ಪ್ರಚಲಿತ

ಬಾಲಿವುಡ್ ನಲ್ಲಿ ಹಣದ ಹೊಳೆಯೇ ಹರಿಯುತ್ತಿರುವಾಗ ಅವರಿಗೇಕೆ ದೇಶದ ಚಿಂತೆ?? ಅಲ್ಲವೇ…

ಈ ಬಾಲಿವುಡ್ ಸಿನೆಮಾ ಇಂಡಸ್ಟ್ರಿ ಯ ‘ಸೊ ಕಾಲ್ಡ್ ಸೆಲೆಬ್ರಿಟಿ’ ಗಳ ತೊಂದರೆ ಏನೆಂದೇ ಅರ್ಥವಾಗುವುದಿಲ್ಲ..ಸುಮ್ಮನಿರಲಾರದೆ ಅವರ ಮಯ್ಯಲ್ಲಿ ಅವರೇ ಇರುವೆ ಬಿಟ್ಟುಕೊಳ್ಳುವ ಪ್ರವೃತ್ತಿಯವರು ಬಹಳಷ್ಟುಜನ ಈ ಹಿಂದಿ ಚಲನಚಿತ್ರ ರಂಗದಲ್ಲಿ ಸಕ್ರಿಯರಾಗಿದ್ದಾರೆ.ಅವರಲ್ಲಿ ಪ್ರಮುಖ ಮಹಿಳಾ ಮಣಿಸ್ವರಾ ಭಾಸ್ಕರ್.ತಂದೆ ಭಾರತೀಯ ಸರಕಾರದಲ್ಲಿ ಸೇವೆಸಲ್ಲಿಸಿದ್ದವರಾದರೆ ತಾಯಿ ಜವಾಹರ್ಲಾಲ್ ನೆಹರೂ  ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕಿ..ಕಮ್ಯುನಿಷ್ಟರು ಎಲ್ಲೆಲ್ಲಿ ಇದ್ದಾರೋ ಈಕೆ ಅಲ್ಲೆಲ್ಲಾ ಇದ್ದಾಳೆ..ಕಳೆದಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈಕೆ ಬೆಂಬಲಿಸಿದ್ದು ಕನ್ಹಯ್ಯ ಕುಮಾರ್,ದಿಗ್ವಿಜಯ ಸಿಂಗ್ ಮತ್ತು ಅತಿಷಿ ಅವರನ್ನು.ಇವರು ಮೂವರೂ ಸೋತಿದ್ದಾರೆಂಬುದು ಬೇರೆ ವಿಷಯವಾದರೂ..ಈಕೆ ಪ್ರಚಾರ ನಡೆಸಿದ್ದು ಒಂದೇ ಪಕ್ಷದ ಪರವಾಗಿ ಅಲ್ಲ ಎಂಬುದು ಗಮನಿಸಬೇಕಾದ ವಿಚಾರ.ಒಬ್ಬರು ಆಮ್ ಆದ್ಮಿ ಪಕ್ಷವಾದರೆ ಮತ್ತೊಬ್ಬರು ಕಮ್ಯುನಿಷ್ಟ್ ಪಕ್ಷ..ಇನ್ನೊಬ್ಬರು ಕಾಂಗ್ರೆಸ್ ಪಕ್ಷ.ಈಕೆಗೆ ಪಕ್ಷ ಮುಖ್ಯವಲ್ಲ ಸಿದ್ದಾಂತವೇ ಮುಖ್ಯ ಎಂದಿಟ್ಟುಕೊಳ್ಳೋಣ..ಅದರ ಅರ್ಥವೇನು?? ಈ ಮೂವರೂ ಬೇರೆಬೇರೆ ಪಕ್ಷಗಳ ಮುಖವಾಡವನ್ನು ಧರಿಸಿದ್ದರೂ ಇವರ ಧ್ಯೇಯ ಮತ್ತು ಸಿದ್ಧಾಂತಗಳು ಒಂದೇ.ಇವರ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಹೇಳುವ ಅಗತ್ಯವಿಲ್ಲ..ಏಕೆಂದರೆ ಈ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದೇ ಆಗಿದೆ..ಜಾತ್ಯಾತೀತ ತತ್ವದ ಹೆಸರಿನಲ್ಲಿ ಹಿಂದೂಗಳನ್ನು,ಹಿಂದೂ ಧರ್ಮವನ್ನು,ಹಿಂದೂಗಳ ಧಾರ್ಮಿಕ ಆಚರಣೆಗಳನ್ನು,ಹಿಂದೂ ದೇವತೆಗಳನ್ನು,ಹಿಂದೂಗಳ ಇತಿಹಾಸವನ್ನು ಮತ್ತು ನಂಬಿಕೆಯನ್ನು ಅಲ್ಲಗೆಳೆಯುವುದು ಮತ್ತು ಹೀಗೆಳೆಯುವುದು ಇವರ ಪ್ರಮುಖ ಧ್ಯೇಯವಾಗಿದೆ.

ಹಾಗೆಂದು ಈ ರೀತಿಯ ಮನಸ್ಥಿತಿಯುಳ್ಳವಳು ಇವಳೊಬ್ಬಳೇ ಅಲ್ಲ..ಇವಳಂತೆ ಇನ್ನೂ ಹಲವರಿದ್ದಾರೆ…ಹಿಂದಿ
ಸಿನೆಮಾಗಳು ಹಿಂದೂಗಳಭಾವನೆಗಳೊಂದಿಗೆ ಚೆಲ್ಲಾಟವಾಡುವುದು ಬಹಳ ಸಮಯದಿಂದ ನಡೆಯುತ್ತಿದೆ..ರಾಜ್ ಕುಮಾರ್ ಹಿರಾನಿ ಎಂಬ ಹೆಸರಾಂತ! ನಿರ್ದೇಶಿಕರು ಅಮೀರ್ ಖಾನ್   ಎಂಬ ನಟನನ್ನು ಹಾಕಿಕೊಂಡು ಪಿ.ಕೆ ಎಂಬ ಸಿನೆಮಾವನ್ನು ನಿರ್ಮಿಸಿದರು..ಮೌಢ್ಯದ ಕುರಿತಾಗಿ ವಿಚಾರಗಳನ್ನು ಹೊಂದಿದ್ದ ಈ ಸಿನೆಮಾ ಹಿಂದೂಗಳ ನಂಬಿಕೆಗಳನ್ನು ಅಪಹಾಸ್ಯವನ್ನೇ ತುಂಬಿ ಕೊಂಡಿದೆ.ಶಿವ ವೇಷಧಾರಿಯೊಬ್ಬ ಓಡಿ ಹೋಗುವುದು ಮಾತ್ರವಲ್ಲದೆ,ಹಿಂದೂಗಳ ಬಹಳಷ್ಟು ನಂಬಿಕೆಗಳನ್ನು ಮೂಢ ನಂಬಿಕೆಗಳೆಂದು ಬಿಂಬಿಸಲಾಗಿದೆ.ಅಷ್ಟು ಮಾತ್ರವಲ್ಲದೆ,ಭಾರತೀಯ ಹಿಂದೂ ಹೆಣ್ಣೊಬ್ಬಳು ಪಾಕಿಸ್ತಾನದ ಮುಸಲ್ಮಾನನನ್ನು ಮದುವೆಯಾಗುವಂತೆ ತೋರಿಸಿದ್ದಾರೆ..ಯಾಕೆ?? ಪಾಕಿಸ್ತಾನದ ಮುಸಲ್ಮಾನ ಹೆಣ್ಣೊಬ್ಬಳು ಭಾರತದ ಹಿಂದೂ ಹುಡುಗನನ್ನು ಮದುವೆಯಾಗುವಂತೆಯೂ ತೋರಿಸಬಹುದಾಗಿತ್ತು..ಮುಸಲ್ಮಾನರ ಮೂಢ ನಂಬಿಕೆಗಳ ಕುರಿತಾಗಿಯೂ ಸಿನೆಮಾ ಮಾಡಬಹುದಾಗಿತ್ತು ..ಆದರೆ ಯಾವೊಬ್ಬ ನಿರ್ದೇಶಕನೂ ಅಂತಹಾ ಸಾಹಸಕ್ಕೆ ಕೈ ಹಾಕುವುದಿಲ್ಲ.ಯಾಕೆಂದರೆ…ಕಮಲ್ ಹಾಸನ್  ಎಂಬ ನಿರ್ದೇಶಕ/ನಟನೊಬ್ಬ ವಿಶ್ವರೂಪಂ ಎಂಬ ಭಯೋತ್ಪಾದಕರ ಕುರಿತಾದ ಸಿನೆಮಾವನ್ನು ನಿರ್ಮಿಸಿದ್ದ.. ಮುಸಲ್ಮಾನರು ಯಾವರೀತಿಯಲ್ಲಿ ದಂಗೆ ಎದ್ದು ಗಲಭೆ ಎಬ್ಬಿಸಿದ್ದರೆಂದರೆ ಕೊನೆಗೆ ಅವನು ಸಿನೆಮಾದ ಅನೇಕ ದೃಶ್ಯಗಳಿಗೆ ಕತ್ತರಿ ಹಾಕಬೇಕಾಗಿ ಬಂದಿತ್ತು.. ಇನ್ನೊಂದು ಉದಾಹರಣೆ ಸಲ್ಮಾನ್ ರಾಷ್ಡಿ ಎಂಬ ಮುಸಲ್ಮಾನ ಲೇಖಕನೊಬ್ಬನ ಸೆಟಾನಿಕ್ ವೆರ್ಸಸ್ ಎಂಬ ಕೃತಿಯೊಂದು ಎಷ್ಟರಮಟ್ಟಿಗೆ ಸಂಚಲನ ಸೃಷ್ಟಿಸಿತ್ತು ಎಂದರೆ ಆ ಪುಸ್ತಕವನ್ನೇ ಭಾರತದಲ್ಲಿ ನಿಷೇಧಿಸಲಾಯಿತು..ತಸಲೀಮಾ ನಸರೀನ್ ಎಂಬ ಮಹಿಳೆ ಬಾಂಗ್ಲಾ ದೇಶದಿಂದ ಬಂದು ಭಾರತದಲ್ಲಿ ಆಶ್ರಯ ಪಡೆದಿದ್ದಾಳೆ..ಇದು ಮುಸಲ್ಮಾನರ ಸಹಿಷ್ಣುತೆಯ ಉದಾಹರಣೆಗಳು..ಅದಕ್ಕೆ ಹಿಂದೀ ಚಿತ್ರರಂಗದ ನಿರ್ದೇಶಕರಿಗಾಗಲಿ ನಟ ನಟಿಯರಿಗಾಗಲೀ ಮುಸಲ್ಮಾನರ ಕುರಿತಾಗಿ ಸಿನೆಮಾ ನಿರ್ಮಿಸುವ ಧೈರ್ಯವಿಲ್ಲ..ಅವರ ಹಾರಾಟಗಳೇನಿದ್ದರೂ ಹಿಂದೂಗಳ ಕುರಿತಾಗಿ ಮಾತ್ರ..ಸರಿಯಾಗಿ ಗಮನಿಸಿ. ಕೃಷ್ಣ,ರಾಧೇ ಮತ್ತು ರಾಮನನ್ನು ಅವಹೇಳನೆ ಮಾಡುವ ಹಲವಾರು ಹಾಡುಗಳು ಸಿನೆಮಾದಲ್ಲಿ ಇರುತ್ತವೆ,ಇಂತಹಾ ಹಾಡುಗಳು ಕ್ರೈಸ್ತನ ಕುರಿತಾಗಿಯೂ ಅಥವಾ ಕ್ರಿಸ್ತನ ಕುರಿತಾಗಿಯೂ ಇರುವುದುದಿಲ್ಲ ಯಾಕೆ?ಇಷ್ಟೆಲ್ಲಾ ಸಹಿಷ್ಣುತೆಕ ಬಳಿಕವೂ ಹಿಂದಿ ಸಿನೆಮಾದ ಪ್ರಕಾರ ಹಿಂದೂಗಳು ಅಸಹಿಷ್ಣುಗಳು.

ಇವುಗಳನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೂ ಬಾಲಿವುಡ್ ಗೂ ಭೂಗತಲೋಕಕ್ಕೂ ಅನಾದಿಕಾಲದಿಂದಲೂ ನಂಟಿರುವುದು ನಮಗೆಲ್ಲರಿಗೂ ತಿಳಿದಿದೆ..ಸಿನೆಮಾಗಳಲ್ಲಿ ಹೂಡುವ ಹಣವೂ ಭೂಗತಲೋಕದ್ದೆಂದು ತಿಳಿದಿದೆ.ಭಾರತ ಸರಕಾರ ಹಲವಾರು ವರ್ಷಗಳಿಂದ ಹುಡುಕುತ್ತಿರುವ ದಾವೂದ್ ಇಬ್ರಾಹಿಂ ಕೂಡಾ ಬಾಲಿವುಡ್ ನೊಂದಿಗೆ ನಂಟು ಹೊಂದಿದ್ದಾನೆ. ಪಿ.ಕೆ ಸಿನೆಮಾ ನಿರ್ದೇಶಿಸಿದ ಅದೇ ನಿರ್ದೇಶಕ ಸಂಜು ಎಂಬ ಸಿನೆಮಾ ನಿರ್ದೇಶಿಸಿದ್ದರು..ಭಯೋತ್ಪಾದಕರೊಂದಿಗೆ ನಂಟು ಹೊಂದಿರುವುದು ಮಾತ್ರವಲ್ಲದೆ ಎ.ಕೆ ೪೭ ಬಂದೂಕುಗಳನ್ನು ಹೊಂದಿರುವ ಗುರುತರ ಆರೋಪವೂ ಸಂಜಯ್ ದತ್ ಮೇಲಿತ್ತು..ಈ ಆರೋಪವು ಸಾಬೀತಾಗಿ ಸಂಜಯ್ ದತ್ ಶಿಕ್ಷೆಗೊಳಗಾಗಿ ಜೈಲುವಾಸವನ್ನೂ ಅನುಭವಿಸಿದ್ದರು..ಅಷ್ಟೇ ಅಲ್ಲದೆ ಅವರೊಬ್ಬ ಮಾದಕ ವ್ಯಸನಿಯೂ ಆಗಿದ್ದರು..ಇಷ್ಟೆಲ್ಲಾ ಆದರೂ ಸಿನೆಮಾದಲ್ಲಿ ಸಂಜಯ್ ದತ್ ಅವರನ್ನು ಅಮಾಯಕ ದಾರಿತಪ್ಪಿದ್ದ ಹುಡುಗನಂತೆ ತೋರಿಸಿ,ಸಂಜಯ್ ಮೇಲೆ ಸಾರ್ವಜನಿಕರಿಗೆ ಕರುಣೆ ಬರುವಂತೆ ಮಾಡಲಾಗಿದೆ.ಇನ್ನೊಂದು ಸಿನೆಮಾ ಮೊಹಮ್ಮದ್ ಅಜರುದ್ದೀನ್ ಎಂಬ ಕಳಂಕಿತ ಕ್ರಿಕೆಟ್ ಆಟಗಾರನ ಕುರಿತಾಗಿತ್ತು…

ನಜರುದ್ದೀನ್ ಷಾ ಎಂಬ ಪ್ರಭುದ್ದ ನಟ,ಜಾವೇದ್ ಅಕ್ತರ್ ಎಂಬ ಹೆಸರಾಂತ ಕವಿ ಇವರೆಲ್ಲರ ಮೋದಿ ದ್ವೇಷ ಎಲ್ಲರಿಗೂ ತಿಳಿದಿದೆ..ಅದರ ಮುಂದುವರೆದ ಭಾಗವಾಗಿ cAA  ಯಾ ವಿರುದ್ಧ jnu  ನಡೆಸುತ್ತಿದ್ದ ಪ್ರತಿಭಟನೆಯಲ್ಲೂ,ಮುಂಬೈ ನಲ್ಲಿ ನಡೆದ ಪ್ರತಿಭಟನೆಗಳಲ್ಲೂ ಈ ಸಿನೆಮಾ ಮಂದಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದು.ಪ್ರತಿಭಟನೆಯಲ್ಲಿ ಭಾಗಿಯಾಗಲು ಜನರು ರಸ್ತೆಗಿಳಿಯಬೇಕೆಂದು ಸಾಮಾಜಿಕಜಾಲತಾಣದಲ್ಲಿ ಕರೆಕೊಟ್ಟಿದ್ದ ಮಹಾನ್ ಫರ್ಹಾನ್ ಅಕ್ತರ್ ನ ಬಳಿ ಪ್ರತಿಭಟಿಸಲು ಕಾರಣವೇನೆಂದು ಕೇಳಿದಾಗ ಬೆಬ್ಬೆಬ್ಬೆ ಅಂದುಬಿಟ್ಟರು..ದೇಶಭಕ್ತ ಸೈನಿಕನ ಪಾತ್ರ ಮಾಡಿತ ತಕ್ಷಣ ದೇಶಭಕ್ತಿ ಮೂಡುವುದಿಲ್ಲವೆಂದು ವಿಕ್ಕಿ ಕೌಶಲ್ ಸಾಬೀತು ಪಡಿಸಿದರು.ಅಖಿಲೇಶ್ ಯಾದವ್ ನೀಡುತ್ತಿದ್ದ ೫೦,೦೦೦ ಗಳನ್ನು ಯೋಗೀಜೀ ನಿಲ್ಲಿಸಿದ್ದಾರೆಂಬ ಕೋಪಹೊಂದಿದ್ದ ಅನುರಾಗ್ ಕಶ್ಯಪ್ ಕೂಡಾ ರಸ್ತೆಗಿಳಿದರು.ಒಂದುಸಮಯದಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದ ಅನುರಾಗ್ ಮೊನ್ನೆ ಉಚ್ಚಸ್ವರದಿಂದ ರಾಷ್ಟ್ರಗೀತೆ ಹಾಡುತ್ತಿದ್ದದ್ದು ಕೂಡಾ ಮೋದಿಜಿಯ ಸಾಧನೆಯೇ ಸರಿ.ಆದರೆ ಪ್ರತೀ ಬಾರಿ ದೇಶವಿರೋಧೀ ಹೇಳಿಕೆ ನೀಡಿ ಕೊನೆಗೀಗ ಸಾಲು ಸಾಲು ಸಿನೆಮಾಗಳು ಸೋಲಲು ಪ್ರಾರಂಭವಾದಾಗ ಪಾಠ ಕಲಿತಿರುವ ಖಾನ್ ತ್ರಯರು ಈ ಬಾರಿ ಸುಮ್ಮನಿರುವುದು ವಿಶೇಷ..ಸಿನೆಮಾ ಪ್ರಚಾರಕ್ಕಾಗಿ ಮತ್ತು ಹಣಗಳಿಕೆಗಾಗಿ ಈ ಸಿನೆಮಾ ಮಂದಿ ಕ್ಯಾಮರಾದ ಹಿಂದೆಯೂ ಅಭಿನಯಿಸಲು ಹಿಂದೆ ಬೀಳುವುದಿಲ್ಲವೆಂದು ಮೊನ್ನೆಯ ದೀಪಿಕಾಳ ನಡವಳಿಕೆಯಿಂದ ಅರಿವಾಯಿತು..ಪದ್ಮಾವತ್ ಇರಬಹುದು,ರಾಮ್ಲೀಲಾ ಇರಬಹುದು,ಬಾಜೀರಾವ್ ಮಸ್ತಾನಿ ಇರಬಹುದು..ಪ್ರತಿಯೊಂದು ಬಾರಿಯೂ ಆಕೆಯ ಸಿನೆಮಾ ವಿವಾದಗಳಿಂದಲೇ ಪ್ರಚಾರವನ್ನು ಪಡೆದದ್ದು..ಆಗೆಲ್ಲ ಹಿಂದೂಗಳೂ ಆಕೆಯನ್ನು ಬೆಂಬಲಿಸಿದ್ದರು..ಆದರೆ ಈ ಬಾರಿ ಪ್ರಶ್ನೆ ಕೇವಲ ಧರ್ಮದ್ದು ಮಾತ್ರವಲ್ಲ..ಈ ಬಾರಿ ವಿಚಾರ ರಾಷ್ಟ್ರದ್ದು ಮತ್ತು ರಾಷ್ಟ್ರದ ಭದ್ರತೆಯದ್ದು..ಈ ಬಾರಿ ಆಕೆಯ ಕಟ್ಟಾ ಅಭಿಮಾನಿಗಳ ಗೌರವವನ್ನೂ ಆಕೆ ಕಳೆದುಕೊಂಡಿದ್ದಾಳೆ..ಆಕೆ ಮಾತ್ರವಲ್ಲ ಬಹಳಷ್ಟು ಸಿನೆಮಾ ತಾರೆಯರು ತಮ್ಮ ಗೌರವವನ್ನು ಕಳೆದುಕೊಂಡಿದ್ದಾರೆಂಬುದು ನೂರರಷ್ಟು ಸತ್ಯ..

Deepashree.M

Tags

Related Articles

FOR DAILY ALERTS
Close