮಂದಿಯನ್ನು ಬಲಿ ಪಡೆದ ನೋವೆಲ್ ಕೊರೊನಾ(ಕೋವಿದ್-19) ಹುಟ್ಟಿಕೊಂಡಿರುವುದು ಚೀನಾದ ವುಹಾನ್ ನಗರದಲ್ಲಿ..


ಜೈವಿಕ ಅಸ್ತ್ರ:
ವುಹಾನ್ ನಗರದಲ್ಲಿ ವೈರಾಲಜಿ ಕೇಂದ್ರವಿದೆ. ಇಲ್ಲಿ ವೈರಸ್ ಹಾಗೂ ಸೋಂಕುಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ. ಇಲ್ಲಿ ಸಾರ್ಸ್ ವೈರಸ್ ಅನ್ನು ಕಾಪಿಡಲಾಗಿದೆ. ಸಾರ್ಸ್ ಕೂಡ 2002ರಲ್ಲಿ ಇಲ್ಲಿಂದಲೇ ಹರಡಿತ್ತು. ವೈರಾಲಜಿ ಕೇಂದ್ರದಲ್ಲಿ ವೈರಸ್ ಸೋಂಕು ಬಗ್ಗೆ ಅಧ್ಯಯನ ನಡೆಯುತ್ತಿದೆ ಕಂಡರೂ ಇಲ್ಲಿ ಜೈವಿಕ ಅಸ್ತ್ರಗಳನ್ನು ತಯಾರಿಸಲಾಗುತ್ತಿದೆ ಎಂದು ಭಾರತ, ಇಸ್ರೇಲ್ ಸೇರಿ ಹಲವು ರಾಷ್ಟ್ರಗಳಿಗೆ ಅನುಮಾನ ಮೂಡಿತ್ತು.
ವುಹಾನ್ ಬಯೋಸೇಫ್ಟಿ ಲ್ಯಾಬ್‍ನಿಂದಲೇ ಕೊರೊನಾ ವೈರಸ್ ಸೋರಿಕೆಯಾಗಿರಬಹುದೆಂದು ಬ್ರಿಟನ್‍ನ ಡೈಲಿ ಮೈಲ್‍ನಲ್ಲಿ ವರದಿಯೂ ಪ್ರಕಟವಾಗಿತ್ತು. ಆದರೆ ಚೀನಾದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡುವವರು ಯಾರೂ ಇರಲಿಲ್ಲ. ಚೀನಾ ಸ್ವತಃ ಅಮೆರಿಕಾದ ವಿರುದ್ಧ ಆರೋಪಿಸಿದರೂ ಅಮೆರಿಕಾ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಯಾಕೆಂದರೆ ಚೀನಾ ಇಂದು ವಿಶ್ವದ ಬಲಾಢ್ಯ ರಾಷ್ಟ್ರವಾಗಿದ್ದು, ಇದರ ವಿರುದ್ಧ ಸೊಲ್ಲೆತ್ತಲು ಯಾವೊಂದು ರಾಷ್ಟ್ರಕ್ಕೂ ಧಂ ಇರಲಿಲ್ಲ.

ಚೀನಾದ ವಿರುದ್ಧ ತೊಡೆ ತಟ್ಟಿದ ಭಾರತ
ಇಂದು ಕೊರೊನಾ ವೈರಸ್ ಅನ್ನು ಹರಡಿದ ಚೀನಾದ ವಿರುದ್ಧ ಭಾರತ ಪ್ರಪ್ರಥಮವಾಗಿ ಧ್ವನಿ ಎತ್ತುವ ಮೂಲಕ ಚೀನಾದ ವಿರುದ್ಧ ಸಮರ ಸಾರಲು ವೇದಿಕೆ ಸಜ್ಜುಗೊಳಿಸಿದೆ. ಚೀನ ಕೊರೊನಾ ವೈರಸ್ ಹರಡಿರುವ ಗುಮಾನಿ ಇರುವುದರಿಂದ ಭಾರತದಲ್ಲಿ ಚೀನಾ ಅಧ್ಯಕ್ಷ ಮತ್ತು ಚೀನಾದ ರಾಯಭಾರಿ ವಿರುದ್ಧ ದೂರು ದಾಖಲಾಗಿದ್ದು, ಅರ್ಜಿ ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಗೆ ದಿನಾಂಕವನ್ನೂ ನಿಗದಿ ಮಾಡಿದೆ.
ಉತ್ತರ ಪ್ರದೇಶದ ವಕೀಲ ಸುಧೀರ್ ಕುಮಾರ್ ಓಜಾ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಾಯಭಾರಿ ಸನ್ ವಿಡಾಂಗ್ ವಿರುದ್ಧ ಮುಜಾಫರ್ ಪುರ ನ್ಯಾಯಾಲಯದಲ್ಲಿ ”ಕೊರೊನಾ ವೈರಸ್ ಹರಡಿಸುವ ಪಿತೂರಿ ನಡೆಸಿ, ಬೇರೆ ದೇಶಗಳಿಗೆ ಸೋಂಕು ತಗುಲುವಂತೆ ಮಾಡಿದ್ದಾರೆ” ಎಂಬ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಏಪ್ರಿಲ್ 11ಕ್ಕೆ ವಿಚಾರಣೆ .ವಕೀಲ ಸುಧೀರ್ ಕುಮಾರ್ ಓಜಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ಏಪ್ರಿಲ್ 11 ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ನಡೆಯಲಿದೆ. ಈ ಮೂಲಕ ಚೀನಾ ದೇಶದ ವಿರುದ್ಧ ಕಾನೂನು ಹೋರಾಟಕ್ಕೆ ಭಾರತದ ವಕೀಲರೊಬ್ಬರು ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸುದ್ದಿಯಾಗಿದೆ.


ದೋಕಲಂ ವಿಚಾರಕ್ಕೆ ಸಂಬಂಧಿಸಿ ಭಾರತದ ಗಡಿತಂಟೆಗೆ ಬಂದಿದ್ದ ಚೀನಾ ಆ ಬಳಿಕ ನೇರವಾಗಿ ಯುದ್ಧ ಮಾಡಲು ಸಾಲದೆ ಹಿಂದಕ್ಕೆ ಸರಿದಿತ್ತು. ಜಗತ್ತಿನ ಹಲವು ಬಲಾಢ್ಯ ರಾಷ್ಟ್ರಗಳು ಪರಮಾಣು ಅಸ್ತ್ರಗಳನ್ನು ತಯಾರಿಸಿಟ್ಟಿದ್ದರೆ ಚೀನಾ ಒಂದು ಹೆಜ್ಜೆ ಮುಂದೆ ಸಾಗಿ ಜೈವಿಕ ಅಸ್ತ್ರಗಳನ್ನು ತಯಾರಿಸಿ ಶತ್ರು ರಾಷ್ಟ್ರಗಳನ್ನು ನಾಶ ಮಾಡಲು ಮುಂದಾಗುತ್ತಿದೆ. ಚೀನಾದ ಮುಖ್ಯ ಟಾರ್ಗೆಟ್ ಭಾರತ ಎಂದರೂ ತಪ್ಪಾಗಲಾರದು.

-Girish

Tags

Related Articles

FOR DAILY ALERTS
Close