ಪ್ರಚಲಿತ

ಅಂತರಿಕ್ಷದಲ್ಲಿ ಹೊಸ ಇತಿಹಾಸ ಬರೆದ ಭಾರತ!! ಒಂದು ವರ್ಷಕ್ಕೆ ಬರೇ 19.5 ದಿನಗಳಿರುವ ತನ್ನದೆ ಆದ ಹೊಸ ಗ್ರಹವನ್ನು ಕಂಡುಹಿಡಿದ ಭಾರತೀಯ ವಿಜ್ಞಾನಿಗಳ ಸಾಧನೆಗೆ ದಂಗಾದ ವಿಶ್ವ!!

ಅತ್ಯಂತ ಗಮನಾರ್ಹವಾದ ವೈಜ್ಞಾನಿಕ ಸಾಧನೆಗಳ ಭಾಗವಾಗಿ, ಅಂತರಿಕ್ಷದಲ್ಲಿ sub-Saturn Exoplanet ಅನ್ನು ಭಾರತೀಯ ವಿಜ್ಞಾನಿಗಳು ಕಂಡುಹಿಡಿದ್ದಾರೆ! ಭಾರತದ ವಿಜ್ಞಾನಿಗಳ ಈ ಸಾಧನೆಯನ್ನು ಜಗತ್ತೇ ಕಣ್ಣು- ಬಾಯಿ ಬಿಟ್ಟು ನೋಡುತ್ತಿದೆ. ಅಹ್ಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಪ್ರೊಫೆಸರ್ ಅಭಿಜಿತ್ ಚಕ್ರವರ್ತಿ ಅವರ ನೇತೃತ್ವದಲ್ಲಿ ಭಾರತದ ವಿಜ್ಞಾನಿಗಳ ತಂಡ ಈ ಹೊಸ ಗ್ರಹದ ಆವಿಷ್ಕಾರ ಮಾಡಿದೆ. ಭಾರತೀಯ ವಿಜ್ಞಾನಿಗಳು ಹೇಗೆ ಪ್ರಗತಿ ಸಾಧಿಸಿದ್ದಾರೆ ಎನ್ನುವುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿವರವಾಗಿ ವರದಿ ಮಾಡಿದೆ. ನಿಜವಾಗಿಯೂ ಭಾರತದ ಮಟ್ಟಿಗೆ ಇದೊಂದು ಹೆಮ್ಮೆಯ ವಿಚಾರ. ಅಮೇರಿಕಾ-ರಷ್ಯಾಗಳಂತೆಯೆ ಭಾರತವೂ ಈಗ ಅಂತರಿಕ್ಷದ ಅಂಗಳದಲ್ಲಿ ತನ್ನ ಕೀರ್ತಿ ಧ್ವಜವನ್ನು ಹಾರಾಡಿಸುತ್ತಿದೆ.

ಹೊಸ ಗ್ರಹದ ಆವಿಷ್ಕಾರವನ್ನು ಭಾರತವೆ ವಿನ್ಯಾಸಗೊಳಿಸಿದ “PRL ಅಡ್ವಾನ್ಸ್ ರೇಡಿಯಲ್-ವೆಲಾಸಿಟಿ ಅಬು-ಸ್ಕೈ ಸರ್ಚ್” (PARAS) ಸ್ಪೆಕ್ಟ್ರೋಗ್ರಾಫ್ ಜೊತೆಗೆ ಮೌಂಟ್ ಅಬುವಿನಲ್ಲಿ PRL ನ ಗುರುಶಿಖರ್ ವೀಕ್ಷಣಾಲಯದ 1.2m ಟೆಲಿಸ್ಕೋಪ್ ಅನ್ನು ಬಳಸಿಕೊಂಡು ಗ್ರಹವನ್ನು ಕಂಡುಹಿಡಿಯಲಾಯಿತು ಮತ್ತು ಗ್ರಹದ ದ್ರವ್ಯರಾಶಿಯನ್ನು ಲೆಕ್ಕಹಾಕುವ ಮೂಲಕ ಅಲ್ಲಿ ಒಂದು ವರ್ಷದಲ್ಲಿ ಕೇವಲ 19.5 ದಿನಗಳು ಮಾತ್ರ ಇವೆ ಎನ್ನುವುದನ್ನು ಕಂಡು ಹಿಡಿಯಲಾಯಿತು. ಕುತೂಹಲಕಾರಿ ವಿಷಯವೆಂದರೆ PARAS ಭಾರತದಲ್ಲಿ ತಯಾರಾದ ಮೊದಲ ರೋಹಿತ ಸ್ಪೆಕ್ಟ್ರೋಗ್ರಾಫ್ ಆಗಿದ್ದು, ನಕ್ಷತ್ರದ ಸುತ್ತಲೂ ಸುತ್ತುವ ಗ್ರಹದ ದ್ರವ್ಯರಾಶಿಯನ್ನು ಅಳೆಯುವಲ್ಲಿ ಸಹಾಯ ಮಾಡುತ್ತದೆ.

ಬ್ರಹ್ಮಾಂಡದಲ್ಲಿ ಹೊಸ ಗ್ರಹಗಳ ಈ ಅನ್ವೇಷಣೆಯೊಂದಿಗೆ ಭಾರತವು ಹಲವಾರು ದೇಶಗಳ ಎಲೀಟ್ ಕ್ಲಬ್ ಅನ್ನು ಸೇರಿಕೊಂಡಿದೆ. ಸದ್ಯಕ್ಕೆ ಗ್ರಹದ ಹೆಸರನ್ನು EPIC 211945201b or K2-236b ಎಂದೂ ಮತ್ತು ಅದು ಸುತ್ತುವ ನಕ್ಷದ್ರ ಹೆಸರನ್ನು EPIC 211945201 or K2-236 ಎಂದು ಹೆಸರಿಸಲಾಗಿದೆ.

ಈ ಗ್ರಹದ ವಿವರಗಳು ಇಂತಿವೆ:

-ಉಪ-ಶನಿಗ್ರಹ ಅಥವಾ ಸೂಪರ್-ನೆಪ್ಚೂನ್ ಗಾತ್ರದ ಗ್ರಹವು ಭೂಮಿಯ ದ್ರವ್ಯರಾಶಿಯ ಸುಮಾರು 27 ಪಟ್ಟನ್ನು ಹೊಂದಿದೆ.

-ಭೌತಿಕವಾಗಿ K2-236b ತ್ರಿಜ್ಯವು ಭೂಮಿಯ ಆರು ಪಟ್ಟು ಇದೆ.

-K2-236b, ನಮ್ಮ ಭೂಮಿಯಿಂದ ಸುಮಾರು 600 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಸೂರ್ಯನಂತಹ ನಕ್ಷತ್ರದ ಸುತ್ತ ಸುತ್ತುತ್ತದೆ.

-ಈ ಗ್ರಹವು ತನ್ನ ಸೂರ್ಯನ ಸುತ್ತ ಒಂದು ಕ್ರಾಂತಿಯನ್ನು ಸುಮಾರು 19.5 ದಿನಗಳಲ್ಲಿ ಪೂರ್ಣಗೊಳಿಸುತ್ತದೆ. ಅಂದರೆ ವರ್ಷಕ್ಕೆ ಕೇವಲ 19.5 ದಿನಗಳು.

-ಆರಂಭಿಕ ಧ್ವನಿಮುದ್ರಣಗಳ ಪ್ರಕಾರ, ಗ್ರಹದ ಮೇಲ್ಮೈ ತಾಪಮಾನ ಸುಮಾರು 600 ° C ಆಗಿದೆ. ಸುರ್ಯನಿಗೆ ಅತಿ ಸಮೀಪವಿರುವ ಗ್ರಹದ ಮೇಲೆ ಜೀವಿಗಳ ಆವಾಸಸ್ಥಾನ ಇರುವುದು ಸಾಧ್ಯವೆ ಇಲ್ಲ.

-ಗ್ರಹದ ಆವಿಷ್ಕಾರವು ಸೂರ್ಯನ ಸಮೀಪವಿರುವ ಸೂಪರ್-ನೆಪ್ಚೂನ್ ಅಥವಾ ಉಪ-ಶನಿ ಗ್ರಹಗಳು ಹೇಗೆ ರೂಪುಗೊಳ್ಳುತ್ತವೆ ಎಂಬ ಕಾರ್ಯವಿಧಾನವನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತವೆ.

-ಗ್ರಹದ ದ್ರವ್ಯರಾಶಿ ಮತ್ತು ತ್ರಿಜ್ಯದ ಆಧಾರದ ಮೇಲೆ, ನಡೆಸಲಾಗುವ ಅವಲಂಬಿತ ಲೆಕ್ಕಾಚಾರಗಳು ಇಂತಹ ಗ್ರಹಗಳಲ್ಲಿ ಐಸ್, ಸಿಲಿಕೇಟ್ಗಳು, ಮತ್ತು ಕಬ್ಬಿಣದ ಅಂಶಗಳಂತಹ ಭಾರೀ ಪದಾರ್ಥಗಳು ಒಟ್ಟು ದ್ರವ್ಯರಾಶಿಯ 60-70% ರಷ್ಟು ಇರುತ್ತವೆ ಎಂದು ಸೂಚಿಸುತ್ತವೆ.

ತನ್ನ ಸ್ವಂತ ಗ್ರಹದ ಅನ್ವೇಷಣೆಯಿಂದಾಗಿ ಭಾರತವು ಅಂತರಿಕ್ಷದಲ್ಲಿ ಅಭಿವೃದ್ದಿ ಹೊಂದಿದ ದೇಶಗಳ ಸರಿ ಸಮನಾಗಿ ಹೆಜ್ಜೆ ಹಾಕುತ್ತಿದೆ ಎನ್ನುವುದು ಜಗಜ್ಜಾಹೀರಾಗಿದೆ. ನಮ್ಮ ದೇಶದ ವಿಜ್ಞಾನಿಗಳು ಯಾರಿಗೂ ಕಮ್ಮಿ ಇಲ್ಲ, ಅವರಿಗೆ ಬೆಂಬಲದ ಕೊರತೆ ಇತ್ತು ಅಷ್ಟೆ. ಆದರೆ ಈಗ ಮೋದಿ ಸರಕಾರ ಭಾರತೀಯ ವಿಜ್ಞಾನಿಗಳಿಗೆ ಸರ್ವ ಸಹಕಾರವನ್ನೂ ನೀಡಿ, ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದೆ. ಅಂತರಿಕ್ಷದಲ್ಲಿ ಬಾಹುಬಲಿಯಾಗಿ ಮೆರೆಯುತ್ತಿರುವ ಇಸ್ರೋ ಇನ್ನಷ್ಟು ಮತ್ತಷ್ಟು ಸಾಧನೆಗಳನ್ನು ಮಾಡಲಿ ಎನ್ನುವುದು ಭಾರತೀಯರ ಹಾರೆಕೆ..

-ಶಾರ್ವರಿ

Featured image for representation purpose only

Tags

Related Articles

Close