ಪ್ರಚಲಿತ

ಕುರುಕ್ಷೇತ್ರದಲ್ಲಿ ಶ್ರೀಕೃಷ್ಣ ಆಯುಷ್ ಯೂನಿವರ್ಸಿಟಿ ನಿರ್ಮಾಣ! ಹಿಂದೂರಾಷ್ಟ್ರದತ್ತ ಮೋದಿ ಪಯಣ!

ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸುವ ಮೊದಲು ಹಿಂದೂರಾಷ್ಟ್ರದ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದರು, ಆದರೆ ಅಧಿಕಾರ ವಹಿಸಿಕೊಂಡ ನಂತರ ಅಭಿವೃದ್ಧಿ ಅಭಿವೃದ್ಧಿ ಎಂಬ ಮಂತ್ರ ಮಾತ್ರ ಜಪಿಸುತ್ತಿದ್ದಾರೆ ಎಂಬುದು ವಿರೋಧಿಗಳ ಬಾಯಿಂದ ಮಾತ್ರವಲ್ಲದೆ ಮೋದಿ ಅಭಿಮಾನಿಗಳ ಬಾಯಲ್ಲೂ ಕೇಳಿ ಬಂದಿತ್ತು.‌ ಆದರೆ ಮೋದಿ ಕೊಟ್ಟ ಮಾತು ಎಂದೂ ತಪ್ಪಿಲ್ಲ ಎಂಬುದು ಎಲ್ಲರೂ ಅರಿತುಕೊಳ್ಳಬೇಕು. ಯಾಕೆಂದರೆ ಈಗಾಗಲೇ ಹಿಂದೂರಾಷ್ಟ್ರದ ಪರಿಕಲ್ಪನೆಯೊಂದಿಗೆ ಒಂದೊಂದೇ ಹೆಜ್ಜೆ ಮುಂದಿಡುತ್ತಾ ಬಂದಿರುವ ಪ್ರಧಾನಿ ಮೋದಿ ಅನೇಕ ಯೋಜನೆಗಳಿಗೆ ಪುರಾಣಗಳಲ್ಲಿ ಬರುವ ಹೆಸರುಗಳನ್ನೇ ಇಟ್ಟಿರುವುದು ನಮಗೂ ತಿಳಿದಿರುವ ವಿಚಾರ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರ ಈಗಾಗಲೇ ಕೆಲವು ನಗರಗಳ ಹೆಸರನ್ನೇ ಬದಲಾಯಿಸಿ ಹಿಂದೂ ಪುರಾಣಗಳಲ್ಲಿ ಬರುವ ಕೆಲವು ಹೆಸರನ್ನು ಇಟ್ಟಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಹರಿಯಾಣದ ಕುರುಕ್ಷೇತ್ರ ಎಂಬಲ್ಲಿ ಶ್ರೀಕೃಷ್ಣನ ಹೆಸರಿನಲ್ಲಿ ಹೊಸ ಆಯುಷ್ ಯೂನಿವರ್ಸಿಟಿಗೆ ಶಿಲಾನ್ಯಾಸ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ಸ್ಥಳದಲ್ಲಿ ಹಿಂದೂ ದೇವರ ಹೆಸರಿಡುವ ಮೂಲಕ ಚಾಲನೆ ನೀಡಿದ್ದಾರೆ.!

ಶ್ರೀಕೃಷ್ಣ ಆಯುಷ್ ಯೂನಿವರ್ಸಿಟಿಗೆ ಮೋದಿ ಶಿಲಾನ್ಯಾಸ!

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಹರಿಯಾಣದಲ್ಲಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡ ಲಕ್ಷಾಂತರ ಜನರ ಸಮ್ಮುಖದಲ್ಲೇ ಯೂನಿವರ್ಸಿಟಿಗೆ ಶಿಲಾನ್ಯಾಸ ಮಾಡಿದ ಪ್ರಧಾನಿ, ಶ್ರೀಕೃಷ್ಣ ಆಯುಷ್ ಎಂಬ ಸಕಲ ಸೌಲಭ್ಯ ಇರುವ ಯೂನಿವರ್ಸಿಟಿಗೆ ಶಿಲಾನ್ಯಾಸ ಮಾಡಿದರು. ಕೇವಲ ಚುನಾವಣಾ ರ್ಯಾಲಿ ನಡೆಸಿ ಚುನಾವಣೆಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅದಕ್ಕೆ ಬೇಕಾದ ಸಿದ್ಧತೆ ನೆಡೆಸುವ ಇತರ ಪಕ್ಷಗಳು ಒಂದೆಡೆಯಾದರೆ, ತನ್ನ ಪ್ರತೀ ಸಮಾವೇಶದ ಸಂದರ್ಭದಲ್ಲೂ ಒಂದೊಂದು ಹೊಸ ಯೋಜನೆಗೆ ಚಾಲನೆ ನೀಡುವ ಮೋದಿ ಬಹಳ ವಿಶೇಷವಾಗಿ ಕಾಣುತ್ತಾರೆ. ಯಾಕೆಂದರೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಮಧ್ಯೆಯೇ ಮೋದಿಯವರು ಒಂದೊಂದೇ ಯೋಜನೆಯನ್ನು ಕೂಡ ಕಾರ್ಯರೂಪಕ್ಕೆ ತರುತ್ತಿದ್ದು, ಜನರ ಹಿತದೃಷ್ಟಿಯಿಂದ ಹೊಸ ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದಾರೆ.

ಅದೇ ರೀತಿ ಇಂದು ಕುರುಕ್ಷೇತ್ರದಲ್ಲಿ ರಾಷ್ಟ್ರೀಯ ಆಯುರ್ವೇದ ಯೂನಿವರ್ಸಿಟಿಯ ಜೊತೆಗೆ ರಾಷ್ಟ್ರೀಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದರು. ಇದೂ ಕೂಡ ಬಹಳ ವಿಶೇಷವಾದ ಆಸ್ಪತ್ರೆಯಾಗಿದ್ದು, ಬಡವರಿಗೆ ತುಂಬಾ ನೆರವಾಗಲಿದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಜನರಿಗೆ ಬೇಕಾದ ಯಾವುದೇ ಸೌಕರ್ಯಗಳನ್ನು ಒದಗಿಸಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕು. ಯಾಕೆಂದರೆ ಮೋದಿ ಪ್ರಧಾನಮಂತ್ರಿ ಆದ ನಂತರ ಯಾವ ರೀತಿ ದೇಶದಲ್ಲಿ ಬದಲಾವಣೆ ಕಂಡುಬರುತ್ತಿದೆ ಎಂಬುದನ್ನು ಗಮನಿಸಬೇಕು.!

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ದಶರಥ ಎಂಬ ಹೆಸರಿನ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಿದ ಮೋದಿ-ಯೋಗಿ ಸರಕಾರ, ಉತ್ತರ ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮ ಎಂಬ ಹೆಸರು ಮರುನಾಮಕರಣ ಮಾಡಿತ್ತು. ಅಷ್ಟೇ ಅಲ್ಲದೆ ಪೈಜಾಬಾದ್ ಎಂಬ ನಗರಕ್ಕೆ ಅಯೋಧ್ಯೆ ಎಂಬ ಹೆಸರು ಮರುನಾಮಕರಣ ಮಾಡಲಾಗಿತ್ತು. ಒಂದೊಂದೇ ಮೆಟ್ಟಿಲು ಹತ್ತಿ ಕೊಟ್ಟ ಮಾತು ಉಳಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ, ಭಾರತವನ್ನು ಮತ್ತೆ ಹಿಂದೂರಾಷ್ಟ್ರ ಮಾಡುತ್ತಾರೆ ಎಂಬ ನಂಬಿಕೆ ಬಲವಾಗಿದೆ.!

-ಸಾರ್ಥಕ್ ಶೆಟ್ಟಿ

Tags

Related Articles

FOR DAILY ALERTS
Close