ಪ್ರಚಲಿತ

ಯಥಾ ರಾಜ ತಥಾ ಪ್ರಜಾ ಎಂಬಂತೆ ಸೈನಿಕರನ್ನು ಆದರಿಸುವ ಪ್ರಧಾನಿಯೊಬ್ಬರು ಬಂದ ಮೇಲೆ ಸೈನಿಕರನ್ನು ಗೌರವಿಸುವ ನಾಗರೀಕರೂ ಹೆಚ್ಚಾಗಿದ್ದಾರೆ.. ಅಲ್ಲವೇ?

ಇಂದು ಬೆಳಗ್ಗೆ ವಾರ್ತಾಪತ್ರಿಕೆಯ ಮೇಲೆ ಕಣ್ಣಾಡಿಸುವಾಗ ಮನಸ್ಸಿಗೆ ಬಹಳ ಸಂತಸವಾಗುವಂತಹಾ ವಾರ್ತೆಯೊಂದು ಕಣ್ಣಿಗೆ ಬಿತ್ತು..ಪ್ರತಿ ನಿತ್ಯ ಕೊಲೆ ಸುಲಿಗೆ,ಆತ್ಮಹತ್ಯೆ ಮತ್ತು ಗುಂಡಾಗಿರಿ ಹಾಗು ಪ್ರತಿಭಟನೆ ಮಾತ್ರ ಕಾಣಸಿಗುವ ಈ ದಿನಗಳಲ್ಲಿ “ನಿವೃತ್ತಿಯಾಗಿ ಊರಿಗೆ ಆಗಮಿಸಿದ ಯೋಧರನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಕೋಲಾರದ ಜನ” ಎಂಬ ಶೀರ್ಷಿಕೆಯು ಒಂದೇ ಕ್ಷಣದಲ್ಲಿ ನನ್ನ ಗಮನ ಸೆಳೆಯಿತು.ಕಳೆದ ೧೭ ವರ್ಷಗಳಿಂದ ದೇಶದ ವಿವಿಧ ಗಡಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ೧೪ ಜನ ಸೈನಿಕರನ್ನು ಜಿಲ್ಲೆಯ ಜನರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು.೨೦೦೩ ರ ಜನವರಿಯಲ್ಲಿ ಈ ೧೪ ಜನರು ಒಂದೇ ಬ್ಯಾಚ್ನಲ್ಲಿ ಆಯ್ಕೆಯಾಗಿದ್ದರು ಮತ್ತು ವಿವಿಧ ರೆಜಿಮೆಂಟ್ಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

ನಿವೃತ್ತಿಯನ್ನು ಹೊಂದಿ ಇಂದು ಆಗಮಿಸಿದ ಅವರನ್ನು ಜನರು ಹಾರ ಹಾಕಿ ಆರತಿ ಎತ್ತಿ ಸನ್ಮಾನಿಸಿದ್ದು ಮಾತ್ರವಲ್ಲದೆ ತೆರೆದ ಜೀಪ್ ನಲ್ಲಿ ಅವರ ಮೆರವಣಿಗೆಯನ್ನೂ ಮಾಡಿದರು.ಅನೇಕ ವಿದ್ಯಾರ್ಥಿಗಳು ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡದ್ದು ಮಾತ್ರವಲ್ಲದೆ ಸೆಲ್ಫಿ ತೆಗೆದು ಬೀಗಿದ್ದರು ಎಂಬುದೂ ಆ ವಾರ್ತೆಯಲ್ಲಿತ್ತು.ಊರಿಗೆ ಆಗಮಿಸುವ ಚಲನಚಿತ್ರ ನಟನಟಿಯರನ್ನೂ ರಾಜಕಾರಣಿಗಳನ್ನೂ ಅದ್ದೂರಿಯಾಗಿ ಸ್ವಾಗತಿಸುವ ವಾರ್ತೆಗಳನ್ನು ಮಾತ್ರ ಕೇಳುತ್ತಿದ್ದ ನಮಗೆ ಈ ವಾರ್ತೆಯಿಂದ ಆಶ್ಚರ್ಯವೂ ಆಗಬಹುದಾದರೂ ಉತ್ತರ ಭಾರತದಲ್ಲಿ ಈ ಆಚರಣೆಯು ಪ್ರಚಲಿತವಾಗಿದೆ.

ಉತ್ತರ ಭಾರತೀಯರನ್ನು ನೋಡಿ,ಎಲ್ಲಿಯಾದರೂ ಯೋಧರನ್ನು ನೋಡಿದ ತಕ್ಷಣ ಹಿರಿಯರು ಸ್ವತಃ ತಾವು ಯೋಧರಿಗೆ ವಂದಿಸುವುದಲ್ಲದೆ ತಮ್ಮೊಂದಿಗಿರುವ ಮಕ್ಕಳಿಂದ ಯೋಧರ ಕಾಲು ಕೂಡಾ ಹಿಡಿಸುತ್ತಾರೆ..ಆದರೆ ದಕ್ಷಿಣ ಭಾರತದಲ್ಲಿ ಇಂತಹಾ ಆಚರಣೆಗಳ ಕಲ್ಪನೆಯಿಲ್ಲ ಮಾತ್ರವಲ್ಲದೆ ಇಷ್ಟೆಲ್ಲಾ ಗೌರವ ನೀಡುವ ಪದ್ಧತಿಯೂ ಇಲ್ಲ. ಗಮನಿಸಬೇಕಾದ ವಿಚಾರವೊಂದಿದೆ,ಭಾರತೀಯ ಸೈನ್ಯದಲ್ಲಿ ದಕ್ಷಿಣ ಭಾರತೀಯರಿಗೆ ಹೋಲಿಸಿದರೆ ಉತ್ತರ ಭಾರತೀಯ ಸೈನಿಕರ ಸಂಖ್ಯೆ ಹೆಚ್ಚಿಗೆ ಇರುವುದು ಸತ್ಯ.ಅದಕ್ಕೆ ಹಲವಾರು ಕಾರಣಗಳಿವೆ,ಪಂಜಾಬ್,ರಾಜಸ್ಥಾನ,ಗುಜರಾತ್ ಮತ್ತು ಸಪ್ತ ಸಹೋದರಿಯರ ನಾಡಿನ ಮೇಲೆ ಪರಕೀಯರ ಆಕ್ರಮಣ ಬಹಳಷ್ಟು ನೂರು ವರ್ಷಗಳಿಂದ ನಡೆಯುತ್ತಿತ್ತು..

ಈ ಪ್ರದೇಶಗಳ ನಾಗರೀಕರು ಪರಕೀಯರ ಆಕ್ರಮಣದಿಂದಾಗುವ ತೊಂದರೆಗಳಿಗೆ ಇವರೆಲ್ಲರೂ ಸ್ವತಃ ಅನುಭವಿಸಿ ಅರಿತಿದ್ದರು,ಇಂತಹಾ ಆಕ್ರಮಣಗಳಿಂದಾಗಿ ಇವರು ಬಲಿಷ್ಟರಾಗಿ ಬೆಳೆದರು ಮತ್ತು ಸೈನ್ಯದಲ್ಲಿ ಭರ್ತಿಗೊಂಡರು. ಹಾಗೆಯೇ ಉತ್ತರಭಾರತದ ನಾಗರೀಕರು ಪರಕೀಯರ ಆಕ್ರಮಣಗಳಿಂದ ತೊಂದರೆಗೊಳಗಾಗಿ ಬೇಸತ್ತಿದ್ದರು.ಇದರಿಂದಾಗಿಯೇ ಉತ್ತರಭಾರತೀಯರಿಗೆ ತಮ್ಮನ್ನು ರಕ್ಷಿಸುವ ಯೋಧರ ಮೇಲೆ ಅತೀವ ಗೌರವ.ದಕ್ಷಿಣ ಭಾರತದ ಮತ್ತು ಭಾರತೀಯರ ಪರಿಸ್ಥಿತಿಯು ಸಂಪೂರ್ಣ ಭಿನ್ನವಾಗಿದೆ..ಆದ್ದರಿಂದಲೇ ಇಲ್ಲಿನ ಜನರಿಗೆ ಸೈನ್ಯವು ಒಂದು ಕೆಲಸ,ಸೈನಿಕನಾಗುವುದು ಕೂಡಾ ಒಂದು ಸಾಮಾನ್ಯ ಸಂಪಾದನೆಯ ಮಾರ್ಗವಾದ ಕೆಲಸ.ಇಷ್ಟಲ್ಲದೆ ದಕ್ಷಿಣ ಭಾರತದ ಪ್ರಸಿದ್ಧ ರಾಜಕಾರಣಿಯೊಬ್ಬರು ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆಂಬ ಅಸಂಬದ್ಧ ಹೇಳಿಕೆ ನೀಡಿದ್ದರು..

ಆದರೆ ದೇಶವೀಗ ಬದಲಾಗುತ್ತಿದೆ.. “ಯಥಾ ರಾಜ ತಥಾ ಪ್ರಜಾ” ಎಂಬಂತೆ ಸೈನಿಕರನ್ನು ಗೌರವಿಸಿ ಆದರಿಸುವ ಪ್ರಧಾನಿಯೊಬ್ಬರು ಬಂದ ತಕ್ಷಣ ಇಲ್ಲಿನ ಜನರೂ ನಿಧಾನವಾಗಿ ಬದಲಾಗಲು ಪ್ರಾರಂಭಿಸಿದರು.ಹುತಾತ್ಮನಾದ ಸೈನಿಕನ ದೇಹವು ತಮ್ಮೂರಿಗೆ ಬಂದಾಗ ಜನರು ಸಾವಿರ ಸಂಖ್ಯೆಯಲ್ಲಿ ಸೇರಲು ಪ್ರಾರಂಭಿಸಿದರು.ರಾಜಕಾರಣಿಗಳು ಬರದಿದ್ದರೂ ಯೋಧನ ಅಂತ್ಯಕ್ರಿಯೆಯಲ್ಲಿ ಯಾವುದೇ ಕೊರತೆಯಿಲ್ಲದಂತೆ ಏರ್ಪಡಿಸಲು ಜನರೇ ಮುಂದಾದರು…ಜನರಿಂದ ಚುನಾಯಿತರಾದ ಬಿಜೆಪಿ ಶಾಸಕರು ಹುತಾತ್ಮನಾದ ಸೈನಿಕನ ಮನೆಗೆ ಭೇಟಿನೀಡಲು ಪ್ರಾರಂಭಿಸಿದರು,ನಿಧಾನವಾಗಿ ಸಾಮಾನ್ಯರೂ ಅವರನ್ನು ಅನುಸರಿಸಲು ಪ್ರಾರಂಭಿಸಿದರು.

ಇದೀಗ ಯೋಧರು ಸಂಚರಿಸುವಾಗ ಮಕ್ಕಳು ಸಾಲಿನಲ್ಲಿ ನಿಂತು ರಾಷ್ಟ್ರಗೀತೆ ಹಾಡುತ್ತಾರೆ.ಯೋಧನ ಪಾರ್ಥಿವ ಶರೀರವು ಸಾಗುವಾಗ ನಾಗರೀಕರು ಮಾರ್ಗದ ಎರಡೂ ಬದಿಯಲ್ಲಿ ನಿಂತು ಸೆಲ್ಯೂಟ್ ಮಾಡುತ್ತಾರೆ.ವಿಪತ್ತಿನ ಸಮಯದಲ್ಲಿ ತಮ್ಮನ್ನು ರಕ್ಷಿಸಿದ ಸೈನಿಕರ ಕಾಲಿಗೆ ಸಮಸ್ಕರಿಸುತ್ತಾರೆ.ಸೈನಿಕರಿಗೆ ರಕ್ಷೆ ಕಟ್ಟುತ್ತಾರೆ..ಅವರ ಅಂತ್ಯಕ್ರಿಗೆಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಸೇರುತ್ತಾರೆ.ದೇಶವೀಗ ಬದಲಾಗುತ್ತಿದೆ,ಜನರಲ್ಲೂ ಯಾರಿಗೆ ಗೌರವವನ್ನು ನೀಡಬೇಕೆಂಬ ಅರಿವುಂಟಾಗುತ್ತಿದೆ..ಗಡಿಯಲ್ಲಿ ಮಳೆ,ಗಾಳಿ,ಚಳಿ,ಬಿಸಿಲು ಹೀಗೆ ಎಲ್ಲವನ್ನೂ ಸಹಿಸಿಕೊಂಡು ನಮಗೋಸ್ಕರ ತಮ್ಮ ಕುಟುಂಬವನ್ನೂ,ಸಂತೋಷವನ್ನೂ ತ್ಯಾಗ ಮಾಡುವ ಸೈನಿಕರು ನಮ್ಮಿಂದ ಎಲ್ಲಾ ರೀತಿಯ ಗೌರವವನ್ನು ಪಡೆಯಲೂ ಅರ್ಹರು.ಅವರ ಕಷ್ಟವನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲದಿರುವಾಗ ಅವರಿಗೆ ಗೌರವ ಮತ್ತು ಪ್ರೀತ್ಯನ್ನು ನೀಡುವುದು ನಮ್ಮಿಂದಾದ ಅಲ್ಪ ಕೃತಜ್ಞತಾ ಅರ್ಪಣೆ ಅಷ್ಟೇ.

-Deepashree M

Tags

Related Articles

FOR DAILY ALERTS
Close