ಪ್ರಚಲಿತ

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

ಅಧ್ಯಾಯ 16: “ದೊಡ್ಡದೊಂದು ಮರ ಬಿದ್ದಾಗ, ಅದರ ಸುತ್ತಲಿನ ಭೂಮಿ ಕಂಪಿಸುವುದು ಸಹಜ”

ಹೌದು.ಇಂದಿರಾಗಾಂಧಿಯವರ ಹತ್ಯೆಯ ಬಳಿಕ ಸಾವಿರಾರು ಸಿಖ್ಖರ ಹತ್ಯೆಯ ಕುರಿತಾಗಿ ಈ ಪ್ರತಿಕ್ರಿಯೆ ನೀಡಿದವರು ಬೇರಾರೂ ಅಲ್ಲ. ಭಾರತದ ಪ್ರಧಾನಮಂತ್ರಿ!

ರಾಜೀವ್ ಗಾಂಧಿಯವರು ಇಂತಹ ದುರಂತ ಘಟನೆ ‌ನಡೆದಾಗ ಕೊಟ್ಟ ಬೇಜವಾಬ್ದಾರಿ ಹೇಳಿಕೆ ” ದೊಡ್ಡದೊಂದು ಮರ ಬಿದ್ದಾಗ, ಅದರ ಸುತ್ತಲಿನ ಭೂಮಿ ಕಂಪಿಸುವುದು ಸಹಜ”

ಆದರೆ ಅವರ ಪಕ್ಷದ ನಾಯಕರು ಈ ದೊಂಬಿಗೆ ಆರ್‌ಎಸ್‌ಎಸ್ ಕಾರಣ ಎಂದು ಆರೋಪ‌ ಮಾಡಿದರು.ಆದರೆ ನಿಜವಾಗಿ ಅವರ ಪಕ್ಷದ ನಾಯಕರೇ ಈ ಗಲಭೆಗಳ ಹಿಂದಿತ್ತು ಮತ್ತು ಆರ್‌ಎಸ್‌ಎಸ್ ನೂರಾರು ಕುಟುಂಬಗಳ ರಕ್ಷಣಾ ಕಾರ್ಯ ಮಾಡಿತ್ತು.

1984ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಕ ಮೂರು ಸಾವಿರಕ್ಕೂ ಅಧಿಕ ಸಿಖ್ಖರ ಮಾರಣಹೋಮ ನಡೆಯಿತು.

ತನ್ನ ಅಂತಿಮ ವಾದದಲ್ಲಿ ಸಿ‌ಬಿಐ ಪರ ವಕೀಲ ಆರ್‌ಎಸ್ ಚೀಮಾ ಕೋರ್ಟ್‌ಗೆ ತಿಳಿಸಿದ ಹಾಗೆ ಈ ಗಲಭೆಗಳು ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಂಡಿತ್ತು. ಮತ್ತು ಈ ಗಲಭೆಗಳ ಹಿಂದೆ ಕಾಂಗ್ರೆಸ್ ಸರಕಾರ ಮತ್ತು ಪೋಲಿಸರ ಪಾತ್ರವೂ ಇತ್ತು.

” ಇದರ ಹಿಂದೆ ಸ್ಥಳೀಯ ಸಂಸದ ಸಜ್ಜನ್ ಕುಮಾರ್ ಮತ್ತು ಪೋಲಿಸರ ಪಾತ್ರವಿದೆ” ವಕೀಲ ಆರ್‌ಎಸ್‌ ಚೀಮಾ , ನ್ಯಾಯಾಧೀಶ ಜೆ‌ಆರ್‌ ಆರ್ಯನ್ ಅವರಿಗೆ ತಿಳಿಸಿದ್ದರು.

ವಕೀಲ ಚೀಮಾ ಹೇಳಿದಂತೆ ,ಪ್ರತ್ಯಕ್ಷ ಸಾಕ್ಷಿಗಳು ಸಂಸದ ಸಜ್ಜನ್ ಕುಮಾರ್ ಗುಂಪೊಂದಕ್ಕೆ ” ಒಬ್ಬ ಸಿಖ್ಖನೂ ಉಳಿಯಬಾರದು” ಎಂದು ನಿರ್ದೇಶ ಕೊಟ್ಟಿದ್ದರು.

ಸಿಖ್ಖರ ಮೇಲೆ ಭಯಂಕರ ದಾಳಿ ಆರಂಭವಾಗಿತ್ತು.

ಸಿಖ್ ಬುದ್ಧಿಜೀವಿ ಹಾಗೂ ಲೇಖಕ ‘ಖುಷವಂತ್ ಸಿಂಗ್’ ತಮ್ಮ ಪುಸ್ತಕ ‘ ಎ ಹಿಸ್ಟರಿ ಆಫ್ ದ ಸಿಖ್ಸ್’ ನಲ್ಲಿ ನೆನಪಿಸಿಕೊಂಡಂತೆ ,ಈ ಗಲಭೆಗಳ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಸ್ವಯಂ ಸೇವಕರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ದಾಳಿಗೆ ಒಳಗಾದ ಸಿಖ್ಖರ ರಕ್ಷಣಾಕಾರ್ಯ ಕೈಗೊಂಡರು.

ಅವರು ಬರೆಯುತ್ತಾರೆ,

” ಆರ್‌ಎಸ್‌ಎಸ್ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ಹಿಂದೂ ಮತ್ತು ಸಿಖ್ಖರ ನಡುವಿನ ಬಾಂಧವ್ಯ ಉಳಿಯಲು ಉತ್ತಮ ಕೆಲಸ ಮಾಡಿತು.ಮೂರು ಸಾವಿರಕ್ಕೂ ಅಧಿಕ ಸಿಖ್ಖರ ಕೊಲೆ ಮತ್ತು ಗಲಭೆಗಳಿಗೆ ಕಾಂಗ್ರೆಸ್ ನಾಯಕರ ಪ್ರಚೋದನೆಯೇ ಕಾರಣ. ಇಂತಹ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮಾಡಿದ ಕೆಲಸ ಶ್ಲಾಘನೀಯ. ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರೇ ಒಂದೆರಡು ಸ್ಥಳಗಳಲ್ಲಿ ಟಾಕ್ಸಿ ಚಾಲಕರಿಗೆ ಸಹಾಯ ಮಾಡಿದರು”

ಇದು ಸತ್ಯ ಆಗಿರುವಾಗ ಯಾಕೆ ಕೆಲವು ಕಾಂಗ್ರೆಸ್ ನಾಯಕರು 1984ರ ಗಲಭೆಗೆ ಆರ್‌ಎಸ್‌ಎಸ್‌ ನ್ನು ದೋಷಿಯನ್ನಾಗಿ ಆರೋಪ ಮಾಡುತ್ತಿದ್ದಾರೆ?

ಗಲಭೆಯ ಸಂದರ್ಭದಲ್ಲಿ ನೂರಾರು ಕುಟುಂಬಗಳ ರಕ್ಷಣೆ ಮಾಡಿ,ಅವರಿಗೆ ಸೂರು,ನೆಲೆ ,ಆಹಾರ ತಮ್ಮ ಮನೆ ಕಳಕೊಂಡವರಿಗೆ ಕ್ಯಾಂಪ್‌ಗಳ ನಿರ್ಮಿಸುವುದಕ್ಕೆ ಬದಲಾಗಿ ಖಲಿಸ್ತಾನದ ಭಯೋತ್ಪಾದಕರು ಆರ್‌ಎಸ್‌ಎಸ್‌ ಸ್ವಯಂಸೇವಕರನ್ನು ಗುರಿ ಮಾಡಿಕೊಂಡು ಹಿಂದೂಗಳನ್ನು ಕೆರಳಿಸುವ ಕೆಲಸ ಮಾಡಿದರು.

ಮೋಘಾ ಮಾರಣಹೋಮ

26 ಮಂಷಿ ಆರ್‌ಎಸ್‌ಎಸ್ ಸ್ವಯಂ ಸೇವಕರು ನೆಹರೂ ಪಾರ್ಕಿನಲ್ಲಿ ತಮ್ಮ ನಿತ್ಯದ ಶಾಖಾಭ್ಯಾಸ ನಡೆಸುತ್ತಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಖಲಿಸ್ತಾನೀ ಭಯೋತ್ಪಾದಕರ ಗುಂಡಿನ ದಾಳಿಗೆ ಸಿಲುಕಿಕೊಂಡರು.

ಅವರ ಮೇಲೆ ಬಾಂಬ್ ಕೂಡ ಎಸೆಯಲಾಯಿತು.ಇದರಿಂದ ಪಾರ್ಕ್‌ನಲ್ಲಿದ್ದ ಮೂವತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾದವು.

ಇದೆಲ್ಲ ನಡೆದರೂ ಸ್ವಯಂಸೇವಕರ ಕುಟುಂಬಗಳು ವಿಚಲಿತರಾಗಲಿಲ್ಲ. ಆರ್‌ಎಸ್ಎಸ್ ಸಹ ಕಾರ್ಯವಾಹಕ‌ ಎಚ್ ವಿ ಶೇಷಾದ್ರಿ ಸಂಯಮ ಕಳೆದುಕೊಳ್ಳದಿರುವಂತೆ ಕರೆ ನೀಡಿದರು.

ಎಡಪಂಥೀಯರು ಯಾವುದಾದರೂ ಐತಿಹಾಸಿಕ ಘಟನೆಗಳ ಉಲ್ಲೇಖಿಸಿ ಮಾತನಾಡುವುದಾದರೆ ಅವರು ಹೇಳುತ್ತಿರುವುದು ದುರುದ್ದೇಶಪೂರಿತ ಅರ್ಧ ಸತ್ಯ ಮಾತ್ರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

1999 ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ದಕ್ಷಿಣ ದಿಲ್ಲಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದವರು 1984ರ ಸಿಖ್ಖರ ಮಾರಣಹೋಮಕ್ಕೆ ಆರ್‌ಎಸ್‌ಎಸ್ ಕಾರಣ ಎಂಬ ಹೇಳಿಕೆ ಕೊಟ್ಟರು. ಡಾ ಮನಮೋಹನ್ ಸಿಂಗ್ ಅವರ ಪ್ರಕಾರ 1984ರ ಸಿಖ್ಖರ ಮಾರಣಹೋಮದಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಅದರ ಹಿಂದಿರುವುದು ಆರ್‌ಎಸ್‌ಎಸ್‌ ಎಂಬುದಾಗಿತ್ತು.

ತಮ್ಮ ಈ ಮಾತುಗಳ ಸಮರ್ಥನೆಗೆ ಅವರು 1984ರ ತಾನೊಬ್ಬ ಸಿಖ್ ಆಗಿದ್ದರೂ ಸರಕಾರ ತಮಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿತು ಎಂದು ಹೇಳಿಕೊಂಡರು. ತಮ್ಮ ಸರಕಾರ ಇಂತಹ ಗಲಭೆಗಳಲ್ಲಿ ಪಾಲ್ಗೊಂಡಿದೆ ಎಂಬ ಮಾಹಿತಿ ಸತ್ಯವಾಗಿದ್ದರೆ ತಾನು ಆ ಪ್ರಶಸ್ತಿ ಸ್ವೀಕರಿಸುತ್ತಿರಲಿಲ್ಲ
ಎಂದೂ, ಆ ಗಲಭೆಗಳಲ್ಲಿ ಹಲವಾರು ಪೋಲಿಸ್ ಸ್ಟೇಷನ್‌ಗಳಲ್ಲಿ ಆರ್‌ಎಸ್‌ಎಸ್ ನಾಯಕರ ವಿರುದ್ಧ ಎಫ್‌ಐ‌ಆರ್ ದಾಖಲಾಗಿದೆ ಎಂದರು‌.

ತಮ್ಮ ಈ ಹೇಳಿಕೆಗೆ ವ್ಯತಿರಿಕ್ತವಾಗಿ ಮತ್ತೊಂದು ವರದಿಯಂತೆ 2003ರಲ್ಲಿ ಆರ್‌ಎಸ್‌ಎಸ್‌ ನಾಯಕ ರಾಜೇಂದ್ರ ಸಿಂಗ್ ನಿಧನಾನಂತರ ಅವರ ಗೌರವಾರ್ಥ ನಡೆದ ಸಭೆಯಲ್ಲಿ ಡಾ.ಮನಮೋಹನ್ ಸಿಂಗ್ ಅವರು ‘1984 ಗಲಭೆಯಲ್ಲಿ ಸಿಖ್ಖರ ರಕ್ಷಣಾ ಕಾರ್ಯದಲ್ಲಿ ಆರ್‌ಎಸ್‌ಎಸ್ ಪಾತ್ರ ಮಹತ್ವದ್ದು’ ಎಂದಿದ್ದರು.
ಅಲ್ಪಸಂಖ್ಯಾತ ವರ್ಗದ ನಾಯಕ ತಾರ್ಲೋಚನ್ ಸಿಂಗ್ ಆರ್‌ಎಸ್‌ಎಸ್ ಮತ್ತು ಸಿಖ್ಖರು ಯಾವಾಗಲೂ ಭುಜಕ್ಕೆ ಭುಜ ಕೊಟ್ಟು ಹೋರಾಡಿದರು. 1984ರ ಸಿಖ್ ಗಲಭೆಗಳ‌ ಸಂದರ್ಭದಲ್ಲಿ ಸಿಖ್ಖರ ರಕ್ಷಣೆ ಮಾಡಿದವರು ಆರ್‌ಎಸ್‌ಎಸ್ ಸ್ವಯಂ ಸೇವಕರು. ಇದಷ್ಟೇ ಅಲ್ಲದೆ ಖಲಿಸ್ತಾನ ಚಳುವಳಿಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಹಿಂದೂಗಳನ್ನು ,ಪಂಜಾಬಿಗಳನ್ನು ಸಹೋದರರಂತೆ ಕಾಣಿರಿ‌ ಎಂದು ಕೇಳಿಕೊಂಡಿತ್ತು.

ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬಿನ ಸಮಸ್ಯೆಯನ್ನು ಕಾಂಗ್ರೆಸ್ ಸರಕಾರ ನಿರ್ವಹಿಸಿದ ರೀತಿ ಕೆಟ್ಟದಾಗಿತ್ತು.ಇಂತಹ ಸಮಸ್ಯೆಗಳ ರಾಜಕೀಯ ಲಾಭ ಪಡೆಯಲು ಅದು ಕೈಗೊಂಡ ಮಾರ್ಗ ದೇಶದ ಏಕತೆಗೆ ಧಕ್ಕೆ ತರುವಂತಹದ್ದಾಗಿತ್ತು. ಇದು ಮುಂದೆ ಅನೇಕ ಸಮಸ್ಯೆಗಳ ಹುಟ್ಟಿಗೆ ಕಾರಣವಾಯಿತು.

ಮೋಘಾ ಮಾರಣಹೋಮದಂತಹ ಘಟನೆಗಳಲ್ಲಿ ತಮ್ಮನ್ನು ಸಂಭಾಳಿಸಿಕೊಳ್ಳುತ್ತಾ ತಮ್ಮ ನೋವನ್ನು ಅದುಮಿಟ್ಟುಕೊಂಡು ಸಮಾಜದ ಸ್ವಾಸ್ಥ್ಯ ಕೆಡದಂತೆ ಎಚ್ಚರ ವಹಿಸುವ ಆರ್‌ಎಸ್‌ಎಸ್ ಸ್ವಯಂ ಸೇವಕರ ಮಾನೆ ಸ್ಥೈರ್ಯ ದೊಡ್ಡದು.

ಆ ಎಲ್ಲಾ ರಾಷ್ಟ್ರೀಯ ಹುತಾತ್ಮರಿಗೂ, ಗಲಭೆಗಳಲ್ಲಿ ಹತರಾದ ಮುಗ್ಧ ಸಿಖ್ ಸಹೋದರರಿಗೂ, ಸಹೋದಯರಿಯರಿಗೂ ಶ್ರದ್ಧಾಂಜಲಿ ಸಮರ್ಪಿಸೋಣ.

ಎಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡ ಸ್ವಯಂ ಸೇವಕರು ಸಮಾಜದಲ್ಲಿ ಉಳಿದುಹೋಗಿರುವ ಎಲ್ಲಾ ವಿಷವನ್ನೂ ತೊಡೆದುಹಾಕಿ ಉತ್ತಮ ನಾಳೆ ಗಾಗಿ ಶ್ರಮಿಸುತ್ತಲೇ ಇರುತ್ತಾರೆ.ಅವರ ಇಡೀ ಜೀವನವೇ ಹಾಗೆ.ಬಲಿದಾನವನ್ನು ನೆನೆಯುತ್ತಾ ದೇಶಸೇವೆಗೆ ಸಜ್ಜುಗೊಳ್ಳುತ್ತಲೇ ಇರುತ್ತಾರೆ.

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

-Dr. Sindhu Prashanth

Tags

Related Articles

FOR DAILY ALERTS
Close