ಅಂಕಣ

ಬಯಲಾಯಿತು ಮತ್ತೊಂದು ಬಹುಕೋಟಿ ಬ್ಯಾಂಕ್ ವಂಚನೆ ಪ್ರಕರಣ !! ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಬ್ಯಾಂಕ್ ಅಧಿಕಾರಿಗಳಿಗೆ ಇನ್ಮುಂದೆ ಜೈಲೂಟ ಗ್ಯಾರೆಂಟಿ!!

“ನರೇಂದ್ರ ಮೋದಿಯವರು ಎಂ.ಬಿ.ಬಿ.ಎಸ್. ಪದವಿ ಹೊಂದಿಲ್ಲದೇ ಇರಬಹುದು ಆದರೆ ದೇಶಕ್ಕೆ ಭಾದಿಸಿರುವ ರೋಗಗಳಿಗೆ ಚಿಕಿತ್ಸೆ ನೀಡುವ ಅತ್ಯುತ್ತಮ ವೈದ್ಯರಾಗಿದ್ದಾರೆ” ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿರುವ ಮಾತು ಅಕ್ಷರಶಃ ನಿಜ ಎಂದೆನಿಸುತ್ತೆ!! ಯಾಕೆಂದರೆ ಈಗಾಗಲೇ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ನಡೆಸುತ್ತಿರುವ ನರೇಂದ್ರ ಮೋದಿಜೀ ದೇಶದಲ್ಲಿ ಅಂಟಿರುವ ಭ್ರಷ್ಟಾಚಾರ ಎನ್ನುವ ಕೊಳೆಯನ್ನು ಒಂದೊಂದಾಗಿಯೇ ಕಿತ್ತೊಗೆಯುತ್ತಿದ್ದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕರಣದ ಬಳಿಕ ಮತ್ತೊಂದು ಬ್ಯಾಂಕ್ ವಂಚನೆ ಪ್ರಕರಣ ಇದೀಗ ಬೆಳಕಿಗೆ ಬಂದಿದೆ!!

ಹೌದು…. ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ದೇಶಬಿಟ್ಟು ಪರಾರಿಯಾದ ನೀರವ್ ಗೆ ಸೇರಿದ ಬರೋಬ್ಬರಿ 56740000000 ರೂಪಾಯಿಯನ್ನು ಮುಲಾಜಿಲ್ಲದೆ ವಶಪಡಿಸಿಕೊಂಡಿದ್ದಲ್ಲದೇ ಖಡಕ್ ಕ್ರಮ ಕೈಗೊಂಡಿರುವ ನರೇಂದ್ರ ಮೋದಿ ಭ್ರಷ್ಟರಿಗೆ ಈ ಮೂಲಕ ಮತ್ತೊಮ್ಮೆ ನಡುಕ ಹುಟ್ಟಿಸಿದ್ದರು!! ಆದರೆ ಇದೀಗ ಆಕ್ಸಿಲ್ ಸನ್ಶೈನ್ ಲಿಮಿಟೆಡ್ ಮತ್ತು ಇನ್ನಿತರ ಕಂಪೆನಿಗಳ ಸಾಲದ ಖಾತೆಗಳ ಮೂಲಕ ಸುಮಾರು 600 ಕೋಟಿ ರೂಪಾಯಿ ವಂಚನೆ ನಡೆದಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತಂತೆ ಮತ್ತೊಂದು ದಿಟ್ಟ ಹೆಜ್ಜೆಯನ್ನು ಕೇಂದ್ರ ಸರ್ಕಾರವು ತೆಗೆದುಕೊಂಡಿದೆ!!

ಭ್ರಷ್ಟಾಚಾರ ವಿರೋಧಿಯಾಗಿ ಪ್ರಧಾನಿ ಮೋದಿ ತೆಗೆದುಕೊಂಡ ನೋಟ್ ಬ್ಯಾನ್ ಹಾಗೂ ಪರಿಣಾಮಕಾರಿ ಜಿ ಎಸ್ ಟಿ ಕ್ರಮವನ್ನು ಅಂತರಾಷ್ಟ್ರೀಯ ಸಂಸ್ಥೆಗಳಲ್ಲದೆ ಹಲವಾರು ಆರ್ಥಿಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಪ್ರಧಾನಿ ಮೋದಿಯ ಎದೆಗಾರಿಕೆಯ ನಿರ್ಧಾರವೆಂದು ಬಣ್ಣಿಸಿದ್ದರು. ಅಷ್ಟೇ ಅಲ್ಲದೇ ನೋಟ್ ಬ್ಯಾನ್, ಜಿ ಎಸ್ ಟಿ ಅಂತಹ ಕ್ರಮಗಳಿಂದಾಗಿ ಭ್ರಷ್ಟರು ಕಂಗೆಟ್ಟಿ ಹೋದದ್ದಂತೂ ಅಕ್ಷರಶಃ ನಿಜ. ಆದರೆ ಇದೀಗ ಐಡಿಬಿಐ ಬ್ಯಾಂಕಿನಲ್ಲಿ 600 ಕೋಟಿ ರೂಪಾಯಿ ವಂಚನೆ ಹಗರಣ ನಡೆದಿದ್ದು, ಐಡಿಬಿಐ ಬ್ಯಾಂಕಿನ 15 ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಏರ್ಸೆಲ್ ಸಂಸ್ಥಾಪಕ ಸಿ. ಶಿವಶಂಕರನ್ ಮತ್ತು ಖಾಸಗಿ ಕಂಪೆನಿಗಳ ಸದಸ್ಯರು ಸೇರಿದಂತೆ 24 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

Image result for idbi

ಹೌದು…….. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳೆಲ್ಲವೂ ನರೇಂದ್ರ ಮೋದಿಯ ರಾಜತಾಂತ್ರಿಕತೆಯ ಯಶಸ್ಸಿನಿಂದಾಗಿ ಒಂದೊಂದೇ ಹೊರಬೀಳುತ್ತಿದ್ದು, ಅವುಗಳಲ್ಲಿ ಬಹುಕೋಟಿ ಬ್ಯಾಂಕ್ ಹಗರಣಗಳು ಒಂದಾಗಿದ್ದು, ಇದರ ಸಾಲಿಗೆ ಐಡಿಬಿಐ ಬ್ಯಾಂಕಿನಲ್ಲಿ ನಡೆದಿರುವ 600 ಕೋಟಿ ರೂಪಾಯಿ ವಂಚನೆ ಹಗರಣವೂ ಸೇರಿಕೊಂಡಿದೆ!! ಹಾಗಾಗಿ, 1988 ರ ಭ್ರಷ್ಟಾಚಾರ ಆಕ್ಟ್, 13 (1) (ಡಿ) ರೊಂದಿಗೆ ಸೆಕ್ಷನ್ 13 (2) ರ ಅಡಿಯಲ್ಲಿ ಸೆಕ್ಷನ್ 120-ಬಿ, 409, ಮತ್ತು 420 ರ ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿ ಕೊಂಡಿದೆ.

ಐಡಿಬಿಐ ಬ್ಯಾಂಕ್ ಮತ್ತು ಆಕ್ಸಲ್ ಸನ್ಶೈನ್ ಲಿಮಿಟೆಡ್ ಜೊತೆಗೆ ಸಿಬಿಐ ಫಿನ್ಲೆಂಡ್ ಮೂಲದ ವಿನ್ ವಿಂಡ್ ಓಯ್ ಮತ್ತು ಸೀಶೆಲ್ಸ್ ಮೂಲದ ಸಿವಾ ಇನ್ವೆಸ್ಟ್ಮೆಂಟ್ಸ್ ಮತ್ತು ಹೋಲ್ಡಿಂಗ್ಸ್ ಲಿಮಿಟೆಡ್ ಕೂಡ ವಂಚನೆ ಪ್ರಕರಣದಲ್ಲಿ ಬಾಗಿಯಾಗಿವೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ವಂಚನೆಗೀಡಾದ ಐಡಿಬಿಐ ಅಕ್ಟೋಬರ್ 2010 ರಲ್ಲಿ 322 ಕೋಟಿ ಹಣವನ್ನು ವಿನ್ ವಿಂಡ್ ಆಯಿ ಕಂಪನಿಗೆ ಸಾಲ ಮಂಜೂರ ಮಾಡಿತು, ಇದಕ್ಕೆ ಕಂಪನಿ ಪರಿಯಾಗಿ ಕಂಪೆನಿಯು ದಿವಾಳಿಯೆಂದು ಘೋಷಿಸಿಕೊಂಡಿದೆ.

ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಹಿಡಿದಂದಿನಿಂದಲೂ ಭ್ರಷ್ಟ ಕುಳುಗಳನ್ನು ಮಟ್ಟಹಾಕುತ್ತಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಶ್ರೀಮಂತರು ಬ್ಯಾಂಕುಗಳಿಗೆ ಟೋಪಿ ಹಾಕಿ ಓಡಿಹೋಗುತ್ತಿದ್ದಾರೆಂದು ಆರೋಪಿಸುತ್ತಿರುವ ಕಾಂಗ್ರೆಸ್‍ಗೆ ಮುಜುಗರ ತರುವಂತಹ ಬೆಳವಣಿಗೆಯೊಂದರಲ್ಲಿ ಪಂಜಾಬ್‍ನ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ಮುಖಂಡ ಅಮರೀಂದರ್ ಸಿಂಗ್ ಅವರ ಅಳಿಯನೇ ಸಿಕ್ಕಿಬಿದ್ದು ಬಾರೀ ಸುದ್ದಿಯಾಗಿದ್ದರು. ಇತ್ತೀಚೆಗಷ್ಟೇ ನೀರವ್ ಮೋದಿ ವಂಚನೆ ಪ್ರಕರಣದ ಬೆನ್ನಲ್ಲೇ ಹೈದರಾಬಾದ್ ನಲ್ಲಿ ಯೂನಿಯನ್ ಬ್ಯಾಂಕ್ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಹೈದರಾಬಾದ್ ನ ತೋಟೆಮ್ ಇನ್ಫಾಸ್ಟ್ರಕ್ಚರ್ ಕಂಪನಿ ಯೂನಿಯನ್ ಬ್ಯಾಂಕಿಗೆ ರೂ. 313.84 ಕೋಟಿ ವಂಚಿಸಿರುವ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡು ಸುದ್ದಿಯಾಗಿತ್ತು!!

ಆದರೆ ಈಗಾಗಲೇ ಭಾರತದಲ್ಲಿ ಸುಮಾರು 60 ಸಾವಿರ ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ವಂಚನೆ ಪ್ರಕರಣಗಳು ನಡೆದಿವೆ ಎಂದು ಆರ್ ಟಿ ಐ ಅರ್ಜಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ದತ್ತಾಂಶಗಳಿಂದ ಈ ಮಾಹಿತಿ ಬಹಿರಂಗವಾಗಿತ್ತು!! ಅಷ್ಟೇ ಅಲ್ಲದೇ, ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿ ಹಕ್ಕು ಕಾಯ್ದೆ ಮಾಹಿತಿಯನ್ವಯ ಸರ್ಕಾರಿ ಆಡಳಿತ ಇರುವ ಬ್ಯಾಂಕ್ ಗಳಲ್ಲೇ ಸುಮಾರು 8, 670 ಕೋಟಿ ರೂಪಾಯಿ ವಂಚನೆಗಳಾಗಿದೆ ಎಂದು ತಿಳಿದುಬಂದಿದೆ. ಆರ್ ಟಿ ಐ ಅರ್ಜಿ ಮೂಲಕ ಭಾರತದ ಪ್ರಮುಖ 21 ಬ್ಯಾಂಕ್ ಗಳ ಪೈಕಿ 20 ಬ್ಯಾಂಕ್ ಗಳಲ್ಲಿನ ವಂಚನೆ ಪ್ರಕರಣದ ಮಾಹಿತಿ ಲಭ್ಯವಾಗಿದೆ.

ಹಾಗಾಗಿ ಇದೀಗ ಆಕ್ಸಿಲ್ ಸನ್ಶೈನ್ ಲಿಮಿಟೆಡ್ ಮತ್ತು ಇನ್ನಿತರ ಕಂಪೆನಿಗಳ ಸಾಲದ ಖಾತೆಗಳ ಮೂಲಕ ಸುಮಾರು 600 ಕೋಟಿ ರೂಪಾಯಿ ವಂಚನೆ ನಡೆದಿರುವ ಆರೋಪದ ಮೇಲೆ ಐಡಿಬಿಐ ಬ್ಯಾಂಕಿನ 15 ಮಾಜಿ ಹಿರಿಯ ಅಧಿಕಾರಿಗಳು ಮತ್ತು ಖಾಸಗಿ ಕಂಪೆನಿಗಳ ಸದಸ್ಯರು ಸೇರಿದಂತೆ 24 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, ಭ್ರಷ್ಟರ ವಿರುದ್ಧ ಬ್ರಹ್ಮಾಸ್ತ್ರ ಹೂಡಲು ಇದೀಗ ಮತ್ತೊಮ್ಮೆ ಸಜ್ಜಾಗಿ ನಿಂತಿದೆ!!

ಮೂಲ:
http://zeenews.india.com/kannada/india/idbi-bank-fraud-15-senior-bank-officials-have-booked-5405

http://www.thehindu.com/business/Industry/idbi-bank-fraud-case-cbi-books-indian-bank-and-syndicate-bank-chiefs-aircel-founder/article23684141.ece

– ಅಲೋಖಾ

Tags

Related Articles

Close