ಪ್ರಚಲಿತ

ಪಾಕಿಸ್ತಾನವನ್ನು ಧ್ವಂಸ ಮಾಡಲು ನಮ್ಮ ಸೈನಿಕರು ರೆಡಿ..! ಪಾಕ್‌ಗೆ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ ಮೋದಿ ಸರಕಾರ..!

ಭಾರತೀಯ ಸೇನೆ ಈವರೆಗೂ ಯಾವುದೇ ರಾಷ್ಟ್ರಕ್ಕೆ ತೊಂದರೆ ಕೊಟ್ಟ ಉದಾಹರಣೆಯೇ ಇಲ್ಲ. ಆದರೆ ಭಾರತಕ್ಕೆ ತೊಂದರೆಯಾದಾಗ ನಮ್ಮ ಸೇನೆ ಸುಮ್ಮನೆ ಕೂತ ಉದಾಹರಣೆಯೂ ಇಲ್ಲ. ಇಡೀ ಜಗತ್ತಿನಲ್ಲಿ ಎಲ್ಲಾ ರಾಷ್ಟ್ರದ ಸೈನಿಕರು ಒಂದು ತುಕಡಿಯಲ್ಲಿ ನಿಂತು ಮತ್ತೊಂದು ತುಕಡಿಯಲ್ಲಿ ಭಾರತೀಯ ಸೈನಿಕರು ನಿಂತರೆ ನಮ್ಮ ತೂಕವೇ ಹೆಚ್ಚಾಗುತ್ತದೆ. ಯಾಕೆಂದರೆ ಭಾರತೀಯ ಸೈನಿಕರ ದೇಶಪ್ರೇಮದ ಮುಂದೆ ಮತ್ಯಾವ ವಿಚಾರವೂ ಕಾಣುವುದಿಲ್ಲ. ಈ ಹಿಂದಿನ ಕಾಂಗ್ರೆಸ್ ಸರಕಾರದಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ಸವಲತ್ತು ಮತ್ತು ಸ್ವಾತಂತ್ರ್ಯ ನೀಡದೆ ಕೈಕಟ್ಟಿ ಹಾಕಿತ್ತು. ಕೇವಲ ಹೆಸರಿಗಷ್ಟೇ ಸೈನಿಕರ ಕೈಗೆ ಬಂದೂಕು ನೀಡಿ , ಅದನ್ನು ಬಳಸಲು ಬಿಡದೆ , ಸರಕಾರದ ಅನುಮತಿ ಪಡೆದು ಬಳಸುವಂತೆ ಮಾಡಿತ್ತು ಕಾಂಗ್ರೆಸ್. ಆದರೆ ಕಾಲ ಬದಲಾಗಿದೆ, ದೇಶವನ್ನಾಳುವ ನಾಯಕನೂ ಬದಲಾಗಿದ್ದಾರೆ. ಇಡೀ ಜಗತ್ತೇ ಮೆಚ್ಚಿದ ನಾಯಕ ಸದ್ಯ ಭಾರತವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅತೀ ವೇಗದ ಅಭಿವೃದ್ಧಿಯ ಜೊತೆಗೆ ರಕ್ಷಣಾ ವಲಯದಲ್ಲೂ ಯಾರೂ ಊಹಿಸದ ರೀತಿಯಲ್ಲಿ ಸುಭದ್ರವಾಗಿದೆ..!

ಭಾರತದ ತಂಟೆಗೆ ಬಂದರೆ ಅಟ್ಟಾಡಿಸಿ ಹೊಡೆಯುತ್ತೇವೆ..!

ಭಾರತವು ತಾನಾಗಿ ಯಾವುದೇ ದೇಶದ ವಿಚಾರಕ್ಕೂ ಹೋಗಿಲ್ಲ, ಆದರೆ ತಮ್ಮ ದೇಶದ ವಿಚಾರಕ್ಕೆ ಬಂದಾಗ ವಿರೋಧಿಗಳನ್ನು ಹೆಡೆಮುರಿಕಟ್ಟಿ ಕೂರಿಸುವ ಭಾರತೀಯ ಸೇನೆಗೆ ಮೋದಿ ಸರಕಾರ ಬಂದ ದಿನದಿಂದ ನೂರರಷ್ಟು ಬಲ ಬಂದಿತ್ತು. ಯಾಕೆಂದರೆ ದೇಶಕ್ಕೆ ಯಾವುದೇ ತೊಂದರೆಯಾದರೂ ಸುಮ್ಮನೆ ಕೂರದೆ , ವಿರೋಧಿಗಳನ್ನು ಹೊಡೆದುರುಳಿಸಲು ಸಂಪೂರ್ಣ ಅನುಮತಿ ನೀಡಿದ ಮೋದಿ ಸರಕಾರ ಯಾವುದೇ ಸಂದರ್ಭದಲ್ಲೂ ದೇಶಕ್ಕೆ ಕುತ್ತು ಬಂದರೆ ಎದುರಾಳಿಗಳು ಯಾರೇ ಆಗಿದ್ದರೂ ನುಗ್ಗಿ ಹೊಡೆಯುವಂತೆ ಸೂಚನೆ ನೀಡಿದ್ದರು. ಆದ್ದರಿಂದ ಸಂಪೂರ್ಣ ಸ್ವತಂತ್ರಗೊಂಡ ಭಾರತೀಯ ಸೇನೆ, ಇದೀಗ ಯಾವುದೇ ಕಾರಣಕ್ಕೂ ಹಿಂಜರಿಯುವಂತಿಲ್ಲ. ನಮ್ಮ ದೇಶಕ್ಕೆ ತೊಂದರೆಯಾದರೆ ವಿರೋಧಿ ರಾಷ್ಟ್ರದ ಒಳ ನುಗ್ಗಿ ಧ್ವಂಸ ಮಾಡಲು ಗೊತ್ತು ಎಂಬುದು ಕಳೆದ ಬಾರಿ ನಡೆದ ‘ಸರ್ಜಿಕಲ್ ಸ್ಟ್ರೈಕ್’ನಿಂದ ಸಾಬೀತಾಗಿತ್ತು. ಭಾರತೀಯ ಸೈನಿಕರು ನಡೆಸಿದ ಈ ದಾಳಿಯಿಂದಾಗಿ ಪಾಕಿಸ್ತಾನ ಅಕ್ಷರಶಃ ನಡುಗಿ ಹೋಗಿದ್ದಾರೆ, ಇತ್ತ ಇಡೀ ಜಗತ್ತು ಭಾರತೀಯ ಸೇನೆಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಇದೀಗ ಮತ್ತೊಮ್ಮೆ ಪಾಕಿಸ್ತಾನಕ್ಕೆ ನೇರ ಎಚ್ಚರಿಕೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು, ನಮ್ಮ ಸೈನಿಕರ ವಿಚಾರದಲ್ಲಿ ಯಾವುದೇ ದೇಶ ಆಟವಾಡಿದ್ದೇ ಆದಲ್ಲಿ ಅಂತವರನ್ನು ಹೊಡೆದು ಹಾಕಲು ನಮ್ಮ ಸೈನಿಕರು ತಯಾರಾಗಿದ್ದಾರೆ ಎಂದಿದ್ದಾರೆ. ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ, ಭಾರತೀಯ ಸೈನಿಕರತ್ತ ಗುಂಡಿನ ದಾಳಿ ನಡೆಸುತ್ತಿದ್ದು, ಇತ್ತೀಚೆಗೆ ಕೆಲವು ಸೈನಿಕರು ಹುತಾತ್ಮರಾಗಿದ್ದರು. ಆದ್ದರಿಂದ ಇದೀಗ ಮತ್ತೆ ಗುಡುಗಿದ ರಕ್ಷಣಾ ಸಚಿವೆ, ಪಾಕಿಸ್ತಾನಿ ಸೈನಿಕರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ‌. ನಮ್ಮ ಸೈನಿಕರಿಗೆ ಒಂದು ಏಟು ಬಿದ್ದರೆ ಪಾಕಿಸ್ತಾನಿ ಸೈನಿಕರ ತಲೆ ಉರುಳಿಸುತ್ತೇವೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.!

ರಾಹುಲ್ ವಿರುದ್ಧವೂ ವಾಗ್ದಾಳಿ..!

ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಹೋದಲ್ಲೆಲ್ಲಾ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ರಾಹುಲ್ ಬಳಿ ಯಾವುದೇ ದಾಖಲೆಗಳಿಲ್ಲ, ಕೇವಲ ಮೋದಿ ಸರಕಾರವನ್ನು ದೂರುವುದನ್ನೇ ಹವ್ಯಾಸ ಮಾಡಿಕೊಂಡು ಬಂದಿರುವುದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಂ ಹೇಳಿದರು. ರಾಹುಲ್ ಗಾಂಧಿ ಕೇವಲ ತಮ್ಮ ಭಾಷಣ ಸಂಪೂರ್ಣಗೊಳಿಸಲು ಇಲ್ಲಸಲ್ಲದ ಆರೋಪ ಮಾಡುತ್ತಾರೆ, ಆದರೆ ಈ ಬಗ್ಗೆ ಯಾವುದೇ ದಾಖಲೆಗಳು ರಾಹುಲ್ ಬಳಿ ಇಲ್ಲ ಎಂದು ಲೇವಡಿ ಮಾಡಿದ ನಿರ್ಮಲಾ ಸೀತಾರಾಂ , ದೇಶದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು..!

ಆದ್ದರಿಂದ ಗಡಿ ಭಾಗದಲ್ಲಿ ಪದೇ ಪದೇ ಉಪಟಳ ನೀಡುತ್ತಿರುವ ಪಾಕಿಸ್ತಾನಕ್ಕೆ ನೇರವಾಗಿಯೇ ಎಚ್ಚರಿಕೆ ನೀಡಿದ ನಮ್ಮ ಸಚಿವರು, ಮತ್ತೊಮ್ಮೆ ಭಾರತೀಯ ಸೈನಿಕರಿಗೆ ಮುಲಾಜಿಲ್ಲದೆ ವಿರೋಧಿಗಳನ್ನು ಹೊಡೆದುರುಳಿಸಲು ಸೂಚನೆ ನೀಡಿದರು..!

–ಸಾರ್ಥಕ್

Tags

Related Articles

Close