ಪ್ರಚಲಿತ

ಕಾಶ್ಮೀರದಲ್ಲಿ ಉದ್ಯೋಗಕ್ಕೆಂದು ತೆರಳಿದವರು ಏನಾಗುತ್ತಾರೆ ಗೊತ್ತೇ?? ಬೆಚ್ಚಿ ಬೀಳಿಸಿದೆ ಉಗ್ರರ ಮಾಸ್ಟರ್ ಪ್ಲಾನ್!! 

ಈಗಾಗಲೇ ಜಮ್ಮು-ಕಾಶ್ಮೀರದಲ್ಲಿ ಅಧಿಕೃತವಾಗಿ ರಾಜ್ಯಪಾಲರ ಆಡಳಿತಕ್ಕೆ ವೇದಿಕೆ ಸಜ್ಜಾಗಿದ್ದು, ಎನ್.ಎನ್. ವೋಹ್ರಾ ಅಧಿಕಾರ ಸ್ವೀಕರಿಸಿದ ಬೆನ್ನಲ್ಲಿಯೇ ಭಾರತೀಯ ಸೇನೆ ಉಗ್ರರನ್ನು ಮಟ್ಟಹಾಕಲು ಕಣಿವೆ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆ ನಡೆಸಲು ಸಜ್ಜಾಗಿರುವ ವಿಚಾರ ಗೊತ್ತೇ ಇದೆ!! ಅಷ್ಟೇ ಅಲ್ಲದೇ, ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತವಾದಿಗಳ ಹುಟ್ಟಡಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದಿಟ್ಟ ನಿಲುವುಗಳನ್ನು ಕೈಗೊಂಡಿರುವ ಬೆನ್ನಲ್ಲೇ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹುನ್ನಾರವೊಂದು ಬಯಲಾಗಿದೆ.

ಹೌದು… ಜಮ್ಮು-ಕಾಶ್ಮೀರದಲ್ಲಿ ಎನ್.ಎನ್. ವೋಹ್ರಾ ಅಧಿಕಾರ ಸ್ವೀಕರಿಸಿದ್ದು, ಈ ಬೆನ್ನಲ್ಲೇ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಶುರು ಮಾಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದರು!! ಹಾಗಾಗಿ ಕಣಿವೆ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ಕಾಪಾಡಲು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿರುವ ಕೇಂದ್ರ ಸರಕಾರವು ಮೋಸ್ಟ್ ವಾಂಟೆಡ್ ನಕ್ಸಲರನ್ನು ಹೊಡೆದುರುಳಿಸಿರುವ ನಿವೃತ್ತ ಐಪಿಎಸ್ ಅಧಿಕಾರಿಯೊಬ್ಬರನ್ನು ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ಸಲಹೆಗಾರರಾಗಿ ನೇಮಕವನ್ನೂ ಮಾಡಿದ್ದಾರೆ.

ಕಣಿವೆ ರಾಜ್ಯದಲ್ಲಿ ಎದುರಾಗಿರುವ ರಾಷ್ಟ್ರಪತಿ ಆಡಳಿತ ಲಾಭವನ್ನು ಪಡೆದು, ಉಗ್ರ ಮತ್ತು ಪ್ರತ್ಯೇಕತವಾದಿಗಳ ಹುಟ್ಟಡಗಿಸಲು ನರೇಂದ್ರ ಮೋದಿ ಸರಕಾರವು ಮಹತ್ವದ ನಿಲುವು ವ್ಯಕ್ತಪಡಿಸಿದೆ. ಆ ನಿಟ್ಟಿನಲ್ಲಿ ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್ ಎನ್ ವೊಹ್ರಾ ಅವರಿಗೆ ಆಪರೇಷನ್ ಕುಕೂನ್ ಮೂಲಕ ನಕ್ಸಲ್ ಕಿಂಗ್ ಪಿನ್ ಗಳನ್ನು ಸದೆಬಡೆಯುವುದು ಸೇರಿ ಮಹತ್ವದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸೂಪರ್ ಕಾಪ್ ಕೆ. ವಿಜಯಕುಮಾರ್ ಅವರನ್ನು ಸಲಹೆಗಾರನಾಗಿ ಕೇಂದ್ರ ಸರಕಾರ ನೇಮಿಸಿರುವ ಬೆನ್ನಲ್ಲೇ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹುನ್ನಾರವೊಂದು ಬಯಲಾಗಿದೆ.

ಉದ್ಯೋಗಕ್ಕೆಂದು ಅರಸಿ ಬಂದವರು ಕಲ್ಲು ತೂರಾಟಗಾರರಾಗಿ ಮಾರ್ಪಾಡು!!

ಕಾಶ್ಮೀರದಲ್ಲಿ ಸೈನಿಕರ ಮೇಲೆ ನಡೆಯುತ್ತಿರುವ ಕಲ್ಲು ತೂರಾಟ ದೇಶದಲ್ಲಿ ತೀವ್ರ ವಾಗ್ವಾದಕ್ಕೀಡಾಗಿರುವ ವಿಷಯವಾಗಿದ್ದು. ಇವರೂ ಉಗ್ರರೇ ಎಂಬುದು ಒಂದು ವರ್ಗದವರ ವಾದವಾದರೆ, “ಅಲ್ಲ ಹೋರಾಟಗಾರರಷ್ಟೇ’ ಎಂಬುದು ಎಡಪಂಥೀಯರ ಪಟ್ಟು. ಕಾಶ್ಮೀರ ಪ್ರತ್ಯೇಕತಾವಾದಿಗಳಿಂದ ಪ್ರಚೋದಿತರು ಎನ್ನಲಾದ ಇಲ್ಲಿಯ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎಸೆಯುವ ಕಲ್ಲುಗಳು ಭದ್ರತಾ ಪಡೆಗಳಿಗೆ ಭಾರೀ ಸವಾಲಾಗಿರುವುದಂತೂ ನಿಜ.

ಏಕೆಂದರೆ, ಇವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದರೆ ಕಾಶ್ಮೀರದ ವಿರೋಧ ಪಕ್ಷ ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಎಡಪಕ್ಷಗಳು ಕೋಲಾಹಲ ಎಬ್ಬಿಸುತ್ತವೆ. ಆದರೆ ಉದ್ಯೋಗವನ್ನು ಹರಸಿ ಬಂದವರು ಕಲ್ಲು ತೂರಾಟಗಾರರಾಗಿ ಮಾರ್ಪಾಡು ಆಗುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ನಿಜಕ್ಕೂ ಕೂಡ ಆತಂಕವನ್ನು ಸೃಷ್ಟಿಸಿದೆ.

ಈ ಕುರಿತು ಪೊಲೀಸ್ ನಿರ್ದೇಶಕ ಒ.ಪಿ.ಸಿಂಗ್ ಮಾಹಿತಿ ನೀಡಿದ್ದು, ಉತ್ತರ ಪ್ರದೇಶದ ಭಾಗ್ಪತ್ ಹಾಗೂ ಸಹರಾನ್ಪುರ ಜಿಲ್ಲೆಯಿಂದ ಕಾಶ್ಮೀರಕ್ಕೆ ಉದ್ಯೋಗಕ್ಕೆಂದು ಅರಸಿ ಬಂದಿದ್ದ ಆರು ಯುವಕರು ಈಗ ಕಲ್ಲು ತೂರಾಟಗಾರರಾಗಿ ಮಾರ್ಪಾಡಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಉತ್ತರ ಪ್ರದೇಶದಿಂದ ಉದ್ಯೋಗಕ್ಕೆಂದು ಜಮ್ಮು-ಕಾಶ್ಮಿರಕ್ಕೆ ಹೋದವರು ಅಲ್ಲಿ ಪ್ರತ್ಯೇಕತವಾದಿಗಳ ಉಪಟಳದಿಂದ ಕಲ್ಲು ತೂರಾಟಗಾರರಾಗಿ ಬದಲಾಗಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ವಿಪರ್ಯಾಸವೇ ಸರಿ!!

ಉದ್ಯೋಗಕ್ಕೆಂದು ಅರಸಿ ಬಂದವರು ಕಲ್ಲು ತೂರಾಟಗಾರರಾಗಿ ಬದಲಾಗಿ, ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದಿರುವುದಾದರೂ ಹೇಗೆ ಗೊತ್ತೇ???

ಸುಮಾರು 20 ಸಾವಿರ ಸಂಬಳ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಈ ಯುವಕರು ಪುಲ್ವಾಮಾದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು!! ಆದರೆ ಅಲ್ಲಿ ಇವರಿಗೆ ವಾಹನ ತೊಳೆಯಲು ಸೇರಿ ಹಲವು ಕೌಶಲವೇ ಬೇಕಾದ ಕೆಲಸವನ್ನು ಇವರಿಗೆ ನೀಡಿದ್ದರು!! ಇದು ಮಾತ್ರವಲ್ಲದೇ, ಉತ್ತರ ಪ್ರದೇಶದ ಈ ಯುವಕರಿಗೆ ಕಲ್ಲು ತೂರಾಟ ಮಾಡುವ ಕುರಿತು ಇಲ್ಲಿ ತರಬೇತಿ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

ಇನ್ನು, ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾದ ಕಾರಣ, ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಾಗ ಈ ಯುವಕರನ್ನು ಛೂ ಬಿಟ್ಟು, ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ಮಾಡಲು ಬಿಟ್ಟಿದ್ದರು!! ಆದರೆ ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಮರುದಾಳಿ ಮಾಡಿದಾಗ ಇವರು ಯಾರದ್ದೋ ಮನೆಯಲ್ಲಿ ಅಡಗಿದ್ದು, ಆಗ ಭದ್ರತಾ ಸಿಬ್ಬಂದಿಗಳ ಕೈಗೆ ಸಿಕ್ಕಿ ಹಾಕಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದಾಗ ಇವರು ಉತ್ತರ ಪ್ರದೇಶದವರೆಂದೂ, ಉದ್ಯೋಗಕ್ಕೆ ಇಲ್ಲಿ ಬಂದಿದ್ದು, ಈಗ ಕಲ್ಲು ತೂರಾಟಗಾರರಾಗಿ ಮಾರ್ಪಾಡಾಗಿದ್ದಾರೆ ಎಂದೂ ತಿಳಿದು ಬಂದಿದೆ. ಇನ್ನು ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಡಿಜಿಪಿ ತಿಳಿಸಿದ್ದಾರೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಬಾರಿ ಅಮರನಾಥ ಯಾತ್ರೆ ವೇಳೆ ಉಗ್ರರು ದಾಳಿ ನಡೆಸಿದಂತೆಯೇ ಈ ಬಾರಿ ಈ ದಾಳಿಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿರುವ ಕೇಂದ್ರ ಸರಕಾರವು ಈಗಾಗಲೇ ಭದ್ರತಾ ಕ್ರಮಗಳನ್ನು ಹೆಚ್ಚಿಸುತ್ತಿದೆಯಲ್ಲದೇ ಉಗ್ರರನ್ನು ಸದೆಬಡಿಯಲು ಸೇನೆಯೂ ಸಜ್ಜಾಗಿ ನಿಂತಿದೆ. ಈ ಕುರಿತಂತೆ ಛತ್ತೀಸ್‍ಗಡದಲ್ಲಿರುವ ಹಿರಿಯ ಐಎಎಸ್ ಅಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರನ್ನು ಕಣಿವೆ ರಾಜ್ಯಕ್ಕೆ ವರ್ಗಾಯಿಸಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಅಷ್ಟೇ ಅಲ್ಲದೇ, ಹಾಲಿ ಮುಖ್ಯ ಕಾರ್ಯದರ್ಶಿ ಬಿ.ಬಿ.ವ್ಯಾಸ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ವಿಜಯ ಕುಮಾರ್ ಅವರನ್ನು ರಾಜ್ಯಪಾಲರ ಸಲಹೆಗಾರರನ್ನಾಗಿ ನೇಮಿಸಿರುವ ಬೆನ್ನಲ್ಲೇ ಈ ಕಲ್ಲು ತೂರಾಟಗಾರರ ರಹಸ್ಯ ಬಯಲಾಗಿದೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವೇ ಆಗಿದೆ.

ಮೂಲ https://tulunadunews.com/tnn13678

– ಅಲೋಖಾ

Tags

Related Articles

Close