ಪ್ರಚಲಿತ

ಬ್ರೇಕಿಂಗ್! ಕಾಶ್ಮೀರದಲ್ಲಿ ಮತ್ತೆ ರಾಜಕೀಯ ಆಟ! ಬಿಜೆಪಿ ಕೈಬಿಟ್ಟ ಪಿಡಿಪಿಯನ್ನು ದೋಸ್ತಿ ಮಾಡಿಕೊಂಡ ಕಾಂಗ್ರೆಸ್! ನಡೆಯುತ್ತಾ ದೋಸ್ತಿ ದರ್ಬಾರ್..?

“ನಮಗೆ ದೇಶ ಮುಖ್ಯ. ದೇಶದ ಸುರಕ್ಷತೆಗೆ ನಾವು ಅಧಿಕಾರವನ್ನು ಬೇಕಾದರೂ ಕಳೆದುಕೊಳ್ಳಲು ಸಿದ್ದರಿದ್ದೇವೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ ನಿಯಂತ್ರಿಸಲು ನೀವು ನಮಗೆ ಸಹಕಾರ ನೀಡುತ್ತಿಲ್ಲ. ನಮಗೆ ಕಾಶ್ಮೀರದ ಪ್ರತ್ಯೇಕವಾದ ಹಾಗೂ ಉಗ್ರ ಚಟುವಟಿಕೆಯ ನಿರ್ಮೂಲನೆ ಆಗಲೇಬೇಕು. ಇದಕ್ಕೆ ನಿಮ್ಮ ಸಹಕಾರ ನಮಗೆ ದೊರೆಯುತ್ತಿಲ್ಲ. ಹೀಗಾಗಿ ನಾವು ನಿಮ್ಮ ಸಖ್ಯವನ್ನು ಕೈಬಿಡುತ್ತಿದ್ದೇವೆ”…

ನೋ ಡೌಟ್… ಇದು ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರ ನಿಗ್ರಹಕ್ಕೆ ಸಹಕಾರ ನೀಡದ ಪಿಡಿಪಿ ಪಕ್ಷಕ್ಕೆ ಭಾರತೀಯ ಜನತಾ ಪಕ್ಷ ದಿಟ್ಟ ಉತ್ತರ ನೀಡಿದ ಪರಿ ಇದು. ಪದೇ ಪದೇ ಸೈನಿಕರನ್ನು ಹಾಗೂ ಪೊಲೀಸ್ ಇಲಾಖೆಯನ್ನು ಕಟ್ಟಿ ಹಾಕುವ ಮೂಲಕ ಉಗ್ರ ನಿಗ್ರಹಕ್ಕೆ ಅಡ್ಡಿಯಾಗುತ್ತಿದ್ದ ಪಿಡಿಪಿ ಸರಕಾರದ ಜೊತೆಗಿದ್ದ ಮೈತ್ರಿಯನ್ನು ಮುರಿದು ರಾಷ್ಟ್ರಪತಿ ಆಳ್ವಿಕೆಗೆ ಕಾರಣವಾದ ಭಾರತೀಯ ಜನತಾ ಪಕ್ಷ ದೇಶದ ಭದ್ರತೆಯ ವಿಚಾರವಾಗಿ ಕೈಗೊಂಡ ಕಠಿಣ ನಿರ್ಧಾರ.

Image result for rahul gandhi with meheboob mufti

ನಂತರ ನಡೆದದ್ದೇ ಇತಿಹಾಸ. ಅಷ್ಟರವರೆಗೆ ಕಾಶ್ಮೀರದ ಪಿಡಿಪಿ ಸರ್ಕಾರದ ಅಪ್ಪಣೆಗೆ ಕಾಯುತ್ತಿದ್ದ ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಸೈನಿಕರು ಅಂದು ಶಸ್ತ್ರ ಹಿಡಿದೇ ಬಿಟ್ಟಿದ್ದರು. ನೋಡ ನೋಡುತ್ತಿದ್ದಂತೆಯೇ ಪ್ರತ್ಯೇಕವಾದಿಗಳ ಕೋಲಾರ್ ಪಟ್ಟಿ ಹಿಡಿದು ಎಳೆದು ಕಂಬಿ ಎಣಿಸುವಂತೆ ಮಾಡಿದ್ದರು. ಮೂರೇ ಮೂರು ದಿನದಲ್ಲಿ ೧೪ ಪಾಕಿಸ್ತಾನ ಉಗ್ರರ ತಲೆಗಳು ನೆಲಕ್ಕುರುಳಲಿದ್ದವು. ಜಮ್ಮು ಕಾಶ್ಮೀರ ಭಾರತಕ್ಕೆ ಸುಭದ್ರ ಎನ್ನುವ ಧೈರ್ಯ ದೇಶವಾಸಿಗಳಲ್ಲಿ ಮೂಡಿತ್ತು.

ಅಷ್ಟರವರೆಗೆ ಕಾದು ನೋಡುವ ತಂತ್ರವನ್ನು ಬಳಸಿ ನಾಟಕ ಮಾಡಿದ ಕಾಂಗ್ರೆಸ್ ಪಕ್ಷ ಮೆಲ್ಲನೆ ಏಳಲಾರಂಭಿಸಿತು. ಜಮ್ಮು ಕಾಶ್ಮೀರ ಪೊಲೀಸರ ಹಾಗೂ ಭಾರತೀಯ ಸೈನಿಕರ ಭೇಟೆಗೆ ತುತ್ತಾಗಿದ್ದ ಉಗ್ರರ ಪರವಾಗಿ ಕಾಂಗ್ರೆಸ್ ಬ್ಯಾಟಿಂಗ್ ನಡೆಸಲು ಆರಂಭಿಸಿತು. “ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಜಮ್ಮು ಕಾಶ್ಮೀರದ ಜನತೆಗೆ ಉಗ್ರರಿಂದಲೂ ಹೆಚ್ಚಾಗಿ ಭಾರತೀಯ ಸೈನಿಕರ ಭಯ ಹೆಚ್ಚಾಗಿ ಕಾಡುತ್ತಿದೆ” ಎಂಬ ವಾದವನ್ನು ಕಾಂಗ್ರೆಸ್ ಮಂಡಿಸಿತು. ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಸಹಿತ ಅನೇಕ ಕಾಂಗ್ರೆಸ್ ನಾಯಕರ ಮುಖವಾಡ ಬೆತ್ತಲಾಯಿತು.

ದೇಶಕ್ಕೆ ದೇಶವೇ ಸಂಭ್ರಮಿಸಿತು. ಮೋದಿ ಸರ್ಕಾರಕ್ಕೆ ಜೈ ಎಂಬ ಘೋಷಣೆಯನ್ನು ಹಾಕಿತ್ತು. ತಾನೇನೂ ಮಾಡಿದ್ರೂ ಭಾರತೀಯ ಜನತಾ ಪಕ್ಷವನ್ನು ಮಣಿಸಲು ಕಷ್ಟ ಎಂಬ ಸತ್ಯವನ್ನು ಅರಿಯಿತು. ಹೀಗಾಗಿ ಇದೀಗ ಪಿಡಿಪಿ ಜೊತೆ ದೋಸ್ತಿಯ ಮಾತುಕತೆಗೆ ಮುಂದಾಗಿದೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಇದೀಗ ಅತಿಹೆಚ್ಚಿನ ಒಲವು ವ್ಯಕ್ತವಾಗಿದ್ದು ಮುಂದಿನ ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತದಿಂದ ಆಯ್ಕೆಯಾಗಿ ಅಧಿಕಾರ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಸಿಕ್ಕ ಸಿಕ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ಪಕ್ಷ ಇದೀಗ ಬಿಜೆಪಿ ಬಿಟ್ಟು ಬಂದ ಪಕ್ಷದೊಂದಿಗೆ ದೋಸ್ತಿ ಮಾಡಲು ಮುಂದಾಗಿದೆ.Related image

ಇಂದು ಸಂಜೆ ೪ ಗಂಟೆಗೆ ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ಪಿಡಿಪಿ ಪಕ್ಷದ ಸಭೆ ನಡೆದಿದ್ದು ದೋಸ್ತಿ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಮೂಲಕ ವಿಫಲ ಮಹಾಘಟಬಂಧನಕ್ಕೆ ಮತ್ತೊಂದು ಪಕ್ಷ ಸೇರ್ಪಡೆಯಾಗಿದೆ.

– ಏಕಲವ್ಯ

Tags

Related Articles

Close