ಅಂಕಣ

ದೇಶ ಕಂಡ ಅದ್ಭುತ ಪ್ರಧಾನಿ ಪಿ.ವಿ ನರಸಿಂಹ ರಾವ್‍ರವರನ್ನು ಸಾವಿನಲ್ಲಿಯೂ ಕಾಂಗ್ರೆಸ್ ಸರಕಾರ ಮಾಡಿದ ಅವಮಾನ ಕೇಳಿದರೆ ನೀವೂ ಕಣ್ಣೀರು ಹಾಕುವುದು ಖಂಡಿತ!!

ಪಿ.ವಿ ನರಸಿಂಹರಾವ್ ರವರು ಭಾರತ ಕಂಡಂತಹ ಅದ್ಭುತ ಪ್ರಧಾನ ಮಂತ್ರಿ!! ಇಡೀ ರಾಜಕೀಯ ವಲಯವೇ ಗೌರವಿಸುತ್ತಿದ್ದರೂ ಕೂಡ, ಗಾಂಧಿ ಪರಿವಾರ ಮಾತ್ರ ಪಿ.ವಿ ನರಸಿಂಹರಾವ್‍ರವರನ್ನು ಹೀನಾಯವಾಗಿ ಅವಮಾನಗೊಳಿಸಿಬಿಟ್ಟಿತ್ತು ಎಂದರೆ ನಂಬುತ್ತೀರಾ?!! ನಂಬಲೇಬೇಕಾದ ಕಟು ಸತ್ಯ ಇದು.. ಹೌದು ಇಂತಹ ಅದ್ಭುತ ವ್ಯಕ್ತಿಯ ಸಾವಿನಲ್ಲೂ ಅಮಾನವೀಯವಾಗಿ ನಡೆದುಕೊಂಡಿತ್ತು ಗಾಂಧಿ ಕುಟುಂಬ…

Image result for pv narasimha rao

ಹೃದಯಾಘಾತದಿಂದ ಬಳಲುತ್ತಿದ್ದ ಪಿ.ವಿ ನರಸಿಂಹ ರಾವ್ ರವರು ಡಿಸೆಂಬರ್ 23, 2004 ರಂದು ಇಹ ಲೋಕ ತ್ಯಜಿಸಿದ್ದರು. ಬಿಳಿ ಧೋತಿ, ಬಂಗಾರದ ಹೊಳಪಿನ ರೇಷ್ಮ ಕುರ್ತಾ ಮತ್ತು ಭುಜದಲ್ಲಿ ಶಾಲನ್ನು ಹಾಕಿದ ಮಾಜಿ ಪ್ರಧಾನ ಮಂತ್ರಿಯ ದೇಹವು ಶಾಂತಿ ಮತ್ತು ಪ್ರಶಾಂತತೆಯಿಂದ ಕೂಡಿತ್ತು. ಅವರ ಎಂಟು ಮಕ್ಕಳು ಹಾಗೂ ಗಣ್ಯಾತಿ ಗಣ್ಯರು ಬಂದು ಪಿ.ವಿ ನರಸಿಂಹರಾವ್ ಅವರ ಪಾರ್ಥೀವ ಶರೀರಕ್ಕೆ ಗೌರವವನ್ನು ಸಲ್ಲಿಸಿದರು. ರಾವ್‍ರವರ ಕಿರಿಯ ಪುತ್ರ ಪ್ರಭಾಕರ್ ಅವರು ದೆಹಲಿಯ “ಕರ್ಮಭೂಮಿಯಲ್ಲಿ” ಅವರ ಶರೀರವನ್ನು ಸಮಾಧಿ ಮಾಡಬೇಕೆಂದು ತಯಾರಾಗುತ್ತಾರೆ. ಅವರು ದೆಹಲಿಯಲ್ಲಿ ವಿವಿಧ ಸಚಿವ ಸಂಪುಟಗಳಲ್ಲಿ ಮತ್ತು ಭಾರತದ ಪ್ರಧಾನ ಮಂತ್ರಿಯಾಗಿ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಮೂರು ದಶಕಗಳಿಗೂ ಹೆಚ್ಚು ಕಾಲ ಅಲ್ಲಿ ವಾಸಿಸಿದ್ದರು..

ಮೊದಲು ಬಂದ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ರಾವ್ ಅವರ ಕಿರಿಯ ಮಗ ಪ್ರಭಾಕರ್‍ರವರನ್ನು ಕರೆದು ನೀವು ರಾವ್‍ರವರನ್ನು ದೆಹಲಿಯಲ್ಲಿ ಸಮಾದಿ ಮಾಡಲಾಗುವುದಿಲ್ಲ, ಹೈದರ್‍ಬಾದ್‍ಗೆ ದೇಹವನ್ನು ತೆಗೆದುಕೊಳ್ಳವಂತೆ ಸಲಹೆ ನೀಡುತ್ತಾರೆ. ತದನಂತರ ಗುಲಾಮ್ ನಬಿ ಅಝಾದ್ ಅವರು ದೇಹವನ್ನು ಶವಸಂಸ್ಕಾರಕ್ಕೆ ಹೈದರ್‍ಬಾದ್‍ಗೆ ದೇಹವನ್ನು ಕರೆದೊಯ್ಯುವಂತೆ ಸೂಚಿಸುತ್ತಾರೆ. ಸುಮಾರು 6:30 ರ ವೇಳೆಗೆ ಸೋನಿಯಾ ಗಾಂಧಿ ಅವರು ಡಾ. ಮನಮೋಹನ್ ಸಿಂಗ್ ರೊಂದಿಗೆ ಆಗಮಿಸುತ್ತಾರೆ. ಪ್ರಭಾಕರರನ್ನು ಸ್ಮಶಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕೇಳಿದಾಗ, ನರಸಿಂಹ ರಾವ್ ಅವರನ್ನು ದೆಹಲಿಯಲ್ಲಿ ಸಮಾಧಿ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ..

Image result for pv narasimha rao with congress

ಅದೇ ಸಮಯದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ತನ್ನ ಎಲ್ಲಾ ಮಂತ್ರಿ ಸದಸ್ಯರನ್ನು ಈ ವಿಷಯವಾಗಿ ಕೇಳುತ್ತಾರೆ!! ಆದರೆ ಸೋನಿಯಾ ಗಾಂಧಿ ಮಾತ್ರ ಏನೂ ಮಾತನಾಡದೆ ಮೌನವಾಗಿ ಬಿಡುತ್ತಾರೆ.. ಇವರೆಲ್ಲರ ಅಭಿಪ್ರಾಯ ಕೇಳಿ ಮನಮೋಹನ್ ಸಿಂಗ್ ಕೂಡಾ ಮೌನವಾಗಿ ಬಿಟ್ಟರು.. ಎಂತಹ ವಿಪರ್ಯಾಸ ನೋಡಿ ಒಬ್ಬ ಪ್ರಧಾನಿಯಾದವರಿಗೆ ಶವ ಸಂಸ್ಕಾರ ಮಾಡಲೂ ಜಾಗ ಕೊಡದೆ ಅವಮಾನ ಮಾಡುತ್ತಾರೆಂದರೆ….!! ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅಲ್ಲಿಂದ ಹೊರನಡೆಯುತ್ತಾರೆ. ಶವ ಸಂಸ್ಕಾರಕ್ಕಾಗಿ ದೇಹವನ್ನು ಹೈದರ್‍ಬಾದ್‍ಗೆ ಕರೆದೊಯ್ಯಲು ಎಲ್ಲಾ ಹಿರಿಯ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಿಂದ ಪ್ರಭಾಕರ್ ರಾವ್ ಅವರು ಅಪಾರ ಒತ್ತಡ ಎದುರಿಸಬೇಕಾಗುತ್ತದೆ. ಅಂತಿಮವಾಗಿ ರಾವ್ ಅವರ ಪಾರ್ಥೀವ ಶರೀರವನ್ನು ಹೈದರ್‍ಬಾದ್‍ಗೆ ಕರೆದೊಯ್ಯಲಾಗುತ್ತದೆ.

Related image

ಮರುದಿನ ಅಂದರೆ ಡಿಸೆಂಬರ್ 24, 2004 ರಂದು ರಾವ್ ಅವರ ಮನೆಯಿಂದ ಅವರ ದೇಹವನ್ನು ಹೈದರ್‍ಬಾದ್‍ಗೆ ಕರೆದೊಯ್ಯಲಾಯಿತು. ಅಕ್ಬರ್ ರೋಡ್ ಮುಖಾಂತರ ಪಾರ್ಥೀವ ಶರೀರವನ್ನು ಕರೆದೊಯ್ಯುವ ಬಯಕೆಯನ್ನು ರಾವ್ ಮಗ ಪ್ರಸ್ತಾಪಿಸುತ್ತಾರೆ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯಾಲಯವಿರುವುದು ಅಲ್ಲೇ. ಪಿ.ವಿ ನರಸಿಂಹ ರಾವ್ ಅವರು ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷಕ್ಕಾಗಿ ಮೀಸಲಿಟ್ಟಿದ್ದರು. ರಾವ್ ಅವರ ದೇಹವನ್ನು ಕಾಂಗ್ರೆಸ್‍ನ ಪ್ರಧಾನ ಕಾರ್ಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸ್ವಲ್ಪ ಸಮಯದ ಕಾಲ ಪಾರ್ಥಿವ ಶರೀರವನ್ನು ಅಂತಿಮ ವೀಕ್ಷಣೆಗೆ ಇಡಲಾಗಿತ್ತು.

ಪಿ.ವಿ ನರಸಿಂಹ ರಾವ್‍ರವರಿಗೆ ಇಲ್ಲೇ ಅವಮಾನ ಕೊನೆಗೊಂಡಿಲ್ಲ. ಕಾಂಗ್ರೆಸ್ ಪಕ್ಷ ಪಿ.ವಿ ರಾವ್ ಅವರಿಗೆ ಅತ್ಯಂತ ಶ್ರೇಷ್ಟವಾದ ಅವಮಾನವನ್ನೇ ಮಾಡುತ್ತಾರೆ.!! ಅವರ ಅಂತ್ಯ ಕ್ರೀಯೆಯ ಪೈರ್ ಲಿಟ್ ಮಾಡಿದ ನಂತರ, ಯಾರೂ ಸಮಾದಿಯ ಬಳಿ ಉಳಿಯಲಿಲ್ಲ!!!.. ಅವರ ಸುಟ್ಟ ಅರ್ಧ ದೇಹವನ್ನು ಬಿಟ್ಟು ಎಲ್ಲರೂ ಹೊರ ನಡೆಯುತ್ತಾರೆ.. ಅವರ ದೇಹ ಸಂಪೂರ್ಣ ಸುಟ್ಟಿದಯೇ ಎಂದು ನೋಡುವುದಕ್ಕೂ ಯಾರೂ ಇರಲಿಲ್ಲ. ಅರ್ಧ ಸುಟ್ಟ ದೇಹವನ್ನು ಯಾರೋ ರವಾನೆ ಮಾಡುವ ಮಾಹಿತಿಯನ್ನು ಹೈದರ್‍ಬಾದ್‍ನಲ್ಲಿ ಅಧಿಕಾರಿಗಳಿಗೆ ತಿಳಿಸಿದ ನಂತರ ಮತ್ತೆ ಶವವನ್ನು ಸಂಪೂರ್ಣವಾಗಿ ಸುಡಲಾಗುತ್ತದೆ.

Related image

ಇಂತಹ ಘಟನೆ ನಡೆಯಬೇಕಾದರೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದರು. ವಿ.ವಿ ನರಂಸಿಂಹ ರಾವ್ ಅವರು ಡಾ. ಮನಮೋಹನ್ ಸಿಂಗ್ ಅವರ ಕೇವಲ ಗುರು ಮಾತ್ರ ಆಗಿರಲಿಲ್ಲ!! ಅವರ ಖ್ಯಾತಿಗೆ ಪ್ರಮುಖ ಪಾತ್ರವಹಿಸಿದ್ದರು!! ಬಜೆಟ್‍ನ ನಂತರ ಮನಮೋಹನ್ ಸಿಂಗ್ ಅವರಿಗೆ ಇಡೀ ರಾಜಕೀಯ ವಲಯ ಒತ್ತಡವನ್ನು ಹಾಕಿದಾಗ ಪಿ.ವಿ ನರಸಿಂಹ ರಾವ್ ರವರು ಮನಮೋಹನ್ ಸಿಂಗ್ ಅವರನ್ನು ಎಲ್ಲಾ ಆರೋಪದಿಂದ ಮುಕ್ತರನ್ನಾಗಿ ಮಾಡಿದ್ದರು. ಅದಲ್ಲದೆ ಅವರನ್ನು ಬೆಂಬಲಿಸಿ ದೈರ್ಯವನ್ನು ತುಂಬಿದ್ದರು. ಆದರೆ ಅಂತಹ ಮಹಾನ್ ವ್ಯಕ್ತಿಗೆ ದೊರಕ್ಕಿದ್ದು ಗಾಂಧಿ ಕುಟುಂಬದಿಂದ ಕೇವಲ ಅವಮಾನ ಮಾತ್ರ…

ಪಿ.ವಿ ರಾವ್ ಅವರು ಪ್ರಧಾನಿಯಾಗಿದ್ದಾಗ ಡಾ. ಮನಮೋಹನ್ ಸಿಂಗ್ ಅವರನ್ನು ನಿರಾಸೆ ಮೂಡಿಸದೆ ಎಲ್ಲಾ ಕಡೆಗಳಲ್ಲಿ ಬೆಂಬಲಿಸುತ್ತಾ ಬಂದಿದ್ದರು. ಆದರೆ ಇಷ್ಟೆಲ್ಲಾ ಮಾಡಿದ ಅವರಿಗೆ ಭಾರತದ ಪ್ರಧಾನಿ ಪಿ.ವಿ ರಾವ್ ಅವರಿಗೆ ಕೊನೆಗೆ ರಾವ್ ಮಗನ ಆಶಯವನ್ನು ಪೂರೈಸಲು ಸಾಧ್ಯವಾಗಿಲ್ಲ ಅನ್ನೋದು ವಿಷಾದನೀಯವಲ್ಲವೇ?.. ದೆಹಲಿಯಲ್ಲಿ ರಾವ್ ಅವರ ಪಾರ್ಥೀವ ಶರೀರವನ್ನು ಮಣ್ಣು ಮಾಡಲು ಬಯಸಿದಾಗ ಮೌನವಾಗಿಯೇ ಇದ್ದ ಮನಮೋಹನ್ ಸಿಂಗ್, ಮುಂದೆ ಸ್ಮಾರಕವನ್ನು ನಿರ್ಮಿಸುವುದಕ್ಕೂ ಮೌನ ಮುರಿದಿದ್ದರು!!?. ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರಿಗೆ ಇಷ್ಟೇನಾ ನೀವು ಗೌರವ ಸಲ್ಲಿಸುವುದು ಮನಮೋಹನ್ ಸಿಂಗ್‍ರವರೇ?.. ಸೋನಿಯಾ ಗಾಂಧಿಗಂತೂ ಬುದ್ಧಿಯಿಲ್ಲ? ಅಂತೂ ನಿಮ್ಮ ಬುದ್ಧಿಗೆ ಏನಾಗಿತ್ತು?

Related image

ಇಂತಹ ಶ್ರೇಷ್ಟ ವಿದ್ವಾಂಸಕರಿಗೆ ಇಂತಹ ಅಪಮಾನಕರ ಅಂತ್ಯ ನಿಜಕ್ಕೂ ದುರಂತ!!.. ಭಾರತದ ಇತಿಹಾಸದಲ್ಲಿ ಮಾಜಿ ಪ್ರಧಾನಿ ಪಿ.ವಿ ನರಸಿಂಹ ರಾವ್‍ರವರಿಗೆ ಆದ ಅವಮಾನ ಬೇರೊಬ್ಬರಿಗೆ ಆಗಲು ಸಾಧ್ಯವಿಲ್ಲವೇನೋ?!! ಸೋನಿಯಾ ಗಾಂಧಿಯವರ ನಿರ್ದೇಶನದಲ್ಲಿ ಕಾಂಗ್ರೆಸ್ ಪಿ.ವಿ ರಾವ್ ಅವರನ್ನು ನಿರಾಕರಿಸಿತ್ತು ಮತ್ತು ಸ್ಮಾರಕ ನಿರ್ಮಾಣಕ್ಕೂ ನಿರಾಕರಿಸಿತ್ತು.. ಇಷ್ಟು ವರ್ಷ ಕಳೆದರೂ ಕಾಂಗ್ರೆಸ್ ಮಾತ್ರ ಪಿ.ವಿ ರಾವ್ ಅವರ ಸ್ಮಾರಕ ನಿರ್ಮಾಣ ಮಾಡಲಿಲ್ಲ.. ಭಾರತದ ಇತಿಹಾಸದಲ್ಲಿ ಹನ್ನೊಂದು ವರ್ಷಗಳ ನಂತರ ನಮ್ಮ ಪ್ರಧಾನಿ ನರೇಂದ್ರ ಮೋದಿಜೀಯವರು ಅಂತಿಮವಾಗಿ ಮಹಾನ್ ಪ್ರಧಾನಿ ಪಿ.ವಿ ನರಸಿಂಹ ರಾವ್ ಅವರ ಸ್ಮಾರಕವನ್ನು ದೆಹಲಿಯಲ್ಲಿ ನಿರ್ಮಿಸಲು ತಯಾರಾಗುತ್ತಾರೆ ಎಂದರೆ ಮೋದಿಜೀಯ ಮನಸ್ಥಿತಿ ಹಾಗೂ ಕಾಂಗ್ರೆಸ್‍ನ ಮನಸ್ಥಿತಿ ಹೇಗಿದೆ ಎಂಬುವುದು ಈಗಾಗಲೇ ಎಲ್ಲರಿಗೂ ಅರ್ಥವಾಗಿರಬಹುದು!!

  • ಪವಿತ್ರ
Tags

Related Articles

FOR DAILY ALERTS
Close