ಪ್ರಚಲಿತ

ಇರಾನಿನ ಕಚ್ಚಾ ತೈಲದ ಬದಲಿಗೆ ಭಾರತದ ಅಕ್ಕಿ!! ಒಂದೇಟಿಗೆ ನಾಲ್ಕು ಹಕ್ಕಿ ಹೊಡೆದು ವಿದೇಶಾಂಗ ನೀತಿಯ ಚಾಣಾಕ್ಯರನ್ನೆಲ್ಲ ದಂಗುಬಡಿಸಿದರಲ್ಲ ಚಾಯವಾಲ ಮೋದಿ!

ನಾಲ್ಕು ವರ್ಷಗಳಲ್ಲಿ ಯಕಶ್ಚಿತ್ ಚಹಾ ಮಾರುವ ವ್ಯಕ್ತಿಗೆ ಸಾಧ್ಯವಾಗಿದ್ದು ಹತ್ತು ವರ್ಷಗಳಲ್ಲಿ ಆಕ್ಸಫರ್ಡ್ ಅರ್ಥಶಾಸ್ತ್ರಿಗೆ ಸಾಧ್ಯವಾಗಲಿಲ್ಲವಲ್ಲ! ವ್ಯಕ್ತಿ ಏನು ಕಲಿಯುತ್ತಾನೆ ಮತ್ತು ಏಷ್ಟು ಕಲಿಯುತ್ತಾನೆ ಎನ್ನುವುದಕ್ಕಿಂತ ಕಲಿತದ್ದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಜೀವನದಲ್ಲಿ ಕಲಿತ ಡಿಗ್ರಿಗಳು ಉಪಯೋಗಕ್ಕೆ ಬರದಿದ್ದರೂ ಸಾಮಾನ್ಯ ಜ್ಞಾನ ಖಂಡಿತಾ ಉಪಯೋಗಕ್ಕೆ ಬರುತ್ತದೆ ಎನ್ನುವುದನ್ನು ಮೋದಿ ಅವರನ್ನು ನೋಡಿ ಕಲಿಯಬೇಕು. ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯಲು ಹಾರ್ವಡ್-ಆಕ್ಸಫರ್ಡ್ ಡಿಗ್ರಿಗಳು ಬೇಕಿಲ್ಲ, ದೇಶಪ್ರೇಮ ಮತ್ತು ನೀಯತ್ತಿದ್ದರೆ ಸಾಕು.

ಒಂದೇ ಏಟಿಗೆ ನಾಲ್ಕು ಹಕ್ಕಿ ಹೊಡೆಯುವ ಮೋದಿಯ ವಿದೇಶಾಂಗ ನೀತಿ

ಈ ಗುಜರಾತಿಗಳು ಭಾರೀ ವ್ಯವಹಾರ ಚತುರರು. ವ್ಯಾಪಾರದಲ್ಲಿ ಚೌಕಾಶಿ ಮಾಡುವುದು ಗುಜರಾತಿಗಳಿಗೆ ರಕ್ತಗತವಾಗಿ ಬಂದಿರುತ್ತದೆ. ಚಿಕ್ಕಂದಿನಲ್ಲೆ ಅವರ ತಲೆಯಲ್ಲಿ ವ್ಯಾಪಾರ ವಹಿವಾಟೆ ತುಂಬಿರುವುದರಿಂದ ಒಂದು ರೂಪಾಯಿಗೆ ಹತ್ತು ರೂಪಾಯಿಯ ಸ್ವತ್ತು ಖರೀದಿಸುವುದು ಹೇಗೆಂದು ಅವರಿಗೆ ತಿಳಿದಿರುತ್ತದೆ! ಮೋದಿ ಕೂಡಾ ಗುಜರಾತಿಯಲ್ಲವೆ, ಮತ್ತೆ ಚೌಕಾಶಿ ಮಾಡದೆ ಇರುತ್ತಾರೆಯೆ? ಅತ್ತ ಇದ್ದ ಬದ್ದ ಬುದ್ದಿ ಉಪಯೋಗಿಸಿ ಚೌಕಾಶಿ ಮಾಡಿ ರಾಫ಼ೆಲ್ ಯುದ್ದ ವಿಮಾನಗಳಲ್ಲಿ ಭಾರತಕ್ಕೆ ಬೇಕಾಗುವಂತ ವ್ಯವಹಾರ ಕುದುರಿಸಿಕೊಂಡರು.

ಇತ್ತ ಅಮೇರಿಕಾದ ಕೆಂಗಣ್ಣಿನ ನಡುವೆಯೂ ಇರಾನಿನ ಮತ್ತು ರಷ್ಯಾದ ಜೊತೆಯೂ ಸಂಬಂಧ ಬೆಳೆಸಿಕೊಂಡರು. ಅಮೇರಿಕಾ ಪರಿ ಪರಿಯಾಗಿ ಧಮಕಿ ಹಾಕಿದರೂ ಮೋದಿ ದೊಡ್ಡಣನ ಮಾತಿಗೆ ಸೊಪ್ಪೆ ಹಾಕಲಿಲ್ಲ. ಇರಾನಿನ ಜೊತೆ ಸಂಬಂಧ ಇಟ್ಟುಕೊಂಡ ದೇಶ ಗಂಭೀರ ಪರಿಣಾಮ ಎದುರಿಸಬೇಕೆಂದ ಅಮೇರಿಕಾದ ನಡು ಮುರಿಯಲು ಮೋದಿ ಕಂಡುಕೊಂಡ ಉಪಾಯ ಏನು ಗೊತ್ತೆ?

ಇರಾನಿನ ಜೊತೆ ತನ್ನ ತೈಲ ಆಮದಿನ ಬದಲಿಗೆ ಇರಾನಿಗೆ ಅಕ್ಕಿ ರಫ್ತು ಮಾಡುವುದು. ಹೀಗೆ ವಸ್ತುವಿನ ಬದಲಿಗೆ ವಸ್ತು ನೀತಿಯಿಂದ ಇರಾನಿಗೆ ಡಾಲರ್ ಲೆಕ್ಕದಲ್ಲಿ ಹಣ ಕೊಡುವುದು ತಪ್ಪುತ್ತದೆ. ಡಾಲರ್ ಕೊಡುವುದು ತಪ್ಪಿದಾಗ ಭಾರತದ ರುಪಾಯಿ ಸ್ಥಿರತೆಯನ್ನು ಪಡೆಯುತ್ತದೆ. ಅಮೇರಿಕಾ ಡಾಲರನಲ್ಲಿ ನಡೆಯುವ ವಹಿವಾಟುಗಳಿಗೆ ನಿರ್ಬಂಧ ಹೇರಬಹುದೆ ಹೊರತು ವಸ್ತುಗಳ ಮೇಲೆ ನಡೆಯುವ ವ್ಯಾಪಾರಕ್ಕೆ ನಿರ್ಬಂಧ ಹೇರುವಂತಿಲ್ಲವಲ್ಲ! ವಾಹ್ ಮೋದಿ ಜೀ ವಾಹ್ ಒಂದು ಏಟು ಎರಡು ಹಕ್ಕಿ. ಭಾರತದ ಒಟ್ಟು 16% ಕಚ್ಚಾ ತೈಲ ಇರಾನ್ ದೇಶವೊಂದರಿಂದಲೆ ಪೂರೈಕೆಯಾಗುತ್ತದೆ. ಇರಾನಿಗೆ ಅಕ್ಕಿಯ ಅವಶ್ಯಕತೆ ಇದೆ, ನಮಗೆ ತೈಲದ ಅವಶ್ಯಕತೆ ಇದೆ. ತೈಲದ ಬದಲಿಗೆ ಅಕ್ಕಿ ಕೊಟ್ಟರೆ ಹಣದ ರೂಪದಲ್ಲಿ ಪಾವತಿಯಾಗುವ ದುಡ್ಡು ಉಳಿಯುತ್ತದೆ.

ಭಾರತ ಮತ್ತು ಸೋವಿಯತ್ ರಷ್ಯಾ ದೇಶಗಳು ಈ ಮೊದಲೆ ವಸ್ತುವಿನ ಬದಲಿಗೆ ವಸ್ತು ಒಪ್ಪಂದಕ್ಕೆ ಒಳಪಟ್ಟಿವೆ. ಇದೆ ತೆರನಾದ ಒಪ್ಪಂದ ಇರಾನ್ ಜೊತೆಗೂ ಇದೆ. ಈ ವರ್ಷದ ನವೆಂಬರ್ 4 ನೇ ತಾರೀಖಿನಿಂದ ಇರಾನಿನ ಮೇಲಿನ ಆರ್ಥಿಕ ನಿರ್ಬಂಧ ಅಸ್ತಿತ್ವಕ್ಕೆ ಬರಲಿದೆ. ಹಾಗಾಗಿ ನವೆಂಬರ್ ನಿಂದ ಇರಾನಿನ ಕಚ್ಚಾ ತೈಲದ ಬದಲಿಗೆ ಭಾರತ ತನ್ನ ಅಕ್ಕಿ ಕಳುಹಿಸಿ ಕೊಡಲಿದೆ. ಇದೊಂಥರಾ ನಮ್ಮ ಮನೆಯಲ್ಲಿರುವ ಟೊಮೆಟೋ ಕೊಟ್ಟು ಪಕ್ಕದ ಮನೆಯವರಿಂದ ನೀರುಳ್ಳಿ ತೆಗೆದುಕೊಂಡಂತೆ. ನಮಗೆ ನೀರುಳ್ಳಿ ಅಗತ್ಯ ಇದೆ, ಅವರಿಗೆ ಟೊಮೆಟೋ ಅಗತ್ಯ ಇದೆ. ಅವರು ನೀರುಳ್ಳಿ ಕೊಟ್ಟರೆ ನಾವು ನಮ್ಮಲ್ಲಿ ಹೆಚ್ಚಿರುವ ಟೊಮೇಟೋ ಕೊಡುವುದು. ಇದನ್ನು ಬಾರ್ಟರ್ ಸಿಸ್ಟಮ್ ಎನ್ನುತ್ತಾರೆ.

ಹಿಂದಿನ ಕಾಲದಲ್ಲಿ ಈ ವಸ್ತು ವಿನಿಮಯ ಪದ್ದತಿ ಅಸ್ತಿತ್ವದಲ್ಲಿತ್ತು. ಈಗಲೂ ವಿಶ್ವದ ಹಲವಾರು ದೇಶಗಳು ಆರ್ಥಿಕ ನಿರ್ಬಂಧಗಳಿಂದ ಪಾರಾಗಲು ಈ ಪದ್ದತಿಯನ್ನು ಅನುಸರಿಸಿ ದೊಡ್ಡಣ್ಣನಿಗೆ ಮಣ್ಣು ಮುಕ್ಕಿಸುತ್ತಿವೆ. ಭಾರತ ಸರಕಾರ ತನ್ನ ಹೆಚ್ಚುವರಿ ಅಕ್ಕಿಯನ್ನು ಇರಾನಿಗೆ ನೀಡುವುದರಿಂದ ಭಾರತದಲ್ಲಿ ಅಕ್ಕಿ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ. ದೇಶದ ಅಕ್ಕಿ ಪೂರೈಕೆಯನ್ನು ಸರಿದೂಗಿಸಲು ಮೋದಿ ಸರಕಾರ ಮತ್ತು ತೈಲ ಕಂಪನಿಗಳು ದೇಶದ ರೈತರು ಹೆಚ್ಚು ಭತ್ತ ಬೆಳೆಯಲು ಪ್ರೋತ್ಸಾಹ ನೀಡ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಮೋದಿ ಸರಕಾರ ಈಗಾಗಲೆ ಕಾರ್ಯಪ್ರವೃತ್ತವಾಗಿದೆ. ನಿರುದ್ಯೋಗಿ ಯುವಕರು ಕೃಷಿ ಕಡೆ ಹೆಚ್ಚಿನ ಗಮನ ಕೊಟ್ಟರೆ ಭಾರತದಲ್ಲಿ ಭತ್ತದ ಫಸಲು ಹೆಚ್ಚಾಗಿ ನಿರುದ್ಯೋಗ ಸಮಸ್ಯೆಯ ಜೊತೆಗೆ ಡಾಲರ್ ಎದುರು ಕುಸಿಯುತ್ತಿರುವ ರುಪಾಯಿ ಸಮಸ್ಯೆಗೂ ಪರಿಹಾರ ದೊರಕಬಹುದು.

ಅತ್ತ ಇರಾನಿನ ಜೊತೆ ಸಂಬಂಧ ಸರಿದೂಗಿಸಿದರೆ, ಇತ್ತ ರಷ್ಯಾದ ಜೊತೆಯೂ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿಯೆ ಬಿಟ್ಟರು ಮೋದಿ. ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡರೂ ಅಮೇರಿಕಾ ಕಮಕ್ ಕಿಮಕ್ ಎನ್ನಲಿಲ್ಲ ಬದಲಿಗೆ ಭಾರತದ ಒಪ್ಪಂದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದಿತು. ವಾಸ್ತವವಾಗಿ ಅಮೇರಿಕಾ ದೇಶ ಭಾರತದ ಅತಿ ದೊಡ್ಡ ರಕ್ಷಣಾ ಪಾಲುದಾರ. ಮುಂಬರುವ ದಿನಗಳಲ್ಲಿ ಕನಿಷ್ಟವೆಂದರೂ $ 4.7 ಬಿಲಿಯನ್ ಡಾಲರ್ಗಳ C17 ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ಗಳನ್ನು ಭಾರತ, ಅಮೇರಿಕಾದಿಂದ ಖರೀದಿಸಲಿದೆ.

ಅಮೇರಿಕಾದ ನಾಸಾ-ಮೈಕ್ರೋಸಾಫ್ಟ್-ಗೂಗಲ್ ಗಳು ನಡೆಯುತ್ತಿರುವುದೆ ಭಾರತೀಯ ಪ್ರತಿಭೆಗಳಿಂದ. ಏಷ್ಯಾದಲ್ಲಿ ಚೀನಾದ ನಾಗಾಲೋಟವನ್ನು ಹತ್ತಿಕ್ಕುವ ಛಾತಿ ಇದ್ದರೆ ಅದು ಮೋದಿ ನೇತೃತ್ವದ ಭಾರತಕ್ಕೆ ಮಾತ್ರ. ಜಾಗತಿಕ ಮಂಚದಲ್ಲಿ ಮೋದಿ ವರ್ಛಸ್ಸು ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ಇಷ್ಟವೋ ಕಷ್ಟವೋ ದೊಡ್ಡಣ್ಣ ಭಾರತಕ್ಕೆ ಶರಣಾಗಲೆ ಬೇಕು. ತೆರೆಮರೆಯಲ್ಲಿ ಭಾರತ ವಿರೋಧಿ ಚಟುವಟಿಗಳನ್ನು ನಡೆಸಿದರೂ ಎದುರಿಗೆ ಸಂಭಾವಿತನಂತೆ ತೋರಿಸಿಕೊಳ್ಳುವುದು ಅಮೇರಿಕಾದ ಅನಿವಾರ್ಯತೆ. ಅದನ್ನು ಸರಿಯಾಗಿಯೆ ಉಪಯೋಗಿಸಿಕೊಂಡಿದ್ದಾರೆ ಪ್ರಧಾನ ಸೇವಕ. ನೋಡಿದಿರಲ್ಲ ಮೋದಿ ಒಂದೇಟಿಗೆ ನಾಲ್ಕು ಹಕ್ಕಿ ಹೇಗೆ ಹೊಡೆದರೆಂದು!!

ಅತ್ತ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿಯನ್ನು ಮೇಲೆತ್ತಲು ತೈಲದ ಬದಲಿಗೆ ಅಕ್ಕಿ. ಇತ್ತ ರಷ್ಯಾ-ಇರಾನ್ ಜೊತೆ ಸಂಬಂಧ. ಅದರ ಮೇಲೆ ಅಮೇರಿಕಾ ಜೊತೆಗೂ ದೋಸ್ತಿ!! ಇದು ಮೋದಿಯಂತಹ ಗುಜರಾತಿನ ಚಾಯವಾಲನಿಗಲ್ಲದೆ ಆಕ್ಸ್ ಫರ್ಡ್ ಅರ್ಥಶಾಸ್ತ್ರಿಗಳಿಗೆ ಖಂಡಿತ ಸಾಧ್ಯವಿಲ್ಲ. ಅದಕ್ಕೆ ಮೋದಿಗೆ ನಮೋ ಎನ್ನಿ ಎಂದು ಹೇಳುವುದು.

–ಶಾರ್ವರಿ

swarajyamag

Tags

Related Articles

FOR DAILY ALERTS
Close