ಪ್ರಚಲಿತ

ಆಧ್ಯಾತ್ಮದ ತವರಾಗಿರುವ ಭಾರತದ ಸತ್ಪ್ರಜೆಗಳಾಗಿ ವೇದಾಂತ ಮತ್ತು ಭಾಷ್ಯಗಳ ಬಗ್ಗೆ ನಮಗೆಷ್ಟು ಗೊತ್ತು??

ನನ್ನ ದೇಶ ಭಾರತ

ಉತ್ತರದಲ್ಲಿ ಹಿಮಾಲಯ ಶ್ರೇಣಿಯನ್ನೂ,ದಕ್ಷಿಣದಲ್ಲಿ ಸಾಗರಗಳನ್ನೂ ಹೊಂದಿರುವ ಸಂಪನ್ನ ರಾಷ್ಟ್ರವೇ ಭಾರತ.ನಮ್ಮ ದೇಶವನ್ನು ಹಲವಾರು ಹೆಸರುಗಳಿಂದ ಅಂದರೆ,ಇಂಡಿಯಾ ಅಥವಾ ಹಿಂದುಸ್ಥಾನ ಎಂದೂ ಕರೆಯಲಾಗುತ್ತದೆ.ಸಾವಿರ ವರ್ಷಗಳ ಕಾಲ ಅನ್ಯರ ಆಡಳಿತಕ್ಕೆ ಒಂದು ರೀತಿಯ ದಾಸ್ಯಕ್ಕೆ ಒಳಪಟ್ಟ ನಮಗೆ ಇಂದಿಗೂ ಒಂದು ರೀತಿಯ ಕೀಳರಿಮೆಯಿದೆ.ನಮ್ಮ ಪೂರ್ವಜರೆಲ್ಲರೂ ಅನಾಗರೀಕರಾಗಿದ್ದರು,ಅವರಿಗೆ ಉಡುಗೆ ತೊಡುಗೆಯ ಬಗ್ಗೆ ಅರಿವಿರಲಿಲ್ಲ..ಕೇವಲ ಮೂಢನಂಬಿಕೆಗಳ ದಾಸರಾಗಿದ್ದರು ಮತ್ತು ಅತ್ಯಂತ ಬಡತನದಿಂದ ಕೂಡಿದ್ದು ಗುಡಿಸಿಲುಗಳಲ್ಲಿ ವಾಸವಾಗಿದ್ದರು ಕೊನೆಗೆ ನಮ್ಮನ್ನಾಳಲು ಬಂದ ಮೊಘಲರು ಮತ್ತು ಬ್ರಿಟೀಷರು ನಮ್ಮನ್ನು ಉದ್ಧರಿಸಿದರು ಎಂದು ನಾವು ಶಾಲೆಗೆ ಹೋಗುವ ವಯ್ಯಸ್ಸಿನಿಂದಲೇ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದೇವೆ..ಆದರೆ
ಅದು ನಿಜವಾದ ಸತ್ಯ ಹೌದೇ ಎಂಬ ವಿಶ್ಲೇಷಣೆಗೂ ನಾವು ಒಡ್ಡಿಕೊಳ್ಳುವುದಿಲ್ಲ..ಬದಲಾಗಿ ಕೂಲ್ ಅನ್ನಿಸಿಕೊಳ್ಳುವ ಹಂಬಲದಲ್ಲಿ ನಮ್ಮ ಸ್ವಾಭಿಮಾನವನ್ನೇ ಪಣಕ್ಕಿಟ್ಟು ನಗುತ್ತೇವೆ.ಹೌದು ನಮ್ಮ ಪೂರ್ವಜರಾದ ಋಷಿ ಮುನಿಗಳು ನಾರು ಮಡಿಯುಟ್ಟು ಅರಣ್ಯದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು.ಆದರೆ ಅದಕ್ಕೆ ಕಾರಣ ಬಡತನವೋ ಅಜ್ಞಾನವೋ ಅಲ್ಲ..ಭೂಮಿ ದುಂಡಾಗಿದೆ ಎನ್ನುವುದರಿಂದ ಪ್ರಾರಂಭಿಸಿ ಗುರುತ್ವಾಕರ್ಷಣೆ ಮತ್ತು ಗೃಹ ಉಪಗ್ರಹಗಳ ಬಗ್ಗೆಯೂ ನಮ್ಮ ಹಿರಿಯರಿಗೆ ಜ್ಞಾನವಿತ್ತು.ಗುರುಕುಲ ಮಾದರಿಯಲ್ಲಿ ಶ್ರವಣದಿಂದ ಶಿಕ್ಷಣ ಪಡೆಯುವ ಮಾದರಿಯಿತ್ತು..ಆದರೂ ಗುರುಗಳು ಗ್ರಂಥಗಳನ್ನು ರಚಿಸುತ್ತಿದ್ದರು..ಪ್ರತಿಯೊಂದು ಕೃತಿಯೂ ಹಸ್ತಪ್ರತಿಯಾದಕಾರಣ ಒಂದೊಂದು ಕೃತಿಯ ಬೆರಳೆಣಿಕೆಯ ಪ್ರತಿಗಳು ಲಭ್ಯವಿರುತ್ತಿತ್ತು.

ಲೋಭ ಮೋಹ ಮದ ಮತ್ಸರಗಳ ಹೊರತಾಗಿಯೂ ಜೀವನವಿತ್ತು ಎಂಬುದನ್ನು ನಮ್ಮ ಹಿರಿಯರು ಎಷ್ಟೋ ವರ್ಷಗಳಿಗೂ ಮೊದಲೇ ಅರಿತಿದ್ದರು.ಅರಿಷಡ್ವರ್ಗಗಳನ್ನು ದಾಟಿ ದೇವರಲ್ಲಿ ಲೀನವಾಗುವುದು ಅಂದರೆ ಮೋಕ್ಷ ಪ್ರಾಪ್ತಿಯೇ ಪರಮ ಸುಖ ಎಂಬುದನ್ನು ಅವರು ಅರಿತಿದ್ದರು.ಅದಕ್ಕಾಗಿಯೇ ಆಧ್ಯಾತ್ಮ,ಶಾಸ್ತ್ರ,ವೇದ ಉಪನಿಷತ್ತುಗಳ ಬಗೆಗೆ ಅನೇಕ ಗ್ರಂಥಗಳನ್ನೂ ರಚಿಸಿದ್ದಾರೆ.ಈ ಗ್ರಂಥಗಳಲ್ಲಿ ಜೀವನಕ್ರಮ ಜೀವನದ ಮುಖ್ಯ ಉದ್ದೇಶ,ದೇವರು,ದೇವರ ಅಸ್ತಿತ್ವ,ದೇವರನ್ನು ಒಲಿಸಿಕೊಳ್ಳುವ ಮಾರ್ಗಗಳು ಇತ್ಯಾದಿಗಳನ್ನು ವಿವರಿಸಿದ್ದಾರೆ.ನೀರಿನಲ್ಲೂ ನೆಲದಲ್ಲೋ ಪ್ರಾಣಿಯಲ್ಲೂ ಪಕ್ಷಿಯಲ್ಲೂ ಪ್ರಕೃತಿಯಲ್ಲೂ ದೇವರನ್ನು ಕಾಣುವ ದೇಶ ನಮ್ಮದು..ಆಧ್ಯಾತ್ಮಗಳ ತವರೂರು ಭಾರತ.ಭಾರತೀಯ ಗುರುಗಳಿಂದ ಆಧ್ಯಾತ್ಮ ದೀಕ್ಷೆಯನ್ನು ಪಡೆದು ಜೀವನದಲ್ಲಿ ಸಂತಸವನ್ನು ಆನಂದವನ್ನು ಪಡೆಯಲು ಇಂದು ಸಾವಿರಾರು ಜನರು ನನ್ನ ದೇಶಕ್ಕೆ ಆಗಮಿಸುತ್ತಾರೆ.ಹಿಂದೂ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿಯೇ ಅಂತಹದ್ದು ಯಾರೂ ಆಕರ್ಷಿತರಾಗಬಹುದು..ಹಲವು ಸಾವಿರ ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮ ಯಾರ ಮೇಲೂ ದಾಳಿ ನಡೆಸಲಿಲ್ಲ.ಕುತಂತ್ರಗಳಿಂದಲೂ,ಕತ್ತಿ ಹಿಡಿದು ಬೆದರಿಕೆಯಿಂದಲೂ ಮತಾಂತರ ನಡೆಸಲಿಲ್ಲ.ಅದರ ಬದಲಾಗಿ ಮಾನವ ಕುಲಕ್ಕೆ ಅಗತ್ಯವಿರುವ ಶಾಸ್ತ್ರಗಳನ್ನು ನೀಡಿದೆ.ಅಂತಹಾ ಕೊಡುಗೆಗಳಲ್ಲೇ ಒಂದು ವೇದಾಂತ ಶಾಸ್ತ್ರ.

ವೇದಾಂತ ಶಾಸ್ತ್ರವನ್ನು ಭಾರತೀಯ ಆಧ್ಯಾತ್ಮಶಾಸ್ತ್ರದ ಮುಕುಟಮಣಿ ಎಂದು ಕರೆಯಲಾಗುತ್ತದೆ.ಉಪನಿಷತ್ತುಗಳು ವೇದಾಂತದ ಮೂಲ.ಶ್ರುತಿಯ ಪರಮಸಿದ್ಧಾಂತವೆಂಬ ಅರ್ಥದಲ್ಲಿ ವೇದಾಂತ ಎಂಬ ಶಬ್ದದ ಪ್ರಯೋಗವನ್ನು ಪ್ರಥಮವಾಗಿ ಉಪನಿಷತ್ತಿನಲ್ಲೇ ನಡೆಸಲಾಗಿದೆ.ಉಪನಿಷತ್ತುಗಳಿಗೆ ವೈದಿಕ ರಹಸ್ಯಮಯ ಸಿದ್ದಾಂತಗಳನ್ನು ಪ್ರತಿಪಾದಿಸುವುದರಿಂದ ಅದಕ್ಕೆ ವೇದಾಂತ (ವೇದದ ಅಂತ ಸಿದ್ದಾಂತ)ಎಂಬ ಶಬ್ದದ ಪ್ರಯೋಗವು ನ್ಯಾಯಯುತವಾಗಿರುತ್ತದೆ.ಆದರೆ ಕಾಲಾಂತರದಲ್ಲಿ ಔಷನಿಷದ ಸಿದ್ಧಾಂತಗಳಲ್ಲಿ ಅಪಾತತಃ ಕಂಡುಬರುವ ವಿರೋಧಗಳನ್ನು ಪರಿಹಾರ ಮಾಡುವ ಹಾಗೂ ಏಕ ವಾಕ್ಯತೆಯನ್ನುಂಟುಮಾಡುವ ಅವಶ್ಯಕತೆಯೂ ಪ್ರತೀತವಾಯಿತು.ಇದನ್ನು ಪೂರ್ಣ ಮಾಡುವುದಕ್ಕಾಗಿ ಬಾದರಾಯಣ ವ್ಯಾಸನು ‘ಬ್ರಹ್ಮಸೂತ್ರ’ಗಳನ್ನು ರಚಿಸಿದನು. ೫೫೦ ಸೂತ್ರಗಳನ್ನು ಹೊಂದಿರುವ ಈ ಸಣ್ಣ ಗ್ರಂಥವು ಸಮಸ್ತ ವೇದಾಂತ ಸಿದ್ದಾಂತಗಳ ಆಕರಗ್ರಂಥವಾಗಿರುತ್ತದೆ.ನಂತರ ಬಂದ ಆಚಾರ್ಯರು,ಈ ಗ್ರಂಥಕ್ಕೆ ತಮ್ಮ ದೃಷ್ಟಿಯಿಂದ ವಿಸ್ತಾರವಾದ ವ್ಯಾಖ್ಯಾನಗಳನ್ನು ರಚಿಸಿ ವಿಪುಲವಾದ ಯಶಸ್ಸನ್ನು ಸಂಪಾದಿಸಿದರು ಹಾಗೂ ಧಾರ್ಮಿಕ ಮತಗಳ ಭವ್ಯ ಸಂಪ್ರದಾಯವನ್ನು ಸ್ಥಾಪಿಸಿದರು.ಈ ಸೂತ್ರಗಳ ಉದಯಕಾಲವು ಪ್ರಾಚೀನವಾದುದು.ಭಿಕ್ಷುಗಳು ಅಂದರೆ ಸನ್ಯಾಸಿಗಳಿಗೆ ಉಪಾದೇಯವಾದುದರಿಂದ,ಈ ಸೂತ್ರಗಳಿಗೆ “ ಭಿಕ್ಕುಸೂತ್ರ”ಗಳೆಂದೂ ಕರೆಯುತ್ತಾರೆ.ಪರಾಶರ್ಯ ( ಪರಾಶರ ಪುತ್ರ)ಭಿಕ್ಷುಸೂತ್ರಗಳೆಂದು ಪಾಣಿನಿಯು ಉಲ್ಲೇಖಿಸಿರುವುದು,ಪರಾಶರರ ಪುತ್ರನಾದ ಮಹರ್ಷಿ ಬಾದಲಾಯನ ವ್ಯಾಸನಿಂದ ರಚಿತವಾದ ಪ್ರಕೃತ ಬ್ರಹ್ಮಸೂತ್ರಗಳಿಗಿಂತ ಬೇರೆಯಾದುದೆಂದು ಕಂಡು ಬರುವುದಿಲ್ಲ.ಶ್ರೀಧರಸ್ವಾಮಿಯ ಸಮ್ಮತಿಯ ಪ್ರಕಾಶ್ರ ಗೀತೆಯೂ ಸಹ “ಬ್ರಹ್ಮಸೂತ್ರ ಪದೈಶ್ಚೈವ ಹೇತುಮಧ್ಬಿವ್ರಿನಿಶಿತೈಹಿ” ಎಂಬ ಪದ್ಯಮಶಾದಲ್ಲಿ ಬ್ರಹ್ಮಸೂತ್ರಗಳನ್ನೇ ನಿದೇಶಿಸುತ್ತದೆ.ಈ ವಿಧವಾಗಿ ಬ್ರಹ್ಮ ಸೂತ್ರಗಳ ರಚನಕಾಲವು ವಿಕ್ರಮಪೂರ್ವ ಆರನೆಯ ಶತಮಾನದ ನಂತರವಲ್ಲ.ತರ್ಕಪಾದದಲ್ಲಿ ಸರ್ವಾಸ್ತಿವಾದ ಮತ್ತು ವಿಜ್ಞಾನವಾದಗಳ ಖಂಡನೆಯೂ ಉಪಲಬ್ಧವಾದರೂ ಈ ಸಿದ್ದಾಂತಕ್ಕೆ ಹಾನಿಯುಂಟಾಗುವುದಿಲ್ಲ.ಏಕೆಂದರೆ ಭಾರತೀಯ ವಿಚಾರಧಾರೆಯ ಇತಿಹಾಸದಲ್ಲಿ ಈ ಮತಗಳು ಬುದ್ಧನಿಗಿಂತಲೂ ಅತ್ಯಂತ ಪ್ರಾಚೀನವಾದದ್ದು.ಅಸಂಗ ಮುಂತಾದವರು ನೂತನ ಗ್ರಂಥಗಳನ್ನು ರಚಿಸಿಇವುಗಳ ವ್ಯವಸ್ಥಾಪನೆಯನ್ನು ಮಾತ್ರ ಮಾಡಿದರು.

ಬ್ರಹ್ಮಸೂತ್ರದ ಭಾಷ್ಯಕಾರರಲ್ಲಿ ೧೦ ಭಾಷ್ಯಕಾರರು ಪ್ರಸಿದ್ಧರಾಗಿದ್ದಾರೆ

* ಶಂಕರಾಚಾರ್ಯ (ಕ್ರಿಸ್ತ ಶಕ ೭೭೮) ಶಾರೀರಿಕ ಭಾಷ್ಯ
*ಭಾಸ್ಕರಾಚಾರ್ಯ( ಕ್ರಿಸ್ತ ಶಕ ೧೦೦೦) ಭಾಸ್ಕರ ಭಾಷ್ಯ
* ರಾಮಾನುಜಾಚಾರ್ಯ(ಕ್ರಿಸ್ತಶಕ ೧೧೪೦) ಶ್ರೀ ಭಾಷ್ಯ
* ಮಧ್ವಾಚಾರ್ಯ ( ಕ್ರಿಸ್ತ ಶಕ ೧೨೩೮) ಪೂರ್ಣಪ್ರಜ್ಞ ಭಾಷ್ಯ
*ನಿಂಬಾರ್ಕಆಚಾರ್ಯ(ಕ್ರಿಸ್ತ ಶಕ ೧೨೫೦) ವೇದಾಂತ ಪಾರಿಜಾತ
* ಶ್ರೀಕಂಠ ಆಚಾರ್ಯ(ಕ್ರಿಸ್ತ ಶಕ ೧೨೭೦) ಶೈವ ಭಾಷ್ಯ
*ಶ್ರೀಪತಿ ಆಚಾರ್ಯ (ಕ್ರಿಸ್ತ ಶಕ ೧೪೦೦) ಶ್ರೀಕರ ಭಾಷ್ಯ
* ವಲ್ಲಭಾಚಾರ್ಯ (ಕ್ರಿಸ್ತ ಶಕ ೧೫೪೪) ಅಣುಭಾಷ್ಯ
*ವಿಜ್ಞಾನ ಭಿಕ್ಷು(ಕ್ರಿಸ್ತ ಶಕ ೧೬೦೦) ವಿಜ್ಞಾನಾಮೃತ
* ಬಲದೇವಾಚಾರ್ಯ (ಕ್ರಿಸ್ತ ಶಕ ೧೭೨೫) ಗೋವಿಂದಭಾಷ್ಯ

ಬ್ರಹ್ಮಸೂತ್ರ

ಬ್ರಹ್ಮಸೂತ್ರದಲ್ಲಿ ನಾಲ್ಕು ಅಧ್ಯಾಯಗಳೂ ಮತ್ತು ಪ್ರತಿಯೊಂದು ಅಧ್ಯಾಯದಲ್ಲೂ ನಾಲ್ಕು ಪಾದಗಳಿರುತ್ತವೆ.ಮೊದಲನೆಯ ಅಧ್ಯಾಯವು ಸಮನ್ವಯಾಧ್ಯಾಯ – ಇದರಲ್ಲಿ ಸಮಸ್ತವೇದಾಂತ ವಾಕ್ಯಗಳಿಗೆ ಸಾಕ್ಷಾತ್ ಅಥವಾ ಪರಂಪರಯಾ ಭಿನ್ನತೆ ಅದ್ವಿತೀಯ ಬ್ರಹ್ಮದಲ್ಲಿ ತಾತ್ಪರ್ಯವೆಂದು ತೋರಿಸಲಾಗಿದೆ.
ಎರಡನೆಯ ಅಧ್ಯಾಯದ ಹೆಸರು ಅವಿರೋಧಾಧ್ಯಯ- ಇದರಲ್ಲಿ ಸ್ಮೃತಿ,ತರ್ಕ ಇತ್ಯಾದಿಗಳಿಂದ ಸಂಭಾವಿತವಾದ ವಿರೋಧಗಳನ್ನು ಪರಿಹರಿಸಿ ಬ್ರಹ್ಮನಲ್ಲಿ ಅವಿರೋಧವನ್ನು ಪ್ರದರ್ಶಿಸಲಾಗಿದೆ.ಮೂರನೆಯ ಅಧ್ಯಾಯವು ಸಾಧಾನಾಧ್ಯಾಯ- ಇದರಲ್ಲಿ ವೇದಾಂತ ಸಮ್ಮತವಾದ ಸಾಧನಗಳನ್ನು ವಿಧಾನ ಮಾಡಲಾಗಿದೆ.ನಾಲ್ಕನೆಯ ಅಧ್ಯಾಯವು ಫಲಾಧ್ಯಾಯ-ಇದರಲ್ಲಿ ಸುಗುಣ,ನಿರ್ಗುಣ ವಿದ್ಯೆಗಳ ಫಲಗಳ ಸಾಂಗೋಪವಾದ ವಿವೇಚನೆಯಿರುತ್ತದೆ.ಆದರೆ ಬ್ರಹ್ಮಸೂತ್ರದ ಆಧ್ಯಾತ್ಮಿಕ ಸಿದ್ಧಾಂತಗಳು ಯಾವುವು ಎಂಬುದನ್ನು ವಿಶ್ಲೇಷಿಸುವುದು ಕಠಿಣವಾದ ವಿಚಾರ.ಸೂತ್ರಗಳು ಕಡಿಮೆ ಅಕ್ಷರಗಳಿಂದ ಕೂಡಿರುವುದರಿಂದ ಭಾಷ್ಯದ ಸಹಾಯದ ವಿನಹಾ ಅದರ ಅರ್ಥವನ್ನು ಪಡೆಯುವುದು ಬಹಳ ಕಷ್ಟದ ಕಾರ್ಯ ಹಾಗೂ ಸಾಂಪ್ರದಾಯಿಕ ಭಾಷ್ಯದಲ್ಲಿ ಅರ್ಥಯಿಸಿಕೊಳ್ಳಲು ಬಹಳ ಜಂಜಾಟವಿದೆ.

-Deepashree M

Tags

Related Articles

FOR DAILY ALERTS
Close