I.N.D.I.A. ಒಕ್ಕೂಟ (ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ವಿರೋಧಿಗಳ ಬಣ) ದ ಮೇಲೆ ದೇಶವಾಸಿಗಳಿಗೆ ಒಂದು ಸಂಶಯದ ನೆರಳು ಮನದಲ್ಲಿ ಮನೆ ಕಟ್ಟಿತ್ತು. ಅದು ದೇಶವನ್ನು ಒಡೆಯುವ, ಹಿಂದೂ ಧರ್ಮದ ವಿರುದ್ಧ ಕಟ್ಟಲಾದ ಕೋಟೆ ಎಂಬ ಸಂದೇಹಕ್ಕೆ ಈಗ ಪುಷ್ಟಿ ದೊರಕಿದೆ.
ಇಂಡಿಯಾ ಎಂಬ ಹೆಸರನ್ನಿಟ್ಟು ದೇಶವನ್ನು ಕೊಳ್ಳೆ ಹೊಡೆಯಲು ತಂತ್ರ ಹೂಡುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಬಣ್ಣ ದಿನದಿಂದ ದಿನಕ್ಕೆ ಬಟಾ ಬಯಲಾಗುತ್ತಿದೆ. ತೊಟ್ಟ ಮುಖವಾಡ ಕಳಚಿ ಬೀಳುವ ಮೂಲಕ ನಿಜಕ್ಕೂ ಯಾತಕ್ಕಾಗಿ ಈ ಒಕ್ಕೂಟ ರಚನೆಯಾಗಿದೆ, ಇದರ ಹಿಂದಿನ ಕುತಂತ್ರವಾದರೂ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಿದೆ. ಈ ಒಕ್ಕೂಟದ ವಿರುದ್ಧ ಪ್ರಧಾನಿ ಮೋದಿ ಅಥವಾ ಮಿತ್ರ ಪಕ್ಷಗಳು ಯಾವುದೇ ಸುದ್ದಿಗೆ ಹೋಗದಿದ್ದರೂ, ತಾನೇ ಮಾಡುತ್ತಿರುವ ಎಡವಟ್ಟುಗಳ ಮೂಲಕ ಇಂಡಿಯಾ ಒಕ್ಕೂಟಕ್ಕೆ ಕೈ ಜೋಡಿಸಿರುವ ಪಕ್ಷಗಳು ತಮ್ಮ ನಿಜ ಬಣ್ಣವನ್ನು ಬದಲಾಗುವ ಹಾಗೆ ಮಾಡುತ್ತಿರುವುದು ಸತ್ಯ. ಜನರೆದುರು ತಾವೇ ಬೆತ್ತಲಾಗುತ್ತಿವೆ ಎನ್ನುವುದು ಸಹ ಸತ್ಯ.
ಭಾರತದ ಶ್ರೇಷ್ಟ ಪರಂಪರೆಯಾದ, ಭಾರತದ ಬೇರಾದ ಸನಾತನ ಧರ್ಮ, ಹಿಂದೂ ಧರ್ಮವನ್ನು ಅವಹೇಳನ ಮಾಡುವ ಮೂಲಕ ಇಂಡಿಯಾ ಒಕ್ಕೂಟದಲ್ಲಿ ಕೈಜೋಡಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟ್ಯಾಲಿನ್ ಪುತ್ರ ಉದಯ ನಿಧಿ ಸ್ಟ್ಯಾಲಿನ್ ನಾಲಿಗೆ ಹರಿಯ ಬಿಟ್ಟಿದ್ದು ಹಳೆಯ ವಿಷಯ. ಹಿಂದೂಗಳ ವಿರುದ್ಧ ಹೇಳಿಕೆ ನೀಡುವುದು, ಹಿಂದೂಗಳನ್ನು ಅವಹೇಳನ ಮಾಡುವುದೇ ಜೀವನದ ಗುರಿ ಎಂಬಂತೆ ಇಂಡಿಯಾ ಒಕ್ಕೂಟದ ನಾಲಾಯಕು ನಾಯಕರು ವರ್ತಿಸುತ್ತಿರುವುದು ಇದೇ ಮೊದಲಲ್ಲ. ಈ ದೇಶವನ್ನು ಧರ್ಮಾಧಾರದಲ್ಲಿ ಒಡೆದು, ತಮ್ಮ ಬೇಳೆ ಬೇಯಿಸಿ ಕೊಲ್ಲುವ ಕುತಂತ್ರ ದೇಶ ವಿರೋಧಿ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳದ್ದು ಎನ್ನುವುದು ನಿರ್ವಿವಾದ.
ಉದಯ ನಿಧಿ ಸನಾತನ ಧರ್ಮದ ವಿರುದ್ಧ ಅಪಚಾರ ಎಸಗಿದ್ದರೂ, ಇದರ ಬಗ್ಗೆ ಸೊಲ್ಲೆತ್ತದಿರುವ ಇಂಡಿಯಾ ಒಕ್ಕೂಟದ ಇತರ ಪಕ್ಷಗಳು, ಈ ದೇಶದ ಸಂಸ್ಕೃತಿ, ಮೂಲವನ್ನು ನಾಶ ಮಾಡುವುದಕ್ಕಾಗಿಯೇ ಹುಟ್ಟಿಕೊಂಡಿವೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ ನುಡಿವಂತಿದೆ. ಸಾರ್ವಜನಿಕ ವಲಯದಲ್ಲಿ ಅಶಾಂತಿ ಸೃಷ್ಟಿ ಮಾಡುವುದು, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚಿ ಭಾರತವನ್ನು ತುಂಡರಿಸುವುದಕ್ಕೆಂದೇ ಈ ಒಕ್ಕೂಟ ರಚನೆಯಾಗಿದೆಯೋ ಎನ್ನುವಂತಿದೆ ಈ ಒಕ್ಕೂಟದ ಸದಸ್ಯ ಪಕ್ಷಗಳ ಸದ್ಯದ ನಡೆ ನುಡಿ.
ಅಂದ ಹಾಗೆ ಉದಯ ನಿಧಿ ನೀಡಿರುವ ಹೇಳಿಕೆಯಿಂದ ಸನಾತನ, ಹಿಂದೂ ಧರ್ಮದ ಮೇಲೆ ಯಾವ ಅಪಾಯವೂ ಆಗದು. ನಾಯಿ ಬೊಗಳಿದ ಮಾತ್ರಕ್ಕೆ ದೇವ ಲೋಕ ಹಾಳಾಗುತ್ತದೆ ಎಂಬ ಕಲ್ಪನೆಯೇ ತಪ್ಪು. ಉದಯ ನಿಧಿಯ ಮಾನಸಿಕ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು, ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ಹೀಗೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾನೆ ಎಂದುಕೊಂಡರಾಯಿತು. ತಲೆಗೆ ಏಟು ಬಿದ್ದು ಮತಿ ಹೀನರಾದವರ ಮಾತನ್ನು ಹೇಗೆ ನಾವು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲವೋ, ಹಾಗೆಯೇ, ಉದಯ ನಿಧಿ ಯಂತಹ ಮತು ಹೀನನ ಮಾತನ್ನು ಸಹ ಕಡೆಗಣಿಸಿದರಾಯ್ತು. ನಮ್ಮ ಅರ್ಧಕ್ಕರ್ಧ ಗೆದ್ದಂಯೇ ಸರಿ.
ಸನಾತನ ಧರ್ಮದ ಸಹಿಷ್ಣುತೆಯ ಅರಿವಿರುವ ಉದಯ ನಿಧಿ ತಾನು ಏನೇ ಹೇಳಿಕೆ ಕೊಟ್ಟರೂ ಜೀವ ಮತ್ತು ಜೀವನಕ್ಕೆ ಅದರಿಂದ ಅಪಾಯ ಆಗಲಾರದು ಎಂಬುದನ್ನು ಚೆನ್ನಾಗಿ ಬಲ್ಲ.ಅದೇ ಆತ ಇಸ್ಲಾಂ, ಕ್ರೈಸ್ತ ಧರ್ಮಕ್ಕೆ ಅವಹೇಳನ ಮಾಡಿದ್ದಿದ್ದರೆ ಇಷ್ಟು ಹೊತ್ತಿಗೆ ಆತನ ಸ್ಥಿತಿ ಶೋಚನೀಯವಾಗುತ್ತಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಈತನ ಈ ಹೇಳಿಕೆಯನ್ನು ವಿರೋಧಿಸಿ ಕ್ರಮ ಕೈಗೊಳ್ಳದ ಇಂಡಿಯಾ ಒಕ್ಕೂಟಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಜೊತೆಗೆ ಇಂತಹ ದೇಶದ್ರೋಹಿ ಸಂಘಟನೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ ಎನ್ನುವುದರಲ್ಲಿಯೂ ಎರಡು ಮಾತಿಲ್ಲ. ದೇಶ ಕೊಳ್ಳೆ ಹೊಡೆಯಲು ಹೊರಟ ಇಂಡಿಯಾ ಒಕ್ಕೂಟದ ಬಣ್ಣ ಈಗಲೇ ಬಯಲಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯ.