ದೇಶಪ್ರಚಲಿತರಾಜ್ಯ

ಗಂಡು ಮೆಟ್ಟಿದ ನಾಡಿನಲ್ಲಿ ಅಕ್ರಮ ದರ್ಗಾ ನೆಲಸಮ!

ಹುಬ್ಬಳ್ಳಿ – ಧಾರವಾಡ‌ಕ್ಕೆ ಸಂಬಂಧಿಸಿದಂತೆ ಬೈರಿದೇವರಕೊಪ್ಪದ ದರ್ಗಾ‌ವನ್ನು ಕೊನೆಗೂ ತೆರವು ಗೊಳಿಸಲಾಗಿದೆ.

ಹಜರತ್ ಸೈಯದ್ ಮೆಹಬೂಬ್ ಷಾ ಖಾದ್ರಿ ದರ್ಗಾ‌ವನ್ನು ಹೈಕೋರ್ಟ್ ಆದೇಶದಸ್ವಯ ತೆರವು ಮಾಡಲಾಗಿದೆ. ಬಿಗಿ ಪೊಲೀಸ್ ಭದ್ರತೆ‌ಯಲ್ಲಿ ಈ ದರ್ಗಾವನ್ನು ತೆರವು ಮಾಡಲಾಗಿದ್ದು, ಆ ಮೂಲಕ 2014 ರಿಂದೀಚೆಗೆ ವಿವಾದದಲ್ಲಿದ್ದ ಸ್ಥಳ ಈಗ ಕಾನೂನಾತ್ಮಕವಾಗಿ ತೆರವಾಗುವ ಮೂಲಕ ರಸ್ತೆ ನಿರ್ಮಾಣ‌ಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ರಸ್ತೆ ನಿರ್ಮಾಣ‌ ಕಾರ್ಯಕ್ಕಾಗಿ ಈ ದರ್ಗಾ‌ವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತ ನಿರ್ಧರಿಸಿದ್ದು, ಇದಕ್ಕೆ 2014 ರಿಂದಲೇ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ರಸ್ತೆ ನಿರ್ಮಾಣ ಕಾರ್ಯಕ್ಕೆ ಕಾನೂನಿನ ಮೂಲಕ ಜಯ ಸಿಕ್ಕಂತಾಗಿದ್ದು, ಹೈ ಕೋರ್ಟ್ ದರ್ಗಾ ನೆಲಸಮಕ್ಕೆ ಆದೇಶಿಸಿದೆ. ಈ ರಸ್ತೆ ಅಗಲೀಕರಣ ಕಾಮಗಾರಿಗೆ ಮುಖ್ಯ ರಸ್ತೆಯಿಂದ 44 ಮೀ. ದೂರದ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಸರ್ಕಾರ ಸೂಚಿಸಿತ್ತು. ಆ ವ್ಯಾಪಿಯೊಳಗಿದ್ದ ಈ ದರ್ಗಾವನ್ನು ತೆರವು ಮಾಡಲು ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಹೈಕೋರ್ಟ್ ಸರ್ಕಾರ‌ದ ಪರ ತೀರ್ಪು ನೀಡಿದ್ದು, ಆ ಮೂಲಕ ಈ ಭೂ ವಿವಾದಕ್ಕೆ ತೆರೆ ಎಳೆದಿದೆ. ದರ್ಗಾ‌ವನ್ನು ನೆಲಸಮ ಮಾಡುವ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದೆ.

ಅದರಂತೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಭದ್ರತೆಯಲ್ಲಿ ದರ್ಗಾ ನೆಲಸಮ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಈ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಡಿಸಿಪಿ ಸಾಹಿಲ್ ಬಾಗ್ಲಾ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆಗೆ ಬಿಗಿ ಭದ್ರತೆ ನೀಡಲಾಗಿದೆ. ಆ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಅಭಿವೃದ್ಧಿ ವಿಚಾರ‌ದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರ‌ದ ಅಧೀನದಲ್ಲಿ‌ನ ಜಾಗಗಳಲ್ಲಿ ಯಾರೇ ಅಕ್ರಮ ಕಟ್ಟಡ ನಿರ್ಮಾಣ ಮಾಡಿದರೂ , ಅದನ್ನು ಕಂಡು ಸುಮ್ಮನಿರುವುದು ಸಾಧ್ಯವಿಲ್ಲ. ಅಂತಹ ಅಕ್ರಮ‌ ಕಟ್ಟಡಗಳು ಕಂಡು ಬಂದಲ್ಲಿ ಅದನ್ನು ನಿರ್ನಾಮ ಮಾಡಿ, ಸಾರ್ವಜನಿಕ‌ರಿಗೆ ಸಹಕಾರಿ‌ಯಾಗುವ ಕಾರ್ಯಗಳನ್ನು, ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತದೆ ಎಂಬುದಕ್ಕೆ ಈ ಅಕ್ರಮ ದರ್ಗಾ ನೆಲಸಮ ಸಾಕ್ಷಿಯಾಗಿದೆ.

ಅಭಿವೃದ್ಧಿ‌ಯ ಮಾದರಿಯನ್ನು ಜನರೆದುರು ಸಾದರ ಪಡಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಾಡಿನಲ್ಲಿ ಇಂತದ್ದೊಂದು ಮಹತ್ಕಾರ್ಯ ನಡೆದಿದ್ದು, ಅವರು ಅಭಿವೃದ್ಧಿ‌ಗೆ ಎಷ್ಟು ಮಹತ್ವ ನೀಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕ‌ರ ಹಿತಾಸಕ್ತಿ‌ಗೆ ಇಂತಹ ಒಂದು ಗಟ್ಟಿ ನಿಲುವು ತೆಗೆದುಕೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯ ಶ್ಲಾಘನೀಯ.

Tags

Related Articles

Close