ಅಂಕಣ

ತನ್ನ “ಕೊಲ್ಲಿ ರಾಷ್ಟ್ರ” ಎಂದು ಕರೆಯಲಾಗುವ ಅಂಡಮಾನ್ ನಿಕೋಬಾರ್ ನಿಂದ ಭಾರತವೇನಾದರೂ ತೈಲ ಹೊರತೆಗೆಯಲು ಶುರುವಿಟ್ಟುಕೊಂಡಿತೆಂದರೆ ಅರಬ್ ದೇಶಗಳು ದಿವಾಳಿ ಎದ್ದು ಹೋಗುತ್ತವೆ!!

ಭಾರತದ ಹಿಂದಿನ ಸರಕಾರಗಳು ಮನಸ್ಸು ಮಾಡಿದ್ದಿದ್ದರೆ ಇವತ್ತು ಭಾರತ ತೈಲವನ್ನು ವಿದೇಶದಿಂದ ಕೊಳ್ಳುವ ರಾಷ್ಟ್ರವಾಗಿ ಇರುತ್ತಿರಲಿಲ್ಲ, ಬದಲಿಗೆ ತೈಲವನ್ನು ಮಾರುವ ದೇಶವಾಗಿ opecನ ಸದಸ್ಯತ್ವವನ್ನು ಪಡೆಯುತ್ತಿತ್ತು!! ಅಂಡಮಾನ್ ನಿಕೋಬಾರ್ ನ ಸಮುದ್ರದಾಳದಲ್ಲಿ ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಿವೆ. ಈ ಪ್ರದೇಶದಿಂದ ಭಾರತವೇನಾದರೂ ತೈಲ ಮತ್ತು ನೈಸರ್ಗಿಕ ಅನಿಲವನ್ನು ಹೊರತೆಗೆಯಲು ಶುರುವಿಟ್ಟುಕೊಂಡರೆ ಅರಬ್ ದೇಶಗಳು ದಿವಾಳಿ ಎದ್ದು, ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿಯುವ ಕಾಲ ಬರುತ್ತದೆ!

ಈ ಹಿಂದೆ ನಮ್ಮನ್ನಾಳಿದ ಸರಕಾರಗಳು ಅರಬ್ ದೇಶದ ಶೇಖ್ ಗಳ ಲಾಬಿಗೆ ಮಣಿಯದಿರುತ್ತಿದ್ದರೆ ಇವತ್ತು ಭಾರತ ಚಿನ್ನದ ಹಕ್ಕಿಯಾಗಿರುತ್ತಿತ್ತು. ಭಾರತದಲ್ಲಿ ಪೆಟ್ರೋಲ್-ಡೀಸೆಲ್ ಮತ್ತು ನೈಸರ್ಗಿಕ ಅನಿಲಗಳು ಕೈಗೆಟುಕುವ ದರದಲ್ಲಿ ದೊರೆಯುತ್ತಿತ್ತು. ಆದರೇನು ಮಾಡುವುದು ಸರಕಾರಗಳಲ್ಲಿ ದೇಶವನ್ನು ಉದ್ದಾರ ಮಾಡುವ ಇಛ್ಚಾಶಕ್ತಿಯೆ ಇಲ್ಲ. ಮೋದಿ ಸರಕಾರ ಬಂದ ಮೇಲೆ ಅಂಡಮಾನ್ ನಿಕೋಬಾರಿನ ತೈಲ ಖಜಾನೆಯಿಂದ ತೈಲ ಉತ್ಪನ್ನ ಮಾಡುವಂತೆ ಖಾಸಗಿ ಕಂಪನಿಗಳಿಗೆ ಆಹ್ವಾನವಿತ್ತಿದ್ದರೂ ಒಂದೇ ಒಂದು ಖಾಸಗಿ ಕಂಪನಿಯೂ ಉತ್ಸುಕತೆ ತೋರುತ್ತಿಲ್ಲ.

ಭಾರತವೇನಾದರೂ ತನ್ನ ತೈಲವನ್ನು ತಾನೇ ಉತ್ಪಾದನೆ ಮಾಡತೊಡಗಿದರೆ ದೇಶದ 31% ವಿದೇಶೀ ವಿನಿಮಯ ಉಳಿತಾಯವಾಗುತ್ತದೆ ಮಾತ್ರವಲ್ಲ, ವಿದೇಶೀ ಮುದ್ರೆ ಭಾರತಕ್ಕೆ ಹರಿದು ಬರುತ್ತದೆ. ‘ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕಾಗಿ ಊರೆಲ್ಲಾ ಅಲೆದಾಡಿದರಂತೆ’ ಅಂತಹ ಗಾದೆ ಭಾರತದ್ದು!

ಎಲ್ಲಿದೆ ಭಾರತದ ಈ ತೈಲ ನಿಕ್ಷೇಪ?

ಬಂಗಾಳ ಕೊಲ್ಲಿಯಲ್ಲಿ ಇಂಡೊ-ಆಸ್ಟ್ರೇಲಿಯನ್ ಪ್ಲೇಟ್ ಮತ್ತು ಯುರೇಶಿಯನ್ ಪ್ಲೇಟ್ ಸಂಧಿಸುವ ಜಾಗದ ಅಡಿಯಲ್ಲಿ ಎಂದೂ ಬತ್ತದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಪ್ರಮುಖ ಭಂಡಾರವೆ ಇದೆ ಎನ್ನುವುದು ವಿಜ್ಞಾನಿಗಳ ಅಂಬೋಣ. ಹೇಗೆ ಮಧ್ಯ ಪೂರ್ವ(ಕೊಲ್ಲಿ)ರಾಷ್ಟ್ರಗಳಲ್ಲಿ ತೈಲದ ಅಕ್ಷಯ ಭಂಡಾರವಿದೆಯೋ ಹಾಗೆಯೆ ಅಂಡಮಾನ್ ನಿಕೋಬಾರ್ ಬಳಿ ಸಮುದ್ರದ ಆಳದಲ್ಲಿ ಎಂದೂ ಬತ್ತದ ತೈಲ ನಿಕ್ಷೇಪಗಳಿವೆ. ಅದಕ್ಕೆಂದೆ ಅಂಡಮಾನ್ ನಿಕೋಬಾರ್ ಜಲಾನಯನ ಪ್ರದೇಶವನ್ನು ‘ಭಾರತದ ಕೊಲ್ಲಿ ರಾಷ್ಟ್ರ’ ಎಂದು ಕರೆಯಲಾಗುತ್ತದೆ.

ಪ್ರಸ್ತುತ ಈ ಪ್ರದೇಶದ ದಕ್ಷಿಣ ಭಾಗದಲ್ಲಿ ಇಂಡೋನೇಶಿಯಾ ಮತ್ತು ತನ್ನ ಜಾಗದಲ್ಲಿ ಬರ್ಮಾ ದೇಶಗಳು ಕ್ರಮವಾಗಿ 1 ಮಿಲಿಯನ್ ಬ್ಯಾರಲ್ 30 ಸಾವಿರ ಬ್ಯಾರಲ್ ಕಚ್ಚಾ ತೈಲವನ್ನು ಹೊರತೆಗೆಯುತ್ತಿದೆ. ಈ ಪ್ರದೇಶದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲದ ಸಮಗ್ರ ವಲಯವು 83,419 ಚದರ ಕಿ.ಮೀ ನಷ್ಟು ವ್ಯಾಪಿಸಿದೆ. ಇದರಲ್ಲಿ 7500 ಚದರ ಕಿ.ಮೀ ನಷ್ಟು ಪ್ರದೇಶದ ಸ್ವಾಮಿತ್ವ ಭಾರತದ ಬಳಿ ಇದೆ. ಹೆಚ್ಚು ಕಡಿಮೆ ನೂರು ಕಿ.ಮೀ ಪ್ರದೇಶದಲ್ಲಿ ನೈಸರ್ಗಿಕ ಅನಿಲದ ನಿಕ್ಷೇಪಗಳಿವೆ ಎಂದು ಪತ್ತೆ ಹಚ್ಚಲಾಗಿದೆ.

ಎರಡು ವರ್ಷಗಳ ಹಿಂದೆಯೆ ಮೋದಿ ಸರಕಾರ ಅಂಡಮಾನ್ ಬೇಸಿನ್ ನಲ್ಲಿ 1296 ಬಿಲಿಯನ್ ಬ್ಯಾರೆಲ್ ಗಳಷ್ಟು ಕಚ್ಚಾ ತೈಲ ಹೊಂದಿರುವ ಐದು ಆಳವಾದ ನೀರಿನ ಬ್ಲಾಕ್ ಗಳನ್ನು ಖಾಸಗಿ ಕಂಪನಿಗಳಿಗೆ ಮತ್ತು ಹದಿನಾರು ಬ್ಲಾಕ್ ಗಳನ್ನು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನೀಡಿದೆ. ಆದರೆ ಕಳೆದ ಎರಡು ವರ್ಷಗಳಿಂದಲೂ ಈ ಕಂಪನಿಗಳು ತಮ್ಮ ಬ್ಲಾಕ್ ನಿಂದ ಒಂದು ಲೀಟರ್ ನಷ್ಟೂ ತೈಲವನ್ನು ಹೊರತೆಗೆಯಲಿಲ್ಲ. ಭಾರತದ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದ್ದರೂ ಈ ಕಂಪನಿಗಳು ಇನ್ನೂ ತಮ್ಮ ತೈಲ ಬ್ಲಾಕ್ ಗಳಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಹೊರತೆಗೆಯಲು ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.

2 ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಭಾರತದ ಶಕ್ತಿ ಭದ್ರತೆಗಾಗಿ ಅಂಡಮಾನ್ ಜಲಾನಯನ ಪ್ರದೇಶದಿಂದ ತೈಲವನ್ನು ಹೊರತೆಗೆಯಲಾಗುವುದು ಎಂದು ಹೇಳಿದ್ದರು ಮಾತ್ರವಲ್ಲ ಕಂಪನಿಗಳಿಗೆ ಜಲಾನಯನ ಪ್ರದೇಶದಿಂದ ಕಚ್ಚಾ ತೈಲ ಹೊರತೆಗೆಯಲು ಬ್ಲಾಕ್ ಗಳನ್ನು ಕೂಡಾ ಹಂಚಿಕೆ ಮಾಡಿದ್ದರು. ಹಾಗಿದ್ದರೂ ಕೂಡಾ ಕಂಪನಿಗಳು ತೈಲವನ್ನು ಹೊರತೆಗೆಯದೆ, ಇನ್ನೂ ಅರಬ್ ದೇಶಗಳಿಂದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದೇಕೆ? ತಮ್ಮ ಬಳಿ ತೈಲ ಹೊರತೆಗೆಯುವ ಪರವಾನಗಿ ಇದ್ದರೂ ವಿದೇಶದಿಂದ ತೈಲ ಆಮದು ಮಾಡಿ ದೇಶಕ್ಕೆ ಕೋಟ್ಯಂತರ ರುಪಾಯಿ ನಷ್ಟ ಮಾಡಿಸುತ್ತಿರುವುದೇಕೆ? ಪೆಟ್ರೋಲ್-ಡೀಸೆಲ್-ಅಡುಗೆ ಅನಿಲ ಬೆಲ ಏರಿತೆಂದು ಜನರು ಮೋದಿಗೆ ಹಿಡಿಶಾಪ ಹಾಕುತ್ತಿದ್ದರೂ ಕೆಪ್ಪ-ಮೂಗರಂತೆ ಕುಳಿತು ನಾಟಕ ನೋಡುತ್ತಿರುವುದೇಕೆ?

ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸಿದಂತೆ, ಇನ್ನು ತೈಲ ಹೊರತೆಗೆಯಲು ಕೂಡಾ ಬೋರ್ ಹಿಡಿದುಕೊಂಡು ಮೋದಿಯೆ ಬರಬೇಕೆ? ಎಲ್ಲಾ ಕೆಲಸ ಮೋದಿಯೆ ಮಾಡಬೇಕೆಂದಾದರೆ ಉಳಿದವರು ಏನು ಮಾಡುವುದು? “ಭಾಗ್ಯ”ದಲ್ಲಿ ದೊರಕಿದ್ದನ್ನು ಹೊಟ್ಟೆ ತುಂಬಾ ತಿಂದು, ಗಡದ್ದಾಗಿ ನಿದ್ದೆ ಹೊಡೆದು, ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನೆ ಕೇಳುತ್ತಾ ಕಾಲ ಕಳೆಯುವುದೆ? ಇದೆ ಪ್ರಶ್ನೆಯನ್ನು ಹಿಂದಿನ ಸರಕಾರಗಳ ಬಳಿ ಕೇಳಿದ್ದರೆ ಇವತ್ತು ಕಡ್ಲೆಕಾಯಿ ಬೆಲೆಗೆ ತೈಲ ಮತ್ತು ಅನಿಲ ಸಿಗುತ್ತಿತ್ತಲ್ಲವೆ? ಆಗ ಬಾಯಲ್ಲಿ ಬೀಡಾ ಜಗಿಯುತ್ತಾ ಕೂತು ಈಗ ಅದನ್ನು ಮೋದಿ ಮೇಲೆ ಉಗುಳುತ್ತೇವೆ ಎಂದರೆ ಅದು ಹೇಗೆ ಸಾಧ್ಯ? ಅನಿಷ್ಟಕ್ಕೆಲ್ಲಾ ಶನೀಶ್ವರನೆ ಕಾರಣ ಎನ್ನುವಂತೆ ಇವತ್ತಿನ ಭಾರತದ ದುರ್ದೆಶೆಗೆ ಮೋದಿ ಕಾರಣ ಎನ್ನುತ್ತಾರಲ್ಲ, ಏನನ್ನಬೇಕು ಇವರಿಗೆ?

ಕಳೆದ ನಾಲ್ಕು ವರ್ಷಗಳಲ್ಲಿ ಭಾರತವನ್ನು ವಿಶ್ವ ಗುರುವಾಗಿಸಲು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿರುವ ಒಬ್ಬ ಫಕೀರ ಹಗಲಿರುಳು ದುಡಿಯುತ್ತಿದ್ದರೆ, ಉಂಡ ಮನೆಗೆ ಕನ್ನ ಬಗೆಯುವ ಹಲವರು ಸರಕಾರಕ್ಕೇ ದ್ರೋಹ ಬಗೆಯುತ್ತಿದ್ದಾರೆ. ತೈಲ ಕಂಪನಿಗಳು ಅರಬ್ ದೇಶಗಳ ಲಾಬಿಗೆ ಮಣಿಯದೆ ತಮ್ಮ ಬ್ಲಾಕ್ ಗಳಿಂದ ಕಚ್ಚಾ ತೈಲ ಹೊರತೆಗೆದು ದೇಶದ ನಾಗರಿಕರಿಗೆ ಕಡಿಮೆ ಬೆಲೆಗೆ ತೈಲ ದೊರಕುವಂತೆ ಮಾಡಬೇಕು. ನಿಮಗೆ ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ಇದ್ದರೆ, ಮುಂದಿನ ಬಾರಿ ಮೋದಿನ ಸೋಲಿಸುತ್ತೀವಿ ಅನ್ನೋದು ಬಿಟ್ಟು ಇಂತಹ ದೇಶದ್ರೋಹಿಗಳ ಮುಖಕ್ಕೆ ಉಗಿಯಿರಿ. ದೇಶ ಉದ್ದಾರ ಮಾಡಿ ಪುಣ್ಯ ಕಟ್ಟಿಕೊಳ್ಳಿ.

-ಶಾರ್ವರಿ

Tags

Related Articles

Close