ಅಂಕಣ

ಹಿಂದೂಗಳನ್ನು ಕಡೆಗಣಿಸುತ್ತಾ ವೋಟ್ ಬ್ಯಾಂಕ್ ರಾಜಕಾರಣಕ್ಕೆ ವಾಲಿರುವ ಮೋದಿ ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದ್ದಾರೆ ಎನ್ನುವ ಹೊಸ ಆರೋಪದಲ್ಲಿ ಹುರುಳಿದೆಯೆ?

ಇತ್ತೀಚೆಗೆ ಮೋದಿಯವರ ಮೇಲೆ ಅವರು ಹಿಂದೂಗಳಿಗಾಗಿ ಏನೂ ಮಾಡುತ್ತಿಲ್ಲ, ಅವರು ಮುಸ್ಲಿಮರ ತುಷ್ಟೀಕರಣದ ನೀತಿಯಲ್ಲೆ ನಿರತರಾಗಿದ್ದಾರೆ, ರಾಮ ಮಂದಿರ ಕಟ್ಟಿಸುತ್ತಿಲ್ಲ, ಮುಸ್ಲಿಮರಿಗೆ ಭಾಗ್ಯಗಳನ್ನು ಕರುಣಿಸುತ್ತಿದ್ದಾರೆ ಎನ್ನುವ ಆರೋಪಗಳನ್ನು ಹೊರಿಸಿ ಹಿಂದೂಗಳ ಮನಸ್ಸಿನಲ್ಲಿ ಅವರ ಬಗ್ಗೆ ಅನುಮಾನ ಹುಟ್ಟುವಂತೆ ಮಾಡುವ ಪ್ರಯತ್ನದಲ್ಲಿ ಮೋದಿ ವಿರೋಧಿಗಳು ನಿರತರಾಗಿದ್ದಾರೆ. “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ಎನ್ನುವ ಘೋಷ ಮಂತ್ರದೊಂದಿಗೆ ಕೆಲಸ ಮಾಡುವ ಮೋದಿ ಹಿಂದೆಯೂ ವೋಟ್ ಬ್ಯಾಂಕ್ ಗಾಗಿ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಮೋದಿ ಗದ್ದುಗೆ ಏರಿದ್ದು ಕೇವಲ ಹಿಂದೂಗಳಿಂದ ಮಾತ್ರವಲ್ಲ, ಹಾಗೊಂದು ವೇಳೆ ಇದು ನಿಜವಾಗಿದ್ದರೂ ಪ್ರಧಾನಮಂತ್ರಿಯಾದ ಮೇಲೆ ಅವರು “ನನಗೆ ಮತ ಕೊಡದವರಿಗೆ ನಾನು ಒಳ್ಳೆಯದು ಮಾಡುವುದಿಲ್ಲ” ಎಂದು ಹೇಳಲು ಸಾಧ್ಯವೂ ಇಲ್ಲ. ಯಾರು ಮತ ನೀಡಲಿ-ಬಿಡಲಿ ಅವರು ಎಲ್ಲರಿಗಾಗಿ ದುಡಿಯಬೇಕು ಮತ್ತು ದುಡಿಯುತ್ತಿದ್ದಾರೆ ಕೂಡಾ. ಮೋದಿ ಈ ದೇಶದ ಪ್ರಧಾನಿ ಈ ದೇಶದ ಎಲ್ಲಾ ನಾಗರಿಕರಿಗೂ ಅವರು ಉತ್ತರದಾಯಿಯಾಗಿರುತ್ತಾರೆ. ಈ ದೇಶದ ಪ್ರತಿಯೊಂದು ಭಾಷೆ-ಮತ-ಜಾತಿ-ನೀತಿಯ ನಾಗರಿಕರಿಗೂ ಅವರು ಸಂಬಂಧ ಪಟ್ಟವರು.

ಮೋದಿಯವರು ಸರ್ವ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆ ತಂದಿರುವುದು ಎಲ್ಲರಿಗೂ ತಿಳಿದಿದೆ. ಈ ಎಲ್ಲಾ ಯೋಜನೆಗಳು ಕೇವಲ ವೋಟ್ ಬ್ಯಾಂಕ್ ರಾಜನೀತಿಗಾಗಿ ಎಂದು ಯಾರಾದರೂ ಸಾಬೀತು ಪಡಿಸಲಿ ನೋಡೋಣ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನ ಕಿರು ಪರಿಚಯ:

ಜನಧನ ಯೋಜನೆಯ ಒಟ್ಟು ಫಲಾನುಭವಿಗಳು: 28.63 ಕೋಟಿ
ಒಟ್ಟು ಗ್ರಾಮೀಣ/ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 17.10 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 11.53 ಕೋಟಿ
ಒಟ್ಟು ರುಪೇ ಕಾರ್ಡ್: 22.24 ಕೋಟಿ
ಫಲಾನುಭವಿಗಳ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್: 64364.91 ಕೋಟಿ ಇದರಲ್ಲಿ ಹಿಂದೂಗಳೆಷ್ಟು, ಮುಸಲ್ಮಾನರೆಷ್ಟು, ಕ್ರೈಸ್ತರೆಷ್ಟು?

2109 ರ ಒಳಗೆ ಪೂರ್ಣವಾಗುವ ಹೈವೆ ಯೋಜನೆಗಳು:

ಮಹಾರಾಷ್ಟ್ರ(52)-38029 ಕೋಟಿ ರುಪಾಯಿ
ಉತ್ತರ ಪ್ರದೇಶ(45) -37926 ಕೋಟಿ ರುಪಾಯಿ
ರಾಜಸ್ತಾನ್(28)- 21292 ಕೋಟಿ ರುಪಾಯಿ
ಗುಜರಾತ್(27) -24098 ಕೋಟಿ ರುಪಾಯಿ
ಮಧ್ಯಪ್ರದೇಶ(26) -16246 ಕೋಟಿ ರುಪಾಯಿ ಇದರಲ್ಲಿ ಹಿಂದೂಗಳಿಗಾಗಿ ಮಾಡಿದ ರಸ್ತೆಗಳೆಷ್ಟು? ಮುಸಲ್ಮಾನರಿಗೆಷ್ಟು ಮತ್ತು ಕ್ರೈಸ್ತರಿಗೆಷ್ಟು?

ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಒಟ್ಟು ಫಲಾನುಭವಿಗಳು: ಖಾರಿಫ್ 2016- 366.637 ಕೋಟಿ ರುಪಾಯಿಗಳು ಇದರಲ್ಲಿ ಹಿಂದೂ-ಮುಸಲ್ಮಾನ-ಕ್ರೈಸ್ತ ರೈತರು ಯಾರು?
2013-14 ರಿಂದ 2015-16 ವರೆಗೆ ಹಳ್ಳಿಗಳ ಸಂಪೂರ್ಣ ವಿದ್ಯುದೀಕರಣಕ್ಕೆ 3604.87ಲಕ್ಷ ರುಪಾಯಿಗಳು ಖರ್ಚಾಗಿವೆ ಇದರಲ್ಲಿ ಹಿಂದೂ -ಕ್ರೈಸ್ತ-ಮುಸಲ್ಮಾನರ ಹಳ್ಳಿ ಎಂದು ಬೇಧ ಮಾಡಲಾಗಿದೆಯೆ?
ಮೋದಿ “ಬೇಟಿ ಬಚಾವೋ ಬೇಟಿ ಪಢಾವೋ” ಎಂದಾಗ ಇಂತಹ ಧರ್ಮದವರ ಹೆಣ್ಣು ಮಕ್ಕಳಿಗಾಗಿ ಮಾತ್ರ ಎಂದರೆ? ಸುಕನ್ಯಾ ಸಮೃದ್ದಿ ಯೋಜನೆಯಡಿಯಲ್ಲಿ 1000 ರಿಂದ 1.5 ಲಕ್ಷದವರೆಗಿನ ಮೌಲ್ಯದ ಹಣಕ್ಕೆ 8.1 ಬಡ್ಡಿದರ ಜಾತಿ ನೋಡಿ ಕೊಟ್ಟರೆ?
ಮನರೇಗಾಕ್ಕೆ ಒಟ್ಟು 3687395.74 ಲಕ್ಷ ಬಿಡುಗಡೆ ಮಾಡಿದಾಗ ಇದು ಕೇವಲ ಇಂಥ ಧರ್ಮದವರಿಗೆ ಸಿಗಬೇಕೆಂದು ಹೇಳಿದರೆ?
ಮೋದಿಯವರ ಎಲ್ಲಾ ಯೋಜನೆಗಳ ಫಲ ಜಾತಿ-ಮತ-ಲಿಂಗ ಬೇಧವಿಲ್ಲದೆ ಸರ್ವರಿಗೂ ಸಮಾನವಾಗಿ ದೊರೆಯುತ್ತಿಲ್ಲವೆ? ಮತ್ತೆ ಒಬ್ಬರನ್ನು ಕಡೆಗಣಿಸುತ್ತಿದ್ದಾರೆ, ಮತ್ತೊಬ್ಬರನ್ನು ಓಲೈಸುತ್ತಿದ್ದಾರೆ ಎಂದು ಯಾವ ಆಧಾರದಲ್ಲಿ ಹೇಳುತ್ತಿರುವುದು?

ತ್ರಿವಳಿ ತಲಾಖ್ ನಿಷೇಧ ಮಾಡಿ ಮುಸ್ಲಿಂ ಮಹಿಳೆಯರು ಸನ್ಮಾನದಿಂದ ಬದುಕುವಂತೆ ಮಾಡುತ್ತಿರುವುದು, ಮುಸ್ಲಿಂ ಮಹಿಳೆಯರು ಪುರುಷ ಅಭಿಭಾವಕರಿಲ್ಲದೆಯೂ ಹಜ್ ಯಾತ್ರೆಗೆ ಹೋಗಬಹುದೆಂದು ಕಾನೂನಿನಲ್ಲಿ ಬದಲಾವಣೆ ಮಾಡಿದ್ದು, ಶಾದಿ ಶಗುನ್ ಕೊಟ್ಟು ಮುಸ್ಲಿಂ ಮಹಿಳೆಯರೂ ಶಾಲೆ-ಕಾಲೇಜು ಮೆಟ್ಟಿಲು ಹತ್ತುವಂತೆ ಮಾಡಿದ್ದು ಇವೆಲ್ಲಾ ಮುಸ್ಲಿಂ ಓಲೈಕೆಯಾದರೆ, ಕಾಂಗ್ರೆಸ್ ಸರಕಾರ ಮುಸ್ಲಿಂ ಓಲೈಕೆ ಮಾಡುತ್ತಾ ಪೋಷಿಸಿಕೊಂಡು ಬಂದಿದ್ದ ಹಜ್ ಸಬ್ಸಿಡಿ ಯನ್ನು ರದ್ದುಗೊಳಿಸಿ ದೇಶದ ಬೊಕ್ಕಸಕ್ಕೆ ಬರೋಬ್ಬರಿ 700 ಕೋಟಿ ಉಳಿತಾಯ ಮಾಡಿದ್ದು ಯಾರು? ಮೋದಿಗೆ ಓಲೈಕೆ ಮಾಡುವ ಮನಸಿದ್ದರೆ ಸಬ್ಸಿಡಿ ರದ್ದು ಮಾಡುತ್ತಿದ್ದರೆ? ಮತಾಂತರ ಮತ್ತು ಭಯೋತ್ಪಾದನೆಗೆ ವಿದೇಶದಿಂದ ಅಕ್ರಮವಾಗಿ ಮದರಸಾ ಮತ್ತು ಚರ್ಚುಗಳಿಗೆ ಹರಿದು ಬರುತ್ತಿದ್ದ ಹಣವನ್ನು ಒಂದೇ ಏಟಿಗೆ ನಿಲ್ಲಿಸಿದ್ದು ಓಲೈಕೆಯೆ? ದೇಶ ವಿರೋಧಿ ಚಟುವಟಿಗಳಲ್ಲಿ ಭಾಗಿಯಾಗಿದ್ದ ಮದರಸಾ-ಮಿಶನರಿ ಮಾಫಿಯಾ ಎನ್.ಜಿ.ಒಗಳ ಬೆನ್ನು ಮೂಳೆ ಮುರಿದದ್ದು ಓಲೈಕೆಯೆ? ಹಣೆ ತುಂಬಾ ಕಂಕುಮವಿಟ್ಟು, ಮುಸ್ಲಿಂ ಟೋಪಿ ಧರಿಸುವುದನ್ನು ಸಾರಾ ಸಗಟಾಗಿ ತಿರಸ್ಕರಿಸಿದ ಮೋದಿ ವೋಟಿಗಾಗಿ ಅವರ ಓಲೈಕೆ ಮಾಡುತ್ತಾರೆಯೆ?

ಇನ್ನು ಮೋದಿ ಅಲ್ಪ ಸಂಖ್ಯಾತ ವಿರೋಧಿ ಎನ್ನುವವರ ಗಮನಕ್ಕೆ: ನಯಿ ಉಡಾನ್ ವಿದ್ಯಾರ್ಥಿವೇತನ ಯೋಜನೆ ಇದು ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿಯೆ ಮಾಡಲಾಗಿದ್ದು ಇದುವರೆಗೆ 564 ಮುಸ್ಲಿಮ್ , 185 ಕ್ರೈಸ್ತ ಮತ್ತು 18 ಸಿಖ್ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ಜೊತೆಗೆ ನಯಿ ರೋಶನಿ, ನಯೀ ಮಹಿಳಾ ಸಮೃದ್ದಿ ಯೋಜನಾ ಇದೆಲ್ಲವೂ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿಯೆ ಇರುವ ಯೋಜನೆಗಳು. ಮೋದಿ ಕೇವಲ ಹಿಂದೂಗಳ ಪ್ರಧಾನಿ, ಅಲ್ಪ ಸಂಖ್ಯಾತರು ಭಯದಿಂದ ಬದುಕುತ್ತಿದ್ದಾರೆ ಎನ್ನುವುದು ವಿರೋಧಿಗಳ ಪಿತೂರಿ.

ಇದೇ ವಿರೋಧಿಗಳು ಇನ್ನೊಂದೆಡೆ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿಸುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ರಾಮ ಮಂದಿರದ ಕೇಸ್ ಕೋರ್ಟಿನಲ್ಲಿ ತಾರ್ಕಿಕ ಅಂತ್ಯ ಕಾಣುವುದರಲ್ಲಿದೆ. ಕೇಸ್ ನ ಮಧ್ಯೆ ಅಡ್ಡಗಾಲು ಹಾಕುತ್ತಿರುವುದು ಕಾಂಗ್ರೆಸ್. ಇನ್ನು ಶಿಯಾ ಮುಸ್ಲಿಮರು ರಾಮ ಮಂದಿರದ ಪರವಾಗಿ ನಿಂತಿದ್ದರೆ ಕಟ್ಟರ್ ಸುನ್ನಿ ಮುಸ್ಲಿಮರು ಮಾತ್ರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬಾರದೆಂದು ಪಟ್ಟು ಹಿಡಿದು ನಿಂತಿರುವುದು. ಮೋದಿ ಕೊಲ್ಲಿ ಪ್ರದೇಶಗಳಿಗೆ ಭೇಟಿಕೊಟ್ಟು ಮುಸ್ಲಿಂ ರಾಷ್ಟ್ರಗಳನ್ನು ತನ್ನತ್ತ ಸೆಳೆದುಕೊಂಡಿರುವುದು ಇಲ್ಲಿಯ ಹಿಂದೂಗಳಿಗೆ ಕಾಣುತ್ತಿಲ್ಲವೆ? ಮುಸ್ಲಿಂ ರಾಷ್ಟ್ರದ ನೆಲದಲ್ಲೆ ಮಂದಿರ ಕಟ್ಟಲು ಬುನಾದಿ ಹಾಕಿದ ಹಿಂದೂ ಹೃದಯ ಸಾಮ್ರಾಟ ಮೋದಿ ತನ್ನ ರಾಮನಿಗಾಗಿ ಅಯೋಧ್ಯೆಯಲ್ಲಿ ಮಂದಿರ ಕಟ್ಟಿಸದಿರುತ್ತಾರೆಯೆ? ವಿಶ್ವದ ಪ್ರಧಾನಮಂತ್ರಿಗಳನ್ನೆಲ್ಲಾ ಕರೆತಂದು ಗಂಗಾ ತಟದಲ್ಲಿ ಆರತಿ ಎತ್ತಿಸುತ್ತಿರುವುದು, ಅವರಿಗೆ ಭಗವದ್ಗೀತೆ ಕೊಡುವುದು ಹಿಂದುತ್ವವನ್ನು ಕಡೆಗಣಿಸುವ ಲಕ್ಷಣವೆ?

ಹಿಂದೂ ಮತ್ತು ಅಲ್ಪಸಂಖ್ಯಾತರ ಧ್ರುವೀಕರಣ ಮಾಡುವ ವಿರೋಧಿಗಳ ಪಿತೂರಿಯನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ. ಇವರೆಲ್ಲಾ ಒಂದೆಡೆ ಮೋದಿ ಅಲ್ಪರ ಓಲೈಕೆ ಮಾಡುತ್ತಾರೆ ಎನ್ನುತ್ತಾರೆ, ಇನ್ನೊಂದೆಡೆ ಮೋದಿ ಅಲ್ಪ ಸಂಖ್ಯಾತರ ವಿರೋಧಿ ಎನ್ನುತ್ತಾರೆ. ಮತ್ತೊಂದೆಡೆ ಮೋದಿ ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಮೋದಿ ರಾಜ್ಯದಲ್ಲಿ ಹಿಂದೂಗಳು ಬಲಿಷ್ಟರಾಗುತ್ತಿದ್ದಾರೆ ಎನ್ನುತ್ತಿದ್ದಾರೆ. ಸರಿಯಾಗಿ ಯೋಚಿಸಿ, ಇವೆಲ್ಲವೂ ಅವರ ವಿರುದ್ದ ನಡೆಸುತ್ತಿರುವ ಪಿತೂರಿ. ಅಟಲ್ ಜಿಯವರನ್ನು ಸೋಲಿಸಿದಂತೆಯೆ ಹಿಂದೂಗಳೇ ಮೋದಿಯವರನ್ನು ಸೋಲಿಸಬೇಕೆಂಬುದು ವಿರೋಧಿಗಳ ಹಂಬಲ. ಅವರು ತೋಡಿದ ಖೆಡ್ಡಾಕ್ಕೆ ಬೀಳದಿರಿ, ಗಾಳಿ ಮಾತಿಗೆ ಕಿವಿ ಕೊಡಬೇಡಿ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಿ….

-ಶಾರ್ವರಿ

Tags

Related Articles

Close