ಪ್ರಚಲಿತ

ಮೋದಿಯವರ ಸಮರ್ಥ ನಾಯಕತ್ವದ ಫಲ! 7.7% ಅಭಿವೃದ್ದಿ ದರದಿಂದ ನಾಗಾಲೋಟದಲ್ಲಿ ಓಡುತ್ತಾ ಚೀನಾವನ್ನೂ ಹಿಂದಿಕ್ಕಿದ ಹಿಂದೂಸ್ತಾನ !! ವಿಶ್ವದ ಅತಿ ದೊಡ್ದ ಆರ್ಥಿಕ ಶಕ್ತಿಯಾಗಲಿದೆ ಭಾರತ!!

ಭಾರತದ ಜಿ.ಡಿ.ಪಿ ದರವೀಗ ಉಸೇನ್ ಬೋಲ್ಟ್ ಮಾದರಿಯಲ್ಲಿ ಓಡುತ್ತಿದೆ. ಹತ್ತು ವರ್ಷದಲ್ಲಿ “ಆಕ್ಸ್ ಫರ್ಡಿನ ಅರ್ಥಶಾಸ್ತ್ರಿ” ಮಾಡಲಾಗದ್ದನ್ನು ಒಬ್ಬ ಚಹಾ ಮಾರುವವ ನಾಲ್ಕೇ ವರ್ಷಗಳಲ್ಲಿ ಸಾಧಿಸಿ ತೋರಿದ್ದಾರೆ ಎಂದರೆ ಆ ವ್ಯಕ್ತಿಯ ದೂರದರ್ಷಿತ್ವಕ್ಕೆ ಒಂದು ದೀರ್ಘ ದಂಡ ನಮಸ್ಕಾರ ಹೊಡೆಯಲೆ ಬೇಕು. ಭಾರತವೀಗ ಏಷ್ಯಾದಲ್ಲೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಲಿದೆ. ಭಾರತದ ಜಿ.ಡಿ.ಪಿ ದರ 7.7% ಬುಲೆಟ್ ವೇಗದಲ್ಲಿ ಓಡುತ್ತಿದೆ!! ಜನವರಿ-ಮಾರ್ಚ್ ಅವಧಿಯಲ್ಲಿ ಭಾರತೀಯ ಆರ್ಥಿಕತೆಯು7.7% ರಷ್ಟು ಏರಿಕೆ ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ಕಂಡುಬಂದ ಅತ್ಯಂತ ವೇಗದ ದರವಿದು ಎನ್ನಲಾಗಿದೆ. ಕ್ಷಿಪ್ರ ನಿರ್ಮಾಣ ಚಟುವಟಿಕೆ, ಗ್ರಾಹಕರ ಖರ್ಚು ಮತ್ತು ಸಾಂಸ್ಥಿಕ ಹೂಡಿಕೆಯಿಂದ ಭಾರತದ ಜಿ.ಡಿ.ಪಿಗೆ ತ್ವರಿತಗತಿಯ ವೇಗ ದೊರಕಿದೆ ಎಂದು ಕಂಡುಬಂದಿದೆ.

ಇದಕ್ಕೆಲ್ಲಾ ಕಾರಣ ಯಾರು? ಮೋದಿಯವರಲ್ಲದೆ ಬೇರಿನ್ನಾರಗಲು ಸಾಧ್ಯ? ಮೋದಿಯವರು ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ ಅಂತಹ ಕಠೋರ ನಿರ್ಧಾರಗಳನ್ನು ತೆಗೆದುಕೊಂಡಾಗ ಅರ್ಥ ಶಾಸ್ತ್ರದ ಕೌಟಿಲ್ಯರೆಲ್ಲ ಅವರನ್ನು ಹಿಗ್ಗಾ ಮುಗ್ಗಾ ಝಾಡಿಸಿದರು. ಭಾರತದ ಆರ್ಥಿಕತೆ ಕುಸಿಯುತ್ತದೆ ಎಂದು ಗುಲ್ಲೆಬ್ಬಿಸಿದರು. ಆದರೆ ಅವರೆಲ್ಲರ ಅಪವಾದ-ಅನುಮಾನಗಳನ್ನು ಮೀರಿ ಭಾರತವು ಆರ್ಥಿಕವಾಗಿ ಸಬಲ ರಾಷ್ಟ್ರವಾಗಿ ರೂಪುಗೊಳ್ಳುತ್ತಲಿದೆ. ಮಾರ್ಚ್ ವರೆಗಿನ ತ್ರೈಮಾಸಿಕ ಮೌಲ್ಯಮಾಪನದ ಪ್ರಕಾರ ಭಾರತದ ಆರ್ಥಿಕತೆಯು ಅತಿ ವೇಗವಾಗಿ ಬೆಳೆದು ಚೀನಾದ ಆರ್ಥಿಕತೆಯನ್ನು ಹಿಂದಿಕ್ಕಿದೆ!! ಪ್ರಸ್ತುತ ಚೀನಾದ ಆರ್ಥಿಕತೆಯು 6.8% ಇದ್ದರೆ ಭಾರತದ 7.7% ರಷ್ಟಿದೆ.

2017-18 ರ ಆರ್ಥಿಕ ವರ್ಷದಲ್ಲಿ ಭಾರತವು 6.7 ಪ್ರತಿಶತದಷ್ಟು ಬೆಳವಣಿಗೆ ಹೊಂದಿದೆ. ಈ ಬೆಳವಣಿಗೆ 6.6 ಪ್ರತಿಶತ ವಿಸ್ತರಣೆ ಹೊಂದಬಹುದು ಎನ್ನುವ ಸರಕಾರದ ಅಂದಾಜಿಗಿಂತಲೂ ತುಸು ಹೆಚ್ಚೆ ವೇಗದಲ್ಲಿ ಬೆಳವಣಿಗೆ ದಾಖಲಾಗಿದೆ ಎಂದು ಹೇಳಲಾಗಿದೆ. ಭಾರತದ ಆರ್ಥಿಕ ಬೆಳವಣಿಗೆಯ ದರವು 2017-18 ರ ಮೊದಲ ಮೂರು ತ್ರೈಮಾಸಿಕದಲ್ಲಿ 5.6%, 6.3% ಮತ್ತು 7% ಬೆಳವಣಿಗೆ ದರವನ್ನು ಕಂಡಿದೆ. ಕೇಂದ್ರ ಅಂಕಿ ಅಂಶಗಳ ಕಚೇರಿಯ (ಸಿಎಸ್ಒ) ಒಟ್ಟಾರೆ ಮೌಲ್ಯ ಮೌಲ್ಯವರ್ಧಿತ ಅಂದಾಜುಗಳು (ಜಿ.ವಿ.ಎ) 2017-18ರಲ್ಲಿ 6.5 ರಷ್ಟು ಏರಿಕೆಯಾಗಿದ್ದು, ಇದು ಹಿಂದಿನ ವರ್ಷದ 7.1 ಕ್ಕಿಂತಲೂ ಕಡಿಮೆಯಾಗಿತ್ತು. ಆದರೆ ಮಾರ್ಚ್ ಅಂತ್ಯದಲ್ಲಿ, ಜಿವಿಎಯು ಒಂದು ವರ್ಷದ ಹಿಂದೆ ಇದ್ದ 6.0 ಶೇಕಡಾದಿಂದ 7.6 ಪ್ರತಿಶತದಷ್ಟು ಏರಿಕೆ ಕಂಡಿದೆ!!

ಜಿವಿಎ ಅಂದರೆ ತೆರಿಗೆ ರಹಿತ ಜಿ.ಡಿ.ಪಿಯು ಆರ್ಥಿಕತೆಯಲ್ಲಿ ಉತ್ಪತ್ತಿಯಾದ ಸರಕುಗಳು ಮತ್ತು ಸೇವೆಗಳ ಒಟ್ಟಾರೆ ಮೌಲ್ಯದಲ್ಲಿನ ಬದಲಾವಣೆಯನ್ನು ಅಳೆಯಲು ಹೆಚ್ಚು ಪ್ರಾಮಾಣಿಕವಾದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಭಾರತ ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯೆಂಬುದನ್ನು ದೇಶೀ ಮತ್ತು ವಿದೇಶೀ ಸಂಸ್ಥೆಗಳು ಪ್ರತಿಪಾದಿಸುತ್ತಲೆ ಬಂದಿವೆ. ಚೀನಾಕ್ಕಿಂತಲೂ ಹೆಚ್ಚು ಕಡಿಮೆ ಒಂದು ಪ್ರತಿಶದಷ್ಟು ಹೆಚ್ಚು ಅಭಿವೃದ್ದಿ ದರವನ್ನು ದಾಖಲಿಸುವ ಮೂಲಕ ಭಾರತ ಏಷ್ಯಾದ ಅತಿ ದೊಡ್ಡ ಆರ್ಥಿಕ ಶಕ್ತಿ ಆಗಲಿದೆ ಎನ್ನುವ ವಾದಕ್ಕೆ ಮತ್ತಷ್ಟು ಬಲ ದೊರಕಲಿದೆ.

ಜಿ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ)ಯು ಕೈಗಾರಿಕಾ ವಲಯಕ್ಕೆ ದೊಡ್ಡ ಪ್ರಮಾಣದ ಆದಾಯವನ್ನು ತಂದಿದೆ ಎಂದು ನಾವು ನಂಬಲು ಬಯಸುತ್ತೇವೆ ಎಂದು ಹಣಕಾಸು ಮತ್ತು ಆದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದ್ದಾರೆ. 2016-17 ರ ಅವಧಿಯಲ್ಲಿ ಶೇಕಡ 7.1 ರಷ್ಟಿದ್ದ ಕೃಷಿ ಉತ್ಪಾದನೆಯು ಅಕ್ಟೋಬರ್-ಡಿಸೆಂಬರಿನಲ್ಲಿ ಶೇ. 3.1 ರಷ್ಟು ಇಳಿಕೆಯಾಗಿತ್ತು ಆದರೆ ಈಗ ಶೇ. 4.5 ರಷ್ಟು ಏರಿಕೆ ಕಂಡಿದೆ. 2018-19ರಲ್ಲಿ ಉತ್ತಮ ಮಾನ್ಸೂನ್ ಮತ್ತು ಸರಕಾರ ಮೂಲಭೂತ ಸೌಕರ್ಯ ಮತ್ತು ವಸತಿ ವಿಷಯಗಳಿಗೆ ನೀಡುತ್ತಿರುವ ಪ್ರಾಮುಖ್ಯತೆಯಿಂದಾಗಿ ಈ ಬೆಳವಣಿಗೆ ಇದೆ ರೀತಿ ಮುಂದುವರೆಯಲು ನಿರೀಕ್ಷಿಸಲಾಗಿದೆ ಎಂದು ಇಂಡಿಯನ್ ರೇಟಿಂಗ್ಸ್ ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿರುವ ದೇವೇಂದ್ರ ಪಂತ್ ಹೇಳಿದ್ದಾರೆ.

ಇದೆಲ್ಲವೂ ಸಾಧ್ಯವಾಗುತ್ತಿರುವುದು ತನಗಿಂತ ಮೊದಲು ತನ್ನ ದೇಶ ಎನ್ನುವ ಒಬ್ಬ ಫಕೀರ ಮೋದಿಯಿಂದಾಗಿ. ಬಹಳ ಕಷ್ಟಪಟ್ಟು ಭಾರತವನ್ನು ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ ಮೋದಿ. ಹಿಂದೆ ಅಟಲ್ ಸರಕಾರವಿದ್ದಾಗ ಭಾರತ ಇದೆ ರೀತಿ ಬೆಳವಣಿಗೆ ಕಂಡಿತ್ತು. ಆದರೆ ಯೂಪಿಎಯ ಹತ್ತು ವರ್ಷಗಳ ಕುಸಾಶನ ಭಾರತವನ್ನು ಸಾಲದ ಕೂಪಕ್ಕೆ ತಳ್ಳಿ ಬಿಟ್ಟಿತು. ಈಗ ಮತ್ತೆ ಮೋದಿ ಭಾರತವನ್ನು ಮೇಲೆತ್ತುತ್ತಿದ್ದಾರೆ. ಮಾಸಂದ ತುಂಡಿಗೆ ಕಾಯುವ ನರಿಗಳಂತೆ ವಿರೋಧಿಗಳು ಭಾರತವನ್ನು ಕೊಳ್ಳೆ ಹೊಡೆಯಲು ಕಾಯುತ್ತಿದ್ದಾರೆ. ಭಾರತದ ಅಭಿವೃದ್ದಿ ಇದೆ ದರದಲ್ಲಿ ಮುಂದುವರಿಯಬೇಕಾದರೆ ಮೋದಿಯವರೆ ಪ್ರಧಾನಿಯಾಗಿ ಬರಬೇಕು. ಭಾರತವನ್ನು ಕೊಳ್ಳೆಹೊಡೆಯುವವರ “ಕೈ”ಗಳಿಂದ ರಕ್ಷಿಸುವ ತಾಕತ್ತು ಜನರಿಗೆ. ಮೋದಿ ಅವರ ಸೋಲು, ದೇಶದ ಸೋಲು. ದೇಶದ ಸೋಲು, ಜನರ ಸೋಲು. ಹಾಗಾಗಲು ಬಿಡಬಾರದು. ದೇಶ ಒಡೆಯುವವರನ್ನು ಸಾರಾ ಸಗಟಾಗಿ ತಿರಸ್ಕರಿಸಬೇಕು. ದೇಶ ಬೆಳಗುವವರ ಬಲಿಷ್ಟ ಕೈಗಳಿಗೆ ಭಾರತವನ್ನು ನೀಡಬೇಕು.

ಬೆಳಗಲಿ ಭಾರತ ಸದಾಕಾಲ…. ಮೋದಿಯವರ ನೇತೃತ್ವದಲ್ಲಿದೆ ವಿಶ್ವಾಸ ಅಚಲ…2019 ಮೋದಿ ಮತ್ತೊಮ್ಮೆ….

-ಶಾರ್ವರಿ

Tags

Related Articles

Close