ಅಂಕಣ

ಭಗವಾ ಆತಂಕವಾದ ಹಿಂದೂಗಳೆಲ್ಲರೂ ಆತಂಕಿಗಳು ಸಂಘ ಕಾರ್ಯಕರ್ತರೆಲ್ಲರೂ ಉಗ್ರರು ಎನ್ನುವುದು ನಿಜವಾಗಿದ್ದರೆ ಭಾರತದಲ್ಲಿ ಬಿಡಿ ಪ್ರಪಂಚದಲ್ಲೇ ಒಬ್ಬೇ ಒಬ್ಬ ಹಿಂದುಯೇತರ ಬದುಕುಳಿಯುತ್ತಿರಲಿಲ್ಲ!!

ಈ ದಿಗ್ವಿಜಯ್ ಅನ್ನೋ ಹಿಂದೂ ಹೆಸರಿನ ವ್ಯಕ್ತಿಗೆ ಇಷ್ಟೂ ಗೊತ್ತಾಗುವುದಿಲ್ಲವೆ? ಒಂದು ವೇಳೆ ಈ ವ್ಯಕ್ತಿ ಹೇಳಿದಂತೆ ಹಿಂದೂಗಳೆಲ್ಲರೂ ಆತಂಕವಾದಿಗಳಾಗಿದ್ದಿದ್ದರೆ, ಸಂಘದ ಕಾರ್ಯಕರ್ತರೆಲ್ಲರೂ ಉಗ್ರರಾಗಿರುತ್ತಿದ್ದರೆ, ಈ ದೇಶದಲ್ಲಿ ಭಗವಾ ಆತಂಕವಾದವೆನ್ನುವುದು ಇರುತ್ತಿದ್ದರೆ ಈ ದೇಶದಲ್ಲಿ ಒಬ್ಬೇ ಒಬ್ಬ ಹಿಂದುಯೇತರ ವ್ಯಕ್ತಿ ಇರುತ್ತಿದ್ದನೆ? ಈ ದೇಶದಲ್ಲಿ ಬಿಡಿ, ಪ್ರಪಂಚದಲ್ಲಿ ಒಬ್ಬೆ ಒಬ್ಬ ಹಿಂದುಯೇತರ ವ್ಯಕ್ತಿ ಇರುತ್ತಿದ್ದನೆ? ಅವರಿವರ ವಿಷಯ ಬಿಡಿ ಇಂಥ ತಲೆಕೆಟ್ಟ ಮಾತುಗಳನ್ನು ಆಡುತ್ತಿರುವ ದಿಗ್ವಿಜಯ ಸಿಂಗ್ ನ ತಲೆ ಉಳಿಯುತ್ತಿತ್ತೆ? ಭಾರತದಲ್ಲಿ ಕಾಂಗ್ರೆಸ್-ಕಮ್ಯೂನಿಷ್ಟರು ಬದುಕುಳಿಯುತ್ತಿದ್ದರೆ? ಭಾರತ-ಪಾಕಿಸ್ತಾನ ವಿಭಜನೆ ಆಗುತ್ತಿತ್ತೆ? ಹಿಂದೂಗಳು ಉಗ್ರರಾಗಿದ್ದಿದ್ದರೆ ಇವತ್ತು ಪ್ರಪಂಚದಾದ್ಯಂತ ಹಿಂದೂಗಳೆ ತುಂಬಿ ತುಳುಕುತ್ತಿರಲಿಲ್ಲವೆ?

ಕಾಂಗ್ರೆಸಿಗಳ ಇಂಥ ದರಿದ್ರ ಬುದ್ದಿಯನ್ನು ನೋಡುವಾಗ ಹಿಂದೂಗಳು ಉಗ್ರರಾಗಿದ್ದಿದ್ದರೆ ಚೆನ್ನಾಗಿತ್ತು ಎಂದು ಎಷ್ಟೋ ಸರಿ ಅನ್ನಿಸುತ್ತದೆ. ಹಿಂದೂಗಳು ಉಗ್ರರಾಗಿಲ್ಲದಿರುವುದಕ್ಕಲ್ಲವೆ ಹಿಂದೂಗಳ ಬಗ್ಗೆ ಬಾಯಿಗೆ ಬಂದದ್ದನ್ನು ಹೇಳಲಿಕ್ಕಾಗುವುದು? ಕಾಂಗಿಗಳಿಗೆ ಧಮ್ ಇದ್ದರೆ ಇದನ್ನೇ ಮುಸ್ಲಿಂ ಅಥವಾ ಕ್ರೈಸ್ತರ ಬಗ್ಗೆ ಹೇಳಲಿ ನೋಡೋಣ. ರಾಮ-ಕೃಷ್ಣ ದೇವರೆ ಅಲ್ಲ ಎಂದು ಕೋರ್ಟಿನಲ್ಲಿ ಎದೆ ಮೆಟ್ಟಿಕೊಂಡು ವಾದಿಸುವ ಇವರು ಅಲ್ಲಾ ದೇವರೆ ಅಲ್ಲ, ಕ್ರಿಸ್ತ ದೇವರೆ ಅಲ್ಲ ಎನ್ನಲಿ ನೋಡೋಣ. ಇವರ ತಲೆ ಕಡಿದು ಇವರ ಮನೆ ಮುಂದೆ ನೇತಾಡಿಸದಿರುತ್ತಾರೆಯೆ ಅವರು? ಆದರೆ ಹಿಂದೂಗಳು ಹಾಗಲ್ಲವಲ್ಲ.

ತಮ್ಮ ದೇವರಿಗೆ ಏನೇ ಅನ್ನಲಿ, ತಮ್ಮ ದೇವರನ್ನು ನಗ್ನವಾಗಿ ಚಿತ್ರಿಸಲಿ, ಮೆಟ್ಟಿನಲ್ಲಿ ಹೊಡೆಯಲಿ, ದುರ್ಗೆ-ಕಾಳಿಯರನ್ನು ವೇಶ್ಯೆಯಂತೆ ಬಿಂಬಿಸಲಿ, ಹಿಂದೂಗಳು ಆತಂಕವಾದಿಗಳು, ಭಾರತದಲ್ಲಿ ಭಗವಾ ಆತಂಕವಾದ ಇದೆ, ಸಂಘ ಪರಿವಾರ ಉಗ್ರರನ್ನು ತಯಾರು ಮಾಡುತ್ತಿದೆ, ಗಾಂಧೀಜಿಯವರನ್ನು ಕೊಂದದ್ದು ಆರ್.ಎಸ್.ಎಸ್ ಎಂದರೂ ನಾವು ಏನೂ ಅನ್ನುವುದಿಲ್ಲ. ಮುದುಕಪ್ಪನಿಗೆ ಸ್ವಯ ಇಲ್ಲ, ಅರುಳು ಮರುಳು ಎಂದಷ್ಟೆ ಹೇಳಿ ಸುಮ್ಮನಾಗಿ ಬಿಡುತ್ತೇವೆ. ಸನಾತನಿಗಳ ಕ್ಷಾತ್ರ ತೇಜದ ರಕ್ತಕ್ಕೆ ಅಹಿಂಸೆಯ ಮಬ್ಬು ಮೆತ್ತಿದೆ ಕಣ್ರೀ, ಹಾಗಾಗಿ ಸನಾತನಿಗಳನ್ನು ಬಾಯಿಗೆ ಬಂದತೆ ಬಯ್ದರೂ ಅವರು ಶಸ್ತ್ರ ಎತ್ತುವುದಿಲ್ಲ. ಇದು ಕಾಂಗ್ರೆಸಿಗರಿಗೆ ಚೆನ್ನಾಗಿ ಗೊತ್ತು.

ಆವತ್ತು ಗಾಂಧೀಜಿಯನ್ನು ನಾಥೂರಾಮ್ ಗೋಡ್ಸೆ ಕೊಂದಿಲ್ಲದಿದ್ದರೆ ಭಾರತ ಇನ್ನೂ ನಾಲ್ಕು ಹೋಳಾಗುತ್ತಿತ್ತು ಎನ್ನುವುದು ಪ್ರಪಂಚಕ್ಕೇ ಗೊತ್ತಿರುವ ಸತ್ಯ. ಅದಲ್ಲದೆ ಗಾಂಧಿ ಹತ್ಯೆ ಆಗುವ ಸಮಯದಲ್ಲಿ ನಾಥೂರಾಮ್ ಗೂ ಆರ್.ಎಸ್.ಎಸ್ ಗೂ ಸಂಬಂಧವೆ ಇರಲಿಲ್ಲ ಎನ್ನುವುದು ನ್ಯಾಯಾಲಯದಲ್ಲೆ ಧೃಢಪಟ್ಟಿದೆ. ಆದರೂ ಪದೆ ಪದೆ ಗಾಂಧಿಯವರನ್ನು ಕೊಂದದ್ದು ಸಂಘ ಎನ್ನುವ ಕಮಂಗಿಗಳಿಗೆ ಹಳೆ ಎಕ್ಕಡಾದಲ್ಲಿ ಬಾರಿಸಬೇಕು ಎನ್ನುವ ಮನಸಾಗುತ್ತದೆ. ಆದರೇನು ಮಾಡುವುದು ನಮ್ಮದು ಸನಾತನ ರಕ್ತವಲ್ಲವೆ, ಒಂದು ಕ್ಷಣ ಕುದಿದು ತಣ್ಣಗಾಗುತ್ತದೆ! ತನ್ನ ಮೇಲೆ ಗಾಂಧಿ ಸಾವಿನ ಅಪವಾದ ಹಾಕಿದರೂ ಸಂಘ ಪರಿವಾರದವರು ಇವರನ್ನು ಬದುಕಲು ಬಿಟ್ಟಿದ್ದಾರೆ ಎನ್ನುವುದೆ ಸಂಘ ಕಾರ್ಯಕರ್ತರು ಉಗ್ರರಲ್ಲ ಎನ್ನುವುದಕ್ಕೆ ಸಾಕ್ಷಿ ಅಲ್ಲವೆ? ಸಂಘದ ಬಗ್ಗೆ ನಾಲಗೆ ಹರಿ ಬಿಡುವ ಇವರು ಐಸಿಸ್ ಬಗ್ಗೆ ಒಂದೆರಡು ಮಾತಾಡಲಿ ನೋಡುವ. ಊಹೂಂ ಬಾಯಿ ಬಡುಕರ ಬಾಯಿ ಸೀದು ಹೋಗುತ್ತದೆ ಆವಾಗ!!

ಮೋದಿ ವಿರೋಧಿಗಳಿಗೆ ಚುನಾವಣೆಗಳನ್ನು ನಿಯತ್ತಾಗಿ ಗೆಲ್ಲುವ ತಾಕತ್ತಿಲ್ಲ. ಅದಕ್ಕೆ ಹಿಂದೂಗಳು ಆತಂಕವಾದಿಗಳು ಎನ್ನುವ ಕಥೆ ಕಟ್ಟಿದರು. ಯಾವಾಗ ಚುನಾವಣೆಯಲ್ಲಿ ಹಿಂದೂಗಳು ತಿರುಗಿ ಬಿದ್ದರೋ ಈಗ ದೋಸೆ ಮಗುಚಿದಂತೆ ತಮ್ಮ ಹೇಳಿಕೆಗಳನ್ನು ಮಗುಚಿ, ಹಿಂದೂಗಳು ಆತಂಕವಾದಿಗಳಲ್ಲ, ಸಂಘ ಕಾರ್ಯಕರ್ತರು ಆತಂಕವಾದಿಗಳು, ಆತಂಕವಾದ ಮಾಡಿ ಸಿಕ್ಕಿಬಿದ್ದವರೆಲ್ಲ ಸಂಘದ ಕಾರ್ಯಕರ್ತರು ಎನ್ನುವ ಹೇಳಿಕೆ ನೀಡಿದ್ದಾರೆ ದಿಗ್ವಿಜಯ್ ಸಿಂಗ್. ಅಯ್ಯೋ ಮಂಕೆ ಹಿಂದೂ ಧರ್ಮ ಮತ್ತು ಸಂಘ ಬೇರೆ ಬೇರೆಯೆ? ಅಳಿಯ ಅಲ್ಲ, ಮಗಳ ಗಂಡ ಅಂದರೆ ಅರ್ಥ ಒಂದೆ ಅಲ್ಲವೆ?

ಸಂಘದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತ-ಸಿಖ ಎಲ್ಲ ಮತದ ಕಾರ್ಯಕರ್ತರಿದ್ದಾರೆ. ಅದಕ್ಕಾಗೇ ದಿಗ್ವಿಜಯ್ ಸಿಂಗ್ ಬಹಳ ಚಾಣಾಕ್ಷರಾಗಿ ಬಂಧಿಸಲ್ಪಟ್ಟ ‘ಹಿಂದೂ ಧರ್ಮದ’ ಆತಂಕವಾದಿಗಳು ಸಂಘ ಕಾರ್ಯಕರ್ತರೆಂದಿದ್ದಾರೆ. ಹಾಗಾದರೆ ಈ ತಥಾಕಥಿತ ಆತಂಕವಾದಿಗಳು ಎಲ್ಲೆಲ್ಲ ಇತರ ಧರ್ಮದವರ ನರ ಸಂಹಾರ ಮಾಡಿದ್ದಾರೆ? ಎಷ್ಟು ಜನರ ಮೇಲೆ ಗುಂಡಿನ ಮಳೆಗರೆದಿದ್ದಾರೆ? ಹಿಂದೂ ಧರ್ಮದ ಹೆಸರಿನಲ್ಲಿ ಏಷ್ಟು ಜನರ ಕತ್ತು ಸೀಳುವ ವೀಡಿಯೋ ಮಾಡಿದ್ದಾರೆ? ತೋರಿಸಿ ನೋಡೋಣ. ಕೆಪ್ಪ-ಕುರುಡ ಮುದಿಯರಿಗೆ “ಅಲ್ಲಾಹು ಅಕ್ಬರ್” ಘೋಷಣೆ ಕೂಗುತ್ತಾ “ಕಾಫಿರರ” ಕತ್ತು ಸೀಳುವವರ “ಮತ” ಯಾವುದೆಂದು ಇದುವರೆಗೂ ಗೊತ್ತಾಗಲಿಲ್ಲ, ಆದರೆ ಸಂಘದ ಕಾರ್ಯಕರ್ತರು ಹಿಂದೂ ಧರ್ಮದ ಆತಂಕವಾದಿಗಳು ಎನ್ನುವುದು ಅಷ್ಟು ಬೇಗ ಗೊತ್ತಾಯಿತೆ? ಭೇಷ್ ಹಿಂದೂ ದ್ವೇಷಿಗಳೆ ಭೇಷ್, ಮೆಚ್ಚಿದೆವು ನಿಮ್ಮ ಗೋಸುಂಬೆ ವರಸೆಯನ್ನು!!

ಅಧಿಕಾರದ ಲಾಲಸೆ ಮನುಷ್ಯರನ್ನು ಧರ್ಮ ಭ್ರಷ್ಟನಾನ್ನಾಗಿಸಲೂ ಸಾಧ್ಯ ಎನ್ನುವುದನ್ನು ದೇಶ ಮೊದಲ ಬಾರಿಗೆ ನೋಡುತ್ತಿದೆ. ವೆಟಿಕನ್ ಪ್ರಸಾದದಲ್ಲಿ ಇಷ್ಟೊಂದು ಶಕ್ತಿ ಉಂಟೆಂದಾದರೆ ಇವರೆಲ್ಲ ತಮ್ಮ ಹಿಂದೂ ಹೆಸರಗಳನ್ನು ತ್ಯಜಿಸಿ, ಇವರ ನೆಚ್ಚಿನ ಮತಗಳ ಹೆಸರುಗಳನ್ನು ಇಟ್ಟುಕೊಂಡು ಮೆರೆದಾಡಲಿ. ಇನ್ನು ಪದೆ ಪದೆ ಹಿಂದೂಗಳು ಆತಂಕವಾದಿಗಳು, ಸಂಘ ಪರಿವಾರ ಉಗ್ರವಾದಿ ಸಂಘಟನೆಗಳು ಎನ್ನುತ್ತಾ ಸುಖಾ ಸುಮ್ಮನೆ ಪ್ರಚೋದಿಸುತ್ತಿದ್ದರೆ ಅದನ್ನು ಅರಿಯದಷ್ಟು ಮೂರ್ಖರಲ್ಲ ನಮ್ಮ ಜನ. 400ಸೀಟು ಗಳಿಂದ 44ಕ್ಕೆ ಇಳಿಸಿದ ಹಿಂದೂಗಳಿಗೆ 4ಕ್ಕೆ ಇಳಿಸಲೂ ಗೊತ್ತಿದೆ ಎನ್ನುವುದು ಕಾಂಗಿಗಳಿಗೆ ತಿಳಿದಿರಲಿ. ಇದೆಲ್ಲವನ್ನು ಕೇಳಿಯೂ ನರಸತ್ತ ನಪುಂಸಕ ಹಿಂದೂಗಳು ಇನ್ನೂ ಕಾಂಗ್ರೆಸಿಗೆ ಮತ ನೀಡುತ್ತಾರೆಂದರೆ ಅವರಿಗಿಂತ ಪರಮ ಮೂರ್ಖರು ಮತ್ತೊಬ್ಬರಿಲ್ಲ.

-ಶಾರ್ವರಿ

Tags

Related Articles

Close