ಪ್ರಚಲಿತ

ಕಾಮ್‌ದಾರ್‌ಗಳ ಎದುರು ನಾಮ್‌ದಾರ್ ಹೋರಾಡಲು ಭಯಗೊಂಡಿದ್ದಾರೆ! ರಾಹುಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ!

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದ್ದು ಪರಸ್ಪರ ವಾಗ್ದಾಳಿ ಮುಂದುವರಿದಿದೆ. ಈಗಾಗಲೇ ಭಾರತೀಯ ಜನತಾ ಪಕ್ಷದಿಂದ ಸ್ವತಃ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಖಾಡಕ್ಕೆ ಇಳಿದಿರುವುದು ದೇಶಾದ್ಯಂತ ಹೊಸ ಸಂಚಲನ ಮೂಡಿಸಿದೆ. ಮೋದಿಯವರ ಪ್ರಚಾರದಿಂದ ಬಿಜೆಪಿಗೆ ವರದಾನವಾದರೆ ಇತ್ತ ವಿಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಚುನಾವಣೆಯ ಹೊಸ್ತಿಲಲ್ಲೇ ಇಂದು ಪ್ರಧಾನಿ ಮೋದಿ ರಾಹುಲ್ ಗಾಂಧಿ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಛತ್ತೀಸ್ ಘಡ್‌ ದಲ್ಲಿ ಇಂದು ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸುವುದರ ಬಗ್ಗೆ ಟೀಕಿಸಿದ್ದಾರೆ. ಮೋದಿ ಸರಕಾರ ಏನೂ ಮಾಡಿಲ್ಲ ಎನ್ನುತ್ತಾ ಹೋದಲ್ಲೆಲ್ಲಾ ಹೇಳಿಕೊಂಡು ತಿರುಗಾಡುವ ರಾಹುಲ್, ಇಂದು ನಮ್ಮ ಅಭ್ಯರ್ಥಿಗೆ ಹೆದರಿ ಸ್ವತಃ ತಮ್ಮ ಕ್ಷೇತ್ರದಿಂದ ಓಡಿಹೋಗಿದ್ದಾರೆ ಎಂದು ಟೀಕಿಸಿದ್ದಾರೆ.

ಸ್ಮೃತಿ ಇರಾನಿ ಅವರ ಜನಪರ ಕಾಳಜಿ ಯಾವ ರೀತಿ ಇದೆ ಎಂಬುದು ಅಮೇಥಿಯ ಜನರು ಅರಿತುಕೊಂಡಿದ್ದಾರೆ, ಆದರೆ ತನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕಾದ ರಾಹುಲ್ ಇಂದು ಸೋಲಿನ ಭೀತಿಯಿಂದ ಕೇರಳದ ವಯನಾಡ್‌ಗೆ ಪಲಾಯನ ಮಾಡಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.!

ಕಾಮ್‌ದಾರ್ ಜೊತೆ ನಾಮ್‌ದಾರ್‌ಗಳ ಆಟ!

ದೇಶದಲ್ಲಿ ಮೋದಿ ಸರಕಾರ ಏನು ಮಾಡಿದೆ ಎಂದು ಕೇಳುವ ನಾಮ್‌ದಾರ್ ಗಳು ಇಂದು ನಮ್ಮ ಅಭ್ಯರ್ಥಿಗಳಿಗೆ ಹೆದರಿ ಕ್ಷೇತ್ರ ಬದಲಾವಣೆ ಮಾಡುತ್ತಿದ್ದಾರೆ. ಕಾಮ್‌ದಾರ್ ನ‌ ಎದುರು ನಾಮ್‌ದಾರ್ ಗಳ ಆಟ ನಡೆಯೋದಿಲ್ಲ ಎಂದಿರುವ ಮೋದಿ, ಒಬ್ಬ ಕಾಮ್‌ದಾರ್ ಗೆ ಹೆದರಿ ನಾಮ್‌ದಾರ್ ಗಳು ಓಡಿ ಹೋಗುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಸ್ಮೃತಿ ಇರಾನಿ ಅವರ ವಿರುದ್ಧ ಸ್ಪರ್ಧಿಸಿ ಸೋಲುತ್ತೇನೆ ಎಂಬ ಭಯದಿಂದ ಕಾಂಗ್ರೆಸ್ ಅಧ್ಯಕ್ಷ ಅಮೇಥಿಯಿಂದ ಓಡಿಹೋಗಿ ತಮಗೆ ಗೆಲುವಿಗೆ ಪೂರಕವಾಗುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ, ನಿಜಕ್ಕೂ ಇದು ಅವರ ರಾಷ್ಟ್ರೀಯ ಪಕ್ಷಕ್ಕೆ ಅವಮಾನ ಎಂದು ಮೋದಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಸರಕಾರ ಏನೂ ಮಾಡಿಲ್ಲ ಎಂದಾದರೆ ರಾಹುಲ್ ಗಾಂಧಿ ಅಮೇಥಿಯಿಂದ ಓಡಿಹೋಗುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಯಾರು ಕೆಲಸ ಮಾಡಿದ್ದಾರೆ ಯಾರು ಕೆಲಸ ಮಾಡಲಿಲ್ಲ ಎಂದು ಈ‌ ಬಾರಿ ದೇಶದ ಜನರೇ ತೀರ್ಮಾನಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.!

ರಾಹುಲ್ ಗಾಂಧಿ ಸೋಲುವ ಭೀತಿಯಿಂದ ಅಮೇಥಿಯಿಂದ ವಯನಾಡ್ ಗೆ ಓಡಿ ಹೋಗಿದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ರಾಹುಲ್ ಗಾಂಧಿ ತಾನು ಅಮೇಥಿಯಲ್ಲಿ ಏನು ಮಾಡಿದ್ದಾರೆ ಎಂಬುದನ್ನು ದೇಶದ ಮುಂದಿಡಲಿ..!

-ಅರ್ಜುನ್

Tags

Related Articles

FOR DAILY ALERTS
Close