ಪ್ರಚಲಿತ

ಭಾರತದ ಗಡಿ ರಕ್ಷಣೆಯ ದೃಷ್ಟಿಯಿಂದ ಆಯಕಟ್ಟಿನ ಜಾಗ ಸಿಕ್ಕಿಂ ಅನ್ನು ಎಲ್ಲಾ-ಹವಾಮಾನಗಳಲ್ಲೂ ದೇಶದ ಜೊತೆ ಬೆಸೆಯಲು ಹೊಸ ಹೆದ್ದಾರಿ ನಿರ್ಮಾಣಕ್ಕೆ ಅಸ್ತು ಎಂದ ಮೋದಿ ಸರಕಾರ

ಹಿಮಾಲಯದ ರಾಜ್ಯ ಸಿಕ್ಕಿಂ ಅನ್ನು ಎಲ್ಲಾ ಹವಾಮಾನಗಳಲ್ಲಿಯೂ ದೇಶದ ಜೊತೆಗೆ ಸಂಪರ್ಕಿಸುವ ಹೆದ್ದಾರಿಯನ್ನು ನಿರ್ಮಿಸಲು ಭಾರತ ಸರಕಾರ ಸಿದ್ದವಾಗಿದೆ. ಭಾರತದ ರಣತಂತ್ರದ ದೃಷ್ಟಿಯಿಂದ ಈ ಭಾಗ ಅತ್ಯಂತ ಮಹತ್ವಪೂರ್ಣವಾಗಿದೆ. ಸಿಕ್ಕಿಂ ಸರಹದ್ದಿನಲ್ಲಿ ಚೀನಾ ಪ್ರತಿನಿತ್ಯ ಕ್ಯಾತೆ ತೆಗೆಯುತ್ತಿರುತ್ತದೆ. ಕಳೆದ ಬಾರಿಯ ಡೋಕ್ಲಾಮ್ ವಿವಾದದ ನಂತರ ಸಿಕ್ಕಿಂ ಅನ್ನು ಅತಿ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಿರುವ ಭಾರತ ಅಗತ್ಯ ಸಂಧರ್ಭದಲ್ಲಿ ಚೀನಾವನ್ನು ಮಣಿಸಲು ಎಲ್ಲಾ ಹವಾಮಾನಗಳಲ್ಲಿಯೂ ಸಾರಿಗೆಗೆ ಅನುಕೂಲವಾಗುವಂತಹ ಹೆದ್ದಾರಿ ನಿರ್ಮಿಸುತ್ತಿದೆ. ಈಗಿರುವ ರಾಷ್ಟ್ರೀಯ ಹೆದ್ದಾರಿ 10, ಸಿಕ್ಕಿಂ ಅನ್ನು ಭಾರತದ ಜೊತೆಗೆ ಬೆಸೆಯುತ್ತದೆ. ಆದರೆ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತದಿಂದಾಗಿ ಈ ಮಾರ್ಗವು ಹಲವು ದಿನಗಳವರೆಗೆ ಸಾರಿಗೆಗೆ ಲಭ್ಯವಾಗಿರುವುದಿಲ್ಲ.

ದೇಶದ ರಕ್ಷಣೆಯ ವಿಷಯದಲ್ಲಿ ಮೋದಿ ಯಾವತ್ತಿಗೂ ನಿರ್ಲಕ್ಷ್ಯ ವಹಿಸುವುದಿಲ್ಲ. ಆದ್ದರಿಂದಲೇ ಯುದ್ದದ್ದ ದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣ ರಾಜ್ಯವಾದ ಸಿಕ್ಕಿಂ ಸರ್ವಕಾಲದಲ್ಲೂ ದೆಹಲಿಯ ಜೊತೆ ಸಂಪರ್ಕದಲ್ಲಿರುವಂತೆ, ಮೋದಿ ಸರಕಾರ ಹೊಸ ಹೆದ್ದಾರಿಯೊಂದನ್ನು ನಿರ್ಮಾಣ ಮಾಡಲಿದೆ. 2015 ರಲ್ಲಿ ಕೇಂದ್ರದಿಂದ ಅನುಮೋದಿಸಲ್ಪಟ್ಟ 250 ಕಿಲೋಮೀಟರ್ ಪ್ರಸ್ತಾವಿತ ಹೆದ್ದಾರಿ ಸಿಕ್ಕಿಂ-ಭೂತಾನ್-ಟಿಬೆಟ್ ತ್ರಿಕೋನದಲ್ಲಿ ಭಾರತದ ಪ್ರಾಬಲ್ಯವನ್ನು ಹೆಚ್ಚಿಸಲಿದೆ. 2017 ರಲ್ಲಿ ಡೋಕ್ಲಾಮಿನಲ್ಲಿ ಭಾರತೀಯ ಮತ್ತು ಚೀನೀ ಸೈನ್ಯದ ನಡುವೆ ನಡೆದ ಎಪ್ಪತ್ತು ದಿನಗಳ ತಾಕಲಾಟದ ಬಳಿಕ ಸಿಕ್ಕಿಂ ರಾಜ್ಯ ಭಾರತಕ್ಕೆ ಎಷ್ಟು ಮಹತ್ವಪೂರ್ಣವಾಗಿದೆ ಎನ್ನುವುದು ತಿಳಿದಿದೆ. ಭದ್ರತಾ ಉದ್ದೇಶಗಳಿಗಾಗಿ ಗುಡ್ಡಗಾಡು ಪ್ರದೇಶದಲ್ಲಿ ಪರ್ಯಾಯ ಹೆದ್ದಾರಿ ಅತ್ಯಗತ್ಯ. ಮಳೆಗಾಲದಲ್ಲಿ NH10ರ ಉದ್ದಕ್ಕೂ ಹಲವಾರು ಭೂಕುಸಿತಗಳಾಗುತ್ತವೆ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸುತ್ತವೆ. ಪರ್ಯಾಯ ಹೆದ್ದಾರಿ ಸಿಕ್ಕಿಂ ನಿವಾಸಿಗಳ ದೀರ್ಘಾವಧಿಯ ಬೇಡಿಕೆಯಾಗಿತ್ತು ಎಂದು ರಾಜ್ಯದ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

NHIDCL ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವರ್ಷಾಂತ್ಯದೊಳಗೆ ಹೆದ್ದಾರಿ ನಿರ್ಮಾಣ ಕೆಲಸ ಶುರು ಮಾಡಲಿದೆ. ಹೊಸ ಹೆದ್ದಾರಿ ಬಾಗ್ರಕೋಟೆ ಬಳಿ NH31C ನಿಂದ ಹುಟ್ಟಿಕೊಳ್ಳುತ್ತದೆ ಮತ್ತು ಗ್ಯಾಂಗ್ಟಾಕ್ ನಲ್ಲಿ ಕೊನೆಗೊಳ್ಳಲಿದೆ. ಸಿಲಿಗುರಿಯಲ್ಲಿರುವ “ಚಿಕನ್ಸ್ ನೆಕ್ ಕಾರಿಡಾರ್” ಸದಾ ಕಾಲ ಚೀನೀ ಕ್ಷಿಪಣಿಗಳ ವ್ಯಾಪ್ತಿಯಲ್ಲಿರುತ್ತದೆ. ತುರ್ತು ಸಂಧರ್ಭದಲ್ಲಿ ಭಾರತದಿಂದ ರಕ್ಷಣಾ ಸಾಮಾಗ್ರಿಗಳನ್ನು ಸಾಗಿಸಲು ಈ ಕಾರಿಡಾರ್ ಅತ್ಯಂತ ಪ್ರಾಮುಖ್ಯವಾಗಿದೆ. ಇಂತಹ ಸಂಧರ್ಭಗಳಲ್ಲಿ ಭೂಕುಸಿತದಿಂದಾಗಿ ಹೆದ್ದಾರಿ ಸಂಚಾರ ಅಸ್ತ ವ್ಯಸ್ತವಾದರೆ ಚೀನಾವನ್ನು ಮಣಿಸಲು ಹರಸಾಹಸ ಪಡಬೇಕಾಗುತ್ತದೆ. ಶತ್ರುಗಳಿಗಿಂತ ಎರಡು ಹೆಜ್ಜೆ ಮುಂದೆಯೆ ಯೋಚಿಸುವ ಮೋದಿ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಿದ್ದಾರೆ. ಅದರ ಪರಿಣಾಮವೆ ಈ ಹೊಸ ಹೆದ್ದಾರಿ. ದೇಶದ ರಕ್ಷಣೆಗಾಗಿ ಇಷ್ಟು ಕ್ಷಿಪ್ರಗತಿಯಲ್ಲಿ ನಿರ್ಧಾರ ತೆಗೆದುಕೊಂಡಿರುವುದು ಸಮರ್ಥ ನಾಯಕತ್ವದ ಲಕ್ಷಣ.

ದೇಶ ಮೋದಿಯವರ ಬಲಿಷ್ಟ ಬಾಹುಗಳಲ್ಲಿ ಸುರಕ್ಷಿತವಾಗಿದೆ ಎನ್ನುವುದು ದೇಶಪ್ರೇಮಿಗಳಿಗೆ ಸಂತೋಷದ ವಿಚಾರ. ದೇಶದ ಗಡಿ ಭಾಗಗಳು ಸದಾ ಸುರಕ್ಷಿತವಾಗಿರಬೇಕಾದರೆ ಮೋದಿಯವರೆ ನಾಯಕರಾಗಿ ಮುಂದುವರಿಯಬೇಕು. ನಮಗಾಗಿ ಅಲ್ಲದಿದ್ದರೂ, ದೇಶಕ್ಕಾಗಿಯಾದರೂ ಮೋದಿಯನ್ನು ಪುನಃ ಪುನಃ ಆರಿಸಿ ಕಳುಹಿಸಬೇಕು.

-ಶಾರ್ವರಿ

Tags

Related Articles

Close