ಪ್ರಚಲಿತ

ಪ್ರತಿ ಶುಕ್ರವಾರದಂದು ನಮಾಜು ಸಲ್ಲಿಸಲಾಗುವ ಮಧ್ಯ ಪ್ರದೇಶದ ಈ ಮಂದಿರದಲ್ಲಿ ಹಿಂದೂಗಳಿಗೆ ಪ್ರವೇಶವಿಲ್ಲ!! ಭಾರತದ ಎರಡನೆ ಅಯೋಧ್ಯೆಯೆಂದೆ ಕರೆಯಲಾಗುವ ಭೋಜಶಾಲಾ ಮಂದಿರದ ಕಥೆ ಗೊತ್ತೆ?

ಹಾಗೆ ನೋಡಿದರೆ ಭಾರತದಲ್ಲಿ ಒಂದಲ್ಲ, ಎರಡಲ್ಲ, ಸಾವಿರಾರು ಅಯೋಧ್ಯೆಗಳಿವೆ. ಮತಾಂಧರ ದಾಳಿಗೆ ತುತ್ತಾಗಿ ಪುಡಿಗಟ್ಟಲಾದ ಹಿಂದೂ ಮಂದಿರಗಳು ಇವತ್ತು ಮುಸ್ಲಿಮರ ಸ್ವತ್ತಾಗಿವೆ. ಈ ಮಂದಿರಗಳ ಅಸ್ತಿಯ ಮೇಲೆ ಮತಾಂಧರ ಹೆಸರಿನ ಗೋರಿ ಕಟ್ಟಲಾಗಿದೆ. ಬರ್ಬರತೆಗೆ ಸಾಕ್ಷಿಯಾಗಿ ಕೆಳಗೆ ಹುದುಗಿರುವ ಮೂರ್ತಿಗಳ ಮೇಲೆ “ಜಾತ್ಯಾತೀತ”ದ ಚಾದರ ಹೊರಿಸಿ ನಮಾಜು ಮಾಡಲಾಗುತ್ತಿದೆ! ಇಂಥದೆ ಮಂದಿರವೊಂದು ಮಧ್ಯ ಪ್ರದೇಶದ ಧಾರಾ ನಗರಿಯಲ್ಲಿದೆ. ಭಾರತದ ಪ್ರಖ್ಯಾತ ರಾಜ ಭೋಜನ ತಪೋಭೂಮಿಯಲ್ಲಿ ಸ್ವತಃ ಭೋಜ ರಾಜನೆ ಈ ಮಂದಿರವನ್ನು ಕಟ್ಟಿಸಿದ್ದನೆನ್ನಲಾಗುತ್ತದೆ. ಆದ್ದರಿಂದಲೆ ಈ ಮಂದಿರಕ್ಕೆ ‘ಭೋಜಶಾಲಾ ಮಂದಿರ’ ಎನ್ನುವ ಹೆಸರು ಬಂದಿರುವುದು.

ಭೋಜರಾಜ ತನ್ನನ್ನು ಸರಸ್ವತಿಯ ವರ ಪುತ್ರನೆಂದು ಪರಿಗಣಿಸುತ್ತಿದ್ದ. ವಿದ್ಯೆಗೆ ಅಪಾರ ಪ್ರಾಮುಖ್ಯತೆ ನೀಡಿದ್ದ ಭೋಜ ರಾಜ ಸರಸ್ವತಿ ದೇವಿಗಾಗಿ ಧಾರಾ ನಗರಿಯಲ್ಲಿ ಭೋಜಶಾಲಾ ಮಂದಿರವನ್ನು ಕಟ್ಟಿಸಿದ್ದ. ಭವಭೂತಿ, ಮಾಘ, ಕಾಳಿದಾಸ, ಬಾಣ ಭಟ್ಟ, ಮಾನತುಂಗ, ಭಾಸ್ಕರ ಭಟ್ಟ, ಧನಪಾಲ, ಬೌದ್ದ ಸಂತ ಬನ್ಸ್ವಾಲ್ ಮತ್ತು ಸಮುದ್ರ ಘೋಷನಂತಹವರಿಗೆ ವಿದ್ಯೆ ನೀಡಿದ ಮಂದಿರವಿದು. ಸರಿಸುಮಾರು 200 ವರ್ಷಗಳವರೆಗೆ ಈ ಮಂದಿರದಲ್ಲಿ ನಿರಂತರವಾಗಿ ವಿದ್ಯಾದಾನ ಮಾಡಲಾಗುತ್ತಿತ್ತು. ಆದರೆ ಯಾವ ಕೆಟ್ಟ ಘಳಿಗೆಯಲ್ಲಿ ಕಮಲ್ ಮೌಲಾನಾ ಎಂಬ ಮತಾಂಧನ ಕೆಟ್ಟ ಕಣ್ಣು ಈ ಮಂದಿರದ ಮೇಲೆ ಬಿತ್ತೋ ಅಂದಿನಿಂದ ಮಂದಿರ ಪತನದ ಹಾದಿ ತುಳಿಯಿತು.

ಯಾವಾಗೆಲ್ಲ ನಡೆಯಿತು ಮಂದಿರದ ಮೇಲೆ ಬರ್ಬರತೆ?

  • 1269 AD ಯಲ್ಲಿ ಕಮಾಲ್ ಮೌಲಾನಾ ಎಂಬ ಮತಾಂಧ ಈ ಮಂದಿರ ಮೇಲೆ ದಾಳಿ ಮಾಡಿ ಇಲ್ಲಿನ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸುತ್ತಾನೆ ಮತ್ತು ಮಂದಿರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತಾನೆ.
  • 1305 AD ಯಲ್ಲಿ ಕಮಾಲ್ ಮೌಲಾನಾ ಈ ಮಂದಿರವನ್ನು ಇತಿಹಾಸದ ಅತ್ಯಂತ ಕ್ರೂರಿ ಮತಾಂಧನಾದ ಅಲ್ಲಾವುದ್ದೀನ್ ಖಿಲ್ಜಿಯ ಕೈಗೆ ನೀಡುತ್ತಾನೆ. ಅಲ್ಲಾವುದ್ದೀನ್ ಖಿಲ್ಜಿ ಮಂದಿರವನ್ನು ಧ್ವಂಸ ಮಾಡುತ್ತಾನಲ್ಲದೆ, ಸರಸ್ವತಿಯ ಮೂರ್ತಿಯನ್ನು ತುಂಡರಿಸುತ್ತಾನೆ. ಇಸ್ಲಾಮಿಗೆ ಮತಾಂತರ ಹೊಂದದ ಕಾರಣ 1200 ವಿಧ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕೊಂದು ಮಂದಿರದ ಹೋಮ ಕುಂಡದಲ್ಲಿ ಹಾಕಿ ಸುಡುತ್ತಾನೆ.
  • 1401 AD ಯಲ್ಲಿ ದಿಲಾವರ್ ಖಾನ್ ಎಂಬ ಅಕ್ರಮಣಕಾರಿ ‘ವಿಜಯ ಮಂದಿರವನ್ನು’ ಪುಡಿಗಟ್ಟಿ ಅಲ್ಲಿ ದರ್ಗಾಹ್ ನಿರ್ಮಿಸುತ್ತಾನೆ. ಇದನ್ನು ‘ಲಾತ್ ಮಸ್ಜಿದ್’ ಎಂದು ಕರೆಯಲಾಗುತ್ತದೆ ಮತ್ತುಇಲ್ಲೆ ಮುಸ್ಲಿಮರು ನಮಾಜು ಸಲ್ಲಿಸುತ್ತಾರೆ.
  • 1514 AD ಯಲ್ಲಿ ಎರಡನೆ ಮಹಮೂದ್ ಶಾ ಖಿಲ್ಜಿ ಮಂದಿರಕ್ಕೆ ಆಕ್ರಮಣ ಮಾಡಿ ಅದನ್ನು ಧ್ವಂಸಗೈದು ಅಲ್ಲಿ ‘ಕಮಾಲ್ ಮೌಲಾನಾ ಮಕ್ಬರಾ’ ನಿರ್ಮಿಸುತ್ತಾನೆ.
  • 1552 AD ಯಲ್ಲಿ ರಜಪೂತರು ವೀರಾವೇಶದಿಂದ ಹೋರಾಡಿ ಮಹಮೂದ್ ಶಾ ಖಿಲ್ಜಿಯನ್ನು ಓಡಿಸಿ ಆತನ ಸೈನಿಕರನ್ನು ಬಂಧಿಸುತ್ತಾರೆ. ಆದರೆ ಸಯೀದ್ ಎಂಬ ಮುಸಲ್ಮಾನ ಅವರನ್ನು ಬಿಡಿಸಿ ಓಡಿಹೋಗುವಂತೆ ಮಾಡುತ್ತಾನೆ. ಇಂದಿಗೂ ಧಾರ್ ಕೋಟೆಯಲ್ಲಿ “ಬಂದೀ ಛೋಡ್ ದಾತಾ” ಎಂದು ಅವನನ್ನು ಪೂಜಿಸಲಾಗುತ್ತಿದೆ.
  • 1826 AD ಯಲ್ಲಿ ಮಾಲ್ವಾ ಮೇಲೆ ಆಕ್ರಮಣ ಮಾಡಿದ ಬ್ರಿಟಿಷರು ಮಂದಿರವನ್ನು ವಶಕ್ಕೆ ತೆಗೆದುಕೊಂಡು ಪುಡಿಮಾಡುತ್ತಾರೆ.
  • 1902 ರಲ್ಲಿ ಲಾರ್ಡ್ ಕರ್ಜನ್ ವಾಗ್ದೇವಿ(ಸರಸ್ವತಿ)ಯ ಮೂಲ ಮೂರ್ತಿಯನ್ನು ಲಂಡನ್ ಗೆ ತೆಗೆದುಕೊಂಡು ಹೋಗುತ್ತಾನೆ. ಲಂಡನ್ ಮ್ಯೂಸಿಯಂನಲ್ಲಿ ಈ ಮೂರ್ತಿಯನ್ನು ಇಂದಿಗೂ ಕಾಣಬಹುದು.

ಇದಿಷ್ಟು ವಿದೇಶೀ ಆಕ್ರಮಣಕಾರರ ಕಥೆಯಾದರೆ ಮುಂದಿರುವುದು ಭಾರತೀಯರೆನೆಸಿಕೊಂಡ ಹಿಂದೂ ಹೆಸರಿನಿಂದ ಕರೆಯಲ್ಪಡುವ ಕಾಂಗ್ರೆಸಿನ ಮೋಸದಾಟದ ಕಥೆ. 1997 ರಲ್ಲಿ ಮುಸ್ಲಿಂ ತುಷ್ಟೀಕರಣಕ್ಕೆ ಹೆಸರಾದ ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಮಧ್ಯ ಪ್ರದೇಶದ ಮುಖ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭೋಜಶಾಲಾ ಮಂದಿರದೊಳಗೆ ಹಿಂದೂಗಳ ಪ್ರವೇಶ ನಿಷೇಧಿಸಲಾಯಿತು. ಹಿಂದೂಗಳ ಭೂಮಿಯಲ್ಲಿ ಹಿಂದೂ ಮಂದಿರದೊಳಗೆ ಹಿಂದೂಗಳಿಗೆ ಪ್ರವೇಶ ನಿಷೇಧಿಸಿದ ದಿಗ್ವಿಜಯ್ ಸಿಂಗ್ ಮುಸ್ಲಿಮರಿಗೆ ಮಂದಿರದೊಳಗೆ ನಮಾಜು ಮಾಡಲು ಅನುಮತಿ ನೀಡಿ ಬಿಟ್ಟರು!! ಅಲ್ಲಿಂದ ಇಲ್ಲಿಯವರೆಗೂ ಹಿಂದೂಗಳು ತಮ್ಮ ಹಕ್ಕಿಗಾಗಿ ಸಂಘರ್ಷ ಮಾಡುತ್ತಲೆ ಬಂದಿದ್ದಾರೆ. ಹಿಂದೂಗಳ ಬೆನ್ನಿಗೆ ಚೂರಿ ಹಾಕಿದ ಕಪಟಿ ಕಾಂಗ್ರೆಸ್ ಇಂದು ಮಂದಿರ ಭ್ರಮಣೆಯ ನಾಟಕವಾಡುತ್ತಿದೆ.

ಹಿಂದೂ ಜಾಗರಣ್ ಮಂಚ್ 2002 ರಿಂದಲೇ ಮಂದಿರದಲ್ಲಿ ವಸಂತ ಪಂಚಮಿ ನಡೆಸಲು ಅನುಮತಿ ನೀಡಬೇಕೆಂದು ಹೋರಾಟ ಮಾಡುತ್ತಲೆ ಬಂದಿದೆ. ಆಗಿನ ಕಾಂಗ್ರೆಸ್ ಸರಕಾರ ಹಿಂದೂಗಳ ಮೇಲೆ ಮಾಡಿದ ಬರ್ಬರತೆ ಅಷ್ಟಿಷ್ಟಲ್ಲ. ಚಳುವಳಿ ನಿರತರ ಮೇಲೆ ಲಾಠೀ ಪ್ರಹಾರ ಮಾಡಿಸಿದ ಕಾಂಗ್ರೆಸ್ ಇಂದು ಹಿಂದೂಗಳ ಹಿತೈಷಿಯಂತೆ ಪೋಸು ಕೊಡುತ್ತಿದೆ. ಅಯೋಧ್ಯೆಯ ರಾಮ ಜನ್ಮ ಭೂಮಿಯಂತೆಯೆ ಮಧ್ಯಪ್ರದೇಶದ ಭೋಜಶಾಲಾ ಮಂದಿರಕ್ಕಾಗಿಯೂ ಸಾವಿರಾರು ಹಿಂದೂಗಳು ತಲೆ ಒಡೆಸಿಕೊಂಡಿದ್ದಾರೆ, ನೆತ್ತರು ಹರಿಸಿಕೊಂಡಿದ್ದಾರೆ ಮಾತ್ರವಲ್ಲ ಪ್ರಾಣ ತ್ಯಜಿಸಿದ್ದಾರೆ ಕೂಡಾ. ಇಂದಿಗೂ ಹಿಂದೂಗಳಿಗೆ ನಿಷೇಧವಿರುವ ಈ ಮಂದಿರದಲ್ಲಿ ಮುಸ್ಲಿಮರು ಚಾಚೂ ತಪ್ಪದೆ ನಮಾಜು ಸಲ್ಲಿಸುತ್ತಿದ್ದಾರೆ!!

ಹಿಂದೂಗಳು ಅಗತ್ಯಕ್ಕಿಂತ ಹೆಚ್ಚು ಸಹಿಷ್ಣುಗಳಾಗಿರುವುದೆ ಇಂತಹ ಘಟನೆಗಳಿಗೆ ಕಾರಣವೆ? ರಾಮನ ಜನ್ಮ ಭೂಮಿಯಲ್ಲಿ ರಾಮ ನವಮಿಯಂದು ಮೆರವಣಿಗೆ ನಡೆಯುತ್ತಿದ್ದರೆ ಕಲ್ಲು ತೂರಾಟ ನಡೆಸುವುದು, ಸರಸ್ವತಿ ಪೂಜೆ ನಡೆಸದಂತೆ ಶಾಲೆಗಳನ್ನು ಧ್ವಂಸ ಮಾಡುವುದು, ಹೋಳಿ-ದೀಪಾವಳಿ-ಗಣೇಶ ಚತುರ್ಥಿ ಹಬ್ಬಗಳನ್ನಾಚರಿಸಲು ಅನುಮತಿ ನಿರಾಕರಿಸುವುದು, ಹಿಂದೂ ದೇವರ ಮೂರ್ತಿಗಳನ್ನು ವಿರೂಪಗೊಳಿಸುವುದು, ಹಿಂದೂ ದೇವರಿಗೆ ಅಪಮಾನ ಮಾಡುವುದು, ಸನಾತನವನ್ನು ಹೀಯಾಳಿಸುವುದು ಇವೆಲ್ಲಾ ದೂರದ ಮುಸ್ಲಿಂ ದೇಶಗಳಲ್ಲ, ಬದಲಾಗಿ ಹಿಂದೂಗಳಿಗೆಂದೆ ನಿರ್ಮಿಸಲಾದ “ಹಿಂದೂಸ್ತಾನ” ದಲ್ಲಿ ನಡೆಯುತ್ತಿರುವುದು. ಇದೆಲ್ಲವನ್ನು ನೋಡಿಯೂ ನೋಡದಂತೆ, ಎಲ್ಲಿವರೆಗೆ ಹಿಂದೂಗಳು ನರ ಸತ್ತವರಂತೆ ಬಿದ್ದಿರುತ್ತಾರೋ ಅಲ್ಲಿವರೆಗೆ ಮತಾಂಧರು ದಬ್ಬಾಳಿಕೆ ಮಾಡುತ್ತಲೆ ಇರುತ್ತಾರೆ. ಹಿಂದೂಗಳ ಸಹಿಷ್ಣುತೆ ಹಿಂದೂಗಳ ದೌರ್ಬಲ್ಯವಲ್ಲ ಎನ್ನುವುದು ಮತಾಂಧರಿಗೆ ಅರ್ಥವಾಗುವುದು ಯಾವಾಗ?

-ಶಾರ್ವರಿ

Tags

Related Articles

Close