ಪ್ರಚಲಿತ

ಮುಸಲ್ಮಾನರು ಪಾಕ್‌ಗಿಂತ ಭಾರತದಲ್ಲೇ ಉತ್ತಮ ಜೀವನ ನಡೆಸುತ್ತಿದ್ದಾರೆ..

ಮುಸಲ್ಮಾನರ ಜನಸಂಖ್ಯೆ ಹೆಚ್ಚಿರುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮುಸಲ್ಮಾನರಿಗೆ ಸಂಬಂಧಿಸಿದ ಹಾಗೆ ಭಾರತವನ್ನು ದೂಷಣೆ ಮಾಡುವವರಿಗೆ, ಇಲ್ಲಿನ ವಾಸ್ತವ ಸಂಗತಿಗಳ ಬಗ್ಗೆ ಯಾವುದೇ ಅರಿವಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಭಾರತ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಏರುತ್ತಲೇ ಇದೆ. ೧೯೪೭ ರಲ್ಲಿ ಹುಟ್ಟಿಕೊಂಡ ಮುಸ್ಲಿಂ ರಾಷ್ಟ್ರ ಪಾಕಿಸ್ತಾನಕ್ಕಿಂತ, ಭಾರತದಲ್ಲಿಯೇ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ. ಆದರೆ ಕೆಲ ಪಾಶ್ಚಿಮಾತ್ಯ ದೇಶಗಳಿಗೆ ಭಾರತದಲ್ಲಿ ಮುಸಲ್ಮಾನರ ಜೀವನಕ್ಕೆ ಸಂಬಂಧಿಸಿದ ಹಾಗೆ ನಕಾರಾತ್ಮಕ ಭಾವನೆ ಇದೆ. ಆದರೆ ವಾಸ್ತವದಲ್ಲಿ ಭಾರತದಲ್ಲಿ ಮುಸಲ್ಮಾನರು ಹೆಚ್ಚು ಆರಾಮದಾಯಕ ಬದುಕು ನಡೆಸುತ್ತಿದ್ದಾರೆ. ಭಾರತದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿತ್ತು ಎಂದಾದರೆ ಅವರ ಜನಸಂಖ್ಯೆ ಇಲ್ಲಿ ಹೆಚ್ಚಾಗಲು ಸಾಧ್ಯವಿತ್ತೇ ಎಂಬುದಾಗಿ ನಿರ್ಮಲಾ ಪ್ರಶ್ನೆ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಮುಸಲ್ಮಾನರಲ್ಲೇ ಅಲ್ಪಸಂಖ್ಯಾತರಾದವರ ಮೇಲೆ ಬಹುಸಂಖ್ಯಾತ ವರ್ಗದ ಮುಸಲ್ಮಾನರಿಂದ ದೌರ್ಜನ್ಯ ನಡೆಯುತ್ತಿದೆ. ಆದರೆ ಭಾರತದಲ್ಲಿರುವ ಮುಸಲ್ಮಾನರು ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಮುಸ್ಲಿಂ ರಾಷ್ಟ್ರ ಎಂಬುದಾಗಿಯೇ ಘೋಷಿಸಿಕೊಂಡ ಪಾಕಿಸ್ತಾನದಲ್ಲಿ ಕೆಲವೊಂದು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಗಳು ನಶಿಸಿ ಹೋಗಿವೆ. ಭಾರತದಲ್ಲಿ ಇಂತಹ ಅವಸ್ಥೆ ಇಲ್ಲ. ಆದರೂ ಭಾರತದಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಂತಹ ಸುಳ್ಳು ಕಲ್ಪನೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತುವವರು ಭಾರತಕ್ಕೆ ಬಂದು, ಇಲ್ಲಿನ ವಾಸ್ತವಿಕ ಸಂಗತಿಗಳನ್ನು ಅರಿತುಕೊಂಡು ಮತ್ತೆ ಮಾತನಾಡಲಿ ಎಂದು ಅವರು ತಿಳಿಸಿದ್ದಾರೆ.

Tags

Related Articles

Close