ಪ್ರಚಲಿತ

ಟೀಕಾಕಾರರಿಗೆ ಕಪಾಳಮೋಕ್ಷ ಮಾಡಿದ ಕರಾವಳಿ ಆರ್‍ಎಸ್‍ಎಸ್..! ಅನುಭವ ಇಲ್ಲದ ಹೊಸ ಬಿಜೆಪಿ ಶಾಸಕರು ಮಾಡಿದ ಕೆಲಸವೇನು ಗೊತ್ತಾ..?

ರಾಷ್ಟ್ರೀಯ ಸ್ವಯಂ ಸೇವಾ ಸಂಘ. ಮತ್ತೇನೂ ಈ ಸಂಘದ ಬಗ್ಗೆ ವಿಶೇಷವಾಗಿ ಹೇಳಬೇಕೆಂದೇನಿಲ್ಲ. ರಾಷ್ಟ್ರಭಕ್ತಿ ಅನ್ನೋದು ಈ ಸಂಘದ ಪ್ರತಿ ಕಾರ್ಯಕರ್ತನಲ್ಲಿ ಸಂಘಕ್ಕೆ ಸೇರಿದಾಗಿನಿಂದ ಬಂದಂತಹ ಬಳುವಳಿ. ಈ ಸಂಘಕ್ಕೆ ಟೀಕೆ ಅನ್ನೋದು ಈ ಹಿಂದಿನಿಂದಲೂ ಬರುತ್ತಿರುವ ಸಾಮಾನ್ಯ ಮಾತುಗಳು. ಆದರೆ ಯಾರು ಎಷ್ಟೇ ಟೀಕೆಗಳನ್ನು ಗೈದರೂ ತಾನು ಮಾತ್ರ ಟೀಕೆಗಳಿಗೆ ಕಿವಿ ಕೊಡದೆ ತಾನು ಮಾಡುತ್ತಿರುವ ಕೆಲಸಗಳೇ ಆ ಎಲ್ಲಾ ಟೀಕೆಗಳಿಗೆ ಉತ್ತರವಾಗಿಸುತ್ತಾ ಬಂದಿದೆ. ಇದೀಗ ಮತ್ತೆ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಮಾಡಿದ ಮಹಾ ಕಾರ್ಯ ವಿರೋಧಿಗಳಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. 

ಮುಳುಗುವಂತಿತ್ತು ಮಂಗಳೂರು..!

ಎಲ್ಲಿತ್ತೋ ಏನೋ. ಬೆಳಗ್ಗೆಯಿಂದ ಧೋ ಎಂದು ಸುರಿದ ಮಳೆಯಿಂದಾಗಿ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನತೆ ತತ್ತರಿಸಿ ಹೋಗಿದ್ದರು. ಮನೆಗಳಿಗೆ, ಆಸ್ಪತ್ರೆಗಳಿಗೆ ಸಹಿತ ಬೃಹತ್ ಮಳಿಗೆಗಳಿಗೆ ಮಳೆರಾಯ ನೆಂಟನಾಗಿದ್ದ. ನೆಂಟನ ನಂಟನ್ನು ಬಿಡಿಸುಕೊಳ್ಳುವಷ್ಟರಲ್ಲಿ ಜನತೆ ಹೈರಾಣಾಗಿದ್ದರು. ಪ್ಲೀಸ್ ಹೆಲ್ಪ್ ಮೀ ಎಂದು ಜನತೆ ಗೋಳಿಡುತ್ತಿದ್ದರು. ಬಸ್, ಕಾರು ಸಹಿತ ಅದೆಷ್ಟೋ ವಾಹನಗಳು ರಸ್ತೆ ಮಧ್ಯೆಯೇ ನಿಂತು ಹೋಗಿತ್ತು. ಮಂಗಳೂರು ಅಕ್ಷರಶಃ ಬೆಚ್ಚಿ ಬಿದ್ದಿತ್ತು.

ಸಹಾಯಕ್ಕೆ ಧಾವಿಸಿದ ಸಂಘ..!

ಈ ವೇಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹಾಯಕ್ಕೆ ಸನ್ನದ್ಧವಾಗಿ ನಿಂತಿತ್ತು. ಗಣವೇಷ ಧರಿಸಿಕೊಂಡು ಮುಳುಗುತ್ತಿರುವ ರಸ್ತೆಗೆ ಇಳಿದೇ ಬಿಟ್ಟಿದ್ದರು ಆರ್‍ಎಸ್‍ಎಸ್ ಕಾರ್ಯಕರ್ತರು. ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗ ದಳದ ಮುಖಂಡರು ತಮ್ಮ ದೂರವಾಣಿ ಸಂಖ್ಯೆಯನ್ನು ನೀಡುವ ಮೂಲಕ ಯಾವುದೇ ಕ್ಷಣದಲ್ಲೂ ತಮಗೆ ಕರೆ ಮಾಡಿ. ಏನೇ ತೊಂದರೆ ಆದರೂ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಸಂದೇಶವನ್ನು ನೀಡಿದ್ದರು. ಅದೆಷ್ಟೋ ಕಡೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಫೀಲ್ಡಿಗಿಳಿದು ಜಾತಿ ಧರ್ಮಗಳನ್ನು ನೋಡದೆ ಸೇವೆಗೆ ಸೈ ಎಂದಿದ್ದರು.

ನೀರಿಗಿಳಿದ ಸಂಸದ ಶಾಸಕರು..!

ಧಾರಾಕಾರ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಆಗ ತಾನೇ ಆರಿಸಿಕೊಂಡು ಬಂದಿದ್ದ ನೂತನ ಶಾಸಕರಿಗೆ ಇದು ಸವಾಲಾಗಿ ಪರಿಣಮಿಸಿತ್ತು. ಜಲಾವೃತವಾಗಿದ್ದ ಅಷ್ಟೂ ಕ್ಷೇತ್ರದ ಶಾಸಕರೂ ಕೂಡಾ ಮೊದಲ ಬಾರಿಗೆ ಅಧಿಕಾರ ಅನುಭವಿಸುವ ಶಾಸಕರಾಗಿದ್ದರು. ಭಾರತೀಯ ಜನತಾ ಪಕ್ಷದಿಂದ ಆಯ್ಕೆಯಾಗಿ ಬಂದಿದ್ದ ಈ ಶಾಸಕರು ಝಡಿ ಮಳೆಗೆ ನೀರಿಗಿಳಿದು ಕೆಲಸ ಮಾಡಿದ್ದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ವೇದವ್ಯಾಸ ಕಾಮತ್, ಮೂಲ್ಕಿ-ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸಹಿತ ಜನಪ್ರತಿನಿಧಿಗಳು ನೀರಿಗಿಳಿದು ಜನಸೇವೆಗೆ ಮುಂದಾಗಿದ್ದರು. ಯಾವುದೇ ಕೆಲಸಕ್ಕೂ ತಾವು ಸಿದ್ದ ಎಂಬಂತೆ ತಮ್ಮ ದೂರವಾಣಿ ಸಂಖ್ಯೆಯನ್ನು ವಾಟ್ಸಾಪ್ ಫೇಸ್ ಬುಕ್‍ಗಳಲ್ಲಿ ಹರಿಯಬಿಟ್ಟಿದ್ದರು.

ಅತ್ತ ಶಾಸಕರು ಫೀಲ್ಡಿಗಿಳಿದಿದ್ದರೆ ಮತ್ತೊಂದು ಕಡೆ ಮಂಗಳೂರು ಸಂದ ನಳಿನ್ ಕುಮಾರ್ ಕಟೀಲ್ ಕೂಡಾ ಜನರ ಸಹಾಯಕ್ಕೆ ಧಾವಿಸಿದ್ದರು. ಸೊಂಟದವರೆಗೆ ನೀರಿದ್ದರೂ ಅದರಲ್ಲಿ ಮುಳುಗಿ ಜನರ ಸೇವೆಯನ್ನು ಮಾಡಲು ಮುಂದಾಗಿದ್ದರು. ಇವರೆಲ್ಲರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಅನ್ನೋದೇ ವಿಶೇಷ.

ಸಂಘನಿಕೇತನದಲ್ಲಿ ವಾಸ್ತವ್ಯ..!

ನಿನ್ನೆ ಸುರಿದಿದ್ದ ಭಾರೀ ಮಳೆಗೆ ಅನೇಕ ಮನೆಗಳು ಜಲಾವೃತವಾಗಿದ್ದು ಅನೇಕ ಮಂದಿ ನಿರಾಶ್ರಿತರಾಗಿದ್ದರು. ಇನ್ನು ಕೆಲವರು ತಮ್ಮ ಮನೆಗಳಿಗೆ ತೆರಳಲಾಗದೆ ಧಿಕ್ಕು ದೋಚದಾಗಿದ್ದರು. ಇಂತಹಾ ಜನರನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಭವನವಾಗಿರುವ ಮಂಗಳೂರಿನ ಸಂಘ ನಿಕೇತನದಲ್ಲಿ ವಾಸ್ತವ್ಯಕ್ಕೆ ವ್ಯವಸ್ತೆ ಮಾಡಿದ್ದು ವಸ್ತ್ರ ಹಾಗೂ ಆಹಾರಗಳನ್ನು ನೀಡಿ ಸವಲತ್ತುಗಳನ್ನು ನೀಡಿದ್ದರು.

ನಾವಿದ್ದೇವೆ ಎಂದ ನಮೋ..!

ಇಷ್ಟರವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಭರವಸೆಗಳು ಹಾಗೂ ಸಾಂತ್ವಾನಗಳು ಬಂದಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕರಾವಳಿ ಜನರೇ ಭಯ ಪಡಬೇಡಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಮಂಗಳವಾರ ಸುರಿದ ಈ ಮಳೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ಹಾಗೂ ಕಾಂಗ್ರೆಸ್ ಪಕ್ಷ ಕಳೆದ 5 ವರ್ಷದಲ್ಲಿ ಮಂಗಳೂರಿನಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳ ಚಿತ್ರಣಗಳನ್ನು ಬಣ್ಣಿಸುತ್ತಿತ್ತು. 5 ವರ್ಷದಲ್ಲಿ ಇಲ್ಲಿನ ಶಾಸಕರುಗಳು ಸರಿಯಾಗಿ ಕೆಲಸ ಮಾಡಿದ್ದರೆ ಇಂತಹಾ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. 

ಪದೇ ಪದೇ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ನಿಂದಿಸಿ ತಮ್ಮ ರಾಜಕೀಯ ಕಾಳು ಬೇಯಿಸುತ್ತಿದ್ದ ವಿರೋಧಿಗಳಿಗೆ ಸಂಘದ ಕಾರ್ಯಕರ್ತರು ಸರಿಯಾಗಿಯೇ ಕಪಾಳ ಮೋಕ್ಷ ಮಾಡಿದ್ದಾರೆ. ಸರ್ಕಾರದ ಸ್ಪಂಧನೆಯ ಮೊದಲೇ ಸಂಘದ ಕಾರ್ಯಕರ್ತರು ಸೇವೆಗೆ ಇಳಿದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

Sunil panapila

Tags

Related Articles

Close