ಪ್ರಚಲಿತ

ಸೆಕ್ಯುಲರಿಸಂ ಹೆಸರಿನಲ್ಲಿ ನಿಜವಾಗಿಯೂ ನಡೆಯುತ್ತಿರುವುದು ಅಲ್ಪಸಂಖ್ಯಾತ ಓಲೈಕೆ ಮತ್ತು ಪಕ್ಷಪಾತೀಯ ರಾಜಕಾರಣ ಮಾತ್ರ.. ಹಜ್ ಸಬ್ಸಿಡಿ ಯ ಬಗ್ಗೆ ನಮಗೆಷ್ಟು ಗೊತ್ತು?

ಭಾರತದಲ್ಲಿ ಜಾತ್ಯಾತೀತ ತತ್ವ

೧೯೪೭ ರಲ್ಲಿ ಸ್ವಾತಂತ್ರ ಲಭಿಸುವ ವರ್ಷಗಳಿಗೂ ಮೊದಲಿಂದಲೇ ಗಾಂಧಿ ಮತ್ತು ನೆಹರೂ ಕೃಪಾಪೋಷಿತ ಮಂಡಳಿಯಾದ ಕಾಂಗ್ರೆಸ್ ನ ಮೂಲ ಸಿದ್ಧಾಂತಗಳಲ್ಲಿ ಮುಖ್ಯವಾದದ್ದು ಜಾತ್ಯಾತೀತತೆ ಅಂದರೆ ಸೆಕ್ಯುಲರಿಸಂ.ಜಾತ್ಯತೀತತೆಯೊಂದಿಗೆಯೇ ಇರುವ ಇನ್ನೊಂದು ಮುಖ್ಯ ಅಂಶ ಸಮಾನತೆ..ಮಾತಿನಲ್ಲಿ ಭಾಷಣಗಳಲ್ಲಷ್ಟೇ ಕಾಣಬಹುದಾದ ಈ ಸಮಾನತೆ ಮತ್ತು ಜಾತ್ಯಾತೀತತೆಯ ನಿಜವಾದ ಮುಖವು ಅಲ್ಪಸಂಖ್ಯಾತರ ಅತಿಯಾದ ಓಲೈಕೆ ಮತ್ತು ತುಷ್ಟೀಕರವಾಗಿದೆ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ.ಆದರೆ ಸ್ವಾತಂತ್ರ್ಯ ದೊರಕಿದ ಬಳಿಕ ಈ ಶಬ್ದದ ಅರ್ಥಗಳು ಇನ್ನೂ ಬದಲಾಗಿದೆ.ಅದೀಗ ಸತ್ಯದ ಮರೆಮಾಚುವಿಕೆ ಮತ್ತು ಚಾರಿತ್ರಿಕ ಸತ್ಯಾಂಶಗಳ. ತಿರುಚುವಿಕೆ ..ಇದಕ್ಕೆ ಸ್ಪಷ್ಟವಾದ ಉದಾಹರಣೆಯೆಂದರೆ ಪ್ರತಿವರ್ಷ ನಡೆಯುವ ಹಜ್ ಯಾತ್ರೆ ಮತ್ತು ಸೋಮನಾಥ ದೇವಾಲಯದ ಪುನರ್ನಿರ್ಮಾಣ ಮತ್ತು ಜೀರ್ಣೋದ್ದಾರ.ನಾವು ಜಾತ್ಯತೀತ ಎಂಬ ಅಸತ್ಯದ ದಾರಿಯಲ್ಲಿ ನಾವು ಬಹಳಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದನ್ನು ಎಂಬುದನ್ನು ಪರಾಮರ್ಶಿಸಲು ಇದು ಸಕಾಲವಾಗಿದೆ.

ಸೋಮನಾಥ ದೇವಾಲಯದ ಪುನರ್ ನಿರ್ಮಾಣ

ಅನಾದಿಕಾಲದಿಂದಲೂ ಸೋಮನಾಥ ದೇವಾಲಯವು ಭಾರತೀಯರಿಗೆ ಒಂದು ಪವಿತ್ರಕ್ಷೇತ್ರವಾಗಿದೆ.ಈ ದೇವಾಲಯವು ಒಂದು ಜ್ಯೋತಿರ್ಲಿಂಗ ಕ್ಷೇತ್ರ ಮಾತ್ರವಲ್ಲದೆ ಶ್ರೀಕೃಷ್ಣನು ಇಹಲೋಕ ತ್ಯಜಿಸಿದ ಪ್ರಭಾಸ ಪಾಟಣ ಸ್ಥಳವಿರುವುದು ಸಹ ಇಲ್ಲಿಯೇ ಆಗಿದೆ.ಈ ಕಾರಣದಿಂದಲೇ ಮೊಹಮ್ಮದ್ ಘಜನಿಯಂತಹಾ ಆಕ್ರಮಣಕಾರರೂ,ಔರಂಗಜೇಬ್ ನಂತಹ ಮತಾಂಧ ಮೊಘಲ ಆಡಳಿತಗಾರರೂ ಸೋಮನಾಥ ದೇವಾಲಯವನ್ನು ನಾಶಪಡಿಸುವುದರ ಮೂಲಕ ಸನಾತನ ಹಿಂದೂ ಸಂಸ್ಕೃತಿಯ ಅವಶೇಷಗಳನ್ನು ಭಾರತದಿಂದ ನಿರ್ನಾಮಗೊಳಿಸಲು ಪ್ರಯತ್ನಿಸಿದ್ದು.ಸೋಮನಾಥ ದೇವಾಲಯವು ಸ್ವಾತಂತ್ರಾಪೂರ್ವದಲ್ಲಿ ಜುನಾಗಢ ರಾಜ್ಯದಲ್ಲಿತ್ತು,ಸ್ವಾತಂತ್ರದ ಬಳಿಕ ಕೆಲವೇ ದಿನಗಳಲ್ಲಿ ಭಾರತದ ಸ್ವಾಧೀನಕ್ಕೆ ಬಂದಿತ್ತು,ಜುನಾಗಢ ರಾಜನು ತನ್ನ ದಿವಾನನಾಗಿದ್ದ ಶಾಹನವಾಜ್ ಭುಟ್ಟೋ ಅವರೊಂದಿಗೆ ಪಾಕಿಸ್ತಾನಕ್ಕೆ ಪಲಾಯನಗೈದರು.ಆಗ ಭಾರತದ ಗೃಹಮಂತ್ರಿಯಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ಸೋಮನಾಥ ದೇವಾಲಯದ ಜೀರ್ಣೋದ್ದಾರಕ್ಕೆ ಮುಂದಾದರು.ಈ ಕಾರ್ಯಕ್ಕೆ ಸರಕಾರದ ಬೊಕ್ಕಸದ ಹಣವನ್ನು ಬಳಸದೆ ಖಾಸಗಿ ವಂತಿಗೆಗಳಿಂದಲೇ ಜೀರ್ಣೋದ್ದಾರವನ್ನು ನಡೆಸುವಂತೆ ಗಾಂಧೀಜಿಯವರು ಸಲಹೆ ನೀಡಿದರು! ಅದರಂತೆ ಖಾಸಗಿ ವಂತಿಕೆಗಳಿಂದಲೇ ದೇವಾಲಯದ ಜೀರ್ಣೋದ್ದಾರ ಪೂರ್ಣಗೊಂಡಿತು.

ಜೀರ್ಣೋದ್ದಾರಕ್ಕೆ ಅನುಸರಿಸಿದ ಮಾರ್ಗವು ನೀತಿಯುತವಾಗಿತ್ತಲ್ಲದೆ ನಿಜವಾಗಿಯೂ ಜಾತ್ಯಾತೀತವಾಗಿತ್ತು.ಆದರೂ ಇದು ಅಂದಿನ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರಿಗೆ ಹಿತವಾಗಲಿಲ್ಲ.ಸರಕಾರೀ ಹಣವನ್ನು ಬಳಸದೆ, ಮಂತ್ರಿಮಂಡಲದ ಒಪ್ಪಿಗೆಯೊಂದಿಗೆ ನಡೆದ ಜೀರ್ಣೋದ್ದಾರ ಕಾರ್ಯವನ್ನೂ ನೆಹರೂ ವಿರೋಧಿಸಿದರು.ಜೀರ್ಣೋದ್ದಾರ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಕೆ.ಎಂ.ಮುನ್ಶಿ ಅವರು ತಮ್ಮ ಬರಹದಲ್ಲಿ ಹೀಗೆ ಹೇಳಿದ್ದಾರೆ “ ನೆಹರೂ ಅವರ ಮಂತ್ರಿಮಂಡಲದ ನಿರ್ಧಾರಕ್ಕೆ ಅನುಗುಣವಾಗಿಯೇ ಜೀರ್ಣೋದ್ದಾರದ ಪ್ರತಿಯೊಂದು ಕೆಲಸವೂ ಸಾಗುತ್ತಿರುವುದಾಗಿ ನನ್ನ ಪ್ರತಿಯೊಂದು ದೀರ್ಘವಾದ ಪತ್ರದಲ್ಲಿ ಸ್ಪಷ್ಟಪಡಿಸುತ್ತಿದ್ದರೂ,ಜವಾಹರ್ಲಾಲ್ ನೆಹರೂ ಪದೇ ಪದೇ ನನ್ನನ್ನು ಈ ಕೆಲಸದ ವಿಷಯದಲ್ಲಿ ಟೀಕಿಸುತ್ತಿದ್ದರು”. ಜೀರ್ಣೋದ್ದಾರದ ಕೆಲಸವೂ ಪೂರ್ಣಗೊಳ್ಳುವುದಕ್ಕೂ ಮೊದಲೇ ಸರ್ದಾರ್ ಪಟೇಲರು ನಿಧನರಾದುದರಿಂದ,ಜೀರ್ಣೋದ್ದಾರ ಹೊಂದಿದ ದೇವಾಲಯದ ಉಧ್ಘಾಟನೆಗೆ ಮುನ್ಷಿಯವರು ಆಗಿನ ರಾಷ್ಟ್ರಪತಿಗಳಾದ ಡಾ ರಾಜೇಂದ್ರ ಪ್ರಜ್ಡ್ ಅವರನ್ನು ಆಹ್ವಾನಿಸಿದರು.ನೆಹರು ಅವರಿಂದ ಈ ಕಾರ್ಯಕ್ರಮಕ್ಕೆಅಡೆತಡೆಯನ್ನು ನಿರೀಕ್ಷಿಸಿದ್ದ ಮುನ್ಷಿಯವರು ರಾಷ್ಟ್ರಪತಿಯವರನ್ನು ಆಮಂತ್ರಿಸಿದ್ದರಲ್ಲದೆ,ಅವರು ತಮ್ಮ ಮಾತಿಗೆ ಬದ್ಧರಾಗಿಯೇ ಉಳಿಯುವಂತೆ ಆಗ್ರಹಿಸಿದರು.ಇದರ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. “ ನನ್ನ ಅಶುಭಸೂಚಕ ಭವಿಷ್ಯವು ನಿಜವಾಗಿತ್ತು!ರಾಜೇಂದ್ರಪ್ರಸಾದರು ಸೋಮನಾಥ ದೇವಾಲಯವನ್ನು ಉದ್ಘಾಟಿಸುವರೆಂದು ಪ್ರಕಟವಾದಾಗ,ರಾಷ್ಟ್ರಪತಿಗಳು ಸೋಮನಾಥ ದೇವಾಲಯಕ್ಕೆ ಹೋಗುವುದನ್ನು ನೆಹರು ರೋಷಾವೇಶದಿಂದ ವಿರೋಧಿಸಿದ್ದರು.ಆದರೆ ಅದಕ್ಕೆ ಗಮನವೀಯದ ರಾಜೇಂದ್ರ ಪ್ರಸಾದರು ತಾವು ನೀಡಿದ ಮಾತಿನಂತೆ ನಡೆದುಕೊಂಡರು”

ಸಂಪೂರ್ಣ ಖಾಸಗಿ ವಂತಿಕೆಯಿಂದಲೇ ಜೀರ್ಣೋದ್ದಾರಗೊಂಡ ಸೋಮನಾಥ ದೇವಾಲಯದ ಉದ್ಘಾಟನೆಯಲ್ಲಿ ರಾಷ್ಟ್ರಪತಿಗಳು ಭಾಗವಹಿಸುವುದನ್ನು ಖಂಡತುಂಡವಾಗಿ ವಿರೋಧಿಸಿದ್ದ ಸೆಕ್ಯುಲರ್ ನೆಹರೂ ಮುಂದೆ ೧೯೫೬ ರಲ್ಲಿ ‘ ಹಜ್ ಮಸೂದೆಯನ್ನು’ ಮಂಡಿಸಿ ಮೆಕ್ಕಾಯಾತ್ರೆ ಕೈಗೊಳ್ಳುವ ಮುಸ್ಲಿಂ ಯಾತ್ರಿಕರಿಗೆ ವಿಶೇಷ ಸವಲತ್ತು ಮತ್ತು ಸತ್ಕಾರಗಳನ್ನೂ ನೀಡುವ ಏರ್ಪಾಡು ಮಾಡಿದ್ದರು.

ಜಾತ್ಯತೀತತೆಯ ನೈಜ ಮುಖ

ನೆಹರೂ ಅಂದು ಬಿತ್ತಿದ್ದ ಬೀಜವೀಗ ರಾಕ್ಷಸಾಕಾರದಲ್ಲಿ ಬೆಳೆದು ಸರಕಾರದ ಬೊಕ್ಕಸದಿಂದ ಒಂದೇ ವರ್ಷದಲ್ಲಿ ಸುಮಾರು 406 ಕೋಟಿ ರೂಪಾಯಿಗಳನ್ನು ಕಬಳಿಸಿದೆ.ಈ ಲೆಕ್ಕಾಚಾರದಲ್ಲಿ ಸರಕಾರೀ ಒಡೆತನ ಹೊಂದಿರುವ ವಿಮಾನಯಾನ ಸಂಸ್ಥೆ ‘ ಏರ್ ಇಂಡಿಯಾ’ ಹಜ್ ಯಾತ್ರೆಯ ಸಮಯದಲ್ಲಿ ಹೊಂದುವ ನಷ್ಟದ ಲೆಕ್ಕಾಚಾರವನ್ನು ಸೇರಿಸಲಾಗಿಲ್ಲ! ರಜಾ ಸಮಯದಲ್ಲಿ ಯುರೋಪ್ ಮತ್ತು ಇತರ ಮಾರ್ಗಗಳ ಹಾರಾಟವನ್ನು ನಿಲ್ಲಿಸಿ ತನ್ನ ವಿಮಾನಗಳನ್ನು ಭಾರತ ಮತ್ತು ಮೆಕ್ಕಾದ ಮಧ್ಯೆ ಹಾರಿಸುವುದರಿಂದ ಏರ್ ಇಂಡಿಯಾ ಬಹಳಷ್ಟು ನಷ್ಟವನ್ನು ಅನುಭವುಸುತ್ತಿರುವುದು ಸುಳ್ಳಲ್ಲ.ಹಜ್ ಯಾತ್ರೆಗೆ ಕೇಂದ್ರ ಸರಕಾರ ಮಾತ್ರವಲ್ಲದೆ ರಾಜ್ಯಸರ್ಕಾರಗಳೂ ಮುಂಬೈ ಬೆಂಗಳೂರುಗಳಂತಹಾ ಮಹಾನಗರಗಳಲ್ಲಿ ತೆರಿಗೆದಾರರ ಹಣದಲ್ಲಿ ಹಜ್ ಕೇಂದ್ರಗಳನ್ನು ನಡೆಸುತ್ತವೆ.ಇಷ್ಟು ಮಾತ್ರವಲ್ಲದೆ ಅಂಡಮಾನ್ ಮತ್ತಿತರ ಸಣ್ಣ ದ್ವೀಪಗಳಿಗೆ ದೇಶದೊಂದಿಗೆ ಸಂಪರ್ಕವಿರಿಸಲು ಅಕ್ಬರ್ ಮತ್ತು ನಾನ್ಯಾಕೋವರಿ ಎಂಬ ಎರಡು ಹಡಗುಗಳನ್ನು ಕೂಡಾ ಬಿಟ್ಟಿಲ್ಲದ ಕಾಂಗ್ರೆಸ್ ಅದರಲ್ಲಿ ಅಕ್ಬರ್ ಎಂಬ ಹಡಗನ್ನು ಕೂಡಾ ಹಜ್ ಸಮಯದಲ್ಲಿ ಹಜ್ ಯಾತ್ರಿಕರಿಗಾಗಿ ಬಳಸಲಾಗುತ್ತದೆ.

-Deepashree M

Tags

Related Articles

FOR DAILY ALERTS
Close