ಪ್ರಚಲಿತ

ಅಂದು ಮೋದಿ ಗುಜರಾತ್‍ನ ಮುಖ್ಯಮಂತ್ರಿಯಾಗಿರದಿದ್ದರೆ ಭಾರತದಲ್ಲಿ ಗುಜರಾತ್ ಇಂದು ಏನಾಗುತ್ತಿತ್ತು ಗೊತ್ತಾ?!

ಭಾರತೀಯ ಜನತಾ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ನರೇಂದ್ರ ದಾಮೋದರ್ ದಾಸ್ ಮೋದಿ ಸ್ಮಶಾನದಲ್ಲಿ ಕಾಂಗ್ರೆಸ್ ನ ಒಬ್ಬ ದೊಡ್ಡ ರಾಜಕಾರಣಿಯ ಡ್ರೈವರಿನ ಅಂತ್ಯ ಸಂಸ್ಕಾರದಲ್ಲಿ ನಿರತರಾಗಿರುತ್ತಾರೆ. ಆಗ ಭಾರತದ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರೀ ವಾಜಪೇಯಿಯವರ ದೂರವಾಣಿ ಕರೆ ಅವರಿಗೆ ಬರುತ್ತದೆ. ನೀವು ಗುಜರಾತಿನ ಮುಖ್ಯಮಂತ್ರಿಯಾಗಬೇಕು ಎಂದು ಆಜ್ಞೆ ನೀಡುತ್ತಾರೆ. ಮೋದಿಜಿ ತಬ್ಬಿಬ್ಬು, ಆದರೆ ಗುರುವಿನ ಆಜ್ಞೆಯನ್ನು ಕಡೆಗಣಿಸುವುದುಂಟೆ? ಸೈ ಎನ್ನುತ್ತಾರೆ. ಅವತ್ತಿನವರೆಗೆ ಮುಖ್ಯಮಂತ್ರಿಯ ಕೋಣೆಯನ್ನೂ ನೋಡದ ಮೋದಿ ಮೊತ್ತ ಮೊದಲ ಬಾರಿಗೆ ಆ ಕೊಠಡಿಗೆ ಕಾಲಿಡುತ್ತಾರೆ.

ಮೋದಿಜಿ ಮುಖ್ಯ ಮಂತ್ರಿಯಾದ ಸಮಯದಲ್ಲಿ ಗುಜರಾತೆಂಬುದು ಅಕ್ಷರಶ ಸುಡುಗಾಡಗಿತ್ತು. ಒಂದೆಡೆ ಭೂಕಂಪದಿಂದ ಜನರು ತತ್ತರಿಸಿ ಹೋಗಿದ್ದರೆ ಮತ್ತೊಂದೆಡೆ ಕಾಂಗ್ರೆಸ್ ದುರಾಚಾರದಿಂದ ಕೋಮು ದಳ್ಳುರಿಯಲ್ಲಿ ಬೇಯುತ್ತಿತ್ತು. ಮೋದಿಜಿಯವರ ಹೆಗಲಿನ ಮೇಲೆ ಸುಡುಗಾಡನ್ನು ಇಂದ್ರನ ಅಮರಾವತಿಯನ್ನಾಗಿಸುವ ಗುರುತರ ಜವಾಬ್ದಾರಿಯೊಂದಿತ್ತು. ಅದನ್ನರಿತ ಅವರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾ ಗುಜರಾತೆಂಬ ಸುಡುಗಾಡನ್ನು ಮರಳಿ ಕಟ್ಟುವ ಪ್ರಯತ್ನದಲ್ಲಿ ತೊಡಗುತ್ತಾರೆ. ಆದರೆ ವಿರೋಧಿಗಳು ಬಿಡಬೇಕಲ್ಲ.

ಮೋದಿಜೀಯವರು ಕುರ್ಚಿಯಲ್ಲಿ ಸರಿಯಾಗಿ ಕುಳಿತೂ ಇರಲಿಲ್ಲವೇನೋ ಆಗಲೇ ಕಾಂಗ್ರೆಸ್ ಶತಮಾನದ ಅತ್ಯಂತ ಹೀನ ಕೃತ್ಯವೊಂದನ್ನು ಕೈಗೊಂಡಿತು. ಫ಼ೆಬ್ರವರಿ 27 ರಂದು ಬೆಳಿಗ್ಗೆ ತನ್ನ ಮುಸಲ್ಮಾನ ಗುಂಡಾಗಳನ್ನು ಬಿಟ್ಟು ಅಯೋಧ್ಯೆಯಿಂದ ಮರಳುತ್ತಿರುವ ಟ್ರೇನಿನ ಬೋಗಿಯನ್ನು ಕರಸೇವಕರ ಸಮೇತ ಸುಟ್ಟು ಕೇಕೆ ಹಾಕಿ ನಕ್ಕಿತು. ಈ ವಿಷಯ ಕೇಳಿ ಇಡಿಯ ದೇಶವೇ ಬೆಚ್ಚಿ ಬಿದ್ದಿತು. ದೇಶಕ್ಕೆ ದೇಶವೇ ಶೋಕ ಸಾಗರದಲ್ಲಿ ಮುಳುಗಿರಬೇಕಾದರೆ ಮೋದೀ ಜೀ ಆ ಕ್ಷಣವೇ ಕಾರ್ಯತತ್ಪರಾದರು. ಘಟನೆ ನಡೆದ ವಿಷಯ ಕಿವಿಗೆ ಬಿದ್ದ ಕೂಡಲೇ ಗೋಧ್ರಾದಲ್ಲಿ ಕರ್ಫ್ಯೂ ಹೇರಿ ಬಿಟ್ಟರು ಮತ್ತು ಪೋಲೀಸರಿಗೆ “ಶೂಟ್ ಆಟ್ ಸೈಟ್” ಗೆ ಆದೇಶ ನೀಡಿದರು.

ಘಟನೆ ನಡೆದಾಗ ಮೋದೀ ಜೀ ಗಾಂಧೀನಗರದಲ್ಲಿದ್ದರು ಅಲ್ಲಿಂದ ಅವರು ಅಹಮದಾಬಾದ್ ಗೆ ಬರುವ ಮುನ್ನವೇ ರಾಜ್ಯದಲ್ಲಿ ಕೋಮು ಗಲಾಟೆಗೆ ಕಾರಣವಾಗಬಹುದಾದಂತ 827 ಜನರನ್ನು ಬಂಧಿಸಲಾಗಿತ್ತು! ಗುಜರಾತಿನೆಲ್ಲೆಡೆ 70000 ಪೋಲಿಸರು ಮತ್ತು ರಾಪಿಡ್ ಆಕ್ಷನ್ ಫೋರ್ಸ್ ಗಳನ್ನು ನಿಯೋಜಿಸಲಾಗಿತ್ತು. ಕೇಂದ್ರ ಸರಕಾರ ಸಿ.ಆರ್.ಪಿ.ಎಫ್ ಅನ್ನು ಕಳುಹಿಸಿಕೊಟ್ಟಾಗಿತ್ತು. ಮೋದೀ ಜೀ , ಆರ್.ಎಸ್.ಎಸ್ ಮತ್ತು ವಿಶ್ವ ಹಿಂದೂ ಪರಿಷದ್ ಹಿಂದೂಗಳು ಶಾಂತರಾಗಿರುವಂತೆ ಪದೇ ಪದೇ ಮನವಿ ಮಾಡುತ್ತಿದ್ದರು. ಕೇಂದ್ರ ಸರಕಾರವಂತೂ ಇಡೀ ದೇಶದಲ್ಲೇ ಹೈ ಅಲರ್ಟ್ ಘೋಷಿಸಿತ್ತು!

ಇಷ್ಟೆಲ್ಲವೂ ನಡೆದಿದ್ದು ಘಟನೆ ನಡೆದ ಕೆಲವೇ ಕೆಲವು ಘಂಟೆಗಳ ಒಳಗಾಗಿ ಎಂದರೆ ಮೋದೀ ಜೀಯವರ ಕಾರ್ಯತತ್ಪರತೆ ಹೇಗಿರಬೇಕೆಂದು ಒಮ್ಮೆ ಯೋಚಿಸಿ. ಒಂದು ಕ್ಷಣವನ್ನೂ ಮೊದೀ ಜೀ ವ್ಯರ್ಥ ಮಾಡದೇ ರಾಜ್ಯದ ಸುರಕ್ಷತೆಗೆ ಬೇಕಾಗುವ ಎಲ್ಲಾ ನಿರ್ದೇಶಗಳನ್ನೂ ಕೊಟ್ಟಾಗಿತ್ತು. ಅದೇ ದಿನ ಅವರು ಗೋಧ್ರಾಗೆ ಭೇಟಿ ನೀಡಿದ್ದರು ಮಾತ್ರವಲ್ಲ, ಕರಸೇವಕರ ಮೃತ ದೇಹವನ್ನು ಯಾರಿಗೂ ಕಾಣದಂತೆ ಮುಚ್ಚಿದ ವಾಹನದಲ್ಲಿ ಅವರ ಊರಿಗೆ ತಲುಪಿಸಬೇಕೆಂದು ತಾಕೀತು ಮಾಡಿದ್ದರು. ದೇಹಗಳ ಪೋಸ್ಟ್ ಮಾರ್ಟಂ, ಅಂತ್ಯ ಸಂಸ್ಕಾರ ಎಲ್ಲವನ್ನೂ ಯಾರಿಗೂ ಗೊತ್ತಾಗದಂತೆ ಮಾಡಲಾಗಿತ್ತು, ಏಕೆಂದರೆ ದೇಹ ನೋಡಿದರೆ ಗಲಭೆ ನಡೆಯುವ ಸಾಧ್ಯತೆ ಇತ್ತು. ಅದಕ್ಕಾಗಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಗಲಭೆಯಾಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದರು ಮೋದೀ ಜೀ.

ಒಂದು ದಿನ ಹೇಗೋ ತಡೆ ಹಿಡಿದಿದ್ದ ಹಿಂದೂಗಳ ಆಕ್ರೋಶ ಮರುದಿನ ಇಡಿಯ ಗುಜರಾತನ್ನೇ ಸುಟ್ಟು ಬೂದಿಯಾಗಿಸಿ ಬಿಟ್ಟಿತು. ಒಂದು ವೇಳೆ ನೀವು ಹಿಂದೂಗಳ ಆಕ್ರೋಶಕ್ಕೆ ಗೋಧ್ರಾ ಕಾರಣವೆಂದೆಣಿಸುತ್ತೀರಾದರೆ ನೀವು ತಪ್ಪು ತಿಳಿದಿದ್ದೀರಿ. ಹಿಂದೂಗಳ ಎದೆಯಲ್ಲಿ 1928 ರಿಂದಲೇ ದ್ವೇಷದ ಲಾವಾ ಮಡುಗಟ್ಟಿತ್ತು. ಕಾಂಗ್ರೆಸಿನ ಮುಸಲ್ಮಾನ ತುಷ್ಟೀಕರಣ ರಾಜಕಾರಣದಿಂದ ಹಿಂದೂಗಳು ರೋಸಿ ಹೊಗಿದ್ದರು. 1928, 1946,1948, 1965,1980, 1990 ಮತ್ತು 1992 ರಲ್ಲಿ ಗುಜರಾತಿನಲ್ಲಿ ಕಾಂಗ್ರೆಸ್ ದುರಾಡಳಿತವಿತ್ತು. ಆಗೆಲ್ಲಾ ಮುಸಲ್ಮಾನರು ಹಿಂದೂಗಳ ಮಾರಣ ಹೋಮ ಮಾಡಿದ್ದರು, ಥೇಟ್ ಈಗ ಕರ್ನಾಟಕದಲ್ಲಿ ಮಾಡುತ್ತಿರುವಂತೆಯೆ.

ಅಷ್ಟೂ ವರ್ಷಗಳಲ್ಲಿ ಎದೆಯೊಳಗೆ ಬೇಯುತ್ತಿದ್ದ ಲಾವಾ ಗೋಧ್ರಾ ಕಾಂಡದಿಂದಾಗಿ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿತು. ಲಕ್ಷ ಲಕ್ಷ ಹಿಂದೂಗಳು ಬೀದಿಗಿಳಿದು ಗುಜರಾತಿಗೆ ಗುಜರಾತನ್ನೇ ಕುರುಕ್ಷೇತ್ರವಾಗಿಸಿದರು. ಆದರೆ ಮೋದೀ ಜೀ ಹಿಂದು ಮುಂದೆ ನೋಡದೆ ಕಂಡಲ್ಲಿ ಗುಂಡು ಆಜ್ಞೆ ಇತ್ತರು. 1496 ರೌಂಡ್ಸ್ ಗುಂಡು ಚಲಾಯಿಸಿದರು ಪೋಲೀಸರು. ನೆನಪಿಡಿ ಮೋದೀ ಜೀ ಯವರು ಜಾತಿ ನೋಡಲಿಲ್ಲ, ತನ್ನ ರಾಜಕೀಯ ಲಾಭ ನೋಡಲಿಲ್ಲ, ಅವರು ನೋಡಿದ್ದು ಕೇವಲ ರಾಜ್ಯದ ಹಿತ. ಜನಸಾಗರದ ಮುಂದೆ ಪೋಲೀಸರು ಪರದಾಡುವಂತಾದಾಗ ಮೋದೀ ಜೀ ತನ್ನ ಪಕ್ಕದ ಕಾಂಗ್ರೆಸ್ ಶಾಸಿತ ರಾಜ್ಯಗಳಿಗೆ ಹೆಚ್ಚುವರಿ ಪೋಲೀಸರನ್ನು ಕಳಿಸಿ ಕೊಡಿ ಎಂದು ಬೇಡಿಕೊಂಡರು. ಆದರೆ ನಾಲಾಯಕ್ ಕಾಂಗ್ರೆಸ್ ಮುಖ್ಯಮಂತ್ರಿಗಳು ಪೋಲೀಸ್ ಕಳಿಸಲೇ ಇಲ್ಲ, ಬದಲಾಗಿ ಇದರಲ್ಲೂ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು.

ಬೇರೆ ವಿಧಿಯಿಲ್ಲದೆ ಮೋದೀ ಜೀ ಯವರು ಅದೇ ದಿನ ಸಂಜೆ ನಾಲ್ಕು ಘಂಟೆಗೆ ದೆಹಲಿಗೆ ಪತ್ರ ಬರೆದು ಸೇನೆಯನ್ನು ಕಳಿಸಿಕೊಡುವಂತೆ ಮನವಿ ಮಾಡಿದರು. ಗೃಹ ಮಂತ್ರಿ ಎಲ್.ಕೆ ಅಡ್ವಾಣಿಯವರು ತಕ್ಷಣವೇ ಸೇನೆಗೆ ಗುಜರಾತಿಗೆ ತೆರಳುವಂತೆ ಆಜ್ಞೆ ಇತ್ತರು. ಮೋದೀ ಜೀ ಕರೆ ಕಳುಹಿಸಿದ ಮರುದಿನವೇ ಜೋರ್ಜ್ ಫೆರ್ನಾಂಡಿಸ್ ಗುಜರಾತಿಗೆ ಬಂದಿಳಿದರು ಮತ್ತು ಸ್ವತಃ ಗುಜರಾತಿನ ರಸ್ತೆಗಳಲ್ಲಿ ಗಸ್ತು ತಿರುಗಿದರು. ಅಂತಹ ವಿಷಮ ಪರಿಸ್ಥಿಯಲ್ಲೂ ಅವರು ರಸ್ತೆಯಲ್ಲಿ ಅಡ್ಡಾಡಿದ್ದರು! ದೇಶದ ಗಡಿ ಕಾಯುತ್ತಿದ್ದ ಸೇನಾ ತುಕುಡಿ ಕೇವಲ ಇಪ್ಪತ್ತ ನಾಲ್ಕು ಘಂಟೆಗಳೊಳಗಾಗಿ ಗುಜರಾತಿನಲ್ಲಿ ಬಂದಿಳಿದಿತ್ತು. ಇಷ್ಟೆಲ್ಲಾ ನಡೆದದ್ದು ಗೋಧ್ರಾ ಕಾಂಡ ನಡೆದ ಎರಡು ದಿನಗಳ ಒಳಗೆ ಎಂಬುದನ್ನು ನೆನಪಿಡಿ. ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಇಂತಹ ಒಂದು ಘೋರ ಘಟನೆಯನ್ನು ಮೋದಿ ಜೀ ಸಮರ್ಥವಾಗಿ ನಿಭಾಯಿಸಿದ್ದರು.

ಮೋದೀ ಜೀ ಯವರ ಜಾಗದಲ್ಲಿ ಬೇರೆ ಯಾರೇ ಇರುತ್ತಿದ್ದರೂ ಗುಜರಾತ್ ದಂಗೆಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವೇ ಇರುತ್ತಿರಲಿಲ್ಲ. ಮೋದೀ ಜೀ ಯವರ ಕಾರ್ಯ ತತ್ಪರತೆ, ದಿಟ್ಟ ನಿರ್ಧಾರದಿಂದಾಗಿ ಇಡಿಯ ಗುಜರಾತ್ ಹೊತ್ತಿ ಉರಿಯುವುದರಿಂದ ತಪ್ಪಿತು. ಆವತ್ತೇನಾದರೂ ಮೋದೀ ಜೀ ಹಿಂದೂ-ಮುಸ್ಲಿಮ್, ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ ರಾಜಕಾರಣ ಮಾಡುತ್ತಾ ಕಾಲ ಕಳೆಯುತ್ತಿದ್ದರೆ ಇವತ್ತು ದೇಶದ ನಕ್ಷೆಯಲ್ಲಿ ಗುಜರಾತೇ ಇರುತ್ತಿರಲಿಲ್ಲ. ಅದೇ ಕೊನೆ ಅಲ್ಲಿಂದ ಇಲ್ಲಿವರೆಗೆ ಅಲ್ಲಿ ಒಂದೇ ಒಂದು ಕೋಮು ಗಲಭೆಯೂ ನಡೆದಿಲ್ಲ ಎಂದರೆ ಮೋದೀ ಜೀ ಯವರ ಕಾರ್ಯ ವೈಖರಿ ಹೇಗಿರಬೇಕು ನೀವೇ ಯೋಚಿಸಿ. ಮಾತ್ರವಲ್ಲ, ಭೂಕಂಪದಿಂದ ಸುಡುಗಾಡಗಿದ್ದ ಗುಜರಾತ್ ಇವತ್ತು ಹೇಗಿದೆ ಎಂದು ನೀವೇ ನೋಡುತ್ತಿರುವಿರಿ. ಇದಕ್ಕೆಲ್ಲ ಕಾರಣ ಮೋದೀ ಜೀ ಮತ್ತು ಕೇವಲ ಮೋದೀ ಜೀ.

ಒಂದು ವಿಷಯ ನಿಮ್ಮ ಮನಸಿನಲ್ಲಿ ಸರಿಯಾಗಿ ತುಂಬಿಕೊಳ್ಳಿ, ಮೋದೀ ಜೀ ಆವತ್ತೂ, ಇವತ್ತು ಮತ್ತು ಯಾವತ್ತಿಗೂ ಜಾತಿ, ತುಷ್ಟೀಕರಣ, ಓಲೈಕೆ, ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಅವರದೇನಿದ್ದರೂ ವಿಕಾಸವಾದವೇ ಮಂತ್ರ. ವಿರೋಧಿಗಳ ಮಾತಿಗೆ ಕಿವಿಗೊಡಬೇಡಿ, ಇವತ್ತೇನಾದರೂ ನೀವು ಮೋದೀ ಜೀ ಯವರನ್ನು ಕಿತ್ತೊಗೆದರೆ, ಅದರಿಂದ ಅವರಿಗಾಗುವ ನಷ್ಟವೇನಿಲ್ಲ, ಆದರೆ ಭಾರತಕ್ಕೆ ಮಾತ್ರ ಆಗುವ ನಷ್ಟ ಪದಗಳಲ್ಲಿ ಹೇಳಲು ಅಸಾಧ್ಯ. ಮೂರ್ಖರಾಗಬೇಡಿ, ಮೊದೀ ಜೀ ಅಂತಹ ನಾಯಕ ಪದೇ ಪದೇ ಹುಟ್ಟುವುದೂ ಇಲ್ಲ, ಪ್ರಧಾನ ಮಂತ್ರಿ ಆಗುವುದೂ ಇಲ್ಲ ನೆನಪಿರಲಿ. ಮುಂದಿನ ಬಾರಿಯೂ ಅವರನ್ನೇ ಪ್ರಧಾನಮಂತ್ರಿಯಾಗಿಸಿ ದೇಶವನ್ನು ವಿಶ್ವ ಗುರುವಾಗಿಸಿರಿ.

-Sharvari

Tags

Related Articles

Close