ಪ್ರಚಲಿತ

೨೦೧೯ರ ಲೋಕಸಭಾ ಚುನಾವಣೆಯಲ್ಲೂ ಮೋದಿಯೇ ಪ್ರಧಾನಮಂತ್ರಿ.! ಮತ್ತೊಮ್ಮೆ ಯಾರೂ ಊಹಿಸದ ರೀತಿಯಲ್ಲಿ ಗೆಲುವು ಸಾಧಿಸುತ್ತಾರೆ ನಮೋ.! ದಿಲ್ಲಿಯಿಂದ ಹಳ್ಳಿಯೆಡೆಗೆ ಒಂದು ನೋಟ.!

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾರೂ ಊಹಿಸದ ರೀತಿಯಲ್ಲಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದರು.‌ಅದು ಭಾರತದ ಪಾಲಿಗೆ ಎಂದೂ ಮರೆಯಲಾಗದ ದಿನ ಎಂದರೆ ತಪ್ಪಾಗದು. ಯಾಕೆಂದರೆ ಕೇವಲ ಗುಜರಾತ್ ಎಂಬ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಭಾರತೀಯ ಜನತಾ ಪಕ್ಷದ (ಎನ್‌ಡಿಎ) ಪ್ರಧಾನಿ ಅಭ್ಯರ್ಥಿ ಎಂದು ಆದಾಗಲೇ ನಿಗಧಿಯಾಗಿತ್ತು. ಮೋದಿ ಎಂಬ ಹೆಸರಿನಲ್ಲೇ ಒಂದು ಶಕ್ತಿ ಅಡಗಿತ್ತು ಎಂಬುದು ಚುನಾವಣಾ ಸಂದರ್ಭದಲ್ಲಿ ಇಡೀ ದೇಶವೇ ಒಪ್ಪಿಕೊಂಡಿತ್ತು. ಯಾಕೆಂದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದಿ ವಯಸ್ಸಿನ ಹಿರಿಯರ ಬಾಯಲ್ಲೂ ಕೇಳಿಬರುತ್ತಿದ್ದ ಒಂದು ಮಂತ್ರ ಮೋದಿ. ಅದ್ಯಾಕೋ ಈ ಮನುಷ್ಯನ ಮೇಲೆ ಇಡೀ ದೇಶವೇ ಒಂದು ವಿಶೇಷ ನಂಬಿಕೆ ಇಟ್ಟಿತ್ತು. ಅದೇ ಕಾರಣದಿಂದ ನರೇಂದ್ರ ಮೋದಿ ನೇತ್ರತ್ವದಲ್ಲಿ ಭಾರತೀಯ ಜನತಾ ಪಕ್ಷ ನಂ ೧ ಪಕ್ಷವಾಗಿ ಹೊರಹೊಮ್ಮಿತ್ತು. ನರೇಂದ್ರ ಮೋದಿ ಪ್ರಧಾನಿಯೂ ಆದರೂ, ತಾನು ಕಂಡ ಕನಸಿನ ಭಾರತದ ನಿರ್ಮಾಣಕ್ಕಾಗಿ ಈ ವಯಸ್ಸಿನಲ್ಲೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡುವ ಈ ಮನುಷ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲೂ ಪ್ರಸಿದ್ಧಿ ಪಡೆದು ಇಡೀ ಜಗತ್ತು ಭಾರತವನ್ನು ನೋಡುತ್ತಿದ್ದ ದೃಷ್ಟಿಯನ್ನೇ ಬದಲಾಯಿಸುವಂತೆ ಮಾಡಿಬಿಟ್ಟಿದ್ದಾರೆ.‌ಅದೇ ಕಾರಣಕ್ಕಾಗಿ ಕಳೆದ ೬೦ ವರ್ಷಗಳಲ್ಲಿ ದೇಶವನ್ನಾಳಿದ ಪಕ್ಷವೊಂದು ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕೂಡ ಪರದಾಡುವಂತಾಗಿದೆ, ಮತ್ತು ತನ್ನ ನೆಲೆ ಕಂಡುಕೊಳ್ಳಲು ಇದ್ದಬದ್ದ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ ಸಹಾಯಕ್ಕೆ ಭಿಕ್ಷೆ ಬೇಡಿ ಅಧಿಕಾರಕ್ಕೆ ಏರಲು ಪ್ರಯತ್ನಪಡುವಂತಾಗಿದೆ. ಇದೆಲ್ಲಾ ನಡೆದಿದ್ದು ಕೇವಲ ಕಳೆದ ನಾಲ್ಕು ವರ್ಷಗಳಲ್ಲಿ ಎಂದರೆ ಒಮ್ಮೆ‌ನಾವೇ ದಿಗ್ಬ್ರಮೆಗೊಳ್ಳುತ್ತೇವೆ. ಯಾಕೆಂದರೆ ನರೇಂದ್ರ ಮೋದಿಯವರ ವಿರುದ್ಧ ಇದೀಗ ಇಡೀ ದೇಶದ ವಿರೋಧಿ ಪಡೆಗಳೆಲ್ಲಾ ಒಂದಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಸಜ್ಜಾಗಿವೆ. ಆದರೂ ಮೋದಿ ಮಾತ್ರ ಯಾವುದೇ ಆತಂಕವಿಲ್ಲದೆ ತನ್ನ ಪಾಡಿಗೆ ತಾನು ದೇಶದ ಅಭಿವೃದ್ಧಿಗೆ ಬೇಕಾದ ಒಂದೊಂದೇ ಮೆಟ್ಟಿಲು ನಿರ್ಮಿಸುತ್ತಿದ್ದಾರೆ ಎಂದರೆ ಅವರ ಈ ಮಟ್ಟದ ಆತ್ಮವಿಶ್ವಾಸಕ್ಕೆ ಕಾರಣ ಏನಾಗಿರಬಹುದು ಎಂದು ಆಳವಾಗಿ ಆಲೋಚಿಸಿದರೆ, ನಮ್ಮ ಕಣ್ಣಿಗೆ ಬೀಳುವುದು ನರೇಂದ್ರ ಮೋದಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಕಾರ್ಯರೂಪಕ್ಕೆ ತಂದ ಯೋಜನೆಗಳೇ ಹೊರತು ಮತ್ತಿನ್ನೇನೂ ಅಲ್ಲ..!

ಪ್ರಧಾನಿ ಮೋದಿ ಕಳೆದ ಲೋಕಸಭಾ ಚುನಾವಣೆ ಅಂದರೆ ೨೦೧೪ರ ಚುನಾವಣೆಯಲ್ಲಿ ಪಡೆದ ಒಟ್ಟು ಮತಗಳು ಬರೋಬ್ಬರಿ ೩೧% ಅಂದರೆ ಸುಮಾರು ೧೪ ಕೋಟಿ. ಆದರೆ ಈ ೨೪ ಕೋಟಿ ಮತಗಳು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಡಬಲ್ ಆಗಲಿದೆ ಎಂದರೆ ನೀವು ನಂಬುತ್ತೀರಾ..? ಆದರೆ ನಂಬಲೇಬೇಕು. ಯಾಕೆಂದರೆ ನಾವು ಇಲ್ಲಿ ಮಾಡಿರುವ ಒಂದು ಲೆಕ್ಕಾಚಾರವನ್ನು ಸರಿಯಾಗಿ ಗಮನಿಸಿ, ನಂತರ ನೀವೇ ಹೇಳಿ ಪ್ರಧಾನಿ ಮೋದಿ ಮತ್ತೊಮ್ಮೆ ವಿಜಯಪತಾಕೆ ಹಾರಿಸುತ್ತಾರಾ , ಇಲ್ಲವೇ? ಎಂದು.

ಮೋದಿ ಕೈಹಿಡಿಯಲಿದೆ ಉಜ್ವಲಾ ಯೋಜನೆ..!

ನರೇಂದ್ರ ಮೋದಿ ಸರಕಾರ ಕಳೆದ ಮೇ ೨೬ಕ್ಕೆ ಸರಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಳೆದ ೬೦ ವರ್ಷಗಳಲ್ಲಿ ಈ ಹಿಂದಿನ ಸರಕಾರ ಕೇವಲ ೧೩ಕೋಟಿ ಗ್ಯಾಸ್ ಕನೆಕ್ಷನ್‌ಗಳನ್ನು ಮಾತ್ರ ದೇಶದ ಜನರಿಗೆ ನೀಡಿತ್ತು. ಆದರೆ ನಮ್ಮ ಸರಕಾರ ಕೇವಲ ೪ ವರ್ಷದಲ್ಲಿ ಬರೋಬ್ಬರಿ ೧೦ ಕೋಟಿ ಗ್ಯಾಸ್ ಕನೆಕ್ಷನ್‌ನ್ನು ಕೇಂದ್ರ ಸರಕಾರದ ಉಜ್ವಲ ಯೋಜನೆಯ ಅಡಿಯಲ್ಲಿ ನೀಡಿದ್ದೇವೆ ಎಂದಿದ್ದರು. ಇದು ಕೇವಲ ಪ್ರಧಾನಿ ಮೋದಿ ಮಾತಿಗಷ್ಠೇ ಹೇಳಿರಲಿಲ್ಲ, ಇದು ಈಗಾಗಲೇ ಜನರ ಬಳಿ ತಲುಪಿರುವ ಯೋಜನೆ. ಹಾಗಾದರೆ ನೀವೇ ಗಮನಿಸಿ, ಅದೆಷ್ಟೋ ಕುಟುಂಬಗಳು ಹೊಗೆಯಿಂದ ಬಳಲುತ್ತಿತ್ತು, ಮತ್ತು ಉಜ್ವಲ ಯೋಜನೆಯ ಉಪಯೋಗವನ್ನು ಪಡೆದು ನರೇಂದ್ರ ಮೋದಿಯವರನ್ನು ಕೈಬಿಡುತ್ತಾರೆಯೇ.?

Related image

ಇಲ್ಲ , ಅದು ಸಾಧ್ಯವೇ ಇಲ್ಲ ಎನ್ನುತ್ತಾರೆ ಈ ದೇಶದ ಜನರು. ಯಾಕೆಂದರೆ ಮೋದಿ ಹೇಳಿರುವ ಲೆಕ್ಕದ ಪ್ರಕಾರ ೧೦ ಕೋಟಿ ಕುಟುಂಬಗಳಿಗೆ ಈ ಯೋಜನೆಯ ಉಪಯೋಗವಾಗಿದೆ ಎಂದರೆ ಈ ಎಲ್ಲಾ ಕುಟುಂಬಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಬೆಂಬಲಿಸುತ್ತಾರೆ. ೧೦೦% ಅಲ್ಲದೇ ಇದ್ದರು ೬೦% ರಷ್ಟು ಜನ ಖಂಡಿತವಾಗಿ ಬೆಂಬಲ ನೀಡುತ್ತಾರೆ. ಅಂದರೆ ೬ ಕೋಟಿ ಜನರ ಮತ ಮೋದಿಗೆ ಬಂದಾಯಿತು, ಫಲಾನುಭಾವಿಗಳು ಮೋದಿ ಕೈ ಬಿಡುತ್ತಾರೆಯೇ.? ನೋ ನೆವರ್.

ಸ್ವ ಉದ್ಯೋಗಕ್ಕಾಗಿ ಮುದ್ರಾ ಯೋಜನೆ..!

ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂದು ಪದೇ ಪದೇ ಬೊಬ್ಬೆ ಹೊಡೆಯುವ ಮೋದಿ ವಿರೋಧಿಗಳ ಬಾಯಿ ಮುಚ್ಚಿಸಲೆಂದೇ ಈ ವಿಶೇಷ ಯೋಜನೆಯನ್ನು ನರೇಂದ್ರ ಮೋದಿ ಜಾರಿಗೆ ತಂದಿದ್ದರು. ಅದೇನೆಂದರೆ ಯಾವುದೇ ಒಂದು ಮಧ್ಯಮ ಉದ್ಯಮ ಪ್ರಾರಂಭಿಸಲು ಕೇಂದ್ರ ಸರಕಾರದ ಮುದ್ರಾ ಯೋಜನೆಯ ಅಡಿಯಲ್ಲಿ ಅತೀ ಸುಲಭವಾಗಿ ಸಾಮಾನ್ಯ ಜನರಿಗೂ ಸಾಲ ಸಿಗುತ್ತಿದೆ‌. ಆದ್ದರಿಂದ ಇನ್ನೊಬ್ಬರ ಕೈಯಲ್ಲಿ ದುಡಿಯುವುದಕ್ಕಿಂತ ಸ್ವಂತ ಉದ್ಯೋಗ ನಿರ್ಮಿಸಿಕೊಂಡು ಆರಾಮವಾಗಿ ಇರಬಹುದು.‌

Image result for modi mudra yojana

ಮುದ್ರಾ ಯೋಜನೆ ಜಾರಿಯಾಗಿದ್ದು ೨೦೧೫ರಲ್ಲಿ, ಈ ಯೋಜನೆಯ ಅಡಿಯಲ್ಲಿ ಈವರೆಗೆ ಸುಮಾರು ೧೨ ಕೋಟಿ ಜನರು ಬರೋಬ್ಬರಿ ೬ ಲಕ್ಷ ಕೋಟಿ ಸಾಲ ಪಡೆದಿದ್ದಾರೆ.‌ ಅಂದರೆ ೧೨ ಕೋಟಿ ಫಲಾನುಭವಿಗಳಲ್ಲಿ ಹೆಚ್ಚೂ ಕಮ್ಮಿ ೭-೮ ಕೋಟಿ ಜನ ತಮ್ಮ ಜೀವನ ರೂಪಿಸಲು ನೆರವಾದ ನರೇಂದ್ರ ಮೋದಿಯವರಿಗೆ ಮತ ನೀಡುತ್ತಾರೆ ಎಂಬುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕೇವಲ ಎರಡೇ ಯೋಜನೆಯಲ್ಲಿ ಕಳೆದ ಲೋಕಸಭಾ ಚುನಾವಣೆಯ ಮತಗಳನ್ನು ಪಡೆಯುತ್ತಾರೆ ಎಂದರೆ ತಪ್ಪಾಗದು.!

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಈವರೆಗೆ ಅದೆಷ್ಟೋ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿ ಹೊಂದುವಂತೆ ಮಾಡಿದ್ದಾರೆ. ಆದರೂ ವಿರೋಧಿಗಳು ಸುಕಾಸುಮ್ಮನೆ ಪ್ರತಿಯೊಂದು ನಿರ್ಧಾರವನ್ನೂ ವಿರೋಧಿಸುತ್ತಾರೆ ಎಂದರೆ , ಮೋದಿಯವರ ಜನಪ್ರಿಯತೆ ಕಂಡು ಅದ್ಯಾವ ಮಟ್ಟಿಗೆ ಉರಿಯುತ್ತಿರಬಹುದು ನೀವೇ ಆಲೋಚಿಸಿಕೊಳ್ಳಿ. ಕೇವಲ ಕೆಲವೇ ರಾಜ್ಯಗಳಲ್ಲಿ ಆಡಳಿತ ನಡೆಸುತ್ತುದ್ದ ಭಾರತೀಯ ಜನತಾ ಪಕ್ಷ ಇಂದು ದೇಶದ ಸುಮಾರು ೨೨ ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿದೆ ಎಂದರೆ ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳಯತ್ತಿದ್ದ ಪಕ್ಷಗಳೆಲ್ಲಾ ಮೂಲೆಗುಂಪಾಗುವುದರಲ್ಲಿ ತಪ್ಪೇನಿಲ್ಲ. ಅದಕ್ಕಾಗಿಯೇ ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಕಾಂಜಿಪೀಂಜಿ ಎಲ್ಲಾ ಪಕ್ಷಗಳು ಒಟ್ಟಾಗಿವೆ. ಆದರೂ ಬಿಜೆಪಿ ಮಾತ್ರ ಹೆಚ್ಚಿನ ತಲೆಕೆಡಿಸಿಕೊಳ್ಳುತ್ತಿಲ್ಲ ಯಾಕೆಂದರೆ ತಾವು ಜಾರಿಗೊಳಿಸಿದ ಯೋಜನೆಗಳ ಫಲಾನುಭಾವಿಗಳೇ ಮೋದಿಯ ಕೈ ಮತ್ತೊಮ್ಮೆ ಹಿಡಿಯುತ್ತಾರೆ ಎಂಬುದು ಖಂಡಿತವಾಗಿ ಗೊತ್ತಿದೆ‌‌.

ಸದ್ಯ ಬಿಜೆಪಿ ದೇಶದ ೨೨ ರಾಜ್ಯಗಳನ್ನು ತನ್ನದಾಗಿಸಿಕೊಂಡಿದ್ದು, ಪ್ರತೀ ರಾಜ್ಯದಲ್ಲೂ ತಳಮಟ್ಟದಲ್ಲೇ ಪಕ್ಷವನ್ನು ಬಲಗೊಳಿಸಿದೆ. ಆದ್ದರಿಂದ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಈ ಒಂದೊಂದು ಅಂಶವೂ ಗಣನೆಗೆ ತೆಗೆದುಕೊಂಡರೆ ಬಿಜೆಪಿ ಮತ್ತೊಮ್ಮೆ ಅಧಿಕಾರ ಹಿಡಿಯುವುದರಲ್ಲಿ ಸಂಶಯವಿಲ್ಲ. ಕರ್ನಾಟಕ ಮತ್ತು ಉತ್ತರಪ್ರದೇಶದ ಮೇಲೆ ಕಣ್ಣಿಟ್ಟಿರುವ ಮೋದಿ ವಿರೋಧಿ ಪಡೆ ಈ ಎರಡೂ ರಾಜ್ಯಗಳಲ್ಲಿ ಒಟ್ಟಾಗಿ ಬಿಜೆಪಿಯನ್ನು ಮಣಸಲು ತಯಾರಿ ನಡೆಸಿವೆ. ಆದ್ದರಿಂದಲೇ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ಸರಕಾರ ರಚಿಸಲು ಅಸಾಧ್ಯವಾಗಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಕೇವಲ ೪೦ ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಬರೋಬ್ಬರಿ ೧೦೪ ಸ್ಥಾನಗಳನ್ನು ಗೆದ್ದು ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿತ್ತು. ಈ ಎಲ್ಲಾ ಅಂಶಗಳನ್ನೇ ಪರಿಗಣಿಸಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಚಂಡ ಬಹುಮತದಿಂದ ಗೆದ್ದು , ಎರಡನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸುವುದರಲ್ಲಿ ಯಾವುದೇ ಸಂಶಯವಿಲ್ಲ..!

–ಸಾರ್ಥಕ್

Tags

Related Articles

Close