ದೇಶಪ್ರಚಲಿತರಾಜ್ಯ

ತನ್ನಷ್ಟಕ್ಕೆ ತಾನೇ ಚಲಿಸುವ ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಸ್ವಯಂ ಭೂ ಶಿವಲಿಂಗದ ಬಗ್ಗೆ ನಿಮಗೆಷ್ಟು ಗೊತ್ತು?!

ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವತೆಗಳನ್ನು ಆರಾಧಿಸುವ ನಾವು ಮಹಾದೇವ, ನೀಲಕಂಠ, ಭೋಲೇನಾಥ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿವನನ್ನು ಬಹಳ ಶ್ರದ್ಧಾಪೂರ್ವಕವಾಗಿ ಪೂಜಿಸುತ್ತೇವೆ!! ಆದರೆ ಲಿಂಗಾರೂಪಿಯಾಗಿ ಆರಾಧಿಸುವ ಶಿವನೇ ಚಲಿಸುತ್ತಾನೆಂದರೆ ಅದಕ್ಕಿಂತ ದೊಡ್ಡ ವಿಚಿತ್ರ ಮತ್ತೊಂದಿಲ್ಲ!! ಅಷ್ಟಕ್ಕೂ ಎರಡು ಸಾವಿರ ವರ್ಷಗಳಷ್ಟು ಹಳೆಯಾದಾದ ಈ ಶಿವಲಿಂಗ ತನ್ನಷ್ಟಕ್ಕೆ ತಾನೇ ಚಲಿಸುತ್ತೇ ಎಂದರೆ ಒಂದು ಕ್ಷಣ ಮೈ ಚುಮ್ ಎನ್ನುತ್ತೆ!!

ಕರಣಾಮಯಿಯಾಗಿರುವ ಕರುಣಾಕರನನ್ನು ಲಿಂಗರೂಪಿಯಾಗಿ ಆರಾಧಿಸುವ ಸಹಸ್ರರಾರು ಸಂಖ್ಯೆಯ ಭಕ್ತರು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಅದೆಷ್ಟೋ ಕಡೆಗಳಲ್ಲಿ ನೆಲೆಸಿದ್ದಾರೋ ನಾ ಕಾಣೆ!! ಆದರೆ, ವಿಶ್ವದ ನಾನಾ ಕಡೆಗಳಲ್ಲಿ ಶಿವನ ದೇವಾಲಯಗಳು ರಾರಾಜಿಸುತ್ತಿದ್ದು, ಸಾವಿರಾರು ವರ್ಷಗಳ ಇತಿಹಾಸದೊಂದಿಗೆ ಚರಿತ್ರೆಗಳನ್ನೂ ಒಳಗೊಂಡಿದೆ!!

ಆದರೆ ಪ್ರಪಂಚದಲ್ಲಿ ನಡೆಯುವ ಅದೆಷ್ಟೋ ವಿಚಿತ್ರಗಳು ಒಂದು ಕ್ಷಣ ನಮ್ಮ ಕಣ್ಣು ತೆರೆಸುತ್ತವೆ. ಅಷ್ಟೇ ಅಲ್ಲದೇ, ಈ ವಿಚಿತ್ರಗಳು ನಡೆಯುವ ಸ್ಥಳಕ್ಕೆ ಬೇಟಿ ನೀಡಿ ಅದನ್ನೂ ಪರೀಕ್ಷಿಸಲೂ ಮುಂದಾಗುತ್ತೇವೆ ಕೂಡ!!! ಆದರೆ ಆ ದೇವರೇ ಪ್ರತ್ಯಕ್ಷವಾಗಿ ವಿಚಿತ್ರವನ್ನು ತೋರಿಸಿದರೆ ನಿಜವಾಗಿಯೂ ಅದು ಅದ್ಭುತ!! ಅಂತಹ ಅದ್ಭುತವನ್ನು ನೋಡುವ ಅದೃಷ್ಟವನ್ನು ಶಿವ ಅದೆಷ್ಟು ಮಂದಿಗೆ ಕಲ್ಪಿಸುವನೋ ಅದು ತಿಳಿಯದು. ಆದರೆ ಅದನ್ನು ಕಾಣುವ ಪ್ರತಿಯೊಂದು ಜೀವಿಯೂ ಅದೃಷ್ಟವಂತನೆಂದೇ ಹೇಳಬಹುದು.

ದೇವರು ಇದ್ದಾನೆಯೇ ಅಥವಾ ಇಲ್ಲವೋ ಎಂಬ ಗೊಂದಲ ಇರುವವರಿಗೆ, ದೇವರು ಇಲ್ಲ ಎಂದು ವಾದಿಸುವವರ ಕಣ್ಣು ತೆರೆಸಬೇಕು ಎಂದು ಆ ಭಗವಂತನು ನಮಗೆ ಇಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾನೋ ಏನೋ ಗೊತ್ತಿಲ್ಲ!!. ಆದರೆ ನಾವು ಅದೆಷ್ಟೋ ಶಿವಲಿಂಗಗಳ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ನಡೆದಾಡುವ ಶಿವಲಿಂಗದ ಬಗ್ಗೆ ತಿಳಿದರೆ ಮಾತ್ರ ಒಂದು ಕ್ಷಣ ಅಚ್ಚರಿಯಾಗುತ್ತೇ!! ಯಾಕೆಂದರೆ ತನ್ನಷ್ಟಕ್ಕೇ ತಾನೇ ಶಿವಲಿಂಗ ಅಲುಗಾಡುತ್ತೇ ಎಂದರೆ ಅದು ನಿಜಕ್ಕೂ ನಂಬಲಸಾಧ್ಯ!! ಅಷ್ಟಕ್ಕೂ ಈ ಪುಣ್ಯಕ್ಷೇತ್ರ ಇರುವುದಾದರೂ ಎಲ್ಲಿ ಗೊತ್ತೇ?

ಅದು ಬೇರೆಲ್ಲೂ ಅಲ್ಲ!! ಯೋಗಿ ಆದಿತ್ಯನಾಥರ ರಾಜ್ಯ ಉತ್ತರ ಪ್ರದೇಶದಲ್ಲಿ!! ಹೌದು… ಉತ್ತರಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಾಪುರ ಎನ್ನುವ ಪುಟ್ಟ ಊರಿನಲ್ಲಿದೆ ಈ ಚಲಿಸುವ ಶಿವಲಿಂಗದ ದೇವಾಲಯ. ಅದುವೇ… ದುಗದೇಶ್ವರನಾಥ ಎನ್ನುವ ಹೆಸರಿನಿಂದ ಕರೆಯಲ್ಪಡುವ ಪುರಾತನವಾದ ದೇವಾಲಯ!! ಈ ಶಿವಲಿಂಗದ ಮಧ್ಯಭಾಗದಲ್ಲಿರುವ ಜ್ಯೋತಿರ್ಲಿಂಗಕ್ಕೆ ಉಪಲಿಂಗವೆಂದು ಕರೆಯಲಾಗುತ್ತದೆ.. ಸಾಧಾರಣವಾಗಿ ಎಲ್ಲ ಶಿವಾಲಯಗಳಲ್ಲಿ ಇರುವ ಶಿವಲಿಂಗದಂತೆ ಈ ಶಿವಲಿಂಗವು ಪಾಣವಟ್ಟುವಿನ ಮೇಲೆ ಇಲ್ಲ!! ಬದಲಾಗಿ ಈ ಲಿಂಗವು ಸರಾಸರಿ ಭೂಮಿಯ ಮೇಲೆಯೇ ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿದೆ.

ಹೌದು… ಅಲ್ಲಿನ ಪೂಜಾರಿಗಳು ಮತ್ತು ಭಕ್ತರು ಹೇಳುವ ಪ್ರಕಾರ, “ಇದು ಸ್ವಯಂಭೂ ಶಿವಲಿಂಗವಾಗಿದೆ. ಈ ಶಿವಲಿಂಗ ಭೂಮಿಯ ಮೇಲೆ ಉದ್ಭವಿಸಿದ್ದು, ಭೂಮಿಯ ಸಹಸ್ರಾರು ಅಡಿ ಆಳದವರೆಗೂ ವಿಸ್ತರಿಸಿದೆ. ಅಷ್ಟೇ ಅಲ್ಲದೇ, ಈ ಒಂದು ವಿಚಾರವೂ ಇಲ್ಲಿಯವರೆಗೆ ಯಾರಿಗೂ ಕೂಡ ತಿಳಿಯದೇ ಇರುವ ವಿಚಾರವಾಗಿದ್ದು, ಇದೇ ಸ್ವಯಂಭೂ ಲಿಂಗ ಎಂಬುವುದಕ್ಕೆ ಸಾಕ್ಷಿ” ಎಂದು ಹೇಳುತ್ತಾರೆ.

ಈ ಶಿವಲಿಂಗವು ಅದೆಷ್ಟು ಆಳದವರೆಗೆ ಇದೆ ಎಂದು ತಿಳಿಯಲು ಆ ಲಿಂಗದ ಪಕ್ಕದಿಂದ ಒಂದು ಗುಂಡಿ ತೋಡಿ ಪರೀಕ್ಷಿಸಲಾಗಿದ್ದು, ಆದರೆ ಈ ಲಿಂಗದ ಆಳದ ಬಗ್ಗೆ ತಿಳಿದುಕೊಳ್ಳುವಲ್ಲಿ ಮಾತ್ರ ವಿಫಲರಾಗಿದ್ದಾರೆ. ಹಾಗಾಗಿ ಶಿವಲಿಂಗದ ಪಕ್ಕದಲ್ಲಿ ಎಷ್ಟೇ ಆಳವಾಗಿ ಗುಂಡಿ ತೋಡಿದರೂ ಕೂಡ ಅದರ ಪತ್ತೇಯೇ ಸಿಗದಿದ್ದು, ಗುಂಡಿತೋಡುವ ಕೆಲಸವನ್ನು ಅಲ್ಲಿಗೆ ನಿಲ್ಲಿಸಲಾಗಿದೆ ಎನ್ನುವುದನ್ನು ಹೇಳಿದ್ದಾರೆ. ಆದರೆ ಆ ದೇವಾಲಯದ ಸ್ಥಳ ಪುರಾಣದ ಪ್ರಕಾರ, ಈ ಶಿವಲಿಂಗ ಇಲ್ಲಿಯೇ ನೆಲೆಸಿ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ ಎಂದು ತಿಳಿದು ಬಂದಿದೆ!!

ಇನ್ನು, ಈ ಶಿವನ ದೇಗುಲದಲ್ಲಿರುವ ಪ್ರಧಾನವಾದ ವಿಚಿತ್ರವೇ ಅಲ್ಲಿರುವ ಆ ಲಿಂಗದ ಕದಲಿಕೆ!! ಈ ಶಿವಲಿಂಗ ಒಂದು ಬಾರಿ ಅಲುಗಾಡಲು ಪ್ರಾರಂಭಿಸಿದರೆ ಒಮ್ಮೊಮ್ಮೆ ಗಂಟೆಗಟ್ಟಲೆ ಅಲ್ಲಡುತ್ತಲೇ ಇರುತ್ತದೆ. ಒಂದೊಮ್ಮೆ, ನಿರಂತರವಾಗಿ ಇಪ್ಪತ್ತನಾಲ್ಕು ಗಂಟೆಗಳವರೆಗೆ ಈ ಶಿವಲಿಂಗವು ಕದಲುತ್ತಲೇ ಇರುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ, ಈ ಲಿಂಗವು ಅಲುಗಾಡುವುದು ನಿಂತರೆ ಎಷ್ಟೇ ಜನ ಬಂದು ಕದಲಿಸಿದರೂ ಕೂಡ ಸ್ವಲ್ಪವೂ ಅಲ್ಲಾಡುವುದೇ ಇಲ್ಲ!! ಈ ವಿಚಿತ್ರವನ್ನು ನೋಡಲು ಉತ್ತರಪ್ರದೇಶದಿಂದ ಅಷ್ಟೇ ಅಲ್ಲದೇ ದೂರದ ಹಲವಾರು ಪ್ರಾಂತ್ಯಗಳಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.

ರುದ್ರಪುರದಲ್ಲಿ ಎಷ್ಟೇ ಕೋಟೆಗಳು, ರಾಜಭವನಗಳು ಇದ್ದರೂ ಕೂಡ ಶ್ರೀ ದುಗದೇಶ್ವರನಾಥನ ದೇವಾಲಯವೇ ಪ್ರಧಾನ ಆಕರ್ಷಣೆಯಾಗಿದೆಯಲ್ಲದೇ ಕೇಂದ್ರ ಬಿಂದುವಾಗಿ ರಾರಾಜಿಸುತ್ತಿದೆ. ಆದರೆ ಈ ಶಿವಲಿಂಗ ಯಾವ ಕಾರಣಕ್ಕಾಗಿ ಅಲುಗಾಡುತ್ತಿದೆ, ಯಾಕೆ ಅಲುಗಾಡುತ್ತಿದೆ ಎನ್ನುವುದು ಇಲ್ಲಿವರೆಗೂ ಒಂದು ವಿಚಿತ್ರವಾಗಿಯೇ ಉಳಿದುಹೋಗಿದೆ.

ಇದರ ಬಗ್ಗೆ ಹಲವಾರು ಮಂದಿ ಸಂಶೋಧನೆ ನಡೆಸಿದರೂ ಕೂಡ ಇದರ ಮರ್ಮವನ್ನು ತಿಳಿಯಲಾಗಲಿಲ್ಲ. ಒಂದು ವೇಳೆ ಇದು ಕದಲುತ್ತಿರುವುದು ನಿಂತರೆ ಯಾರು ಎಷ್ಟೇ ಪ್ರಯತ್ನ ಪಟ್ಟರೂ ಒಂದಿಂಚೂ ಕದಲಿಸಲಾಗುವುದಿಲ್ಲ ಎಂದರೆ ಇದಕ್ಕಿಂತ ದೊಡ್ಡ ವಿಚಿತ್ರ ಮತ್ತೊಂದಿಲ್ಲ!! ಅಷ್ಟೇ ಅಲ್ಲದೇ, ದೈವೀ ಶಕ್ತಿಯನ್ನು ಮೀರಿಸಿದ ಶಕ್ತಿ ಮತ್ತೊಂದಿಲ್ಲ ಎನ್ನುವಂತೆ, ಪರಮಾತ್ಮ ಯಾವ ರೀತಿ ಆಡಿಸುತ್ತಾನೋ ಹಾಗೇ ನಾವು ಆಡುತ್ತೇವೆ. ಆತನ ಪ್ರೇರಣೆ ಇಲ್ಲದೆ, ಒಂದು ಹುಲುಕಡ್ಡಿಯೂ ಅಲ್ಲಾಡುವುದಿಲ್ಲ. ಹಾಗಾಗಿ ಈ ಶಿವಲಿಂಗ ಅಲ್ಲಾಡುತ್ತೇ ಎಂದರೆ ಶಿವನ ಪ್ರೇರಣೆಯಿಂದಲೇ ಎಂದರೆ ಅದು ತಪ್ಪಾಗಲಾರದು!!

ಕೃಪೆ: ಅರಳಿ ಕಟ್ಟೆ

– ಅಲೋಖಾ

Tags

Related Articles

Close