ಇತಿಹಾಸ

1962 ರಲ್ಲಿ ಭಾರತ ಯುದ್ಧವನ್ನು ಸೋತಿದ್ದೇಕೆ?! ಅಂದು ನಡೆದ ಘನಘೋರ ತಪ್ಪಿಗೆ ಜವಾಬ್ದಾರಿ ಯಾರಾಗಿದ್ದರು ಗೊತ್ತೇ?!

ಆ ದಿನ 18 ನವೆಂಬರ್ 1962ರಂದು ನಡೆದಿತ್ತು ರೆಜಂಗ್ ಲಾ ಯುದ್ದ!! ಈ ಯುದ್ದದಲ್ಲಿ ಹೋರಾಡಿದ ಅದೆಷ್ಟೋ ಕೆಚ್ಚೆದೆಯ ಭಾರತಾಂಬೆಯ ವೀರರು ತನ್ನ ಕೊನೆಯ ಉಸಿರುವರೆಗೂ ಹೋರಾಡಿ ತನ್ನ ದೇಶಕ್ಕೋಸ್ಕರ ಪ್ರಾಣವನ್ನೇ ತೊರೆದಿದ್ದಾರೆ!! ಆ ಸಂದರ್ಭದಲ್ಲಿ ಕೇವಲ 123 ಭಾರತೀಯ ಯೋಧರು 1836 ಮಂದಿ ಚೀನಿ ಯೋಧರನ್ನು ನಿರ್ನಾಮ ಮಾಡಿದರು!! ಭೌಗೋಳಿಕ ಸವಾಲುಗಳ ನಡುವೆಯೂ ಫಿರಂಗಿದಳವನ್ನು ಬಳಸಲು ಸಾಧ್ಯವಾಗದಿದ್ದರೂ ಕೂಡ ವೀರಾವೇಶದಿಂದ ಹೋರಾಡಿದರು ನಮ್ಮ ಸೈನಿಕರು!! ಆದರೆ ಈ ಒಂದು ಯುದ್ದದಲ್ಲಿ ಭಾರತೀಯ 109 ಯೋಧರು ಹುತಾತ್ಮರಾಗಿದ್ದಾರೆ!! ಭಾರತೀಯ ಸೈನ್ಯದ ನೇತೃತ್ವ ವಹಿಸಿದ್ದ ಮೇಜರ್ ಶೈತಾನ್ ಸಿಂಗ್(ಐಸಿ 7990) ಶತ್ರುಗಳನ್ನು ಧೈರ್ಯದಿಂದ ಎದುರಿಸಿದ ಇವರ ಶೌರ್ಯಕ್ಕಾಗಿ, ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಇವರಿಗೆ, ಮರಣ ನಂತರ “ಪರಮ ವೀರ ಚಕ್ರ” ನೀಡಿ ಗೌರವಿಸಲಾಗಿದೆ.

ಹೌದು.. ಆದರೆ.. 1962ರಲ್ಲಿ ನಡೆದ ಇಂಡೋ-ಚೀನಾ ಯುದ್ದದ ಸಂದರ್ಭದಲ್ಲಿದ್ದ ರಾಜಕೀಯ ಹಿನ್ನಲೆಯನ್ನು ನೋಡಿದಾಗ, ನಮ್ಮ ರಾಜಕೀಯ ನಾಯಕರಿಗೂ ಯಾವುದೇ ರೀತಿಯ ಗೌರವ ನೀಡಬೇಕೆಂದನಿಸುತ್ತದೆಯೇ??

ಭಾರತವು ಪಾಕಿಸ್ತಾನಕ್ಕಿಂತ ಹೆಚ್ಚು ಬಲಿಷ್ಠವಾದ ರಾಷ್ಟ್ರ ಮತ್ತು ಕಾರ್ಯತಂತ್ರಗಳಲ್ಲಿ ನಿಪುಣತೆಯನ್ನು ಹೊಂದಿರುವ ದೇಶ ಎನ್ನುವುದು ತಿಳಿದಿರುವ ವಿಚಾರ!! ಆದರೆ ಕೆಲವೇ ಕೆಲವು ಸಮಯಗಳಲ್ಲಿ ಪಾಕಿಸ್ತಾನವೂ ತನ್ನ ಗಡಿ ಭಾಗವನ್ನು ವಿಸ್ತಿರಿಸಿಕೊಳ್ಳುವ ದುರಾಸೆಯನ್ನು ಹೊಂದಲು ಶುರುಮಾಡಿತು. ಆದರೆ ಭಾರತವೂ 1962ರ ಸಿನೋ-ಇಂಡಿಯನ್ ಯುದ್ದದ ಕುರಿತು ಕೆಲವು ಬಹಿರಂಗ ಸತ್ಯಗಳು ಜನತೆಯ ಮುಂದಿಟ್ಟು, ಇಡೀ ಭಾರತವನ್ನೇ ತಲೆತಗ್ಗಿಸುವಂತೆ ಮಾಡಿದೆ. ಆದರೆ ಇಂತಹ ಕೆಲಸ ಮಾಡಿದ್ದು ಚೀನಾ ಅಲ್ಲ, ಬದಲಿಗೆ 1962 ಯುದ್ದವನ್ನು ಘೋಷಿಸಿದ್ದ ನೆಹರು. ಖಂಡಿತಾವಾಗಿಯೂ ಕೂಡ ಪಾಕಿಸ್ತಾನದಂತಹ ದುರಾಸೆ ಹಾಗೂ ಭಯೋತ್ಪಾದಕ ರಾಷ್ಟ್ರಗಳ ಮೇಲೆ ಪ್ರೀತಿ ತೋರುವುದನ್ನು ನೋಡಿದಾಗ ನಾವೆಲ್ಲ ಮೂಕರಾಗಿ ಬಿಡುತ್ತೇವೆ. ಇನ್ನು ಸಿನೋ-ಇಂಡಿಯನ್ ಯುದ್ದದ ಸಂದರ್ಭದಲ್ಲಿ ನಡೆದ ಅಪಚಾರಗಳ ಬಗ್ಗೆ ತಿಳಿದರೆ ದಂಗಾಗಬಹುದು!!

ಭಾರತ ಮತ್ತು ಚೀನಾ ರಾಷ್ಟ್ರಗಳ ನಡುವಿನ ಗಡಿರೇಖೆಗಳ ಬಗ್ಗೆ ತಪ್ಪು ಗ್ರಹಿಗಳಿದ್ದವು. ಮಾತ್ರವಲ್ಲದೇ ಆಗಿನ ನಮ್ಮ ಪ್ರಧಾನಿಗಳಾಗಿದ್ದ ನೆಹರು ಅವರು, ಈ ವಿಷಯಗಳ ಬಗ್ಗೆ ಚರ್ಚೆ ಮಾಡುವ ಮೂಲಕ ಸಮಸ್ಯೆಗಳನ್ನು ಬಗೆ ಹರಿಸಬಹುದಾಗಿತ್ತು. ಆದರೆ ಅದನ್ನು ಅವರು ಮಾಡಲೇ ಇಲ್ಲ!! ಇನ್ನು ಐತಿಹಾಸಿಕ ಸತ್ಯಗಳಿಗೆ ಯಾವುದೇ ನಿರ್ಭಂಧನೆ ಇಲ್ಲ. ಯಾಕೆಂದರೆ ಈಡೀ ಜಗತ್ತಿಗೆ ಗೊತ್ತಿರುವ ಹಾಗೆ, ಭಾರತವು 1962ರಲ್ಲಿ ಚೀನಿ ಭೂಮಿಯನ್ನು ಪಡೆದುಕೊಳ್ಳಲು ಯತ್ನಿಸಿದ್ದು, ಅದರಿಂದ ಭಾರತಕ್ಕೆ ಹೀನಾಯವಾಗಿ ಸೋಲನ್ನನುಭವಿಸಿತು ಎಂದು. ಹಾಗಾಗಿ, ಈ ವಿಚಾರವಾಗಿ ಜವಾಹರಲಾಲ್ ನೆಹರೂಗೆ ಧನ್ಯವಾದಗಳನ್ನು ಹೇಳಲೇಬೇಕು!!

ಇನ್ನು 1963ರಲ್ಲಿ ಇಬ್ಬರು ಸೈನ್ಯದ ಅಧಿಕಾರಿಗಳಾದ ಲೆಫ್ಟಿನೆಂಟ್ ಜನರಲ್ ಟಿ.ಬಿ ಹೆಂಡರ್ಸನ್-ಬ್ರೂಕ್ಸ್ ಮತ್ತು ಬ್ರಿಗೇಡಿಯರ್.ಪಿ.ಎಸ್ ಭಗತ್, ಈ ಯುದ್ದವನ್ನು ಕೈಗೊಳ್ಳುವಲ್ಲಿ ಮಾಡಿದ ಯುದ್ದತಂತ್ರದ ತಪ್ಪು ಮಾಹಿತಿಗಳ ಬಗ್ಗೆ ತನಿಖೆ ಮಾಡಲು ಕೇಳಿಕೊಂಡರು. ಆದರೆ 50 ವರ್ಷಗಳವರೆಗೂ, 1962ರಲ್ಲಿ ನಡೆದ ಯುದ್ದದ ಬಗ್ಗೆ ಪ್ರಧಾನಿ ನೆಹರು ಅವರು ತನ್ನ ರಾಜಕೀಯದಲ್ಲಿ ನಡೆದ ಪ್ರಮಾದಗಳನ್ನು ಮುಚ್ಚಿಹಾಕಿದ್ದಲ್ಲದೇ, ಈ ಬಗ್ಗೆ ಸರಕಾರವು ವರದಿ ಬಿಡುಗಡೆ ಮಾಡಲು ನಿರಾಕರಿಸಿತು. ಆ ಯುಗದಲ್ಲಿದ್ದ ಪತ್ರಕರ್ತ ನೆವಿಲ್ಲೆ ಮ್ಯಾಕ್ಸ್ವೆಲ್ ಅವರು ಹೆಂಡರ್ಸನ್-ಬ್ರೂಕ್ಸ್ ಮತ್ತು ಬ್ರಿಗೇಡಿಯರ್.ಪಿ.ಎಸ್ ಭಗತ್ ಅವರ ವರದಿಯ ನಕಲನ್ನು ಪಡೆದುಕೊಂಡಿದ್ದರು. ಆದರೆ ಇದು ದಶಕಗಳವರೆಗೆ ಭಾರತದಲ್ಲಿ ಪ್ರಕಟಗೊಳ್ಳಲು ಮಾಡಿದ ನಿರರ್ಥಕ ಪ್ರಯತ್ನಗಳ ನಂತರವೂ ಇದನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಯಿತು!! ಆದರೆ ಈ ವೆಬ್‍ಸೈಟ್ ಅನ್ನು ತಕ್ಷಣವೇ ನಿರ್ಬಂಧಿಸಲಾಯಿತು, ಈ ಬಗ್ಗೆ ಯುಪಿಎ ರಕ್ಷಣಾ ಸಚಿವ ಎ.ಕೆ ಆಂಟೋನಿ ಅವರು ಲೋಕಸಭೆಯಲ್ಲಿ ಲಿಖಿತ ಬರವಣಿಗೆಯ ಮೂಲಕ ವೆಬ್‍ಸೈಟ್ ಬ್ಲಾಕ್ ಮಾಡಿದ ಕುರಿತು ಮಾಹಿತಿಯನ್ನು ಹೊರಹಾಕಿದ್ದಾರೆ. ಇವೆಲ್ಲವೂ ನೆಹರು ತನ್ನ ಸಾಮ್ರಾಜ್ಯವನ್ನು ಅವರ ಅನೂಕೂಲಕ್ಕಾಗಿ ಸತ್ಯಾತೆಯನ್ನು ಹೇಗೆ ಯೋಜಿಸಿದರು ಮತ್ತು ಅದನ್ನು ಹೇಗೆ ರಕ್ಷಿಸಿದರು ಎನ್ನುವುದನ್ನು ನೋಡಬಹುದಾಗಿದೆ!!

ಜವಾಹರಲಾಲ್ ನೆಹರೂ ಮಾಡಿದ ಅತಿದೊಡ್ಡ ಪ್ರಮಾದಗಳೆಂದರೆ ಪಿಒಕೆ ಮತ್ತು ಹಿಮಾಲಯದ ವಿಚಾರ!! ಪಿಒಕೆಯಲ್ಲಿ ವಿಜಯದ ಹೊರತಾಗಿ ಪಾಕಿಸ್ತಾನವೂ ಭಾರತದಿಂದ ಅತೀ ದೊಡ್ಡ ಪ್ರಮಾಣದ ಭಾರತೀಯ ಭೂಭಾಗವನ್ನು ಕಳೆದುಕೊಂಡಿದ್ದೇವೆ. ಎರಡನೇಯದಾಗಿ ಸಾವಿರಾರು ಜನ ಸೈನಿಕರನ್ನು ಈ ಒಂದು ಹೋರಾಟದಿಂದ ಕಳೆದುಕೊಂಡಿದ್ದೇವೆ. ಇನ್ನು ಜವಾಹರಲಾಲ್ ನೆಹರು ಅವರು ಭಾರತದಲ್ಲಿ ಸುಮಾರು ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು(1947-1964). ಆದರೆ ಭಾರತೀಯರಾದ ನಮಗೆ, ನೆಹರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿಗಳ ಕೆಲಸದ ಬಗ್ಗೆ ಅಧ್ಯಯನ ಮಾಡಲು ಹಾಗೂ ವಿಶ್ಲೇಷಿಸಲು ನಮಗೆ ಅನುಮತಿ ಇಲ್ಲ. ಅಷ್ಟೇ ಅಲ್ಲದೇ, ಇತಿಹಾಸಕಾರರು ಮತ್ತು ಸಂಶೋಧಕರಿಗೆ “ನೆಹರೂ ಪೇಪರ್ಸ್” ಎಂದು ಕರೆಯಲ್ಪಡುವ ಮೂಲ ದಾಖಲೆಗಳ ವಿಚಾರಗಳ ಬಗ್ಗೆ ತಿಳಿದುಕೊಳ್ಳಲು ಕೂಡ ಅನುಮತಿ ನೀಡಿಲ್ಲ. ಆದರೆ ಈ ಎಲ್ಲಾ ಮಾಹಿತಿಯನ್ನು ‘ನೆಹರೂ ಸ್ಮಾರಕ ಗ್ರಂಥಾಲಯ’ದಲ್ಲಿ ಸುರಕ್ಷಿತವಾಗಿರಿಸಲಾಗಿದ್ದು ಅದನ್ನು ಕುಟುಂಬದ ಆಸ್ತಿಯಂತೆ ಕಾವಲು ಕಾಯುತ್ತಿದ್ದಾರೆ!! ಇನ್ನು ನೆಹರೂ ಇತಿಹಾಸಕಾರರು “ಜವಾಹರಲಾಲ್ ನೆಹರು ಅವರ ಆಯ್ದ ಕೃತಿ”ಗಳಿಂದ (1947-1955)ಕೆಲವೊಂದು ಇತಿಹಾಸದ ಪ್ರೇಮಿಗಳಿಗೆ ನೆಹರೂ ಬಗೆಗೆ ಮಾಹಿತಿಯನ್ನು ಸಿಗುವಂತೆ ಮಾಡಿದ್ದಾರೆ!!

ಆದರೆ ಯಾರಿಂದಲೇ ಆಗಲಿ, ಸತ್ಯವನ್ನು ಮಾತ್ರ ಯಾರಿಂದಲೂ ಬದಲಿಸಲಾಗದು!! ಚೀನಾದೊಂದಿಗಿನ ಯುದ್ದದಲ್ಲಿ ರಾಜತಾಂತ್ರಿಕ ವಿಫಲತೆಗೆ ನೆಹರೂ ನೇತೃತ್ವ ವಹಿಸಿದ್ದರು!ಇನ್ನು ಚೀನಾದೊಂದಿಗೆ ಶೀತಲ ಸಮರದ ಪರಂಪರೆಯನ್ನು ಬ್ರಿಟಿಷರ ಯುಗದಿಂದಲೇ ಭಾರತಕ್ಕೆ ಅನುವಂಶಿಕವಾಗಿ ಮಾಡಿಕೊಟ್ಟಿದ್ದಾರೆ. ಇನ್ನೂ ಸ್ವಾತಂತ್ರ್ಯಾ ನಂತರ ನಮ್ಮ ‘ಗಣ್ಯರು’ ಮತ್ತು ‘ಕೇಂಬ್ರಿಜ್ ವಿದ್ಯಾವಂತ’ ಪ್ರಧಾನಿ ನೆಹರು ಅವರು ಕೇವಲ ನಕ್ಷೆಗಳ ಬಗ್ಗೆ ಮತ್ತು ಬೌಂಡರಿಸ್ ಗಳಲ್ಲಿರುವ ಗೊಂದಲಗಳ ಬಗ್ಗೆ ಚೀನಾದ ಜೊತೆ ಮಾತುಕತೆ ನಡೆಸುತ್ತಿದ್ದರೇ ಹೊರತು ಬೇರಾವ ವಿಚಾರವಲ್ಲ!!

ಅಷ್ಟೇ ಅಲ್ಲದೇ, ನೆಹರೂ ಅವರ ಅಸಮರ್ಥ ನಾಯಕತ್ವದಲ್ಲಿ “ಫಾವರ್ಡ್ ಪಾಲಿಸಿ” ಕೂಡ ಒಂದಾಗಿದ್ದು, ಇದನ್ನು ಭಾರತೀಯ ಸೈನ್ಯದ ಮೇಲೆಯೂ ಹೇರಲಾಗಿತ್ತು!! ಈ ವ್ಯವಸ್ಥೆ ಸರಿ ಇಲ್ಲ ಎಂದು ಗೊತ್ತಿದ್ದರು ಕೂಡ ನೆಹರೂ ಅವರನ್ನು ಬೆಂಬಲ ಮಾಡಲೇಬೇಕಾಯಿತು. ಯಾಕೆಂದರೆ ಆ ಸಂದರ್ಭದಲ್ಲಿ ವಿಷಯಗಳನ್ನು ಬಗೆಹರಿಸಲು ಯಾವುದೇ ಅವಕಾಶಗಳು ಇರಲಿಲ್ಲ!! ನೆಹರುರ ಮೂರ್ಖತನ ಮತ್ತು ವಿ.ಕೆ ಕೃಷ್ಣ ಮೆನನ್ ಅವರ ಸ್ವಾರ್ಥ ಮತ್ತು ಅಸಮರ್ಥ ನಾಯಕತ್ವ ಇಡೀ ಭಾರತವನ್ನೇ ಅಪಾಯದ ಅಂಚಿಗೆ ತಳ್ಳಿದ್ದರು ಎಂದರೆ ತಪ್ಪಾಗಲಾರದು!! ಅಲ್ಲದೇ ಭಾರತೀಯ ಸೇನೆ ಆ ಸಂದರ್ಭದಲ್ಲಿ ಬಲಿಷ್ಠವಾಗಿರಲಿಲ್ಲ ಯಾಕೆಂದರೆ ಸೇನೆಗೆ ಬೇಕಾದ, ಯಾವುದೇ ರೀತಿಯ ಸುಸಜ್ಜಿತವಾದ ವ್ಯವಸ್ಥೆಯಾಗಲಿ ಅಥವಾ ಸಾಕಷ್ಟು ಸೈನಿಕರಾಗಲಿ ಇರಲಿಲ್ಲ!! ಹಾಗಾಗಿ ಸೇನೆಯ ವ್ಯವಸ್ಥೆಯೂ ಬಹಳ ಶೋಚನಿಯವಾಗಿತ್ತಲ್ಲದೇ ಯುದ್ದಭೂಮಿಯಲ್ಲಿ ಸೋಲನ್ನು ಅನುಭವಿಸುತ್ತೇನೆ ಎಂದು ಗೊತ್ತಿದ್ದರೂ ಕೂಡ ಮೇಲಿನಿಂದ ಬಂದ ಆಜ್ಜೆಯನ್ನು ಪಾಲಿಸಿ ಚೀನಾದ ಭೂಪ್ರದೇಶವನ್ನು ನುಸುಳಲೇಬೇಕಾಯಿತು. ಆದರೆ ಈ ಒಂದು ಯುದ್ದದಲ್ಲಿ ಅದೆಷ್ಟೋ ಸೈನಿಕರು ಪ್ರಾಣವನ್ನೇ ಕಳೆದುಕೊಂಡರು. ಸಾವಿರಾರು ಸೈನಿಕರ ರಕ್ತದ ಕಲೆ ನೆಹರೂ ಅವರ ಕೈಯಲ್ಲಿ ತುಂಬಿಕೊಂಡಿದೆ ಯಾಕೆಂದರೆ ಇದು ಕೇವಲ ಯುದ್ದವಲ್ಲ ಬದಲಾಗಿ ಆತ್ಮಹತ್ಯಾ ಯುದ್ದವಾಗಿತ್ತು!! ಈ ಕುರಿತು ಲೆಫ್ಟಿನೆಂಟ್ ಜನರಲ್ ಟಿ.ಬಿ ಹೆಂಡರ್ಸನ್-ಬ್ರೂಕ್ಸ್ ಮತ್ತು ಬ್ರಿಗೇಡಿಯರ್.ಪಿ.ಎಸ್ ಭಗತ್ ತಮ್ಮ ವರದಿಯಲ್ಲಿ ಈ ಒಂದು ಕವಿತೆಯ ಸಾಲನ್ನು ಅವರ ವರದಿಯಲ್ಲಿ ಈ ರೀತಿ ಬರೆದಿದ್ದಾರೆ-

Someone had blundered:

Theirs not to make reply ,

Theirs not to reason why,

Theirs but to do and die”

Jai Hind! Jai Jawan!

– ಅಲೋಖಾ

Tags

Related Articles

Close