ಪ್ರಚಲಿತ

ತೈಮೂರನ ತಂದೆಯೋ, ಅವನ ಇತಿಹಾಸ ಜ್ಞಾನವೋ! ಮಗನಿಗೆ ಕ್ರೂರಿ ಪಾತಕಿಯ ಹೆಸರು ಕೊಟ್ಟವನಿಗೇನು ಗೊತ್ತು, ಬ್ರಹ್ಮ ರಾಜರ್ಷಿ ರತ್ನಾಢ್ಯಂ ಎಂದು ಕರೆಸಿಕೊಂಡ ಭಾರತದ ಹಿರಿಮೆ!

ಉತ್ತರಂ ಯತ್ಸಮುದ್ರಸ್ಯ,ಹಿಮಾದ್ರೀಸ್ಚೈವ ದಕ್ಷಿಣಂ | ವರ್ಷಾಮ್ ತದ್ಭಾರತಂ ನಾಮಹ ಭಾರತೀಯತ್ರ ಸಂತತಿಹಿ||

ಮುದ್ರದಿಂದ ಉತ್ತರಕ್ಕೂ ಹಿಮಾಲಯದಿಂದ ದಕ್ಷಿಣಕ್ಕೂ ಇರುವ ದೇಶವನ್ನೇ ಭಾರತವೆಂದೂ,ಅಲ್ಲಿ ವಾಸಿಸುವ ಪ್ರಜೆಗಳನ್ನು ಭಾರತೀಯರೆಂದೂ ಕರೆಯುತ್ತಾರೆ..ಇದನ್ನು ನಾನು ಹೇಳಿದ್ದಲ್ಲ,ಈ ಶ್ಲೋಕವು ಸಾವಿರಾರು ವರ್ಷ ಹಳೆಯದು.ದೇಶದ ಮಣ್ಣಿನ ಬೆಲೆಯನ್ನು ಅರಿಯದ ಹಲವಾರು ಮೂರ್ಖರು ನಮ್ಮ ನಡುವೆ ಇದ್ದಾರೆ.ಬಾಲಿವುಡ್ ಸಿನೆಮಾ ಕ್ಷೇತ್ರದಲ್ಲಿರುವವರ ದೇಶಪ್ರೇಮದ ಬಗ್ಗೆ ದೇಶದ ಇತಿಹಾಸದ ಬಗ್ಗೆ ಇರುವ ಜ್ಞಾನದ ಬಗ್ಗೆಯೂ ನಮಗೆಲ್ಲರಿಗೂ ತಿಳಿದಿದೆ.ತಾವೇ ಸರ್ವಜ್ಞರು,ತಮಗಿಂತ ಹೆಚ್ಚು ತಿಳಿದಿರುವವರು ಪ್ರಪಂಚದಲ್ಲೇ ಯಾರೂ ಇಲ್ಲ ಎನ್ನುವ ಭ್ರಮೆಯನ್ನು ಹೊಂದಿರುವ ಇವರನ್ನು ಕೋಪ ಮಂಡೂಕಗಳೆಂದೇ ಕರೆಯುವುದು ಒಳಿತು.ಯಾಕೆಂದರೆ ಜ್ಞಾನವಿಲ್ಲದಿದ್ದರೂ ತಾನೇ ಜ್ಞಾನಿಯೆಂದು ಹೇಳಿಕೆಗಳನ್ನು ಕೊಡುವುದರಲ್ಲಿ ಇವರದ್ದು ಎತ್ತಿದ ಕೈ..ಭಾರತದ ರಾಜವಂಶವೊಂದರ ಯುವರಾಜನೊಬ್ಬ ಬಾಲಿವುಡ್ ನಲ್ಲಿ ಸಕ್ರಿಯ ನಟನಾಗಿದ್ದಾನೆ..ಹಲವಾರು ವರ್ಷಗಳಿಂದ ಬಹಳಷ್ಟು ಫ್ಲಾಪ್ ಸಿನೆಮಾಗಳನ್ನು ನೀಡಿದ ಬಳಿಕ ದೇಶಭಕ್ತನೊಬ್ಬನ ಕಥಾ ಹಂದರವುಳ್ಳ ಸಿನೆಮಾವೊಂದರಲ್ಲಿ ಖಳನಾಯಕ ಪಾತ್ರವನ್ನು ಮಾಡುವ ಅವಕಾಶ ದೊರಕಿತು.ಗಟ್ಟಿಯಾದ ಸ್ವಾತಂತ್ರ ಸೇನಾನಿಯೊಬ್ಬನ ಕಥಾ ಹಂದರವುಳ್ಳ ಈ ಸಿನೆಮಾವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.ಅದಕ್ಕಾಗಿಯೇ ಸೈಫ್ ಆಲಿ ಖಾನ್ ಈ ಸಿನೆಮಾವನ್ನು ಒಪ್ಪಿಕೊಂಡದ್ದು.

ಆದರೆ ತಾನಾಜಿ ಸಿನೆಮಾ ಯಶಸ್ವಿಯಾದ ಮೇಲೆ ಸಿನೆಮಾದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ’ಇದು ಇತಿಹಾಸ ಎಂದು ನಾನು ಭಾವಿಸುವುದಿಲ್ಲ.ಬ್ರಿಟೀಷರು ನೀಡುವವರೆಗೂ ಭಾರತದ ಕಲ್ಪನೆಯೇ ಇರಲಿಲ್ಲ,ಒಬ್ಬ ನಟನಾಗಿ ನನಗೆ ಈ ಸಿನೆಮಾದ ಕಥೆಯ ಬಗ್ಗೆ ಯಾವುದೇ ಅಭ್ಯಂತರವಿಲ್ಲ.ಆದರೆ ಇದರಲ್ಲಿ ಕಥೆಯನ್ನು ತಿರುಚಲಾಗಿದೆ” ಎಂಬ ಹೇಳಿಕೆಯನ್ನು ನೀಡಿದರು.ಸಿನೆಮಾ ಕ್ಷೇತ್ರ ಕೂಡಾ ಒಂದು ಉದ್ಯಮ..ಒಬ್ಬ ನಟ ಸುಮ್ಮನೆ ಒಂದು ಸಿನೆಮಾದಲ್ಲಿ ನಟಿಸುವುದಿಲ್ಲ,ಮೊದಲಿಗೆ ಸಂಪೂರ್ಣ ಕಥೆಯನ್ನು ಕೇಳಿ ತನ್ನ ಪಾತ್ರ,ಪಾತ್ರದ ತೂಕ,ತನ್ನ ಪಾತ್ರಕ್ಕೆ ಸಿನಿಮಾದಲ್ಲಿರುವ ಅವಧಿ,ಸಂಭಾವನೆ,ಸಿನೆಮಾ ಶೂಟಿಂಗ್ ಗಾಗಿ ಮೀಸಲಿಡಬೇಕಾದ ದಿನಗಳು,ಪಾತ್ರಕ್ಕೆ ಬೇಕಾದಂತೆ ಮಾರ್ಪಾಡು ಮಾಡಬೇಕಿರುವ ದೈಹಿಕ ಸಿದ್ಧತೆ ಇವೆಲ್ಲವನ್ನೂ ಮೊದಲೇ ನಟ ಅಥವಾ ನಟಿಯ ಮ್ಯಾನೇಜರ್ ನೋಡಿ ವಿಮರ್ಶಿಸಿ,ಬಳಿಕ ನಟನೂ ನೋಡಿ ವಿಮರ್ಶಿಸಿಯೇ ಸಿನೆಮಾ ಒಂದಕ್ಕೆ ಸಹಿ ಹಾಕುವುದು..ಸಹಿ ಹಾಕುವುದೆಂದರೆ ಒಪ್ಪಂದ ಮಾಡುವುದು.ಸಂಭಾವನೆಯನ್ನು ಪಡೆಯುವುದು,ಇತ್ಯಾದಿಗಳು ಆ ಒಪ್ಪಂದದಲ್ಲೇ ಬರೆಯಲ್ಪಟ್ಟಿರುತ್ತದೆ..ಇತಿಹಾಸವನ್ನು ತಿರುಚಲಾಗಿದೆ ಎನ್ನುವವನು ಆ ಸಿನೆಮಾದಲ್ಲಿ ನಟಿಸಿದ್ದು ಯಾಕೆ? ಅಥವಾ ತನಗೆ ಮೊದಲು ತೋರಿಸಿದ್ದ ಕಥೆಯಲ್ಲಿ ಈ ರೀತಿ ಇರಲಿಲ್ಲ,ಬದಲಾಯಿಸಲಾಗಿದೆ ಎಂದಾದಲ್ಲಿ ಅವರಿಗೆ ಸಿನೆಮಾದಿಂದ ಹೊರನಡೆಯುವ ಎಲ್ಲಾ ಅವಕಾಶ ಇತ್ತು.ಅಷ್ಟಕ್ಕೂ ಹೆದರಿಸಿ ಅವರಿಂದ ಆ ಪಾತ್ರ ಮಾಡಿಸಲು ಅಜಯ್ ದೇವ್ಗನ್ ರಿಂದ ಸಾಧ್ಯವಿತ್ತೇ? ಅಜಯ್ ಒಬ್ಬ ಸಾಮಾನ್ಯ ಸಿನೆಮಾ ನಟ,ನಿರ್ಮಾಪಕ ಅಷ್ಟೇ.ಸೈಫ್ ಒಂದು ರಾಜಕುಟುಂಬದ ಕುಡಿ..

ತನ್ನೆಲ್ಲಾ ಸಿನೆಮಾಗಳು ಸದ್ದೇ ಇಲ್ಲದೆ ಸರಿದು ಹೋಗುತ್ತಿದೆ ಎಂದು ಅರಿವಾದಾಗ ಗೆಲ್ಲುವ ಕುದುರೆಯ ಬಾಲ ಹಿಡಿಯುವಂತೆ ಸೈಫ್ ತಾನಾಜಿ ಮಾಲುಸರೆಯ ಸಿನೆಮಾ ಮಾಡಿ,ಸಿನೆಮಾ ಗೆದ್ದು ಅವನ ನಟನೆಯ ಬಗ್ಗೆ ಜನರು ನಾಲ್ಕು ಒಳ್ಳೆಯ ಮಾತನ್ನಾಡಲು ಪ್ರಾರಂಭಿಸಿದ ಬಳಿಕ ಇಂತಹಾ ಮೂರ್ಖತನದ ಹೇಳಿಕೆಯನ್ನು ನೀಡುವುದು ಉಂಡ ಮನೆಗೆ ದ್ರೋಹ ಬಗೆದಂತೆಯೇ ಸರಿ..ಈಗ ಜನರೂ ಮೊದಲಿನಂತೆ ಅಂಧ ಅಭಿಮಾನಿಗಳಲ್ಲ,ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರೂ ಅವನಿಗೆ ಇತಿಹಾಸದ ಪಾಠಮಾಡತೊಡಗಿದರು, ಅದರಲ್ಲಿ ಮುಖ್ಯವಾಗಿ ಜನರು ಅವನ ಮಗನಿಗಿರಿಸಿದ್ದ ಹೆಸರಿನ ಇತಿಹಾಸದ ಬಗ್ಗೆ ಚರ್ಚಿಸಲಾರಂಭಿಸಿದರು..ಜನರನ್ನು ಕೊಂದು ತಲೆಬುರುಡೆಗಳ ಶಿಖರವನ್ನೇ ನಿರ್ಮಿಸುತ್ತಿದ್ದ ವಿಕೃತ ಸಂತೋಷಿ ತೈಮೂರನ ಹೆಸರನ್ನು ಮಗನಿಗೆ ಇರಿಸಿದ ವ್ಯಕ್ತಿ ಇಂದ ಇನ್ನೆಂತಹಾ ಇತಿಹಾಸದ ಪಾಠ ಬರಬಹುದು ಎಂದೂ ಪ್ರಶ್ನಿಸಲಾರಂಭಿಸಿದರು..ಇಷ್ಟಾಗುವಾಗ ಸೈಫ್ ಅಲಿಖಾನ್ ಜಾಣ ಕಿವುಡನಂತೆ ನಟಿಸಲು ಪ್ರಾರಂಭಿಸಿ ಮೌನವಹಿಸಿ ಆಗಿತ್ತು.ಅಷ್ಟಕ್ಕೂ ಬ್ರಿಟೀಷರು ಬಂದ ಮೇಲೆ ಭಾರತದ ಕಲ್ಪನೆ ಬಂದದ್ದು ಎನ್ನುವುದಾದರೆ ಬ್ರಿಟೀಷರು ಚೈನಾವನ್ನು ಹುಡುಕಿ ಬಂದು ಅರಬ್ ರಾಷ್ಟ್ರವನ್ನು ಸೇರಿದ್ದರೇ? ಇಂಡಿಯಾ ವನ್ನು ಹುಡುಕುವಾಗ ದೊರಕಿದ ಸ್ಥಳವನ್ನೇ ಅಲ್ಲವೇ ಅವರು ವೆಸ್ಟ್ ಇಂಡಿಯಾ ಎಂದು ಕರೆದದ್ದು?

ಭಾರತವು ಏಳು ನದಿಗಳ ಭೂಮಿ,ಋಗ್ವೇದದ ೭ ನೇ ಪುಸ್ತಕದ ೧೮ ನೇ ಶ್ಲೋಕವು ದಾಶರಾಜ್ಞ ಎಂಬ ಭಯಾನಕ ಯುದ್ಧದ ಕುರಿತು ಉಲ್ಲೇಖಿಸುತ್ತದೆ.ತೃತ್ಸು ವಂಶದ ಭರತ ಬುಡಕಟ್ಟಿನ ಅರಸನಾದ ಸುದಾನನನ್ನು ಸೋಲಿಸಲು ಸಂಚು ರೂಪಿಸಿದ್ದ,ಆಗ ಹತ್ತು ಪ್ರಬಲ ಬುಡಕಟ್ಟು ಜನಾಂಗದವರ ನಡುವೆ ಯುದ್ಧ ನಡೆಯಿತು,ಪಂಜಾಬಿನ ರಾವಿ ನದಿಯ ಬಳಿಯಲ್ಲಿ ನಡೆದ ಈ ಯುದ್ಧದಲ್ಲಿ ಹತ್ತು ಬಲಿಷ್ಠ ರಾಜರನ್ನು ಸುದಾನನು ಗೆದ್ದು ಜನಪ್ರಿಯನಾದನು,ಆದರೆ ಜನರು ತಮ್ಮನ್ನು ಭರತ ಜನಾಂಗದ ಜನರೆಂದು ಗುರುತಿಸಿಕೊಳ್ಳಲು ಪ್ರಾರಂಭಿಸಿದರು.ಅಂತಿಮವಾಗಿ ಇದು ಜನರ ಬಾಯಲ್ಲಿ ಭಾರತವರ್ಷ ಎಂಬುದಾಗಿಯೇ ನೆಲೆಯಾಯಿತು..ಮಹಾಭಾರತದ ಪ್ರಕಾರ ಭರತ ಚಕ್ರವರ್ತಿ ಎಂಬ ರಾಜನ ಆಳ್ವಿಕೆಯ ನಂತರ ಭಾರತವನ್ನು ಭಾರತವರ್ಷ ಎಂದು ಕರೆಯಲಾಯಿತು,ಇದರ ಪ್ರಕಾರ ಭರತ ಹಸ್ತಿನಾಪುರದ ರಾಜ ದುಷ್ಯಂತ ಮತ್ತು ರಾಣಿ ಶಾಕುಂತಲೆಯ ಮಗ..ಭರತ ರಾಜವಂಶದ ಸಂಸ್ಥಾಪಕ ಮತ್ತು ಪಾಂಡವ ಮತ್ತು ಕೌರವರ ಪೂರ್ವಜ. ಸಂಪೂರ್ಣ ಭಾರತವನ್ನು ಒಂದೇ ಆಡಳಿತದ ಅಡಿಯಲ್ಲಿ ತಂದ ಕಾರಣಕ್ಕೆ ಅವನ ದೇಶವನ್ನು ಭಾರತವರ್ಷ ಎಂದು ಕರೆಯಲಾಗುತ್ತದೆ.ವಿಷ್ಣು ಪುರಾಣದ ಪ್ರಕಾರ ತಂದೆಯು ಭರತನಿಗೆ ಪಟ್ಟಾಭಿಷೇಕ ಮಾಡಿ ತಾನು ಆಧ್ಯಾತ್ಮಿಕ ಸಾಧನೆಗಾಗಿ ಕಾಡಿಗೆ ಹೋಗುವಾಗ ತನ್ನ ದೇಶವನ್ನು ಭರತ ವರ್ಷವೆಂದು ಕರೆದನು ಎನ್ನಲಾಗುತ್ತದೆ. ಆಶ್ಚರ್ಯಕರ ವಿಚಾರವೆಂದರೆ

ಉತ್ತರಂ ಯತ್ಸಮುದ್ರಸ್ಯ,ಹಿಮಾದ್ರೀಸ್ಚೈವ ದಕ್ಷಿಣಂ | ವರ್ಷಾಮ್ ತದ್ಭಾರತಂ ನಾಮಹ ಭಾರತೀಯತ್ರ ಸಂತತಿಹಿ||
(ಸಮುದ್ರದಿಂದ ಉತ್ತರಕ್ಕೂ ಹಿಮಾಲಯದಿಂದ ದಕ್ಷಿಣಕ್ಕೂ ಇರುವ ದೇಶವನ್ನೇ ಭಾರತವೆಂದೂ,ಅಲ್ಲಿ ವಾಸಿಸುವ ಪ್ರಜೆಗಳನ್ನು ಭಾರತೀಯರೆಂದೂ ಕರೆಯುತ್ತಾರೆ) ಎಂಬ ಶ್ಲೋಕದ ಪ್ರಕಾರ ಇಂದಿನ ಪಾಕಿಸ್ತಾನ,ಅಫಘಾನಿಸ್ತಾನ,ನೇಪಾಳ,ಬಾಂಗ್ಲಾದೇಶ,ಟಿಬೆಟ್ ದೇಶಗಳೂ ಕೂಡಾ ಭಾರತವರ್ಷ ಸಾಮ್ರಾಜ್ಯಕ್ಕೆ ಸೇರಿರುವ ಪ್ರದೇಶಗಳಾಗಿವೆ.ಭರತ ಎಂಬುದು ಸಂಸ್ಕೃತ ಶಬ್ದ ಇದನ್ನು ವಿಚ್ಛೇದಿಸಿ ಅರ್ಥ ಹುಡುಕಲು ಪ್ರಯತ್ನಿಸಿದರೆ ಜ್ಞಾನದ ಹುಡುಕಾಟದಲ್ಲಿ ನಿರತನಾದವನು ಎಂಬ ಅರ್ಥವೂ ದೊರಕುತ್ತದೆ. ಇತಿಹಾಸವನ್ನು ಗಮನಿಸಿದರೆ ಭಾರತವು ಜ್ಞಾನಿಗಳ ಋಷಿಗಳ ಸಂತರ ನಾಡು,ಅನೇಕ ರೀತಿಯ ವಿದ್ಯೆಗಳು ಭಾರತದಲ್ಲಿ ಅಸ್ತಿತ್ವದಲ್ಲಿತ್ತು,ಪ್ರತಿಯೊಬ್ಬನೂ ಜ್ಞಾನವನ್ನು,ಜ್ಞಾನವನ್ನು ನೀಡುವ ಗುರುವನ್ನು ಹುಡುಕಾಡುತ್ತಿದ್ದ,ಪಂಡಿತರು ಎಲ್ಲೆಡೆಯಲ್ಲೂ ಗೌರವಿಸಲ್ಪಡುತ್ತಿದ್ದರು.

ಜೈನಧರ್ಮದ ಇತಿಹಾಸದ ಪ್ರಕಾರ ಜೈನರ ಮೊದಲ ತೀರ್ಥಂಕರರ ಹಿರಿಯ ಮಗನ ಹೆಸರು ಭರತ,ಮತ್ತಿವನು ಚಕ್ರವರ್ತಿಯಾಗಿದ್ದ.ಆದ್ದರಿಂದ ಈ ದೇಶವನ್ನು ಭರತನ ದೇಶ ಅಂದರೆ ಭಾರತವರ್ಷ ಎಂದು ಕರೆಯಲಾಗುತ್ತದೆ.ಭಾರತವನ್ನು ಹಿಂದುಸ್ತಾನ ಎಂದೂ ಕರೆಯುತ್ತಾರೆ,ಪರ್ಷಿಯನ್ನರು ಹಿಂದೂಗಳ ದೇಶವನ್ನು ಹಿಂದೂಸ್ತಾನ ಎಂದು ಕರೆದರು ಮಾತ್ರವಲ್ಲದೆ,ಸಿಂಧೂನದಿಯ ನಾಗರಿಕತೆಯ ಅಪಭ್ರಂಶರೂಪವಾಗಿ ಹಿಂದೂಸ್ಥಾನ ಎಂಬ ಹೆಸರೂ ಬಂದಿರುತ್ತದೆ.ಇದರ ಪ್ರಕಾರ ಪಾಕಿಸ್ತಾನವೂ ಒಳಗೊಂಡ ದೊಡ್ಡ ಸಾಮ್ರಾಜ್ಯವೇ ಭಾರತವರ್ಷ.

“ಅಪಿ ಸ್ವರ್ಣಮಯೀ ಲಂಕಾ ನ ಮೇ ಲಕ್ಷ್ಮಣ ರೋಚತೇ |
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||

ರಾಮಾಯಣದಲ್ಲಿ ರಾಮನು ಲಕ್ಷ್ಮಣನಿಗೆ “ಲಂಕೆಯು ಚಿನ್ನದಿಂದ ನಿರ್ಮಿಸಲ್ಪಟ್ಟಿದ್ದರೂ,ನಮಗಿದು ಇಷ್ಟವಾಗುವುದಿಲ್ಲ ಯಾಕೆಂದರೆ ಜನ್ಮನೀಡಿದ ತಾಯಿ ಮತ್ತು ಜನ್ಮಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲಾದುದು” ಎಂದು ಹೇಳುತ್ತಾನೆ.. ಇದು ಯಾವೂದೂ ದೇಶದ ಕಲ್ಪನೆಯೇ ಇಲ್ಲದೆ ಬ್ರಿಟೀಷರು ಗೀಚಿಹೋದ ಗೆರೆಯ ಒಳಗಿನ ಭಾಗವನ್ನು ಮಾತ್ರ ದೇಶವೆನ್ನುವ ಕಲ್ಪನೆಯಯನ್ನಿರಿಸಿಕೊಂಡ ಮೂರ್ಖರಿಗೆ ಅರ್ಥವಾಗದು.ಭಾರತದ ಕಲ್ಪನೆಯೇ ಬೇರೆ..ಬ್ರಿಟೀಷರು,ತಂದದ್ದು ಕೊಟ್ಟದ್ದು ಕೊಂಡುಹೋದದ್ದು ಇಂಡಿಯಾ ದ ಕಲ್ಪನೆಯನ್ನೇ ಹೊರತು ಭಾರತವನ್ನಲ್ಲ.ಯಾಕೆಂದರೆ ಭಾರತವೊಂದು ಕಲ್ಪನೆಯಲ್ಲ..ಭಾರತವೆಂದರೆ ಅದೊಂದು ವಾಸ್ತವ,ಅದೊಂದು ಶಕ್ತಿ,ಅದೊಂದು ಸಾಮ್ರಾಸಜ್ಯಕ್ಕಿಂತಲೂ ಮಿಗಿಲಾದ ಭೂಮಿ.ಭಾರತದ ಕಲ್ಪನೆ ಬ್ರಿಟೀಷರು ನೀಡಿದ್ದಲ್ಲ,ಭಾರತವು ನಾನು,ನೀವು,ಮಾತ್ರವಲ್ಲ ಬ್ರಿಟೀಷರ ರಾಜವಂಶ,ಅವರ ಸಾಮ್ರಾಜ್ಯ ಬ್ರಿಟನ್ ನಲ್ಲಿ ನಾಗರೀಕತೆಯು ಉದಯಿಸುವ ಮೊದಲಿನಿಂದಲೇ ಭಾರತವು ಅಸ್ತಿತ್ವ ಹೊಂದಿದ್ದು..ಆಗ ಅದು ಭಾರತವರ್ಷ ವಾಗಿತ್ತು.ಇದೀಗ ಭಾರತವಾಗಿದೆ..ಇಂತಹಾ ಭಾರತಕ್ಕಾಗಿ ನೂರಾರು ತಾನಾಜಿ ಮಾಲುಸರೆಯರು ಸಾವಿರಾರು ಉದಯಭಾನುಗಳನ್ನು ಸಾವಿರಾರು ವರ್ಷಗಳಿಂದ ಸೋಲಿಸುತ್ತಲೇ ಇದ್ದಾರೆ ಮತ್ತು ಭಾರತೀಯರ ಹೃದಯದಲ್ಲಿ ವೀರರಾಗಿ ಮೆರೆಯುತ್ತಲೇ ಇದ್ದಾರೆ.

-Deepashree M

Tags

Related Articles

FOR DAILY ALERTS
Close