ಪ್ರಚಲಿತ

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಸಮವಸ್ತ್ರದ ವಿರುದ್ದ ಸಮರ ಸಾರಿದ ಮುಸ್ಲಿಂ ಯುವತಿಯರು!! ಕೇರಳ-ಬಂಗಾಳದಂತೆಯೆ ಇಸ್ಲಾಮಿಕ್ ಸ್ಟೇಟ್ ಆಗುವತ್ತ ಸಾಗುತ್ತಿದೆ ದಕ್ಷಿಣ ಕನ್ನಡ ಜಿಲ್ಲೆ!!

ಹಿಂದುತ್ವದ ಭದ್ರ ಕೋಟೆಯೆಂದೆ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆ ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತನೆಗೊಂಡಿದೆ. ಇದುವರೆಗೂ ಕೇರಳ-ಬಂಗಾಳದಲ್ಲಿ ಮಾತ್ರ ನಡೆಯುತ್ತಿದ್ದಂತಹ ಜಿಹಾದಿಗಳ ಅಟ್ಟಹಾಸಗಳು ಈಗ ಮಂಗಳೂರಿನಲ್ಲಿಯೂ ನಡೆಯುತ್ತಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ದೊರೆತಿದೆ. ಮಂಗಳೂರಿನ ಅಪೋಸ್ಟೋಲಿಕ್ ಕಾರ್ಮೆಲ್ ನಡೆಸುತ್ತಿರುವ ಸೇಂಟ್ ಆಗ್ನೆಸ್ ಕಾಲೇಜ್ ನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಧರಿಸುವ ಸಮವಸ್ತ್ರದ ವಿರುದ್ದ ತಿರುಗಿಬಿದ್ದಿದ್ದಾರೆ.

ಇನ್ನು ಮೂರು ವರ್ಷ ಕಳೆದರೆ ನೂರು ವರ್ಷಗಳನ್ನು ಪೂರೈಸುವ ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರಿನ ಅತ್ಯಂತ ಪುರಾತನ ಮತ್ತು ಪ್ರತಿಷ್ಟಿತ ಕಾಲೇಜು. ಈ ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಧರಿಸುವಂತೆ ಕೋಡ್ ರೂಪಿಸಿದೆ. ಆದರೆ ಆ ಕಾಲೇಜಿನಲ್ಲಿ ಕಲಿಯುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಸಮವಸ್ತ್ರದ ವಿರುದ್ದ ಸಮರ ಸಾರಿದ್ದಾರೆ. ಈ ವಿದ್ಯಾರ್ಥಿನಿಯರ ಪ್ರಕಾರ ಸಮವಸ್ತ್ರ ಧರಿಸುವುದು “ಮುಸ್ಲಿಂ ವಿರೋಧೀ ಪದ್ದತಿ” ಅಂತೆ!

“ಜಾತ್ಯಾತೀತ” ದೇಶದಲ್ಲಿ “ಮುಸ್ಲಿಂ ಪದ್ದತಿ”, “ಕ್ರೈಸ್ತ ಪದ್ದತಿ”!! ಜಾತ್ಯಾತೀತ ಬ್ರಿಗೇಡ್ ಗಾಢ ನಿದ್ದೆಯಲ್ಲಿ. ಇದನ್ನೇ ಹಿಂದೂ ವಿದ್ಯಾರ್ಥಿನಿಯರು ಹೇಳಿದ್ದರೆ, ಇಷ್ಟೊತ್ತಿಗೆ ಬ್ರಿಗೇಡ್ ಎದೆ ಒಡೆದುಕೊಂಡು ಬೊಬ್ಬೆ ಹಾಕುತ್ತಿತ್ತು. ಮಂಗಳೂರಿನಲ್ಲಿ ‘ಕೋಮುವಾದಿ ಹಿಂದೂ ವಿದ್ಯಾರ್ಥಿನಿ’ಯರಿಂದ ‘ಕ್ರಿಶ್ಚಿಯನ್’ ಕಾಲೇಜಿನ ವಿರುದ್ದ ಪ್ರತಿಭಟನೆ ಎಂಬ ತಲೆಬರೆಹದ ವಾರ್ತೆಗಳು ಬಿತ್ತರಿಸಲ್ಪಡುತ್ತಿದ್ದವು. ವಿಶ್ವ ಮಟ್ಟದಲ್ಲಿ ಮಂಗಳೂರಿನ ಮಾನ ಮೂರು ಕಾಸಿಗೆ ಹರಾಜಾಗುತ್ತಿತ್ತು. ಆದರೆ ಹೇಳಿದ್ದು ಶಾಂತಿದೂತರ ಹೆಣ್ಣು ಮಕ್ಕಳಲ್ಲವೆ, ಅದಕ್ಕಾಗಿ ಎಲ್ಲವೂ ಪ್ರಶಾಂತ!!

ಮುಸ್ಲಿಂ ವಿದ್ಯಾರ್ಥಿನಿಯರ ಈ ನಿರ್ಧಾರದ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಎಂಬ ಮುಸ್ಲಿಂ ವಿದ್ಯಾರ್ಥಿ ಸಂಘಟನೆಯ “ಕೈ”ವಾಡ ಇದೆ ಎಂದು ಕಾಲೇಜಿನ ಪ್ರಾಂಶುಪಾಲೆ ಎಮ್.ಜೆಸ್ವಿನಾ ಆರೋಪ ಮಾಡಿದ್ದಾರೆ. ಸಾಕಾ ಮಿಶನರಿಗಳೆ? ಇನ್ನೂ ಬೇಕಾ? ಜಿಹಾದಿಗಳಿಗೆ ಹಿಂದೂಗಳು, ಕ್ರಿಶ್ಚಿಯನ್ನರು ಎಲ್ಲಾ ಒಂದೆ. ಜಿಹಾದಿಗಳ ದೃಷ್ಟಿಯಲ್ಲಿ ಮುಸ್ಲಿಮೇತರರೆಲ್ಲರೂ “ಕಾಫಿರರೆ”. ಜಿಹಾದಿಗಳು ನಿಮ್ಮ ಮಿಶನರಿ ಬಾಗಿಲುಗಳಿಗೆ ಬಂದಾಗಿದೆ. ಯಾವ ಅಂಟೋನಿಯೋ ಮಾಯಿನೋ ಕೂಡಾ ನಿಮ್ಮನ್ನು ರಕ್ಷಿಸಲಾರರು. ಸ್ವತಃ ವೆಟಿಕನ್ ಕೂಡಾ ನಿಮ್ಮ ರಕ್ಷಣೆಗೆ ಬಾರದು. ನಿಮ್ಮ ರಕ್ಷಣೆ ಕೇವಲ ಮೋದಿಯಿಂದ ಮಾತ್ರ ಸಾಧ್ಯ. ಆದರೆ ಮೋದಿಯನ್ನು ಸೋಲಿಸಿ ಎಂದು ನಿಮ್ಮ ಚರ್ಚುಗಳೆ ಕರೆ ನೀಡುತ್ತಿವೆ!

ವರದಿಗಳ ಪ್ರಕಾರ ಸಿಎಫ್ಐ ಸಂಘಟನೆ ಜೂನ್ 25 ರಂದು ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಕಾಲೇಜಿನ ಮುಸ್ಲಿಂ ಹುಡುಗಿಯರು ಆಡಳಿತ ಮಂಡಳಿಯ ವಿರುದ್ದ ದಂಗೆ ಏಳುವಂತೆ ಕುಮ್ಮಕ್ಕು ನೀಡಿತ್ತು. ತಮ್ಮ ಕಾಲೇಜಿನ ಕಾನೂನಿನ ಪ್ರಕಾರ ಸಮವಸ್ತ್ರ ಧರಿಸುವುದು ಕಡ್ಡಾಯ ಈ ಬಗ್ಗೆ ವಿದ್ಯಾರ್ಥಿನಿಯರಿಗೆ ಮೊದಲೆ ತಿಳಿದಿತ್ತು. ಅಲ್ಲದೆ ವಿದ್ಯಾರ್ಥಿನಿಯರ ಹೆತ್ತವರೂ ಕೂಡಾ ಇದಕ್ಕೆ ಸಮ್ಮತಿಸಿದ್ದರು. ಆದರೆ ಏಕಾಏಕಿ ಸಿಎಫ್ಐ ಸಂಘಟನೆ ಎಲ್ಲಿಂದಲೋ ಬಂದು, ಕಾಲೇಜು ಅಲ್ಪ ಸಂಖ್ಯಾತ ವಿರೋಧಿ ಮತ್ತು ಮುಸ್ಲಿಂ ಸಂಸ್ಕೃತಿಯಾದ ಹಿಜಾಬು ಧರಿಸುವುದನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪ ಮಾಡಲು ಶುರುವಿಟ್ಟುಕೊಂಡರೆಂದು ಪ್ರಾಂಶುಪಾಲೆ ಮಾಧ್ಯಮಕ್ಕೆ ತಿಳಿಸಿದರು.

ಈಗ ಗೊತ್ತಾಯ್ತಾ ಯಾರು “ಅಸಹಿಷ್ಣು”ಗಳು? ಯಾರು ನಿಜವಾದ “ಕೋಮು”ವಾದಿಗಳು ಎಂಬುದು? ಕಾಲೇಜಿನ ಹೊರಗೆ ಜಮಾಯಿಸಿದ ಗುಂಪು ಮುಸ್ಲಿಂ ವಿದ್ಯಾರ್ಥಿಗಳೆಂದು ಹೇಳಿಕೊಂಡರೂ ಅವರ್ಯಾರೂ ವಿದ್ಯಾರ್ಥಿಗಳಂತೆ ಇರಲಿಲ್ಲ, ಬದಲಿಗೆ ಒಂದು ಸಂಘಟನೆಯ ಕಾರ್ಯಕರ್ತರಂತಿದ್ದರು, ಮತ್ತು ವಯಸ್ಸಿನಲ್ಲಿ ಹಿರಿಯರಿದ್ದರು ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ. ತಪ್ಪು ಮಾಡಿದವರನ್ನು ತಿದ್ದಿ ಬುದ್ದಿ ಹೇಳುವ ಹಿಂದೂ ಸಂಘಟನೆಗಳನ್ನು ಕೋಮುವಾದಿಗಳೆಂದು ಜರಿಯುವ “ಪರಪರ” ಸಂಘಟನೆಗಳು ಗುಳೇ ಹೋಗಿವೆ ಎಂದು ಕಾಣಿಸುತ್ತಿದೆ. ಇಷ್ಟು ದೊಡ್ದ ಘಟನೆ ನಡೆದರೂ ಪರಪರ ಸಂಘಟನೆಗಳು ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿಲ್ಲದಿರುವುದು ಅದಕ್ಕೆ ಇರಬೇಕು. ಹಿಂದೂ ಸಂಘಟನೆಗಳು ಈ ರೀತಿ ಪ್ರದರ್ಶನ ಮಾಡಿದ್ದರೆ ರಾಷ್ಟ್ರ ಮಟ್ಟದ ಸುದ್ದಿಯಾಗುತ್ತಿತ್ತು. ಕಾಂಗ್ರೆಸಿನ ಪ್ರಮುಖ ಓಟು ಬ್ಯಾಂಕ್ ಸಮುದಾಯಗಳೆರಡು ಒಂದರ ವಿರುದ್ದ ಮತ್ತೊಂದು ನಿಂತಿವೆ. ಈಗ ಕಾಂಗ್ರೆಸ್ ಯಾರ “ಕೈ” ಹಿಡಿಯುತ್ತದೆ?

ಸಿಎಫ್ಐ ದೇಶದಾದ್ಯಂತ ಕಾಲೇಜು ಕ್ಯಾಂಪಸ್ ಗಳನ್ನು ಇಸ್ಲಾಮಿಕರಣ ಮಾಡುವ “ಚಳುವಳಿಯ” ಮುಂಚೂಣಿಯಲ್ಲಿದೆ. ಇದುವರೆಗೆ ಹಿಂದೂ ಸಂಸ್ಥೆಗಳ ಕಾಲೇಜುಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಈ ಸಂಘಟನೆ ಮೊತ್ತ ಮೊದಲ ಬಾರಿಗೆ ಒಂದು ಕ್ರಿಶ್ಚಿಯನ್ ಸಂಸ್ಥೆಯನ್ನು ಆಕ್ರಮಣ ಮಾಡಿದೆ. ಹಿಂದೂಗಳು ಬಳೆ ತೊಡಬಾರದು,ಕುಂಕುಮ ಇಡಬಾರದು, ಪಂಚೆ ತೊಟ್ಟು ಕಾಲೇಜಿಗೆ ಬರಬಾರದು ಎಂದು ನಿಯಮ ಹೇರುತ್ತಿದ್ದ ಕ್ರಿಶ್ಚಿಯನ್ ಸಂಸ್ಥೆಗೆ ಮೊತ್ತ ಮೊದಲ ಬಾರಿಗೆ ಜಿಹಾದಿಗಳ ಏಟು ದೊರೆತಿದೆ. ಹಿಂದೂಗಳ ಮೇಲೆ ಜಿಹಾದಿಗಳು ಸವಾರಿ ಮಾಡುತ್ತಿದ್ದಾಗ ಮರೆಯಲ್ಲಿ ನಿಂತು ಮುಸಿ ಮುಸಿ ನಗುತ್ತಿದ್ದ “ವಿಷದ ನರಿಗಳಿಗೆ” ಸರಿಯಾದ ಏಟು ಬಿದ್ದಿದೆ. ಇದಿನ್ನೂ ಆರಂಭ ಮಾತ್ರ, ಇನ್ನೂ ಹಲವಾರು ಏಟು ಬೀಳಲಿವೆ. ಏಕೆಂದರೆ ರಾಜ್ಯದಲ್ಲಿರುವುದು ಅಲ್ಪರಿಗೆ ಭಾಗ್ಯ ಕೊಡುವ ಸದಾ ಸಿದ್ದ ಸರದಾರರ ಮುಲಾಜಿನಲ್ಲಿರುವ ಸರಕಾರ. ಜಿಹಾದಿಗಳು ಸೊಕ್ಕಿ ಮೆರೆಯಲು ಪ್ರಶಸ್ತ ವಾತಾವರಣ ನಿರ್ಮಿಸಿಕೊಡುವ ಓಲೈಕೆ ಸರಕಾರ. ಜಿಹಾದಿಗಳನ್ನು ಹೀಗೆ ಬಿಟ್ಟರೆ ದ.ಕ ಇಸ್ಲಾಮಿಕ್ ಸ್ಟೇಟ್ ಆಗುವುದರಲ್ಲಿ ಸಂದೇಹವೆ ಇಲ್ಲ.

-ಶಾರ್ವರಿ

Tags

Related Articles

Close