ಪ್ರಚಲಿತ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಮ್ಮರದ ಬಗ್ಗೆ ನಿಮಗೆಷ್ಟು ಗೊತ್ತು? ಜಗತ್ತಿನ ಅತಿ ದೊಡ್ಡ ಸಂಘಟನೆ ಆರ್‌ಎಸ್‌ಎಸ್!

ಹಾರಾಷ್ಟ್ರದ ನಾಗ್ಪುರದ ದೇಶಭಕ್ತ ಯುವಕರು ಡಾ ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಪ್ರೇರಿತರಾಗಿ ಡಾಕ್ಟರ್ ಜಿ ಅವರ ಮಾರ್ಗದರ್ಶನದೊಂದಿಗೆ ,ಬಲಶಾಲಿಯಾದ ದೇಶಭಕ್ತ ಸಂಘಟನೆಯೊಂದನ್ನು ಕಟ್ಟಲು ತೀರ್ಮಾನಿಸಿದರು..ಆದರೆ ಸಂಘಟನೆಯನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದರ ಬಗ್ಗೆ ಅವರಲ್ಲಿ ಕೆಲವು ಗೊಂದಲಗಳಿದ್ದವು. ಹಾಗೆ ನೋಡಿದರೆ ೧೯೨೫ ರ ವಿಜಯದಶಮಿಯಂದು ಸ್ಥಾಪಿಸಲ್ಪಟ್ಟ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ನಂತರದ ವರ್ಷಗಳಲ್ಲಿ ಬೆಳೆದು ಹೆಮ್ಮರವಾದ ಸಂಘಕ್ಕೂ ಬೀಜದಿಂದ ವೃಕ್ಷವಾದಂತಹ ವ್ಯತ್ಯಾಸವಿದೆ. ಬೀಜವು ಚಿಗುರೊಡೆದು ಫಲವನ್ನು ನೀಡವುವ ವೃಕ್ಷವಾಗಲು ಹೇಗೆ ಸಮಯ ತೆಗೆದುಕೊಳ್ಳುತ್ತದೆಯೋ ಹಾಗೆಯೇ ಸಂಘವೂ ನಿಧಾನವಾಗಿ ಆದರೆ ಯಾವುದೇ ಕೃತಕ ಪೋಷಣೆಯ ಅವಶ್ಯಕತೆಯಿಲ್ಲದೆ ನೈಸರ್ಗಿಕವಾಗಿ ಬೆಳೆದು ವಿಶಾಲವೂ ಬಲಶಾಲಿಯೂ ಆಗಿದೆ.

ಪ್ರಾರಂಭದಲ್ಲಿ ತಮ್ಮ ತಮ್ಮ ಅಖಾಡಾಗಳಲ್ಲೇ ಸಂಘಟನೆಯನ್ನು ಬೆಳೆಸುವಂತೆ ಸೂಚನೆಗಳನ್ನು ಪಡೆದಿದ್ದ ಯುವಕರು ತಮ್ಮ ಅಣ್ಣ ಖೊಟೆಯ ನಾಗ್ಪುರ್ ವ್ಯಾಯಾಮಶಾಲೆಯಲ್ಲಿ ಸಂಘಟನೆಯನ್ನು ಪ್ರಾರಂಭಿಸಿದರು. ಇನ್ನು ಹಲವರು ತಮ್ಮ ಅಖಾಡಗಳಲ್ಲಿ ಪ್ರಾರಂಭಿಸಿದ್ದರು.ಪ್ರತಿ ರವಿವಾರ ಬೆಳಗ್ಗೆ ೫ ಗಂಟೆಗೆ ವಿವಿಧ ಅಖಾಡದ ಸದಸ್ಯರೆಲ್ಲರೂ ಇತ್ವಾರ್ ದರ್ವಾಜದಲ್ಲಿ ಜೊತೆಯಾಗಿ ಸೇರುತ್ತಿದ್ದರು .ಹಾಗೆ ವಾರದಲ್ಲಿ ಒಮ್ಮೆ ಸೇರುವ ಸಮಾರಂಭದಲ್ಲಿ ಅವರು ನಾಗ್ಪುರ್ ಕಾಂಗ್ರೆಸ್ ನ ಕಾರ್ಯಕರ್ತರ ಸಮವಸ್ತ್ರವನ್ನೇ ಧರಿಸುತ್ತಿದ್ದರು .೧೯೨೦ ರ ಸಮಯದಲ್ಲಿ ಖಾಕಿ ಶರ್ಟ್,ಮೊಣಕಾಲುದ್ದದ ಖಾಕಿ ಚಡ್ಡಿ,ಎರಡು ಬಟನ್ ಗಳನ್ನು ಹೊಂದಿದ್ದ ಖಾಕಿ ಟೋಪಿ ಇದಿಷ್ಟು ಕಾರ್ಯಕರ್ತರ ಸಮವಸ್ತ್ರವಾಗಿತ್ತು.ಮುಂದೆ ೫ವರ್ಷಗಳ ಬಳಿಕ ಖಾಕಿ ಟೋಪಿಯ ಸ್ಥಳದಲ್ಲಿ ಬದಲಾವಣೆಯಾಗಿ ಕಪ್ಪು ಟೋಪಿಯು ಬಂದಿತ್ತು.ಪ್ರತಿ ಗುರುವಾರದಂದು ಉತ್ಸಾಹಿ ತರುಣರು ಸಂಘಟನೆಯ ರಾಷ್ರತೀಯ ಹಿರಿಯ ಕಾರ್ಯಕರ್ತರನ್ನು ಭೇಟಿಯಾಗಿ ವಿಚಾರಗಳನ್ನು ಅರಿಯುತ್ತಿದ್ದರು.ಎರಡು ವರ್ಷಗಳ ಬಳಿಕ ಈ ಕಾರ್ಯವನ್ನು ಬೌದ್ಧಿಕ್ ಎಂದು ಕರೆಯೆಲಾಯಿತು ಮತ್ತು ಇಂದಿಗೂ ಹಾಗೆಯೇ ಕರೆಯಲಾಗುತ್ತದೆ. ಕಾರ್ಯಕರ್ತರ ಸಂಖ್ಯೆಗಳು ಜಾಸ್ತಿಯಾದಂತೆ ಮಹಾರಾಷ್ಟ್ರ ವ್ಯಾಯಾಮ ಶಾಲಾ ಮತ್ತು ಪ್ರತಾಪ್ ಅಖಾಡಗಳು ಕೂಡ ಮುಂದೆ ಬಂದವು. ಆದರೆ ವ್ಯಾಯಾಮಶಾಲೆಗಳ ನಡುವಿನ ಸ್ಪರ್ಧೆಗಳು ತೊಂದರೆಯನ್ನುಂಟು ಮಾಡುವ ಕಾರಣದಿಂದ ಮುಂದಿನ ವರ್ಷಗಳಲ್ಲಿಶಾಖೆಗಳನ್ನು ಪ್ರತಿನಿತ್ಯ ನಡೆಸಲಾಯಿತು. ಮತ್ತು ಈ ಸಂದರ್ಭದಲ್ಲಿ ಶಾಖೆಯಲ್ಲಿ ದಂಡದ ಬಳಕೆಯನ್ನೂ ಪ್ರಾರಂಭಿಸಲಾಯಿತು.

ಶಾಖೆಯು ಓಟಕ್ಕಿಂತಲೂ ಶೀಘ್ರವಾಗಿ ಪ್ರಾರಂಭವಾಯಿತು,ಮೋಹೈಟ್ ವಾಡಾದಲ್ಲಿ ಅವರು ಶಾಖೆಯನ್ನು ಪ್ರಾರಂಭಿಸಿದರು..ಸೂರಿಲ್ಲದೆ ಕೆಲವು ಗೋಡೆಗಳನ್ನಷ್ಟೇ ಹೊಂದಿದ್ದ ಈ ಸ್ಥಳದಲ್ಲಿ ದೆವ್ವಗಳು ಕಾಡುತ್ತವೆ ಎಂದು ನಂಬಲಾಗಿತ್ತು.ಆದರೆ ಯಾವಾಗ ಸ್ವಯಂಸೇವಕರು ಸಂತೋಷದಿಂದ ಶಾಖೆ ಮುಗಿಸಿ ಕಟ್ಟಡದಿಂದ ಹೊರಬಂದರೊ ತದನಂತರ ಯಾರೂ ದೆವ್ವಗಳ ಕುರಿತಾಗಿ ಯಾರೂ ಮಾತನಾಡಲಿಲ್ಲ…ಆದರೆ ಸರ್ದಾರ್ ಮೋಹೈಟ್ ಸಾಲ ತೆಗೆದುಕೊಳ್ಳುವಾಗ ಈ ಕಟ್ಟಡವನ್ನು ಅಡಮಾನವಾಗಿರಿಸಿದ್ದರು ಆದ್ದರಿಂದ ಸಿಐಡಿ ಮತ್ತು ಸಾಲ ನೀಡಿದವರು ಈ ಸ್ಥಳವನ್ನು ಖಾಲಿ ಮಾಡುವಂತೆ ಸೂಚಿಸಿದರು.ಆದರೆ ಒಳ್ಳೆಯವರಾದ ರಾಜ ಲಕ್ಷ್ಮಣ ರಾವ್ ಭೋಸ್ಲೆ ಅವರು ತಮ್ಮ ಹತಿಖಾನಾವನ್ನು ನೀಡಿ ಸಹಾಯವನ್ನು ಮಾಡಿದರಾದರೂ ಮುಂದೆ ಅವರು ಕೊನೆಯುಸಿರೆಳೆದ ಬಳಿಕ ಶಾಖೆಯನ್ನು ತುಳಸಿ ಬಾಗ್ ಗೆ ಸ್ಥಳಾಂತರಿಸಬೇಕಾಗಿ ಬಂತು.

೧೯೩೪ ರಲ್ಲಿ ಡಾಕ್ಟರ್ ಜಿ ನಗರದ ಹೊರವಲಯದ ಕಾಡಿನ ಮಧ್ಯ ರೇಶಿಮ್ ಭಾಗ್ ಅನ್ನು ಕೊಂಡುಕೊಂಡು ಅದನ್ನು ಶಾಶ್ವತ ಮತ್ತು ಸಂಘದ ಕೇಂದ್ರಸ್ಥಾನವನ್ನಾಗಿಸಿದರು.ಆದರೆ ೧೯೪೪ ರಲ್ಲಿ ಸರಕಾರವು ಸಿನೆಮಾ ಹಾಲ್ ಮತ್ತು ಕ್ರೀಡಾಂಗಣ ನಿರ್ಮಾಣದ ಹೆಸರಿನಲ್ಲಿ ಈ ಮೈದಾನವನ್ನು ಸ್ವಾಧೀನವಾದಿಸಿಕೊಳ್ಳಲು ನಿರ್ಧರಿಇದಾಗ ನಾಗ್ಪುರದ ಪ್ರಮುಖ ನಾಗರೀಕರ ಸರ್ವಾನುಮತದ ಪ್ರತಿಭಟನೆ ಸಂಘಕ್ಕಾಗಿ ಈ ನೆಲವನ್ನು ಉಳಿಸಿಕೊಟ್ಟಿತು.ಮುಂದೆ ಮೋಹೈಟ್ ವಾಡಾ ಕೂಡ ಸಂಘದ ಪಾಲಿಗೆ ದೊರಕಿತು.ಸಾಲ ನೀಡಿದವರಿಗೆ ೧೯೪೦ ರ ಸಮಯದಲ್ಲಿ ೧೨,೦೦೦ ರೂಪಾಯಿ ನಗದಿನ ಅವಶ್ಯಕತೆ ಬಂದಾಗ ಅವರ ವಕೀಲರು ಡಾಕ್ಟರ್ ಜಿ ಯವರನ್ನು ಸಂಪರ್ಕಿಸಿ ವಿಷಯವನ್ನು ತಿಳಿಸಿದಾಗ,ವಿಷಯ ತಿಳಿದ ಡಾಕ್ಟರ್ ಜಿ ತಮ್ಮ ಸ್ನೇಹಿತರ ಬಳಿಯಲ್ಲಿ ವಿಚಾರಿಸಿ ಹಣವನ್ನು ವ್ಯವಸ್ಥೆಗೊಳಿಸಿದರು.ಇದರಿಂದಾಗಿ ಸಾಲನೀಡಿದ ಸಾಹುಕಾರ ಕೃತಜ್ಞತಾಪೂರ್ವಕವಾಗಿ ಮೋಹೈಟ್ ವಾಡಾ ವನ್ನು ಸಂಘಕ್ಕೆ ಸಮರ್ಪಿಸಿದರು.ಇಲ್ಲಿ ಮತ್ತು ಅಕ್ಕಪಕ್ಕದಲ್ಲಿ ಸಂಘದ ಪ್ರಧಾನ ಕಚೇರಿಯಾದ ಹೆಗ್ಡೆವಾರ್ ಭವನವು ಕಾಣಸಿಗುತ್ತದೆ.

ಹಲವು ತಿಂಗಳುಗಳ ಕಾಲ ಹೆಸರಿಲ್ಲದೆ ನಡೆಯುತ್ತಿದ್ದ ಸಂಘಟನೆಗೊಂದು ಹೆಸರನ್ನು ನಿರ್ಧರಿಸಲು ಏಪ್ರಿಲ್ ೨೬ ೧೯೨೬ ರಂದು ಸಭೆಯನ್ನು ಕರೆಯಲಾಯಿತು.ಜರಿ ಪಾಟ್ಕಾ ಮಂಡಲ್,ಭಾರತ್ ಉದಾರಕ್ ಮಂಡಲ್,ಹಿಂದೂ ಸೇವಾ ಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇತ್ಯಾದಿ ಹೆಸರುಗಳನ್ನು ಸೂಚಿಸಲಾಗಿತ್ತು. ಕೆಲವು ಚರ್ಚೆಯ ಬಳಿಕ ರಾಷ್ಟ್ರೀಯ ಸ್ವಯಂ ಸೇವಕಸಂಘ ಎಂಬ ಹೆಸರನ್ನು ಸ್ವೀಕರಿಸಲಾಯಿತು.

ಎಷ್ಟೇ ಸಣ್ಣದಾಗಿದ್ದರೂ ಸಂಸ್ಥೆಯೊಂದಕ್ಕೆ ಸ್ವಲ್ಪ ಧನವು ಬೇಕಾಗುತ್ತದೆ.ಡಾಕ್ಟರ್ ಜಿ ಸ್ವತಃ ತಮ್ಮ ವಯ್ಯಕ್ತಿಕ ಕೊಡುಗೆಯನ್ನು ನೀಡಿದ ಬಳಿಕ ತಮ್ಮ ಸ್ನೇಹಿತರಿಂದರೂ ಸಂಗ್ರಹಿಸಿ ನೀಡುತ್ತಾರೆ. ಆದರೆ ಇದು ತೃಪ್ತಿಯನ್ನು ನೀಡುವ ವ್ಯವಸ್ಥೆಯಲ್ಲ ಎಂದು ಅವರೆಲ್ಲರೂ ಭಾವಿಸಿದ್ದರು.ಹಣಸಂಗ್ರಣೆಗಾಗಿ ಲಾಟರಿ ಟಿಕೆಟ್ ಗಳನ್ನು ಮಾರುವ,ಟಿಕೆಟ್ ಇತ್ತು ನಾಟಕವನ್ನು ಆಯೋಜಿಸುವ ಹೀಗೆ ಹಲವಾರು ಉಪಾಯಗಳು ಸೂಚಿಸಲ್ಪಟ್ಟರೂ ಅವುಗಳನ್ನೆಲ್ಲ ತಳ್ಳಿ ಹಾಕಲಾಯಿತು. ಇದರಿಂದಾಗಿ ಸದಸ್ಯರೇ ಕೊಡುಗೆ ನೀಡಬಾರದೇಕೆ? ಪ್ರತಿಯೊಬ್ಬರೂ ಎಷ್ಟು ನೀಡಬೇಕು?ಯಾರಿಗೆ ಅರ್ಪಿಸಬೇಕು? ಹೀಗೆ ಹಲವಾರು aalochAneya ಬಳಿಕ..ಎಲ್ಲರೂ ಸ್ವಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಾಚೀನವಾದ ಭಾಗವಾಧ್ವಜಕ್ಕೆ ಅರ್ಪಣೆಯನ್ನು ಅರ್ಪಿಸಲು ನಿರ್ಧರಿಸಿದರು.೧೯೨೮ ರಲ್ಲಿ ನಡೆಸಲಾದ ಮೊದಲ ಗುರುದಕ್ಷಿಣಾ ಸಮಾರಂಭದಲ್ಲಿ ೮೪ ರೂಪಾಯಿಗಳನ್ನು ಸಂಗ್ರಹಿಸಲಾಗಿತ್ತು.

ಸಿಪಿ ಮತ್ತು ಬೇರಾರ್ ಅವರ ದ್ವಿಭಾಷಾ ಸಂಯೋಜನೆಯನ್ನು ಪ್ರತಿಬಿಂಬಿಸುವ ಆರ್ಯ ಸಮಾಜದ ಪ್ರಾರ್ಥನೆಯ ಪ್ರೇರಣೆಯಿಂದ ಅರ್ಧ ಹಿಂದಿ ಮತ್ತು ಅರ್ಧ ಮರಾಠಿ ಪ್ರಾರ್ಥನೆಯನ್ನು ಸಂಘದಲ್ಲಿ ಬಳಸಲಾಗುತ್ತಿತ್ತು.ಆದತೆ ೧೯೩೯ ರ ಬಳಿಕ ಪ್ರಸ್ತುತ ಬಳಸುವ ಸಂಸ್ಕೃತ ಪ್ರಾರ್ಥನೆಯನ್ನು ಬಳಸಲು ಪ್ರಾರಂಭಿಸಲಾಯಿತು.

ಕಾಂಗ್ರೆಸ್ ನ ಕರಾಚಿ ಅಧಿವೇಶನವು ರಾಷ್ಟ್ರೀಯ ಧ್ವಜವನ್ನು ಅಂತಿಮಗೊಳಿಸಲು ಧ್ವಜ ಸಮಿತಿಯನ್ನು ನೇಮಿಸಿತು ಏಕೆಂದರೆ ಅಂದಿನ ದಶಕಗಳಲ್ಲಿ ವಿವಿಧ ತ್ರಿವರ್ಣಗಳನ್ನು ಬಳಸಲಾಗುತ್ತಿತ್ತು. ಸಮಿತಿಯಲ್ಲಿ ಸರ್ದಾರ್ ಪಟೇಲರು ಅಧ್ಯಕ್ಷರಾಗಿದ್ದರು.ಮೌಲಾನಾ ಅಜಾದ್,ಪಂಡಿತ್ ನೆಹರು,ಮಾಸ್ಟರ್ ತಾರಾ ಸಿಂಗ್ ,ಕಾಕಾ ಕೇಲ್ಕರ್,ಡಾ ಹರ್ಡಿಕರ್,ಮತ್ತು ಪಟ್ಟಾಭಿ ಸೀತಾರಾಮಯ್ಯ ಇದ್ದರು. ಸಮಿತಿಯ ಸರ್ವಾನುಮತದ ವರದಿಯೆಂದರೆ “ ರಾಷ್ಟ್ರೀಯ ಧ್ವಜವು ಕೇಸರಿ ಅಥವಾ ಕೇಸರಿ ಬಣ್ಣದ್ದಾಗಿರಬೇಕು,ಅದರ ಮೇಲಿನ ಎಡಭಾಗದಲ್ಲಿ ನೀಲಿ ಬಣ್ಣದ ಚರಕವಿರಬೇಕು ಏಕೆಂದರೆ ಈ ಬಣ್ಣವು ಜಾತ್ಯತೀತ ಮತ್ತು ಪ್ರಾಚೀನ ಭಾರತದ ಸಂಪ್ರದಾಯದಿಂದ ಕೂಡಿದೆ” ಡಾ ಹೆಡ್ಗೆವಾರ್ ದೆಹಲಿ ಮತ್ತು ಬಾಂಬೆಯಲ್ಲಿ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಈ ವರದಿಯನ್ನು ಅಂಗೀಕರಿಸುವಂತೆ ಒತ್ತಾಯಿಸಿದರು.ಆದರೆ ಕೋಮು ಒತ್ತಡದಲ್ಲಿ ಕಾಂಗ್ರೆಸ್ ಈ ಹಳೆಯ ಧ್ವಜವನ್ನು ಮುಂದುವರೆಸಿ ಕೆಂಪು ಪಟ್ಟಿಯ ಬದಲಾಗಿ ಕೇಸರಿ ಬಣ್ಣವನ್ನು ಬಳಸಿ ಅದನ್ನು ಕೆಳಗಿನಿಂದ ಮೇಲಕ್ಕೆ ಬದಲಾಯಿಸಿದರು. ಇದರಿಂದಾಗಿ ಕಾಂಗ್ರೆಸ್ ಭಾರತೀಯ ರಾಷ್ಟ್ರೀಯ ಮೂಲಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ಡಾಕ್ಟರ್ ಜಿ ವಿಷಾದಿಸಿದ್ದರು.ಕಾಂಗ್ರೆಸ್ ಮತ್ತು ಹಿಂದೂ ಮಹಾಸಾಭಾಗಳು ಸಂಘವು ಅವರ್wನ್ನು ಬೆಂಬಲಿಸಬೇಕೆಂದು ಬಯಸುತ್ತಿದ್ದ ಸಂದರ್ಭದಲ್ಲಿ ಡಾಕ್ಟರ್ ಜಿ ಮತ್ತವರ ಸಹ ಕಾರ್ಯಕರ್ತರು ಸ್ವತಂತ್ರವಾಗಿ ಯುವಕರನ್ನು ಪ್ರೇರೇಪಿಸಿ,ಅಮೂಲಾಗ್ರ ಬದಲಾವಣೆಯನ್ನು ತರಲು ಸಂಘಕ್ಕೆ ಸ್ವತಂತ್ರವಾಗಿ ಕೆಲಸ ನಿರ್ಮಿಸುವ ಅವಶ್ಯಕತೆ ಇರುವುದನ್ನು ಮನಗಂಡರು.

೧೯೩೨ ರ ವಿಜಯದಶಮಿ ಸಮಾರಂಭದಲ್ಲಿ ಸುಮಾರು ೧೨೦೦ ಸ್ವಯಂಸೇವಕರು ಸಮವಸ್ತ್ರ ಧರಿಸಿ ಭಾಗವಹಿಸಿದ್ದರು.ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಸಂಘದ ಕಾರ್ಯಕ್ರಮಗಳು ತೃಪ್ತಿಕರವಾಗಿ ಬೆಳೆಯುತ್ತಿತ್ತು. ಹೀಗಾಗಿ ಸಂಘವು ಬ್ರಿಟೀಷರ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ೧೯೩೨ ರ ಡಿಸೆಂಬರ್ ೧೫ ರಂದು ಕೇಂದ್ರ ಪ್ರಾಂತಗಳ ಗವರ್ನರ್ ಸರಕಾರೀ ನೌಕರರು ಸಂಘದ ಶಾಖೆಗಳಿಗೆ ಹಾಜರಾಗುವುದನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿತು. ಮುಂದೆ ಈ ಆದೇಶವನ್ನು ಜಿಲ್ಲಾ ಸ್ಥಳೀಯ ಮಂಡಳಿಯ ನೌಕರರಿಗೂ ಅನ್ವಯಿಸಲಾಯಿತು. ಕೆಲವು ಸಮಯದ ಬಳಿಕ ಹಲವಾರು ಡಿಎಲ್ಬಿ ಗಳು ಇದನ್ನು ಪ್ರತಿಭಟಿಸಿದವು. ೧೯೩೪ ಮಾರ್ಚ್ ೭ ರಂದು ಶಾಸಕರಾದ ಶ್ರೀ ಕೊಲ್ಟ್ ಅವರು ಈ ವಿಷಯದ ಕುರಿತು ವಿಧಾನಸಭೆಯಲ್ಲಿ ಮಂಡಿಸಿದರು.ಆಗ ಸ್ಪೀಕರ್ ಈ ಆದೇಶಗಳನ್ನು ಖಂಡಿಸಿದರು.ಗೃಹ ಸಚಿವ ರಾಘವೇಂದ್ರ ರಾವ್ ಮತ್ತು ಅವರ ಮೂವರು ಇಂಗ್ಲಿಷ್ ಸಹೋದ್ಯೋಗಿಗಳನ್ನು ಹೊರತು ಪಡಿಸು ಮಿಕ್ಕ ಎಲ್ಲರೂ ಸ್ಪೀಕರ್ ಅನ್ನು ಬೆಂಬಲಿಸಿದರು. ಸಂಘದ ಮೇಲೆ ಹೊರಿಸಲಾದ ಕೋಮುವಾದ,ಫ್ಯಾಸಿಸಂ ಮತ್ತು ರಾಜಕೀಯದ ಆರೋಪಗಳನ್ನು ಸ್ವತಃ ಎಸ್ಎಂ ರಹಮಾನ್ ಅಲ್ಲಗೆಳೆದು ೭ ವರ್ಷಗಳ ಸಂಘದ ಅಸ್ತಿತ್ವದಲ್ಲಿ ಯಾವುದೇ ಮುಸ್ಲಿಂ ಸಂಘಟನೆಯು ಸಂಘದ ಬಗ್ಗೆ ಯಾವುದೇ ಆಕ್ಷೇಪಣೆಯನ್ನು ವ್ಯಕ್ತಪಡಿಸಿಲ್ಲ ಎಂದೂ ತಿಳಿಸಿದರು.

ಎರಡು ದಿನಗಳ ಚರ್ಚೆಯ ಬಳಿಕ ಕಟ್ ಮೋಶನ್ ಅನ್ನು ಮತಾಚಾಲಾವಣೆಗೆ ಹಾಕಿದಾಗ ಸರ್ಕಾರವು ಸೋತು ಹೋಗಿತ್ತು ಮತ್ತು ಸಂಘವು ಗೆದ್ದಿತ್ತು. “ ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ” ಎಂಬ ಸಂಘದ ಗೀತೆಯಂತೆ ಇಂದಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸೇವೆಯನ್ನೇ ಯಜ್ಞವನ್ನಾಗಿಸಿಕೊಂಡಿದೆ ಮತ್ತು ಅದರ ಸಾವಿರಾರು ಕಾರ್ಯಕರ್ತರು ಸಮಿಧೆದಂತೆ ಕೆಲಸವನ್ನೂ ಮಾಡುತ್ತಿದ್ದಾರೆ.ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವು ವಿಶ್ವದ ಅತ್ಯಂತ ದೊಡ್ಡ ಸರ್ಕಾರೇತರ ಸೇವಾ ಸಂಘಟನೆಯಾಗಿದೆ. ಎದೆ ಎತ್ತಿ ಹೇಳೋಣ ನಾವೆಲ್ಲಾ ಸ್ವಯಂ ಸೇವಕರೆಂದು….

-Deepashree M

Tags

Related Articles

FOR DAILY ALERTS
Close